ಅಮ್ಮ.. ಪದಗಳಲ್ಲಿ ಬಣ್ಣಿಸಲಾಗದ ಜೀವ. ಮಮತೆಯ ಸಾಕಾರಮೂರ್ತಿ.. ಕೊನೆಯುಸಿರಿರುವವರೆಗೆ ಮಕ್ಕಳಿಗಾಗಿಯೇ ಜೀವಿಸೋ ಭಾವ. ಕಣ್ಣಿಗೆ ಕಾಣೋ ದೈವ. ಸೃಷ್ಠಿಯ ಒಡಲು. ಸಕಲ ಜೀವರಾಶಿಗಳಿಗೂ ಆಕೆ ಮಡಿಲು. ಇಲ್ಲಿಯ ತನಕ ಅಮ್ಮನ ಸಾಂಗ್ಸ್ ಸಾಕಷ್ಟು ಬಂದಿವೆ. ಅವುಗಳ ಸಾಲಿಗೆ ಈಗ ಲಕ್ಷ್ಮೀಪುತ್ರ ಚಿತ್ರದ ಅಮ್ಮನ ಗೀತೆ ಹೊಸ ಸೇರ್ಪಡೆ.
- ತಾರಮ್ಮ-ಚಿಕ್ಕಣ್ಣನ ‘ಲಕ್ಷ್ಮೀಪುತ್ರ’ ಅಡ್ಡಾದಿಂದ ಅಮ್ಮನ ಆ್ಯಂಥೆಮ್
- ಕಣ್ಣಿಗೆ ಕಾಣಿಸೋ ದೈವ, ಸೃಷ್ಠಿಕರ್ತೆ.. ಸಕಲ ಜೀವರಾಶಿಗಳ ಒಡಲು
- ಎಲ್ಲಾ ಮಕ್ಕಳಿಗೂ ಕನೆಕ್ಟ್ ಆಗುವ ಮದರ್ ಸೆಂಟಿಮೆಂಟ್ ಸಾಂಗ್
- ಜನ್ಯ-ಸಿದ್ದ್ ಶ್ರೀರಾಮ್ ಮ್ಯಾಜಿಕ್.. ಈ ಗೀತೆ 100% ಹಿಟ್ ಲಿಸ್ಟ್
ಇದು ಲಕ್ಷ್ಮೀಪುತ್ರ ಚಿತ್ರದ ಅಮ್ಮನ ಹಾಡು. ಇತ್ತೀಚೆಗೆ ಚಿಕ್ಕಣ್ಣನ ಲವ್ ಡುಯೆಟ್ ‘ಇನ್ಮೇಲೆ’ ಅನ್ನೋ ಸಾಂಗ್ ರಿಲೀಸ್ ಆಗಿ ಎಲ್ಲರ ಮನಸ್ಸು ಗೆದ್ದಿತ್ತು. ಇದೀಗ ಅದನ್ನ ಮೀರಿಸೋ ಭಾವನಾತ್ಮಕ ಅನುಬಂಧದ ಗೀತೆಯಾಗಿ ಈ ಅಮ್ಮನ ಹಾಡು ಹೊರಬಂದಿದೆ. ಪ್ರತಿ ಜೀವಕ್ಕೂ ಜೀವ ನೀಡಿದ ಜಗತ್ತಿನ ಎಲ್ಲಾ ತಾಯಂದಿರಿಗೆ ಈ ಹಾಡನ್ನ ಅರ್ಪಿಸಿರೋ ಚಿತ್ರತಂಡ.. ಇಲ್ಲಿಯ ತನಕ ಬಂದಿರೋ ಅಮ್ಮನ ಕುರಿತ ಎಲ್ಲಾ ಹಾಡುಗಳಂತೆ ಇದೂ ಸಹ, ಬ್ಲಾಕ್ ಬಸ್ಟರ್ ಹಿಟ್ ಲಿಸ್ಟ್‌ಗೆ ಸೇರಿಕೊಳ್ಳುವಂತಿದೆ.
ನಿರ್ಮಾಪಕ ಎಪಿ ಅರ್ಜುನ್ ಅವರೇ ಈ ಅಮ್ಮನ ಆ್ಯಂಥೆಮ್ ಹಾಡಿಗೆ ಸಾಹಿತ್ಯದ ಪೋಣಿಸಿದ್ದು, ಅರ್ಜುನ್ ಜನ್ಯ ಸಂಗೀತ ಮನ ಮುಟ್ಟುವಂತಿದೆ. ಅದಕ್ಕೆ ಪೂರಕವಾಗಿ ಅಷ್ಟೇ ಸೊಗಸಾಗಿ ಅದನ್ನ ಸಿದ್ದ್ ಶ್ರೀರಾಮ್ ತಮ್ಮ ಕಂಠದಲ್ಲಿ ಹಾಡಿದ್ದಾರೆ. ಹಿರಿಯ ನಟಿ ಡಾ. ತಾರಾ ಹಾಗೂ ಚಿಕ್ಕಣ್ಣನ ಅಮ್ಮ-ಮಗನ ಸೆಂಟಿಮೆಂಟ್ ಸಾಂಗ್ ಇದಾಗಿದ್ದು, ಇಲ್ಲಿ ಚಿತ್ರರಂಗದ ಎಲ್ಲಾ ಸ್ಟಾರ್‌ಗಳು ತಮ್ಮ ತಾಯಂದಿರ ಜೊತೆ ಇರೋ ಫೋಟೋಗಳನ್ನ ಸೇರಿಸಿ ಇದನ್ನ ಎಡಿಟ್ ಮಾಡಲಾಗಿದೆ. ಚಿತ್ರದಲ್ಲಿ ದೃಶ್ಯರೂಪ ಬೇರೆಯದ್ದೇ ಇರಲಿದ್ದು, ಸಿನಿಮಾದ ವೇಗ ಹೆಚ್ಚಿಸೋ ಗೀತೆ ಇದಾಗೋದ್ರಲ್ಲಿ ಅನುಮಾನವೇ ಇಲ್ಲ.
ವಿಜಯ್ ಎಸ್ ಸ್ವಾಮಿ ನಿರ್ದೇಶನದ ಲಕ್ಷ್ಮೀಪುತ್ರ ಸಿನಿಮಾದ ಆಡಿಯೋನ ಡಿ ಬೀಟ್ಸ್ ಸಂಸ್ಥೆ ಖರೀದಿಸಿದ್ದು, ನಿರ್ಮಾಪಕಿ ಶೈಲಜಾ ನಾಗ್ ಕೂಡ ಸಾಂಗ್ ಲಾಂಚ್ ಇವೆಂಟ್‌ನಲ್ಲಿ ಭಾಗಿಯಾಗಿದ್ರು. ತಮ್ಮ ತಾಯಿಯನ್ನ ನೆನೆದು ಅಕ್ಷರಶಃ ಕಣ್ಣೀರು ಹಾಕಿದ್ರು ಶೈಲಜಾ ನಾಗ್.
ಅಂದಹಾಗೆ ನಮಗೆಲ್ಲಾ ಅಮ್ಮನ ಕುರಿತ ಸಾಂಗ್ಸ್ ಅಂದ್ರೆ ಮೊದಲು ನೆನಪಾಗೋದೇ.. ಜೋಗಿ ಸಿನಿಮಾದ ಶಿವಣ್ಣ-ಅರುಂಧತಿ ಅವ್ರ ಆ ಗೀತೆ. ಎಕ್ಸ್ ಕ್ಯೂಸ್ ಮೀ ಚಿತ್ರದ ಸುಮಲತಾ ಅಂಬರೀಶ್ ಅವ್ರ ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ ಗೀತೆ. ಅಮ್ಮ ಐ ಲವ್ ಯೂ ಸಿನಿಮಾದ ಚಿರಂಜೀವಿ ಸರ್ಜಾ-ಸಿತಾರಾ ಗೀತೆ. ಉಳಿದವರು ಕಂಡಂತೆ ಚಿತ್ರದ ರಿಷಬ್-ತಾರಾ ಅವ್ರ ಕಣ್ಣ ಮುಚ್ಚೆ ಸಾಂಗ್. ಮೌರ್ಯ ಸಿನಿಮಾದ ಅಪ್ಪು-ರೋಜಾ ಗೀತೆ. ಪೊಗರು ಸಿನಿಮಾದ ಧ್ರುವ-ಪವಿತ್ರಾ ಲೋಕೇಶ್‌ರ ಜೀವ ಕೊಟ್ಟವಳು ಗೀತೆ.
ಇವೆಲ್ಲವೂ ಒಂದಕ್ಕಿಂತ ಒಂದು ಅದ್ಭುತ.. ಅಮೋಘ.. ಅದ್ವಿತೀಯ.. ಇದೀಗ ಅವುಗಳ ಸಾಲಿಗೆ ಲಕ್ಷ್ಮೀಪುತ್ರ ಚಿತ್ರದ ಈ ಗೀತೆ ಕೂಡ ಸೇರಿಕೊಳ್ಳಲಿದೆ. ಸೋ.. ಎಷ್ಟೇ ಸಾಂಗ್ಸ್ ಬರೆದರೂ ಆಕೆಯ ಬಗ್ಗೆ ಕಡಿಮೇನೆ. ಯಾಕಂದ್ರೆ ಪದಗಳಲ್ಲಿ ಬಣ್ಣಿಸಲಾಗದ ಜೀವ ಅದೊಂದೇ.. ಆ ಹೆತ್ತ ಕರಳು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





