• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, September 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಣಬೀರ್‌ ಕಪೂರ್‌, ಯಶ್‌ ನಟನೆಯ ‘ರಾಮಾಯಣ ಪಾರ್ಟ್-1’ ಚಿತ್ರದ ಗ್ರ್ಯಾಂಡ್‌ ಟ್ರೈಲರ್ ಬಿಡುಗಡೆ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
July 30, 2026 - 12:42 pm
in ಸಿನಿಮಾ
0 0
0
ಮುನ್ಸೂಚನೆ (25)

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ನಿರೀಕ್ಷಿತ ಹಾಗೂ ಬಹುಕೋಟಿ ವೆಚ್ಚದ ‘ನಮಿತ್ ಮಲ್ಹೋತ್ರಾ ಅವರ ʻರಾಮಾಯಣ: ಪಾರ್ಟ್ 1’ ಚಿತ್ರದ ಅಧಿಕೃತ ಟ್ರೇಲರ್ ಇಂದು (ಜುಲೈ 30) ಬೆಳಗಿನ ಜಾವ ಜಾಗತಿಕವಾಗಿ ಬಿಡುಗಡೆಯಾಗಿದೆ. ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಮತ್ತು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿರುವ ಈ ಟ್ರೈಲರ್ ಅನ್ನು ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಸೇರಿದಂತೆ ಐದು ಪ್ರಮುಖ ಭಾರತೀಯ ಭಾಷೆಗಳಲ್ಲಿ ಅನಾವರಣಗೊಳಿಸಲಾಗಿದೆ.

ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರವನ್ನು ನಮಿತ್ ಮಲ್ಹೋತ್ರಾ ಅವರ ‘ಪ್ರೈಮ್ ಫೋಕಸ್ ಸ್ಟುಡಿಯೋಸ್’, ಎಂಟು ಬಾರಿ ಆಸ್ಕರ್ ಪ್ರಶಸ್ತಿ ವಿಜೇತ ವಿಎಫ್‌ಎಕ್ಸ್ ಸ್ಟುಡಿಯೋ ‘DNEG’ ಮತ್ತು ರಾಕಿಂಗ್‌ ಸ್ಟಾರ್‌ ಯಶ್ ಅವರ ‘ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್’ ಜಂಟಿಯಾಗಿ ನಿರ್ಮಿಸಿವೆ. ಈ ಚಿತ್ರವು 2026ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಿಶ್ವದಾದ್ಯಂತ ಭವ್ಯವಾಗಿ ಬಿಡುಗಡೆಯಾಗಲಿದ್ದು, ಜಾಗತಿಕ ವಿತರಣೆಯನ್ನು ‘ಸೋನಿ ಪಿಕ್ಚರ್ಸ್’ ಹಾಗೂ ಉತ್ತರ ಭಾರತದ ವಿತರಣೆಯನ್ನು ‘ಧರ್ಮ ಪ್ರೊಡಕ್ಷನ್ಸ್’ ವಹಿಸಿಕೊಂಡಿವೆ.

RelatedPosts

ಲಲಿತ್ ಮೋದಿ ಜೀವನಕಥೆ ಬೆಳ್ಳಿತೆರೆಗೆ: ಬಿಗ್ ಬಜೆಟ್ ಬಯೋಪಿಕ್‌ಗೆ ಸಿದ್ಧತೆ

ಕತ್ರಿನಾ ಕೈಫ್‌ ದೇಹದ ಬಗ್ಗೆ ಟ್ರೋಲ್: ಬೆಂಬಲಕ್ಕೆ ನಿಂತ ಹೃತಿಕ್ ರೋಷನ್

ಕತ್ರೀನಾ ಕೈಫ್ ಬಾಡಿ ಶೇಮಿಂಗ್‌ ಮಾಡಿದವರಿಗೆ ರಮ್ಯಾ ಕ್ಲಾಸ್!

ಅಭಿಮಾನಿಯ ಕಾಲಿನ ಮೇಲೆ ಕಾರು ಹರಿಸಿದ ಡ್ರೈವರ್‌: ಚಾಲಕನ ಮೇಲೆ ಗರಂ ಆದ ಸಲ್ಮಾನ್ ಖಾನ್‌

ADVERTISEMENT
ADVERTISEMENT

ವಿಶ್ವದ ಅತ್ಯಂತ ಪುರಾತನ ಮತ್ತು ಶ್ರೇಷ್ಠ ಮಹಾಕಾವ್ಯಗಳಲ್ಲಿ ಒಂದಾದ ರಾಮಾಯಣವನ್ನು ಆಧರಿಸಿ, ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಎರಡು ಭಾಗಗಳ ಬೃಹತ್ ಸಿನಿಮ್ಯಾಟಿಕ್ ದೃಶ್ಯಕಾವ್ಯವಾಗಿ ಇದನ್ನು ನಿರ್ಮಿಸುತ್ತಿದ್ದಾರೆ. ಸೃಷ್ಟಿಯ ಆರಂಭದಿಂದಲೂ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಮೂರು ಲೋಕಗಳನ್ನು ಆಳುತ್ತಿದ್ದು, ಧರ್ಮ-ಅಧರ್ಮಗಳ ನಡುವಿನ ಸಮತೋಲನ ತಪ್ಪಿದಾಗ ಶ್ರೀಮಹಾ ವಿಷ್ಣುವು ರಾಮನಾಗಿ ಭೂಮಿಯಲ್ಲಿ ಅವತರಿಸುತ್ತಾರೆ. ಅಜೇಯ, ಅಮರ ಹಾಗೂ ಅಹಂಕಾರದಿಂದ ಬ್ರಹ್ಮಾಂಡವನ್ನೇ ನಡುಗಿಸುವ ಅಸುರ ಚಕ್ರವರ್ತಿ ರಾವಣನ ವಿರುದ್ಧ ರಾಮನು ನಡೆಸುವ ಧರ್ಮಯುದ್ಧವೇ ಈ ಮಹಾಕಾವ್ಯದ ಜೀವಾಳವಾಗಿದೆ.

ಈ ಮಹಾಕಾವ್ಯದಲ್ಲಿ ಭಾರತೀಯ ಚಿತ್ರರಂಗದ ಅದ್ಭುತ ಕಲಾವಿದರ ದಂಡೇ ಇದೆ. ರಣಬೀರ್ ಕಪೂರ್ ಅವರು ಶ್ರೀರಾಮನಾಗಿ ಕಾಣಿಸಿಕೊಂಡಿದ್ದರೆ, ಪ್ಯಾನ್-ಇಂಡಿಯಾ ಸ್ಟಾರ್ ‘ರಾಕಿಂಗ್ ಸ್ಟಾರ್’ ಯಶ್ ಅವರು ಬಲಶಾಲಿ ರಾವಣನ ಪಾತ್ರದಲ್ಲಿ ನಟಿಸುವುದರ ಜೊತೆಗೆ ‘ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್’ ಮೂಲಕ ಚಿತ್ರದ ಸಹ-ನಿರ್ಮಾಪಕರೂ ಆಗಿದ್ದಾರೆ. ಸೀತಾ ಮಾತೆಯಾಗಿ ಸಾಯಿ ಪಲ್ಲವಿ, ಲಕ್ಷ್ಮಣನಾಗಿ ರವಿ ದುಬೆ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ದೂರದರ್ಶನ ರಾಮಾಯಣ ಖ್ಯಾತಿಯ ಅರುಣ್ ಗೋವಿಲ್ ರಾಜ ದಶರಥನಾಗಿ, ಖ್ಯಾತ ನಟಿ ಶೋಭನಾ ಕೈಕೇಸಿಯಾಗಿ, ಅಜಿಂಕ್ಯ ದೇವ್ ಋಷಿ ವಿಶ್ವಾಮಿತ್ರನಾಗಿ, ಕುನಾಲ್ ಕಪೂರ್ ಇಂದ್ರ ದೇವನಾಗಿ ಮತ್ತು ರಾಕುಲ್ ಪ್ರೀತ್ ಸಿಂಗ್ ಶೂರ್ಪನಖಿಯಾಗಿದ್ದಾರೆ.

ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ಬರಹಗಾರ ಶ್ರೀಧರ್ ರಾಘವನ್ ಚಿತ್ರಕಥೆ ಬರೆದಿದ್ದಾರೆ. ವಿಶೇಷವೆಂದರೆ, ಪೂರ್ವ ಮತ್ತು ಪಶ್ಚಿಮದ ಅತಿದೊಡ್ಡ ಕೊಲ್ಯಾಬರೇಷನ್ ಎಂಬಂತೆ, ಆಸ್ಕರ್ ಪ್ರಶಸ್ತಿ ವಿಜೇತ ದಿಗ್ಗಜರಾದ ಎ.ಆರ್. ರೆಹಮಾನ್ ಮತ್ತು ಹಾಲಿವುಡ್‌ ಖ್ಯಾತಿಯ ಹ್ಯಾನ್ಸ್ ಜಿಮ್ಮರ್ ಒಟ್ಟಾಗಿ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಈ ಕುರಿತು ಮಾತನಾಡಿದ ನಿರ್ಮಾಪಕ ನಮಿತ್ ಮಲ್ಹೋತ್ರಾ, “ರಾಮಾಯಣವು ಕೇವಲ ಒಂದು ಮಹಾಕಾವ್ಯವಲ್ಲ; ಅದು ನಮ್ಮ ಜೀವನಶೈಲಿ ಹಾಗೂ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ನಾವು ರವಾನಿಸುವ ಮೌಲ್ಯಗಳ ಸಂಕೇತ. ಭಾರತದ ಶ್ರೇಷ್ಠ ಕಥೆಗಳನ್ನು ಜಗತ್ತಿನ ಅತಿ ದೊಡ್ಡ ವೇದಿಕೆಯಲ್ಲಿ ಪ್ರಸ್ತುತಪಡಿಸಬೇಕು ಎಂಬುದು ನನ್ನ ಕನಸಾಗಿತ್ತು. ಇಂದು ನಮ್ಮಲ್ಲಿ ಶ್ರೇಷ್ಠ ಕಲಾವಿದರು ಹಾಗೂ ಅತ್ಯಾಧುನಿಕ ತಂತ್ರಜ್ಞಾನವಿದ್ದು, ಈ ಕಥೆಯನ್ನು ಜಗತ್ತಿಗೆ ಪರಿಚಯಿಸುವುದು ನಮ್ಮ ಹೆಮ್ಮೆ” ಎಂದಿದ್ದಾರೆ.

ಚಿತ್ರದ ನಿರ್ದೇಶಕ ನಿತೇಶ್ ತಿವಾರಿ ಮಾತನಾಡಿ, “ರಾಮಾಯಣವು ಅದರ ಬೃಹತ್ ಪ್ರಮಾಣದಿಂದಾಗಿ ಮಾತ್ರವಲ್ಲದೆ, ಅದು ಪ್ರತಿನಿಧಿಸುವ ಕಾಲಾತೀತ ಮೌಲ್ಯಗಳಿಂದಾಗಿ ಅತ್ಯಂತ ಶ್ರೇಷ್ಠ ಕಥೆಯಾಗಿದೆ. ಈ ಕಥೆಯನ್ನು ಅತ್ಯಂತ ಪ್ರಾಮಾಣಿಕತೆ ಮತ್ತು ಗೌರವದಿಂದ ಪ್ರಸ್ತುತಪಡಿಸುವುದು ನನ್ನ ಜವಾಬ್ದಾರಿಯಾಗಿತ್ತು. ಈ ದೃಶ್ಯವೈಭವದ ಜೊತೆಗೆ ರಾಮಾಯಣದ ಭಾವನೆ ಮತ್ತು ಮಾನವೀಯ ಮೌಲ್ಯಗಳನ್ನು ಪ್ರೇಕ್ಷಕರು ಅನುಭವಿಸುತ್ತಾರೆ ಎಂಬ ಭರವಸೆ ನನಗಿದೆ” ಎಂದು ತಿಳಿಸಿದ್ದಾರೆ.

ಈ ಅದ್ಭುತ ಚಿತ್ರವನ್ನು ನಿರ್ಮಿಸುತ್ತಿರುವ DNEG ಸಂಸ್ಥೆಯು ಸುಮಾರು 30 ವರ್ಷಗಳ ಅನುಭವ ಹೊಂದಿರುವ ಜಾಗತಿಕ ವಿಎಫ್‌ಎಕ್ಸ್ ಸಂಸ್ಥೆಯಾಗಿದ್ದು, ಇಲ್ಲಿಯವರೆಗೆ 8 ಆಸ್ಕರ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ನಮಿತ್ ಮಲ್ಹೋತ್ರಾ ಅವರ ‘ಪ್ರೈಮ್ ಫೋಕಸ್ ಸ್ಟುಡಿಯೋಸ್’ ಇತ್ತೀಚೆಗೆ ‘ದ ಗಾರ್ಫೀಲ್ಡ್ ಮೂವಿ’ ನಿರ್ಮಿಸಿ ಜಾಗತಿಕವಾಗಿ ದೊಡ್ಡ ಯಶಸ್ಸು ಕಂಡಿದೆ. ಹಾಗೆಯೇ, ‘ರಾಕಿಂಗ್ ಸ್ಟಾರ್’ ಯಶ್ ಅವರ ‘ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್’ ಪ್ರಸ್ತುತ ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಚಿತ್ರಗಳನ್ನು ಸಹ-ನಿರ್ಮಾಣ ಮಾಡುವ ಮೂಲಕ ಹೊಸ ಶೈಲಿಯ ಕಥಾನಿರೂಪಣೆಗೆ ನಾಂದಿ ಹಾಡಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

WhatsApp Image 2026 09 17 at 8.18.27 AM

ಲಲಿತ್ ಮೋದಿ ಜೀವನಕಥೆ ಬೆಳ್ಳಿತೆರೆಗೆ: ಬಿಗ್ ಬಜೆಟ್ ಬಯೋಪಿಕ್‌ಗೆ ಸಿದ್ಧತೆ

by ದಿಶಾ ಕೆ. ಎಸ್.
September 19, 2026 - 11:05 am
0

WhatsApp Image 2026 09 17 at 8.18.27 AM

ಮಂಗಳೂರು ಮೀನುಗಾರಿಕೆ ಬಂದರಿಗೆ ಸಿಎಂ ಡಿಕೆ ಶಿವಕುಮಾರ್ ದಿಢೀರ್ ಭೇಟಿ

by ದಿಶಾ ಕೆ. ಎಸ್.
September 19, 2026 - 10:30 am
0

ಹ್ಮೋ (47)

ತಿರುಮಲ ಬ್ರಹ್ಮೋತ್ಸವ ಸಂಭ್ರಮ: ಭಕ್ತರಿಗಾಗಿ TTD-ಪೊಲೀಸ್ ಇಲಾಖೆಯಿಂದ ವಿಶೇಷ ವ್ಯವಸ್ಥೆ

by ದಿಶಾ ಕೆ. ಎಸ್.
September 19, 2026 - 8:58 am
0

ಹ್ಮೋ (46)

ಕತ್ರಿನಾ ಕೈಫ್‌ ದೇಹದ ಬಗ್ಗೆ ಟ್ರೋಲ್: ಬೆಂಬಲಕ್ಕೆ ನಿಂತ ಹೃತಿಕ್ ರೋಷನ್

by ದಿಶಾ ಕೆ. ಎಸ್.
September 19, 2026 - 8:37 am
0

ಸಂಬಂಧಿಸಿದ ಪೋಸ್ಟ್‌ಗಳು

  • WhatsApp Image 2026 09 17 at 8.18.27 AM
    ಲಲಿತ್ ಮೋದಿ ಜೀವನಕಥೆ ಬೆಳ್ಳಿತೆರೆಗೆ: ಬಿಗ್ ಬಜೆಟ್ ಬಯೋಪಿಕ್‌ಗೆ ಸಿದ್ಧತೆ
    September 19, 2026 | 0
  • ಹ್ಮೋ (46)
    ಕತ್ರಿನಾ ಕೈಫ್‌ ದೇಹದ ಬಗ್ಗೆ ಟ್ರೋಲ್: ಬೆಂಬಲಕ್ಕೆ ನಿಂತ ಹೃತಿಕ್ ರೋಷನ್
    September 19, 2026 | 0
  • Your paragraph text 2026 09 18T221135.496
    ಕತ್ರೀನಾ ಕೈಫ್ ಬಾಡಿ ಶೇಮಿಂಗ್‌ ಮಾಡಿದವರಿಗೆ ರಮ್ಯಾ ಕ್ಲಾಸ್!
    September 18, 2026 | 0
  • Your paragraph text 2026 09 18T215557.458
    ಅಭಿಮಾನಿಯ ಕಾಲಿನ ಮೇಲೆ ಕಾರು ಹರಿಸಿದ ಡ್ರೈವರ್‌: ಚಾಲಕನ ಮೇಲೆ ಗರಂ ಆದ ಸಲ್ಮಾನ್ ಖಾನ್‌
    September 18, 2026 | 0
  • Your paragraph text 2026 09 18T202423.824
    ಕಲರ್ಸ್ ಹೆಲ್ತ್ ಕೇರ್ ಇಂಡಿಯಾದ ನೂತನ ಶಾಖೆ ಆರಂಭ: ಡಾರ್ಲಿಂಗ್ ಕೃಷ್ಣ ದಂಪತಿಯಿಂದ ಉದ್ಘಾಟನೆ
    September 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version