ಜೂನಿಯರ್ ಎನ್‌ಟಿಆರ್ ರಾಜಕೀಯ ರಂಗ ಪ್ರವೇಶದ ಸುದ್ದಿ ಟಾಕ್ ಆಫ್ ದಿ ಟೌನ್ ಆಗಿದೆ. ಆಂಧ್ರ ಪಾಲಿಟಿಕ್ಸ್‌ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ತಾತ ನಂದಮೂರಿ ತಾರಕ ರಾಮರಾವ್ ರೀತಿ ಸಿಎಂ ಆಗ್ತಾರಾ ತಾರಕ್ ಅನ್ನೋ ಚರ್ಚೆಗಳು ಜೋರಾಗಿವೆ. ಅದಕ್ಕೆಲ್ಲಾ ಕಾರಣ ಆಗಿರೋದು ಜುಲೈ 18ಕ್ಕೆ ತಿರುಪತಿಯಲ್ಲಿ ನಡೆಯಲಿರೋ RAW-NTR ಸಮಾವೇಶ. ಏನು ಈ ಮೂವ್ಮೆಂಟ್ ಅಂತೀರಾ..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ…
- ಪಾಲಿಟಿಕ್ಸ್‌ಗೆ ತಾರಕ್..? ತಿರುಪತಿಯಲ್ಲಿ RAW-NTR ಅಲೆ
- ಸಮಾಜಸೇವೆಗೆ 100 ಕೋಟಿ.. ನಾಯ್ಡು-ಪವನ್‌ಗೆ ನಡುಕ..!
- ತಾತ ನಂದಮೂರಿ ತಾರಕರಾಮರಾವ್ ರೀತಿ NTR ಸಿಎಂ?
- ಸಿಎಂ ವಿಜಯ್ ಹಾದಿಯಲ್ಲಿ NTR ಪೊಲಿಟಿಕಲ್ ಎಂಟ್ರಿ..?!
ತಮಿಳುನಾಡಿನಲ್ಲಿ ಟಿವಿಕೆ ಪಕ್ಷ ಕಟ್ಟಿ, ಸಿಎಂ ಪಟ್ಟಕ್ಕೇರಿದ ವಿಜಯ್ ಬಳಿಕ ಟಾಲಿವುಡ್ ಸೂಪರ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಕೂಡ ಅದೇ ಹಾದಿಯಲ್ಲಿ ರಾಜಕಾರಣಕ್ಕೆ ಎಂಟ್ರಿ ಕೊಡ್ತಾರೆ ಅನ್ನೋ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಅದಕ್ಕೆ ಕಾರಣ ಆಗಿರೋ RAW-NTR ಮೊಮೆಂಟ್. ಹೌದು.. ಇದೇ ಜುಲೈ 18ರಂದು ತಿರುಪತಿಯಲ್ಲಿ ಜೂನಿಯರ್ ಎನ್‌ಟಿಆರ್ ಅಭಿಮಾನಿ ಸಂಘಗಳೇ ಕೂಡಿ ಮಾಡ್ತಿರೋ RAW-NTR ಸಮಾವೇಶ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಜೂನಿಯರ್ ಎನ್‌ಟಿಆರ್ ತಾತ ನಂದಮೂರಿ ತಾರಕ ರಾಮರಾವ್ ಲೆಜೆಂಡರಿ ಆ್ಯಕ್ಟರ್ ಕಮ್ ಆಂಧ್ರ ಮಾಜಿ ಸಿಎಂ ಅನ್ನೋದು ಎಲ್ಲರಿಗೂ ಗೊತ್ತು. ಇದೀಗ ಅವ್ರ ಮೊಮ್ಮಗ ತಾತನ ನೆಚ್ಚಿನ ತಾಣ ತಿರುಪತಿಯಲ್ಲೇ ಪಾಲಿಟಿಕ್ಸ್‌ಗೆ ಮುನ್ನುಡಿ ಬರೆಯೋಕೆ ಸಜ್ಜಾಗಿದ್ದಾರೆ ಎನ್ನಲಾಗ್ತಿದೆ. ಜುಲೈ 18ರ ಬೆಳಗ್ಗೆ 10 ಗಂಟೆಗೆ ತಿರುಪತಿಯ ತಾಜ್ ಹೋಟೆಲ್‌ನಲ್ಲಿ ದೊಡ್ಡ ಸುದ್ದಿಗೋಷ್ಠಿ ನಡೆಯಲಿದೆ. ಅಲ್ಲಿ ಊರು ವಾಡ ಹೆಸ್ರಲ್ಲಿ ಸುಮಾರು 100 ಕೋಟಿಯಷ್ಟು ಬೃಹತ್ ಮೊತ್ತದ ಹಣವನ್ನ ಸಮಾಜ ಸೇವೆಗೆ ಮುಡಿಪಾಗಿಡ್ತಿರೋ ಬಗ್ಗೆ ಮಾಹಿತಿ ನೀಡಲಾಗುತ್ತಂತೆ.
2009ರ ಚುನಾವಣಾ ಫಲಿತಾಂಶದ ಬಳಿಕ ರಾಜಕಾರಣದಿಂದ ದೂರ ಉಳಿದಿರೋ ನಟ ಜೂನಿಯರ್ ಎನ್‌ಟಿಆರ್, ಇದೀಗ 100 ಕೋಟಿ ಸಮಾಜಸೇವೆಗೆ ಮುಡಿಪಾಗಿಡ್ತಿರೋದು ಅಚ್ಚರಿ ತಂದಿದೆ. ಮೊದಲು ಸಮಾಜ ಸೇವೆ.. ನಂತ್ರ ಪಾಲಿಟಿಕ್ಸ್ ಅಂದ್ರೆ ನಮಗೆ ಕಷ್ಟ ಆಗಲಿದೆ ಅಂತ ಈಗಾಗ್ಲೇ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಡಿಸಿಎಮ ಪವನ್ ಕಲ್ಯಾಣ್‌ಗೆ ಟೆನ್ಷನ್ ಶುರುವಾಗಿದೆಯಂತೆ. ಸೋ.. ಇದು ಆಂಧ್ರ ರಾಜ್ಯ ರಾಜಕಾರಣದ ಮಹತ್ವದ ಬೆಳವಣಿಗೆ ಆಗಿದ್ದು, ಅಭಿಮಾನಿ ಸಂಘಗಳು, ಸದ್ಯ ಎನ್‌ಟಿಆರ್ ಪಾಲಿಟಿಕ್ಸ್‌ಗೆ ಬರಲ್ಲ ಅನ್ನೋದನ್ನ ಪತ್ರವೊಂದರ ಮೂಲಕ ಸ್ಪಷ್ಟಪಡಿಸಿವೆ.
ಪ್ರಶಾಂತ್ ನೀಲ್ ಜೊತೆಗಿನ ಡ್ರ್ಯಾಗನ್ ಸಿನಿಮಾ ಸೇರಿದಂತೆ, ತ್ರಿವಿಕ್ರಮ್ ಜೊತೆ ಹೆಸರಿಡದ ಚಿತ್ರವೊಂದಕ್ಕೆ ಕಮಿಟ್ ಆಗಿದ್ದಾರೆ ಜೂನಿಯರ್ ಎನ್‌ಟಿಆರ್. ಅದಕ್ಕೆ ಪೂರಕವಾಗಿ ಶೂಟಿಂಗ್, ಡಬ್ಬಿಂಗ್ ಅಂತ ತಾನಾಯ್ತು, ತನ್ನ ಪಾಡಾಯ್ತು ಅಂತ ಸುಮ್ಮನಿದ್ದಾರೆ. ಆದ್ರೀಗ ದಿಢೀರ್ ಅಂತ ರಾ ಎನ್‌ಟಿಸರ್ ಟೀಂ ಮಾಡ್ತಿರೋ ಈ ಸೆನ್ಸೇಷನಲ್ ನ್ಯೂಸ್‌ನಿಂದ ಎಲ್ಲರೂ ತಲೆ ಕಡೆಸಿಕೊಳ್ಳುವಂತಾಗಿದೆ. ಭವಿಷ್ಯದ ಟಿಡಿಪಿ ನಾಯಕ ತಾರಕ್ ಅನ್ನೋದು ಎಲ್ಲರೂ ಮಾತಾಡ್ತಿದ್ದಾರೆ ಆದ್ರೂ, ನಟ ಜೂನಿಯರ್ ಎನ್‌ಟಿಆರ್ ಮಾತ್ರ ಈ ಎಲ್ಲಾ ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ. ನನಗೂ ಈ ಮೂವ್ಮೆಂಟ್‌ಗೂ ಸಂಬಂಧವಿಲ್ಲ. ಅವಱರೂ ನನ್ನ ಅಧಿಕೃತ ಸಂಘ ಸಂಸ್ಥೆಯ ಮಂದಿಯೂ ಅಲ್ಲ ಅನ್ನೋದನ್ನ ಅಧಿಕೃತವಾಗಿ ಪ್ರಕಟಿಸಿದ್ದಾರ ಯಂಗ್ ಟೈಗರ್.
ಆದ್ರೆ ಜೂನಿಯರ್ ಎನ್‌ಟಿಆರ್ ಪಾಲಿಟಿಕ್ಸ್‌ಗೆ ಬಂದ್ರೆ ಆಂಧ್ರದಲ್ಲಿ ಮಹತ್ವದ ಬೆಳವಣಿಗೆ ಅಂತೂ ಆಗಲಿದೆ. ಟಿವಿಕೆ ವಿಜಯ್ ರೀತಿ, ಇಲ್ಲಿ ತಾರಕ್ ಗೇಮ್ ಚೇಂಜರ್ ಆಗಿ ಹೊಸ ಇತಿಹಾಸ ಬರೆಯೋದ್ರಲ್ಲಿ ಯಾವುದೇ ಅನುಮಾನವಿಲ್ಲ ಅನ್ನೋದು ಸತ್ಯ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





