ರಾಕಿಂಗ್ ಸ್ಟಾರ್ ಯಶ್ ಸದ್ಯ ವಿಶ್ವದ ಪ್ರಖ್ಯಾತ ಇಂಡಿಯನ್ ಸೆಲೆಬ್ರಿಟೀಸ್ ಲಿಸ್ಟ್ನಲ್ಲಿ ನಂಬರ್ ಒನ್ ಸ್ಥಾನ ಅಲಂಕರಿಸಿದ್ದಾರೆ. ಯೆಸ್.. ಕೆಜಿಎಫ್ ಹಾಗೂ ಟಾಕ್ಸಿಕ್ ಸಿನಿಮಾಗಳಿಂದ ಸ್ಟಾರ್ಡಮ್ ಹೆಚ್ಚಿಸಿಕೊಂಡಿರೋ ನಮ್ಮ ಹೆಮ್ಮೆಯ ಕನ್ನಡಿಗ ಡಾರ್ಲಿಂಗ್ ಪ್ರಭಾಸ್, ಕಿಂಗ್ ಕೊಹ್ಲಿಯನ್ನ ಕೂಡ ಹಿಂದಿಕ್ಕಿದ್ದಾರೆ.
ಪ್ರಭಾಸ್, ಕೊಹ್ಲಿ, ದಳಪತಿಯನ್ನೂ ಹಿಂದಿಕ್ಕಿದ ಯಶ್ ನಂ.1
ವಿಶ್ವದ ಪ್ರಸಿದ್ಧ ಇಂಡಿಯನ್ ಸೆಲೆಬ್ರಿಟಿಗಳ ಲಿಸ್ಟ್ನಲ್ಲಿ ಅಗ್ರಸ್ಥಾನ
KGF, ಟಾಕ್ಸಿಕ್ ಕಿಕ್.. ರಾಕಿಂಗ್ ಸ್ಟಾರ್ ನ್ಯಾಷನಲ್ ಸ್ಟಾರ್
ಬಿಟೌನ್ ನಡೆಸಿದ ಸರ್ವೇಯಲ್ಲಿ ಕನ್ನಡಿಗನೇ ಟಾಪ್ ಗುರು
ಒಬ್ಬ ಸಾಮಾನ್ಯ ಬಸ್ ಡ್ರೈವರ್ ಮಗ ಕೂಡ ಇಂಡಿಯಾದ ಸೂಪರ್ ಸ್ಟಾರ್ ಆಗಬಹುದು ಅನ್ನೋದನ್ನ ಪ್ರೂವ್ ಮಾಡಿ ತೋರಿಸಿದ ಗರಿಮೆ ನಟ ಯಶ್ಗಿದೆ. ಹೌದು.. ಕೆಜಿಎಫ್ ಹಾಗೂ ಟಾಕ್ಸಿಕ್ ಸಿನಿಮಾಗಳ ಕ್ರೇಜ್ ಹಾಗೂ ತನ್ನದೇ ಸ್ಟೈಲು ಮ್ಯಾನರಿಸಂ, ಸ್ವ್ಯಾಗ್ನಿಂದ ಸಿನಿದುನಿಯಾದಲ್ಲಿ ತನ್ನದೇ ಆದ ಛಾಪು ಒತ್ತಿದ್ದಾರೆ ರಾಕಿಂಗ್ ಸ್ಟಾರ್. ಅದ್ರಲ್ಲೂ ಯೂತ್ ಐಕಾನ್ ಆಗಿ ಹೆಂಗೆಳೆಯರ ಹಾರ್ಟ್ ಫೇವರಿಟ್ ಸ್ಟಾರ್ ಆಗಿ ಎಲ್ಲರನ್ನ ಕ್ಲೀನ್ ಬೋಲ್ಡ್ ಆಗಿಸಿದ್ದಾರೆ ಹೆಮ್ಮೆಯ ಕನ್ನಡಿಗ.
ಯಾವುದೇ ಬ್ಯಾಗ್ರೌಂಡ್ ಇಲ್ಲದೆ.. ಯಾರೂ ಗಾಡ್ ಫಾದರ್ ಇಲ್ಲದೆ.. ಯಶ್ ಹೀಗೆ ಸೂಪರ್ ಸ್ಟಾರ್ ಆಗಿ ನ್ಯಾಷನಲ್, ಇಂಟರ್ನ್ಯಾಷನಲ್ ಮಿಂಚ್ತಿರೋದು ಖುಷಿಯ ವಿಚಾರ. ಟಾಕ್ಸಿಕ್ ಸಿನಿಮಾದ ಬಳಿಕ ಇತ್ತೀಚೆಗೆ ಬಾಲಿವುಡ್ನಲ್ಲಿ ಒಂದು ಸರ್ವೇ ನಡೆದಿದ್ದು, ಅದರ ಪ್ರಕಾರ ವಿಶ್ವದ ಸುಪ್ರಸಿದ್ದ ಇಂಡಿಯನ್ ಸೆಲೆಬ್ರಿಟೀಸ್ನಲ್ಲಿ ಯಶ್ ರಾರಾಜಿಸ್ತಿದ್ದಾರೆ. ಅದೂ ನಂ.1 ಸ್ಥಾನದಲ್ಲಿ ಅನ್ನೋದು ಇಂಟರೆಸ್ಟಿಂಗ್ ವಿಷಯ.
ದಿನೇ ದಿನೆ ಯಶ್ಗೆ ಅಭಿಮಾನಿಗಳ ಬಳಗ ಹೆಚ್ಚಾಗ್ತಿದ್ದು, ಪರಭಾಷಾ ಸೂಪರ್ ಸ್ಟಾರ್ಸ್, ಸ್ಟಾರ್ ಡೈರೆಕ್ಟರ್ಸ್, ಟೆಕ್ನಿಷಿಯನ್ಸ್ ಎಲ್ಲಾ ಇವ್ರ ಫ್ಯಾನ್ಸ್ ಆಗ್ತಿರೋದು ಗಮನಾರ್ಹ. ಹಾಲಿವುಡ್ ಸ್ಟುಡಿಯೋಗಳ ವರೆಗೆ ಕನ್ನಡದ ಕೀರ್ತಿ ಪತಾಕೆ ಹಾರಿಸಿರೋ ಯಶ್, ಸದ್ಯ ಇಂಡಿಯಾದ ನಂ.1 ಸೆಲೆಬ್ರಿಟಿ ಅನಿಸಿಕೊಂಡಿದ್ದಾರೆ. ಅಂದಹಾಗೆ ಎರಡು ಹಾಗೂ ಮೂರನೇ ಸ್ಥಾನವನ್ನ ಡಾರ್ಲಿಂಗ್ ಪ್ರಭಾಸ್ ಹಾಗೂ ವಿರಾಟ್ ಕೊಹ್ಲಿ ಅಲಂಕರಿಸಿದ್ದು, ನಾಲ್ಕನೇ ಶ್ರೇಯಾಂಕದಲ್ಲಿ ದಳಪತಿ ವಿಜಯ್ ಹೆಸರು ರಾರಾಜಿಸ್ತಿದೆ.
ಬಾಹುಬಲಿ ಚಿತ್ರದ ಬಳಿಕ ಪ್ರಭಾಸ್ ಕೂಡ ನ್ಯಾಷನಲ್ ಸ್ಟಾರ್ ಆಗಿ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ತೊಡಗಿಸಿಕೊಂಡರು. ಜನರ ಮನದಲ್ಲಿ ಪ್ರಭಾಸ್ ಬೇರೂರಿದ್ದು, ಅವ್ರು ಕೂಡ ಯಶ್ ಮುಂದೆ ಡಲ್ ಹೊಡೆದಿದ್ದಾರೆ. ಇನ್ನೂ ಕ್ರಿಕೆಟ್ ದಂತಕಥೆ ಕಿಂಗ್ ಕೊಹ್ಲಿ ಅಂತಲೇ ಕರೆಯಲ್ಪಡುವ ವಿರಾಟ್ ಕೊಹ್ಲಿ ಸಹ ನಮ್ಮ ಯಶ್ ಮುಂದೆ ಏನೇನೂ ಇಲ್ಲ ಅನಿಸಿಕೊಂಡಿದ್ದಾರೆ.
ತಮಿಳುನಾಡು ಸಿಎಂ ದಳಪತಿ ವಿಜಯ್ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. ಸಿನಿಮಾ ಹಾಗೂ ರಾಜಕಾರಣದಿಂದಾಗಿ ಸದ್ಯ ವಿಜಯ್ ಜೋಸೆಫ್ ಹೆಸರು ಎಲ್ಲೆಡೆ ಚಾಲ್ತಿಯಲ್ಲಿದೆ. ಆದಾಗ್ಯೂ ಸಹ ವಿಜಯ್ನೇ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ ರಾಕಿಭಾಯ್ ಯಶ್. ಇದು ಕನ್ನಡಿಗರಾದ ನಾವು ನಿಜಕ್ಕೂ ಹೆಮ್ಮೆ ಪಡುವ ವಿಷಯ.





