ಚಿಕ್ಕಣ್ಣ ಕಾಮಿಡಿ ಮಾಡೋದ್ರಲ್ಲಷ್ಟೇ ಬೆಸ್ಟ್ ಅಲ್ಲ. ಪ್ರೀತಿ ಮಾಡೋದ್ರಲ್ಲಿ ಅದಕ್ಕಿಂತ ಸೂಪರ್ ಅನಿಸಿಕೊಂಡಿದ್ದಾರೆ. ಯೆಸ್.. ಲಕ್ಷ್ಮೀಪುತ್ರನಾಗಿ ಮಿಂಚ್ತಿರೋ ಚಿಕ್ಕು, ತಮ್ಮ ಮೊಹಬ್ಬತ್ ಪ್ಯಾರ್ ಕಹಾನಿ ಇಡೀ ಕರುನಾಡಿಗೆ ಸಾರಿದ್ದಾರೆ. ಹಳ್ಳಿಯಿಂದ ಮೈಸೂರು ತನಕ ತಮ್ಮ ಹುಡ್ಗಿ ಜೊತೆ ರೌಂಡ್ಸ್ ಹೊಡೆದಿರೋ ದೃಶ್ಯ ಚಿತ್ತಾರ ಕಣ್ಮನ ತಣಿಸುತ್ತಿದೆ. ಇದರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ..
- ಗ್ಯಾರಂಟಿ ನ್ಯೂಸ್‌ನಲ್ಲಿ ‘ಲಕ್ಷ್ಮೀಪುತ್ರ’ ಚಿಕ್ಕಣ್ಣನ ಪ್ರೇಮ್ ಕಹಾನಿ
- ನಮ್ ಚಿಕ್ಕು ಕಾಮಿಡಿಗೂ ಸೈ.. ರೊಮ್ಯಾಂಟಿಕ್ ಲವ್‌ಗೂ ಜೈ.!
- ಲಕ್ಷ್ಮೀಪುತ್ರ ಫಸ್ಟ್ ಸಿಂಗಲ್ ಸೂಪರ್.. ಡಿ ಬೀಟ್ಸ್‌ನಲ್ಲಿ ವೈರಲ್
- AP ಅರ್ಜುನ್ ಈಸ್ ಬ್ಯಾಕ್.. ಚಿಕ್ಕಣ್ಣಗೆ ಶುಕ್ರದೆಸೆ ಶುಭಾರಂಭ
ಸ್ಯಾಂಡಲ್‌ವುಡ್ ಉಪಾಧ್ಯಕ್ಷ ಚಿಕ್ಕಣ್ಣ ಬರ್ತ್ ಡೇಗೆ ಲಕ್ಷ್ಮೀಪುತ್ರ ಟೀಂ ಒಂದೊಳ್ಳೆ ಗಿಫ್ಟ್ ನೀಡಿದೆ. ಅದೇ ಈ ಇನ್ಮೇಲೆ ಅನ್ನೋ ಫೀಲ್ ಗುಡ್ ಮೆಲೋಡಿ ಲವ್ ಟ್ರ್ಯಾಕ್. ಯೆಸ್.. ಇದು ಲಕ್ಷ್ಮೀಪುತ್ರ ಸಿನಿಮಾದ ಫಸ್ಟ್ ಸಾಂಗ್ ಝಲಕ್. ಎಪಿ ಅರ್ಜುನ್ ನಿರ್ಮಾಣದ ಹಾಗೂ ವಿಜಯ್ ಎಸ್ ಸ್ವಾಮಿ ನಿರ್ದೇಶನದ ಈ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಹಾಡಿನೊಂದಿಗೆ ಪ್ರಮೋಷನ್ಸ್ ಶುರು ಮಾಡಿದೆ ಟೀಂ.
ಎಪಿ ಅರ್ಜುನ್ ಅವರೇ ಸಾಹಿತ್ಯ ಬರೆದಿರೋ ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ಗಿರೀಶ್ ಗೌಡ ಸಿನಿಮಾಟೋಗ್ರಫಿ ಹಾಗೂ ದೀಪು ಎಡಿಟಿಂಗ್ ಕೈಚಳಕ ಜೋರಿದೆ. ನಟಿ ವಂದಿತಾ ಗೌಡ ಜೊತೆ ನಟ ಚಿಕ್ಕಣ್ಣನ ಲವ್ ಸ್ಟೋರಿ ಮುದ ನೀಡುವಂತಿದ್ದು, ಹಳ್ಳಿಯಿಂದ ಮೈಸೂರು ಸಿಟಿ ತನಕ ಅವ್ರ ಪ್ರೇಮ ಪಲ್ಲಕ್ಕಿಯ ತೇರು ವೈಭವೋಪೇತವಾಗಿ ಸಾಗಲಿದೆ. ಒಟ್ಟಾರೆ ಲಕ್ಷ್ಮೀಪುತ್ರನ ಈ ಹಾಡು ನೋಡುಗರ ಕಣ್ಮನ ತಣಿಸುತ್ತಿದೆ.
ಶೈಲಜಾ ನಾಗ್ ಒಡೆತನದ ಡಿ ಬೀಟ್ಸ್ ಆಡಿಯೋ ಸಂಸ್ಥೆ ಲಕ್ಷ್ಮೀಪುತ್ರ ಆಡಿಯೋ ರೈಟ್ಸ್ ಖರೀದಿಸಿದ್ದು, ಚಿಕ್ಕಣ್ಣ ಬರೀ ಕಾಮಿಡಿಗಷ್ಟೇ ಅಲ್ಲ, ಪ್ರೀತಿ ಮಾಡೋದ್ರಲ್ಲೂ ಬೆಸ್ಟ್ ಅನಿಸಿಕೊಂಡಿದ್ದಾರೆ. ಹೊಸ ಬಾಳಿಗೆ ಕಾಲಿಡೋ ಕಾತರದಲ್ಲಿರೋ ಚಿಕ್ಕುಗೆ ಈ ತರಹದ ರೊಮ್ಯಾಂಟಿಕ್ ಸಾಂಗ್ಸ್ ರಿಯಲ್ ಲೈಫ್‌ಗೂ ಪುಷ್ಠಿ ನೀಡಲಿವೆ. ಚಿಕ್ಕಣ್ಣ ಜೊತೆ ವಂದಿತಾ, ತಾರಾ, ಧರ್ಮಣ್ಣ, ಕುರಿ ಪ್ರತಾಪ್, ಮನು, ಮಿತ್ರ ಅಂತಹ ಸಾಕಷ್ಟು ಮಂದಿ ಕಲಾವಿದರ ದಂಡಿದೆ.
ಈ ಲಕ್ಷ್ಮೀಪುತ್ರ ಸಾಂಗ್ ಲಾಂಚ್ ಇವೆಂಟ್‌ಗೆ ಗಾಯಕಿ ಪೃಥ್ವಿ ಭಟ್ ಕೂಡ ಸಾಕ್ಷಿಯಾಗಿದ್ದು ವಿಶೇಷ. ಅಂದಹಾಗೆ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳನ್ನ ಮುಗಿಸಿದ್ದು, ಸದ್ಯದಲ್ಲೇ ತೆರೆಗಪ್ಪಳಿಸಲಿದೆ. ಒಂದ್ಕಡೆ ಮದ್ವೆ.. ಮತ್ತೊಂದ್ಕಡೆ ಸಿನಿಮಾದ ರಿಲೀಸ್.. ಚಿಕ್ಕಣ್ಣಗೆ ಶುಕ್ರದೆಸೆ ಶುರುವಾಗಿರೋದ್ರಲ್ಲಿ ಯಾವುದೇ ಸಂದೇಹ ಇಲ್ಲ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





