ನವದೆಹಲಿ, ಜೂನ್ 17: ಫ್ರಾನ್ಸ್‌ನ ಎವಿಯನ್-ಲೆ-ಬೆನ್ಸ್ (Evian-les-Bains) ನಲ್ಲಿ ಜಿ7 (G7) ರಾಷ್ಟ್ರಗಳ ನಾಯಕರ ಶೃಂಗಸಭೆಯು ನಡೆಯುತ್ತಿದೆ. ಜಾಗತಿಕ ರಾಜತಾಂತ್ರಿಕತೆಯ ಜೊತೆಗೆ ಮತ್ತೊಮ್ಮೆ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಅವರ ‘ಮೆಲೋಡಿ’ (Melodi) ಜುಗಲ್‌ಬಂಧಿಗೆ ಸಾಕ್ಷಿಯಾಗಿದೆ. ಉಕ್ರೇನ್ ಬಿಕ್ಕಟ್ಟು, ಅಮೆರಿಕ-ಇರಾನ್ ಒಪ್ಪಂದದಂತಹ ಗಂಭೀರ ವಿಷಯಗಳ ಚರ್ಚೆಯ ನಡುವೆಯೂ ಉಭಯ ನಾಯಕರ ಸ್ನೇಹಪೂರ್ಣ ಮಾತುಕತೆಯ ವಿಡಿಯೋ ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ.
‘ಮೋಸ್ಟ್ ಫೇಮಸ್ ಕಪಲ್ ಆನ್ ಇನ್ಸ್ಟಾಗ್ರಾಮ್’
ಶೃಂಗಸಭೆಯ ಜಾಗತಿಕ ನಾಯಕರ ಗ್ರೂಪ್ ಫೋಟೋಗೆ ನಿಲ್ಲುವ ಮುನ್ನ ಪ್ರಧಾನಿ ಮೋದಿ ಮತ್ತು ಮೆಲೋನಿ ಪರಸ್ಪರ ಕೈಕುಲುಕಿ ಅತ್ಯಂತ ಆತ್ಮೀಯವಾಗಿ ಶುಭಾಶಯ ವಿನಿಮಯ ಮಾಡಿಕೊಂಡರು. ಈ ವೇಳೆ ಪ್ರಧಾನಿ ಮೋದಿ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ತಮಗಿರುವ ಜನಪ್ರಿಯತೆಯ ಬಗ್ಗೆ ಮೆಲೋನಿ ಬಳಿ ಪ್ರಸ್ತಾಪಿಸಿದಾಗ, ಅದಕ್ಕೆ ಮೆಲೋನಿ ಮುಗುಳ್ನಗುತ್ತಲೇ, “ಹೌದು, ನಾವು ಇನ್ಸ್ಟಾಗ್ರಾಂನಲ್ಲಿ ಅತ್ಯಂತ ಪ್ರಸಿದ್ಧ ಜೋಡಿ” (Most Famous Couple on Instagram) ಎಂದು ಪ್ರತ್ಯುತ್ತರ ನೀಡಿದ್ದಾರೆ. ಮೆಲೋನಿ ಅವರ ಈ ಮಾತಿಗೆ ಮೋದಿ ಕೂಡ ನಕ್ಕಿರುವ ದೃಶ್ಯ ಈಗ ವೈರಲ್ ಆಗಿದೆ. ನೆಟ್ಟಿಗರು ಈ ವಿಡಿಯೋಗೆ “ಪವರ್ ಕಪಲ್” ಮತ್ತು “ಡಿಪ್ಲೊಮಸಿ ಗೋಲ್ಸ್” ಎಂದು ಕಮೆಂಟ್ ಮಾಡುತ್ತಿದ್ದಾರೆ.
Modiji and meloni 😍 pic.twitter.com/6iWmtkCIUN
— Jash (@jeetcasm) June 16, 2026
‘ಮೆಲೋಡಿ’ ಚಾಕೊಲೇಟ್ನ ಸಿಹಿ ಟ್ವಿಸ್ಟ್
ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರು ಇಟಲಿ ಪ್ರವಾಸ ಕೈಗೊಂಡಾಗ ರೋಮ್‌ನಲ್ಲಿ ಇಬ್ಬರೂ ನಾಯಕರು ಸುತ್ತಾಟ ನಡೆಸಿ ಜಾಗತಿಕ ಗಮನ ಸೆಳೆದಿದ್ದರು. ಆ ಭೇಟಿಯ ವೇಳೆ ಪ್ರಧಾನಿ ಮೋದಿ ಅವರು ತಮಾಷೆಯಾಗಿ ಭಾರತದ ಪ್ರಸಿದ್ಧ ‘ಮೆಲೋಡಿ‘ (Melody) ಟಾಫಿ ಪ್ಯಾಕೆಟ್ ಅನ್ನು ಮೆಲೋನಿ ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಇದು ಸಾಮಾಜಿಕ ಜಾಲತಾಣದ ಟ್ರೆಂಡ್‌ಗೆ ಸಿಹಿ ಟ್ವಿಸ್ಟ್ ಕೊಟ್ಟಿದ್ದರು. ಆಗ ವಿಡಿಯೋ ಹಂಚಿಕೊಂಡಿದ್ದ ಮೆಲೋನಿ, “ಪ್ರಧಾನಿ ಮೋದಿ ನನಗೆ ತುಂಬಾ ಒಳ್ಳೆಯ ಟಾಫಿಯನ್ನು ಗಿಫ್ಟ್ ಕೊಟ್ಟಿದ್ದಾರೆ” ಎಂದು ಸಂಭ್ರಮಿಸಿದ್ದರು. ಅದಕ್ಕೆ ಮೋದಿ “ಮೆಲೋಡಿ” ಎಂದು ಉತ್ತರಿಸಿದ್ದರು. ಈ ಘಟನೆಯು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ, ಇಬ್ಬರು ನಾಯಕರ ನಡುವಿನ ಸ್ನೇಹಕ್ಕೆ ಹೊಸ ಆಯಾಮವನ್ನು ನೀಡಿತ್ತು.
‘ಮೆಲೋಡಿ’ ಡಿಪ್ಲೊಮಸಿಯ ಹಿಂದಿನ ಕಥೆ
2023 ರಲ್ಲಿ ಮೋದಿ ಮತ್ತು ಮೆಲೋನಿ ಅವರ ದ್ವಿಪಕ್ಷೀಯ ಭೇಟಿಯ ನಂತರ ನೆಟ್ಟಿಗರು ಇಬ್ಬರ ಹೆಸರನ್ನು ಸೇರಿಸಿ ‘#Melodi’ ಎಂಬ ಹ್ಯಾಷ್ಟ್ಯಾಗ್ ಸೃಷ್ಟಿಸಿದ್ದರು. 2024 ರಲ್ಲಿ ಮೆಲೋನಿ ಅವರು ಮೋದಿ ಜೊತೆ ಸೆಲ್ಫಿ ಹಾಕಿ “Hi friends, from #Melodi” ಎಂದು ಪೋಸ್ಟ್ ಮಾಡಿದ್ದರು. 2025 ರ ಜಿ7 ಶೃಂಗಸಭೆಯಲ್ಲೂ “Hello, from the Melodi team” ಎಂದು ವಿಡಿಯೋ ಹಂಚಿಕೊಂಡಿದ್ದರು.
ಈಗ 2026 ರಲ್ಲಿ ಫ್ರಾನ್ಸ್ನಲ್ಲೂ ಅದೇ ಟ್ರೆಂಡ್ ಮುಂದುವರಿದಿದ್ದು, ನೆಟ್ಟಿಗರು ಇವರನ್ನು “ಇಂಟರ್ನೆಟ್ ಜಗತ್ತಿನ ಅತ್ಯಂತ ಪವರ್ಫುಲ್ ಜೋಡಿ” ಎಂದು ಕೊಂಡಾಡುತ್ತಿದ್ದಾರೆ. ಮೆಲೋನಿ ಹಂಚಿಕೊಂಡ ಕೇವಲ ಕೆಲವೇ ಗಂಟೆಗಳಲ್ಲಿ ಈ ವಿಡಿಯೋಗೆ ಲಕ್ಷಾಂತರ ಲೈಕ್ಸ್ ಮತ್ತು ಕಮೆಂಟ್‌ಗಳು ಬಂದಿವೆ.





