ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯುತ್ತಿರುವ ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದೆ. ಹೊಸ ಕ್ಯಾಪ್ಟನ್ ರಜತ್ ಪಾಟಿದಾರ್ ನೇತೃತ್ವದ ಟೀಮ್ ಕೆಕೆಆರ್ ವಿರುದ್ಧ ಗೆಲುವಿನ ಸಾಹಸಕ್ಕೆ ಸಜ್ಜಾಗಿದೆ. ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ಟಿಮ್ ಡೇವಿಡ್ರಂತಹ ಸ್ಟಾರ್ ಆಟಗಾರರೊಂದಿಗೆ RCB ಭರ್ಜರಿ ಪ್ಲೇಯಿಂಗ್ 11 ಅನ್ನು ರೂಪಿಸಿದೆ.
ಈಗಾಗಲೇ ಆರ್ಸಿಬಿ ತಂಡ ಭರ್ಜರಿ ಅಭ್ಯಾಸ ಮಾಡಿಕೊಂಡಿದ್ದು ಪಂದ್ಯ ಗೆಲ್ಲಲು ಕಾರ್ಯತಂತ್ರ ರೂಪಿಸಿದೆ. ಈ ಬಾರಿ ಹೊಸ ಕ್ಯಾಪ್ಟನ್ ರಜತ್ ಪಾಟಿದಾರ್ ನೇತೃತ್ವದಲ್ಲಿ ಟೀಮ್ ಮುನ್ನಡೆಯಲಿದೆ. ವಿರಾಟ್ ಕೊಹ್ಲಿ ಅವರು ಕ್ಯಾಪ್ಟನ್ ರಜತ್ಗೆ ಸಾಥ್ ಕೊಡಲಿದ್ದಾರೆ. ತಂಡದ 11ರ ಬಳಗದಲ್ಲಿ ಯಾರು ಯಾರು ಇರಲಿದ್ದಾರೆ ಎನ್ನುವುದು ಇಲ್ಲಿದೆ.
ಪ್ಲೇಯಿಂಗ್ 11ರ ಪೂರ್ಣ ಪಟ್ಟಿ:
ವಿರಾಟ್ ಕೊಹ್ಲಿ , ಫಿಲಿಪ್ ಸಾಲ್ಟ್ (ವಿಕೆಟ್-ಕೀಪರ್) , ರಜತ್ ಪಾಟಿದಾರ್ (ನಾಯಕ) , ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ ,ಟಿಮ್ ಡೇವಿಡ್, ಕೃನಾಲ್ ಪಾಂಡ್ಯ , ರಸಿಖ್ ದಾರ್ ಸಲಾಂ , ಸುಯಾಶ್ ಶರ್ಮಾ , ಜೋಶ್ ಹ್ಯಾಜಲ್ವುಡ್, ಯಶ್ ದಯಾಲ್
ಐಪಿಎಲ್ ಇತಿಹಾಸದಲ್ಲಿ RCB ಮತ್ತು ಕೆಕೆಆರ್ನ 30 ಪಂದ್ಯಗಳಲ್ಲಿ ಕೆಕೆಆರ್ 20 ಬಾರಿ ಗೆದ್ದಿದೆ. ಆದರೆ, ಹೊಸ ನಾಯಕತ್ವ ಮತ್ತು ವಿರಾಟ್ ಕೊಹ್ಲಿಯರ ಸಾಧನೆಯನ್ನು ಅವಲಂಬಿಸಿದೆ RCBರ ಗೆಲುವಿನ ಭರವಸೆ. ಕೆಕೆಆರ್ ತಂಡವೂ ವಿರಾಟ್ ಅವರ ವಿಕೆಟ್ ಗುರಿಯಾಗಿಸಿದೆ.