ನವದೆಹಲಿ: ಭಾರತೀಯ ರೈಲ್ವೆಯ ಪ್ರಥಮ ದರ್ಜೆ ಎಸಿ ಕೋಚ್ವೊಂದರಲ್ಲಿ (First Class AC Coach) ರೋಮ್ಯಾಂಟಿಕ್ ಥೀಮ್ನಲ್ಲಿ (Romantic Theme) ಕೋಣೆಯನ್ನು ಅಲಂಕರಿಸಿದ (Honeymoon Suite in Train) ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಭಾರತೀಯ ರೈಲ್ವೆ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಭದ್ರತಾ ಲೋಪ ಮತ್ತು ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಸಂಬಂಧಪಟ್ಟ ಟಿಕೆಟ್ ಪರೀಕ್ಷಕರನ್ನು (TC) ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.
ವೈರಲ್ ಆದ ವಿಡಿಯೋ ಯಾವುದು?
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಭಾರತೀಯ ರೈಲ್ವೆಯ ಎಸಿ ಕೋಚ್ನ ಕೋಣೆಯೊಂದನ್ನು ಐಷಾರಾಮಿ ಹೋಟೆಲ್ನಂತೆ (Luxury Hotel) ರೆಡಿ ಮಾಡಿಕೊಂಡಿದ್ದರು. ಇಡೀ ಬೋಗಿಯನ್ನು ಕೆಂಪು ಮತ್ತು ಬಿಳಿ ಬಣ್ಣದ ಬಲೂನ್ಗಳು (Balloons), ಆಕರ್ಷಕ ಹೂವಿನ ಹಾರಗಳು (Flower Garlands) ಮತ್ತು ಸಾವಿರಾರು ತಾಜಾ ಗುಲಾಬಿ ದಳಗಳಿಂದ (Rose Petals) ಅತ್ಯಂತ ರೋಮ್ಯಾಂಟಿಕ್ ಆಗಿ ಶೃಂಗರಿಸಲಾಗಿದೆ. ರೈಲಿನ ಸೀಟ್ ಮೇಲೂ ಗುಲಾಬಿ ದಳಗಳನ್ನು ಹರಡಲಾಗಿದ್ದು, ಕ್ಯಾಬಿನ್ನ ಗೋಡೆಯ ಮೇಲೆ ‘ಐ ಲವ್ ಯು’ (I Love You) ಎಂಬ ಪ್ರೇಮ ಸಂದೇಶವನ್ನು ಬರೆಯಲಾಗಿತ್ತು.
ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಆಕ್ರೋಶ
ಫಸ್ಟ್ ನೈಟ್ ರೂಮ್ನ ದೃಶ್ಯಗಳು ವೈರಲ್ ಆಗುತ್ತಿದ್ದಂತೆಯೇ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಕೆಲವರು ಈ ರೋಮ್ಯಾಂಟಿಕ್ ವಿಡಿಯೋವನ್ನು ಶ್ಲಾಘಿಸಿದ್ದಾರೆ. ಅಲ್ಲದೇ ಪ್ರಯಾಣಿಕರಿಗೆ ರೈಲ್ವೆ ಬೋಗಿಗಳನ್ನು ಇಷ್ಟೊಂದು ವಿಸ್ತಾರವಾಗಿ ಅಲಂಕರಿಸಲು ಅವಕಾಶವಿದೆಯೇ ಎಂದು ಪ್ರಶ್ನಿಸಿದ್ದರು. ಸುರಕ್ಷತೆ, ಸ್ವಚ್ಛತೆ ಮತ್ತು ಬಲೂನ್ಗಳು, ಕಾಗದ ಮತ್ತು ಹೂವುಗಳಂತಹ ಅಲಂಕಾರಿಕ ವಸ್ತುಗಳು ಬೆಂಕಿಯ ಅವಘಡಕ್ಕೆ ಕಾರಣವಾಗಬಹುದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ರೈಲ್ವೆ ಇಲಾಖೆಯ ಸ್ಪಷ್ಟನೆ ಮತ್ತು ಕ್ರಮ
ಈ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯ ಅಧಿಕಾರಿಗಳು ಸ್ಪಷ್ಟಣೆ ನೀಡಿದ್ದು, ಈ ಘಟನೆಯಲ್ಲಿ ಯಾವುದೇ ನಿಯಮಗಳನ್ನು ಉಲ್ಲಂಘಿಸಲಾಗಿಲ್ಲ ಎಂದು ಹೇಳಿದ್ದಾರೆ. ಆದಾಗ್ಯೂ, ಸಂಬಂಧಪಟ್ಟ ಪ್ರಯಾಣಿಕರು ಮೊದಲ ದರ್ಜೆಯ ಎಸಿ ಕ್ಯಾಬಿನ್ನಲ್ಲಿರುವ ಎರಡೂ ಬರ್ತ್ಗಳನ್ನು (Both Berths) ತಾವೇ ಬುಕ್ ಮಾಡಿದ್ದರು. ಆ ವಿಭಾಗವನ್ನು ಖಾಸಗಿ ಬಳಕೆಗೆ (Private Use) ಪರಿಣಾಮಕಾರಿಯಾಗಿ ಕಾಯ್ದಿರಿಸಲಾಗಿತ್ತು.





