ಬೆಂಗಳೂರು : ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ ಆಯ್ತು.. ಹಾಗಿದ್ರೆ, ಮುಂದಿನ ಗುರಿ ಯಾರು.? ಅಂತ ಈಗ ಚರ್ಚೆ ಆಗ್ತಿದೆ. ಯಾಕಂದ್ರೆ, ಯತ್ನಾಳ್ ಜೊತೆ ಗುರುತಿಸಿಕೊಂಡಿರೋ ರೆಬಲ್ಸ್ ಕಥೆ ಏನು ಎಂಬ ಗುಸುಗುಸು ಬಿಜೆಪಿ ವಲಯದಲ್ಲಿ ಕೇಳಿ ಬರ್ತಿದೆ.
ಯತ್ನಾಳ್ ಜೊತೆ ಗುರುತಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಬಿಪಿ ಹರೀಶ್, ಅರವಿಂದ್ ಲಿಂಬಾವಳಿ, ಪ್ರತಾಪ್ ಸಿಂಹ, ಅರವಿಂದ್ ಬೆಲ್ಲದ್ ಸೇರಿ ಹಲವು ನಾಯಕರಿಗೂ ಈಗ ಉಚ್ಛಾಟನೆ ಭಯ ಶುರುವಾಗಿದೆಯಾ.? ಬಿಜೆಪಿಯ ಮತ್ತಷ್ಟು ರೆಬಲ್ ಲೀಡರ್ಸ್ ಗೆ ಕಾದಿದೆಯಾ ಉಚ್ಛಾಟನೆ ಶಾಕ್ ಎಂಬಂತೆ ಚರ್ಚೆ ಆಗ್ತಿದೆ.
ಯತ್ನಾಳ್ ವಿರುದ್ಧ ಉಚ್ಛಾಟನೆ ಕ್ರಮ ಯಾವಾಗಲೋ ಮಾಡಬೇಕಿತ್ತು. ಆದರೂ, ಕೊನೆಗೂ ಈಗಲಾದ್ರೂ ಅಳೆದು ತೂಗಿ ಕೊನೆಗೂ ಖಡಕ್ ನಿರ್ಧಾರ ತೆಗೆದುಕೊಂಡಿದೆ ಬಿಜೆಪಿ ಹೈಕಮಾಂಡ್. ಇಷ್ಟು ದಿನ ಮಗು ಚಿವುಟಿ – ತೊಟ್ಟಿಲು ತೂಗು ಕೆಲಸ ಮಾಡ್ತಿದ್ದ ಬಿಜೆಪಿ, ಕೊನೆಗೂ ಧೈರ್ಯ ಮಾಡಿ ಒಂದು ಖಡಕ್ ನಿರ್ಧಾರ ತೆಗೆದುಕೊಂಡಿದ್ದು, ಈ ಮೂಲಕ ರೆಬಲ್ಸ್ ಗೆ ಹೈಕಮಾಂಡ್ ಎಚ್ಚರಿಕೆ ಸಂದೇಶ ರವಾನೆ ಮಾಡಿದೆ.





