ವಿಮಲ್ ಪಾನ್ ಮಸಾಲಾ ಪರೋಕ್ಷ ಪ್ರಚಾರದ ಕಿರಿಕಿರಿ ಬಾಲಿವುಡ್ನ ಬಡೆ ಮಿಯಾ-ಚೋಟೆ ಮಿಯಾಗಳನ್ನು ಬಿಡುತ್ತಲೇ ಇಲ್ಲ. ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಕೊಟ್ಟಿದ್ದ ಶೋಕಾಸ್ ನೋಟಿಸ್ ರದ್ದು ಮಾಡಿಸಿ ಎಂದು ದೆಹಲಿ ಹೈಕೋರ್ಟ್ ಬಾಗಿಲು ತಟ್ಟಿದ್ದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ಗೆ ಈಗ ಜಬರ್ದಸ್ತ್ ಶಾಕ್ ಸಿಕ್ಕಿದೆ. ಕೋರ್ಟ್ ಇವರ ಅರ್ಜಿಯನ್ನು ಡಿಸ್ಮಿಸ್ ಮಾಡಿದ್ದು, ಕಿಂಗ್ ಖಾನ್ ಪಡೆಗೆ ದೊಡ್ಡ ಹಿನ್ನಡೆಯಾಗಿದೆ. ಇದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ…
- ಪಾನ್ ಮಸಾಲಾ ಜಾಹೀರಾತು.. ಮೂವರು ಸ್ಟಾರ್ ಗಳಿಗೆ ಕಾನೂನು ಸಂಕಷ್ಟ
- ವಿಮಲ್ ತಂದ ವಿಪತ್ತು.. ಶಾರೂಖ್, ಟೈಗರ್, ದೇವಗನ್ಗೆ ಕೋರ್ಟ್ ನಿಂದ ಆಪತ್ತು..!!
- ವಿಮಲ್ ಕೇಸ್ನಲ್ಲಿ ಶಾರುಖ್ ಪಡೆಗೆ ರಿಲೀಫ್ ಸಿಗಲಿಲ್ಲ..!
- ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ವಜಾ..ಬಾಂಬೆನಲ್ಲಿ ಕಾನೂನು ಸಮರ
ಬಾಲಿವುಡ್ನ ಸೂಪರ್ ಸ್ಟಾರ್ಗಳಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಆಡ್ ಕೊಟ್ಟಿದ್ದ ‘ವಿಮಲ್ ಇಲೈಚಿ’ ಸರೆಗೇಟ್ ಅಡ್ವರ್ಟೈಸ್ಮೆಂಟ್ ವಿಚಾರ ಈಗ ದೊಡ್ಡ ವಿವಾದಕ್ಕೀಡಾಗಿದೆ. ಮಹಾರಾಷ್ಟ್ರ ಎಫ್ಡಿಎ ಜಾರಿ ಮಾಡಿದ್ದ ಶೋಕಾಸ್ ನೋಟಿಸ್ ವಿರುದ್ಧ ಈ ನಟರು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ಏಕಸದಸ್ಯ ಪೀಠ, “ಈ ಕೇಸ್ನ ವಿಚಾರಣೆ ಮಾಡುವ ಅಧಿಕಾರ ನಮಗಿಲ್ಲ. ಏನೇ ಇದ್ದರೂ ಬಾಂಬೆ ಹೈಕೋರ್ಟ್ಗೆ ಹೋಗಿ” ಎಂದು ಅರ್ಜಿಯನ್ನು ವಜಾಗೊಳಿಸಿ ಸೂಪರ್ ಸ್ಟಾರ್ಗಳಿಗೆ ಚಾಟಿ ಬೀಸಿದೆ.
ಜಾಹೀರಾತು ಕಂಪನಿ ಪಿಬಿ ಅಗ್ರೋ ದೆಹಲಿಯಲ್ಲೇ ನಟರಿಗೆ ಹಣ ಪಾವತಿಸಿದ್ದು, ಜಾಹೀರಾತಿನ ಪ್ಲಾನ್ ಮಾಡಿದ್ದು ಇಲ್ಲೇ ಎಂದು ಕೋರ್ಟ್ನಲ್ಲಿ ವಾದಿಸಿತ್ತು. ಆದರೆ “ಮಹಾರಾಷ್ಟ್ರ ಎಫ್ಡಿಎ ನೋಟಿಸ್ ನೀಡಿದ್ದು ನಟರಿಗೆ ಹೊರತು ನಿಮ್ಮ ಕಂಪನಿಗಲ್ಲ” ಎಂದು ಹೈಕೋರ್ಟ್ ಕಂಪನಿಯ ವಾದವನ್ನು ಧೂಳೀಪಟ ಮಾಡಿದೆ. ಪ್ರಮುಖ ಘಟನೆಗಳೇ ದೆಹಲಿಯಲ್ಲಿ ನಡೆದಿಲ್ಲ ಎಂದಮೇಲೆ ದೆಹಲಿ ಕೋರ್ಟ್ಗೆ ಬಂದು ಡ್ರಾಮಾ ಮಾಡಬೇಡಿ ಎಂದು ಜರಿದಿದೆ.
ಪಾನ್ ಮಸಾಲಾ ಪ್ರಚಾರ ಮಾಡಿ ಕೋಟಿ ಕೋಟಿ ಜೇಬಿಗಿಳಿಸಿಕೊಂಡಿದ್ದ ಬಾಲಿವುಡ್ ದಿಗ್ಗಜರಿಗೆ ಈಗ ಕಾನೂನಿನ ಸಂಕಷ್ಟ ಎದುರಾಗಿದೆ. ದೆಹಲಿ ಹೈಕೋರ್ಟ್ನಿಂದ ಯಾವುದೇ ರಿಲೀಫ್ ಸಿಗದ ಹಿನ್ನೆಲೆಯಲ್ಲಿ, ಶಾರುಖ್, ಅಜಯ್ ಹಾಗೂ ಟೈಗರ್ ಶ್ರಾಫ್ ತಂಡ ಈಗ ಮಹಾರಾಷ್ಟ್ರ ಸರ್ಕಾರದ ಕ್ರಮದ ವಿರುದ್ಧ ಹೋರಾಡಲು ಬಾಂಬೆ ಹೈಕೋರ್ಟ್ಗೆ ಓಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಜುಬಾ ಕೆಸರಿ’ ಅಂತ ಪರದೆಯ ಮೇಲೆ ಡೈಲಾಗ್ ಹೊಡೆಯೋದು ಈ ಸ್ಟಾರ್ಗಳಿಗೆ ಈಸಿ ಅನ್ನಿಸಿರಬಹುದು, ಆದರೆ ಈಗ ಮಹಾರಾಷ್ಟ್ರ ಎಫ್ಡಿಎ ನೋಟಿಸ್ಗೆ ಉತ್ತರ ಕೊಡೋಕೆ ಓಡಾಡೋದೇ ದೊಡ್ಡ ತಲೆನೋವಾಗಿದೆ. ಈ ಕೇಸ್ ಬಾಂಬೆ ಹೈಕೋರ್ಟ್ನಲ್ಲಿ ಯಾವ ತಿರುವು ಪಡೆದುಕೊಳ್ಳುತ್ತೆ ಕಾದು ನೋಡಬೇಕಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





