ಶಾಲಿವಾಹನ ಶಕವರ್ಷ 1949, ದಕ್ಷಿಣಾಯನ, ಶ್ರಾವಣ ಮಾಸದ ಕೃಷ್ಣ ಪಕ್ಷದ ಪ್ರತಿಪತ್ ತಿಥಿಯ ಶನಿವಾರದಂದು ಎಲ್ಲಾ ರಾಶಿಯವರಿಗೂ ವಿಶೇಷ ಫಲಗಳಿವೆ. ಆರ್ಥಿಕವಾಗಿ ಅಲ್ಪ ವೃದ್ಧಿಯು ಸಂತಸ ತರಲಿದ್ದರೂ, ಪ್ರೇಮಬಂಧನ, ಆತ್ಮಗೌರವಕ್ಕೆ ಧಕ್ಕೆ, ಬದ್ಧತೆಗಳಲ್ಲಿ ನಿರ್ಮಾಣ ಅತಂತ್ರ, ದೂರ ಪ್ರವಾಸ, ಅತಿಯಾದ ಆಸೆ ಮತ್ತು ನೋವು ಇಂದಿನ ವಿಶೇಷ ಲಕ್ಷಣಗಳಾಗಿವೆ. ಪ್ರತಿಯೊಬ್ಬರೂ ತಮ್ಮ ರಾಶಿಯ ಫಲವನ್ನು ತಿಳಿದು ಎಚ್ಚರಿಕೆಯಿಂದ ಮುನ್ನಡೆಯುವುದು ಉತ್ತಮ.
ಮೇಷ ರಾಶಿ:
ನೀವು ಬೆಳೆಸಿದ ವ್ಯಕ್ತಿಗಳು ನಿಮ್ಮ ವಿರುದ್ಧವಾಗಬಹುದು. ನಿರುದ್ಯೋಗವು ಮನಸ್ಸಿಗೆ ಕಿರಿಕಿರಿ ಉಂಟುಮಾಡಲಿದೆ. ಆಸಕ್ತಿಕರ ವಿಚಾರವನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳುವಿರಿ. ನಿಮ್ಮ ಮೇಲೆ ಕೆಲವು ಆಕ್ಷೇಪಗಳು ಬರಬಹುದು. ಹಿತಶತ್ರುಗಳಿಂದ ತೊಂದರೆಯಾಗಲಿದೆ. ಆರ್ಥಿಕವಾಗಿ ಅಲ್ಪ ವೃದ್ಧಿಯು ಸಂತಸ ನೀಡಲಿದೆ. ಉದ್ವೇಗದ ವಾರ್ತೆ ಇದ್ದರೂ ತಾಳ್ಮೆಯಿಂದ ಎದುರಿಸಿರಿ.
ವೃಷಭ ರಾಶಿ:
ದೇವರ ಉಪಾಸನೆಯಲ್ಲಿ ಆಲಸ್ಯ ಅಧಿಕವಾಗುವುದು. ನಿಮ್ಮ ಮಾತಿನಿಂದ ಇನ್ನೊಬ್ಬರಿಗೆ ಬೇಸರವಾದರೆ ತಕ್ಷಣ ನಿಲ್ಲಿಸಿ. ನಿಯಮ ಉಲ್ಲಂಘನೆ ಮಾಡಿ ದಂಡ ತುಂಬುವಿರಿ. ನಿವೃತ್ತಿಯ ಮೊದಲ ವೇತನ ಕೈಸೇರುವುದು. ಹಳೆಯ ಸ್ನೇಹಿತರ ಸಹಾಯ ಕೇಳುವಿರಿ. ಆರೋಗ್ಯ ನಿರ್ಲಕ್ಷಿಸದಿರಿ.
ಮಿಥುನ ರಾಶಿ:
ಇಂದು ಸರಿಮಾಡಲು ಸಾಧ್ಯವಾಗದಷ್ಟು ಮನಸ್ಸು ಕೆಡಲಿದೆ. ಲೆಕ್ಕಾಚಾರದಲ್ಲಿ ಹಿಂದುಳಿದಿರುವುದು ಎಲ್ಲರಿಗೂ ಗೊತ್ತಾಗುವುದು. ಇಲ್ಲದ ನೆಪಗಳಿಂದ ಕೆಲಸ ತಪ್ಪಿಸಿಕೊಳ್ಳುವಿರಿ. ಇಂದಿನ ಕೆಲಸ ಮುಗಿಸಿದಾಗ ಸಂತೃಪ್ತಿ ಇರಲಿದೆ. ಭೂ ವ್ಯವಹಾರದಲ್ಲಿ ಯೋಜನೆ ಫಲಿಸುವುದು. ಉದ್ಯೋಗದಲ್ಲಿ ನಿಮ್ಮ ಸ್ಥಾನಕ್ಕೆ ಬೇರೆಯವರು ಕಾಯುತ್ತಿರಬಹುದು.
ಕರ್ಕಾಟಕ ರಾಶಿ:
ಯಾರದ್ದಾದರೂ ಬಾಯಿಗೆ ವಿಷಯವಾಗಬಹುದು. ಅರ್ಥವತ್ತಾದ ಮಾತುಗಳನ್ನಾಡುವುದು ಒಳ್ಳೆಯದು. ರಾಜಕೀಯದಲ್ಲಿ ಆತುರತೆ ಕಷ್ಟ.. ಇಷ್ಟವಿಲ್ಲದ ವಿಷಯವನ್ನು ಒತ್ತಾಯಿಸಿದರೂ ಮಾಡಲು ಹೋಗಬೇಡಿ.
ಸಿಂಹ ರಾಶಿ:
ಕೇಳಿಬಂದ ಮಾತುಗಳು ಅಪಮಾನಕರವಾಗಿದ್ದು, ಏನನ್ನಾದರೂ ಮಾಡಬೇಕೆಂಬ ಹಂಬಲ ಅತಿಯಾಗುವುದು. ವಯೋಮಾನದ ಮಿತಿ ಇದ್ದರೂ ಉದ್ಯೋಗಕ್ಕೆ ಅರ್ಜಿ ಹಾಕುವಿರಿ. ಹಿರಿಯರ ಹಿತಕ್ಕಾಗಿ ಕಾರ್ಯಗಳನ್ನು ಬದಲಿಸಬೇಕಾಗುವುದು. ಅತಿಯಾದ ನಂಬಿಕೆಯಿಂದ ಕೆಲಸವು ಬೇರೆ ರೂಪ ಪಡೆದುಕೊಳ್ಳುವುದು.
ಕನ್ಯಾ ರಾಶಿ:
ಕೊಟ್ಟ ಮಾತಿಗೆ ಸರಿಯಾಗಿ ನಡೆದುಕೊಳ್ಳಿ. ಸಿಗದೇ ಇರುವುದರ ಬಗ್ಗೆ ಮೋಹ ಬೇಡ. ಉತ್ತಮವಾದುದು ಸಿಗುತ್ತದೆ ಎಂಬ ಭರವಸೆ ಇಟ್ಟುಕೊಳ್ಳಿ. ಅತಿಥಿಗಳಿಗೆ ಸತ್ಕಾರ ಮಾಡುವಿರಿ. ಮನಸ್ಸು ಶಾಂತವಾಗುವುದು. ದಿನವನ್ನು ಬೇರೆ ರೀತಿಯಲ್ಲಿ ಕಳೆಯಲು ಬಯಸುವಿರಿ.
ತುಲಾ ರಾಶಿ:
ಇಷ್ಟವಿಲ್ಲದಿದ್ದರೂ ಕೆಲವನ್ನು ಮಾಡಬೇಕಾಗಿಬರಬಹುದು. “ಎಲ್ಲ ನಿರರ್ಥಕ” ಎಂಬ ಭಾವನೆ ಬರಬಹುದು. ದುಃಖದ ನಂತರ ಸುಖವಿದೆ ಎಂಬ ಕಾರಣಕ್ಕೆ ನೋವು ಸಹಿಸಿಕೊಳ್ಳುವಿರಿ. ಮಹಿಳಾ ಸಾಧಕರಿಗೆ ಉನ್ನತ ಗೌರವ ಸಿಗಲಿದೆ.
ವೃಶ್ಚಿಕ ರಾಶಿ:
ಮಕ್ಕಳ ಮೇಲೆ ಅಪರೂಪಕ್ಕೆ ಅಕ್ಕರೆ ಬಂದೀತು. ವಿರೋಧಿಗಳ ನಡೆಯೇ ನಿಮ್ಮ ನಡೆ. ಕಾರ್ಯಗಳನ್ನು ಹಂಚಿಕೆ ಮಾಡಿ ಒತ್ತಡ ಕಡಿಮೆ ಮಾಡಿಕೊಳ್ಳಿ. ಪರಸ್ಪರರ ನಂಬಿಕೆ ಹಾಳಾಗಿ ಉದ್ಯಮ ಕಳೆಗುಂದುವುದು. ಹಿಂದಿನ ದಿನಗಳನ್ನು ಅವಲೋಕಿಸಿ ಸಂತಸಗೊಳ್ಳುವಿರಿ.
ಧನು ರಾಶಿ:
ಬಹಳ ದಿನಗಳ ನಂತರ ಒಳ್ಳೆಯ ಪ್ರೀತಿ ದೊರೆಯಲಿದೆ. ಕಾಲವಿಲ್ಲದ ಕಾರ್ಯವನ್ನು ಇತರರಿಂದ ಮಾಡಿಸುವಿರಿ. ಕುಟುಂಬದ ಕೆಲಸಗಳ ನಡುವೆಯೂ ಗಮನಹರಿಸುವುದು ಕಷ್ಟ. ಅಧಿಕಾರಯುತ ಮಾತುಗಳನ್ನು ಕಡಿಮೆ ಮಾಡಿ, ಸಹಜವಾಗಿ ಮಾತನಾಡಿ.
ಮಕರ ರಾಶಿ:
ಸಣ್ಣ ಕಾರ್ಯವನ್ನೂ ದೊಡ್ಡದಾಗಿ ಬಿಂಬಿಸುವಿರಿ. ಭಾವಪರವಶರಾಗಿ ಸುಖ-ದುಃಖ ಹೇಳಿಕೊಳ್ಳುವಿರಿ. ದಿನವನ್ನು ಉತ್ತಮವಾಗಿಸಿಕೊಳ್ಳಲು ಬಯಸುವಿರಿ. ಮಕ್ಕಳ ಸಾಧನೆಯು ಖುಷಿ ನೀಡುವುದು.
ಕುಂಭ ರಾಶಿ:
ಸಂಗಾತಿಯನ್ನು ಬಿಟ್ಟಿರುವುದು ಕಷ್ಟಕರ. ಮೌನವೇ ಪ್ರಿಯವಾಗಬಹುದು. ಗುಂಪುಗಾರಿಕೆಯಿಂದ ಕಲಹವಾಗುವುದು. ಕಾನೂನು ಸಂದೇಶಗಳನ್ನು ನಿವಾರಿಸಿಕೊಳ್ಳುವಿರಿ. ಸಮಸ್ಯೆಗೆ ಪರಿಹಾರ ಸಿಗದಿದ್ದರೂ ಸಮಾಧಾನ ಸಿಗಲಿದೆ.
ಮೀನ ರಾಶಿ:
ಕಡಿಮೆ ಸ್ನೇಹಿತರಿದ್ದರೂ ಅವರನ್ನು ಚೆನ್ನಾಗಿ ಇಟ್ಟುಕೊಳ್ಳುವಿರಿ. ವಿದ್ಯೆಯೇ ನೆರವಾಗುವುದು. ಅನಗತ್ಯ ಕಾರ್ಯಗಳತ್ತ ಮನಸ್ಸು ಹೋದರೂ ಕಾರ್ಯದಲ್ಲಿ ಮಗ್ನರಾಗಿರಿ. ಸಂಗಾತಿಯು ಹಳೆಯ ವಿಚಾರ ನೆನಪಿಸಿ ಮುಜುಗರ ಉಂಟುಮಾಡುವರು. ಪ್ರಣಯದ ವಿಚಾರವನ್ನು ನಿರ್ಲಜ್ಜೆಯಿಂದ ಹೇಳಿಕೊಳ್ಳುವಿರಿ.





