ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 13’ ವೀಕ್ಷಕರಿಗೆ ಮತ್ತೊಂದು ಸುವರ್ಣಾವಕಾಶವನ್ನು ನೀಡುತ್ತಿದೆ.
ಹೌದು, ಬಿಗ್ ಬಾಸ್ ಮನೆಯೊಳಗೆ ಒಮ್ಮೆಯಾದರೂ ಹೋಗಬೇಕು ಎಂದು ಕನಸು ಕಾಣುತ್ತಿರುವರಿಗೆ ಕಲರ್ಸ್ ಕನ್ನಡ ವಾಹಿನಿ ಒಂದು ಭರ್ಜರಿ ಅವಕಾಶ ಕಲ್ಪಿಸಿದೆ.
ನೀವು ಬಿಗ್ ಬಾಸ್ ಮನೆಯೊಳಗೆ ಹೋಗಬೇಕಾ? ಹಾಗಾದರೆ JioHotstarನಲ್ಲಿ ಪ್ರಸಾರವಾಗುತ್ತಿರುವ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ಯನ್ನು ವೀಕ್ಷಿಸಿ ಅತಿ ಹೆಚ್ಚು ವಾಚ್ ಟೈಮ್ ದಾಖಲಿಸಿ ಪಾಯಿಂಟ್ಸ್ ಗಳಿಸಿ ಅತಿಥಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿ.
ಅಧಿಕ ವಾಚ್ ಟೈಮ್ ದಾಖಲಿಸಿ, ಅತಿ ಹೆಚ್ಚು ಪಾಯಿಂಟ್ಸ್ ಗಳಿಸಿ ಟಾಪ್ ಪಟ್ಟಿ ಸೇರುವ 40 ಮಂದಿಗೆ Bigg Boss ಮನೆಯೊಳಗೆ ಅತಿಥಿಯಾಗಿ ಪ್ರವೇಶಿಸುವ ಸುವರ್ಣಾವಕಾಶ ನಿಮಗೆ ದೊರೆಯಲಿದೆ.
ಮನರಂಜನೆ ಜೊತೆ ಜೊತೆಗೆ ಬಿಗ್ ಬಾಸ್ ಮನೆಯೊಳಗೆ ಕಾಲಿಡುವ ಅಪರೂಪದ ಅವಕಾಶವನ್ನು ಗೆಲ್ಲಲು ತಪ್ಪದೇ ಬಿಗ್ ಬಾಸ್ ಅಗ್ನಿಪರೀಕ್ಷೆಯನ್ನು ವೀಕ್ಷಿಸಿ, ನಿಮ್ಮ ಕನಸು ನನಸಾಗಿಸಿಕೊಳ್ಳಿ.
ಮಿಸ್ ಮಾಡದೆ JioHotstarನಲ್ಲಿ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ವೀಕ್ಷಿಸಿ, ನಿಮ್ಮ ವಾಚ್ ಟೈಮ್ ಹೆಚ್ಚಿಸಿ, ಪಾಯಿಂಟ್ಸ್ ಗಳಿಸಿ ಮತ್ತು ಟಾಪ್ ಪಟ್ಟಿಯತ್ತ ಹೆಜ್ಜೆ ಇಡಿ.
ಬಿಗ್‌ಬಾಸ್ ಸೀಸನ್ 13ಕ್ಕೆ ಕೌಂಟ್‌ಡೌನ್: ಪೈಲಟ್ ಅವತಾರದಲ್ಲಿ ಕಿಚ್ಚ ಸುದೀಪ್
ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್‌ಬಾಸ್ ಕನ್ನಡ ಸೀಸನ್ 13 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಹೊಸ ಸೀಸನ್‌ಗಾಗಿ ಭರ್ಜರಿ ವೇದಿಕೆ ಸಿದ್ಧವಾಗಿದ್ದು, ಈ ಬಾರಿ ಸ್ಪರ್ಧಿಗಳು ಹಾಗೂ ಪ್ರೇಕ್ಷಕರನ್ನು ಮತ್ತಷ್ಟು ರೋಮಾಂಚನಗೊಳಿಸುವ ರೀತಿಯಲ್ಲಿ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಇದರ ನಡುವೆ ಬಿಡುಗಡೆಯಾಗಿರುವ ಹೊಸ ಪ್ರೋಮೋ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಬಿಗ್‌ಬಾಸ್ ಕನ್ನಡದ ನಿರೂಪಕರಾಗಿರುವ ಕಿಚ್ಚ ಸುದೀಪ್ ಈ ಬಾರಿ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಪ್ರೋಮೋದಲ್ಲಿ ಸುದೀಪ್ ಪೈಲಟ್ ಲುಕ್‌ನಲ್ಲಿ ಮಿಂಚಿದ್ದು, ಬಿಗ್‌ಬಾಸ್ ಮನೆಯನ್ನೇ ಬೃಹತ್ ವಿಮಾನದಂತೆ ಬಿಂಬಿಸಲಾಗಿದೆ. ಬಿಗ್‌ಬಾಸ್ ಎಂಬ ವಿಮಾನವನ್ನು ಆಗಸಕ್ಕೆ ಹಾರಿಸುವ ದೃಶ್ಯಗಳ ಮೂಲಕ ಸೀಸನ್ 13ರ ಗ್ರ್ಯಾಂಡ್ ಓಪನಿಂಗ್ ದಿನಾಂಕವನ್ನು ಘೋಷಿಸಲಾಗಿದೆ.
ಪ್ರೋಮೋದಲ್ಲಿ ಸುದೀಪ್ ತಮ್ಮದೇ ಮಾಸ್ ಶೈಲಿಯಲ್ಲಿ ಬಿಗ್‌ಬಾಸ್ ಮನೆಯ ಆಟದ ಸ್ವರೂಪವನ್ನು ವಿವರಿಸಿದ್ದಾರೆ. ಪ್ರತಿಯೊಬ್ಬರಿಗೂ ಜೀವನದಲ್ಲಿ ಎತ್ತರಕ್ಕೆ ಹಾರುವ ಆಸೆ ಇರುತ್ತದೆ. ಆದರೆ ಎಲ್ಲರಿಗೂ ರೆಕ್ಕೆಗಳು ಸಿಗುವುದಿಲ್ಲ ಎಂಬ ಅರ್ಥಪೂರ್ಣ ಮಾತುಗಳ ಮೂಲಕ ಪ್ರೋಮೋ ಆರಂಭವಾಗುತ್ತದೆ.
ಬಿಗ್‌ಬಾಸ್ ಮನೆ ಪ್ರವೇಶಿಸಿದ ಬಳಿಕ ಹೊರಜಗತ್ತಿನ ಸಂಪರ್ಕ ಸಂಪೂರ್ಣವಾಗಿ ಕಡಿತಗೊಳ್ಳುತ್ತದೆ. ಆ ವಾತಾವರಣದಲ್ಲಿ ಸ್ಪರ್ಧಿಗಳ ನಿಜವಾದ ವ್ಯಕ್ತಿತ್ವ, ಅವರ ಗುಣ-ಸ್ವಭಾವ ಹಾಗೂ ಭಾವನೆಗಳು ಹೊರಬರುತ್ತವೆ ಎಂಬುದನ್ನು ಪ್ರೋಮೋದಲ್ಲಿ ಸೂಚಿಸಲಾಗಿದೆ. ‘ಫೈಟ್ ಮೋಡ್ ಆನ್’ ಎಂಬ ಸುದೀಪ್ ಅವರ ಶೈಲಿ ಅಭಿಮಾನಿಗಳ ಗಮನ ಸೆಳೆದಿದೆ.
ಬಿಗ್‌ಬಾಸ್ ಮನೆಯೊಳಗೆ ನಡೆಯುವ ಪ್ರತಿಯೊಂದು ಘಟನೆ ಸ್ಪರ್ಧಿಗಳ ಪಾಲಿಗೆ ಸವಾಲಿನದ್ದಾಗಿದ್ದರೂ, ಅದನ್ನೇ ಪ್ರೇಕ್ಷಕರಿಗೆ ಮನರಂಜನೆಯಾಗಿ ತಲುಪಿಸುವುದು ಕಾರ್ಯಕ್ರಮದ ವಿಶೇಷತೆ. ಸ್ಪರ್ಧಿಗಳ ಪಯಣ ಅವರದ್ದೇ ಆಗಿದ್ದರೂ, ಮನೆಯೊಳಗಿನ ಆಟದ ನಿಯಮಗಳು ಹಾಗೂ ಪರಿಸ್ಥಿತಿಗಳು ಅವರ ನಿರ್ಧಾರಗಳನ್ನು ಹಲವು ಬಾರಿ ಬದಲಾಯಿಸಬಹುದು ಎಂಬ ಕುತೂಹಲವನ್ನು ಪ್ರೋಮೋ ಹುಟ್ಟುಹಾಕಿದೆ.
ಸೆಪ್ಟೆಂಬರ್ 6ರಿಂದ ಬಿಗ್‌ಬಾಸ್ ಧಮಾಕಾ
ಬಿಗ್‌ಬಾಸ್ ಕನ್ನಡ ಸೀಸನ್ 13ರ ಗ್ರ್ಯಾಂಡ್ ಓಪನಿಂಗ್ ಸೆಪ್ಟೆಂಬರ್ 6ರಂದು ಸಂಜೆ 7 ಗಂಟೆಗೆ ನಡೆಯಲಿದೆ ಎಂದು ಪ್ರೋಮೋ ಮೂಲಕ ಘೋಷಿಸಲಾಗಿದೆ. ಹೀಗಾಗಿ ಬಿಗ್‌ಬಾಸ್ ಅಭಿಮಾನಿಗಳಿಗೆ ಸೆಪ್ಟೆಂಬರ್ 6ರ ಸಂಜೆಗಾಗಿ ಈಗಾಗಲೇ ಕುತೂಹಲ ಹೆಚ್ಚಾಗಿದೆ.
ಈ ಬಾರಿ ದೊಡ್ಡನೆಯೊಳಗೆ ಯಾರೆಲ್ಲ ಪ್ರವೇಶಿಸಲಿದ್ದಾರೆ ಎಂಬ ಪ್ರಶ್ನೆಯೂ ಸದ್ಯ ಭಾರೀ ಚರ್ಚೆಗೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾ ಕ್ರಿಯೇಟರ್‌ಗಳು, ಚಿತ್ರರಂಗದ ಕಲಾವಿದರು, ಕಿರುತೆರೆ ನಟ-ನಟಿಯರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಹಲವು ಮುಖಗಳು ಸ್ಪರ್ಧಿಗಳಾಗಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ.
ಇದಕ್ಕೂ ಮುನ್ನ ಬಿಡುಗಡೆಯಾಗಿದ್ದ ಪ್ರೋಮೋದಲ್ಲೂ ಸುದೀಪ್ ಸ್ಟೈಲಿಶ್ ಕಪ್ಪು ಸೂಟ್‌ನಲ್ಲಿ ಕಾಣಿಸಿಕೊಂಡಿದ್ದರು. “ಕರ್ನಾಟಕದ ಜನತೆ ಯಾರಿಗೂ ಕಾಯುವುದಿಲ್ಲ. ಆದರೆ ವರ್ಷಕ್ಕೆ ಒಮ್ಮೆ ಮಾತ್ರ ಕಾಯುತ್ತಾರೆ!” ಎಂಬ ಮಾಸ್ ಡೈಲಾಗ್ ಮೂಲಕ ಬಿಗ್‌ಬಾಸ್ ಸೀಸನ್ 13ರ ಆಗಮನದ ಬಗ್ಗೆ ಹೈಪ್ ಸೃಷ್ಟಿಸಿದ್ದರು.
“The Bigg Wait is over!” ಎಂಬ ಟ್ಯಾಗ್‌ಲೈನ್‌ನೊಂದಿಗೆ ಬಿಡುಗಡೆಯಾಗುತ್ತಿರುವ ಪ್ರೋಮೋಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿವೆ.





