ದೊಡ್ಮನೆ ದೊರೆ ಶಿವರಾಜ್ಕುಮಾರ್ ಟಾಲಿವುಡ್ನ ಚಿರು ತನಯ ರಾಮ್ ಚರಣ್ ಜೊತೆ ನಟಿಸಿರೋ ಪೆದ್ದಿ, ಸದ್ಯ ನಿರೀಕ್ಷೆಗೂ ಮೀರಿ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಚರಣ್ ಪವರ್ಗೆ ಶಿವಣ್ಣನ ಉಸ್ತಾದ್ ಗೌರ್ ನಾಯ್ಡು ಖದರ್ ಕೂಡಿ ಬೆಳ್ಳಿತೆರೆ ಬ್ಯಾಂಗ್ ಆಗಿದೆ. ಹಾಗಾದ್ರೆ ಪೆದ್ದಿ ಹೇಗಿದೆ..? ಜೈಲರ್ ನಂತ್ರ ಶಿವಣ್ಣನ ತೆಲುಗು ಪರ್ವ ಎಂಥದ್ದು ಅನ್ನೋದ್ರ ಫುಲ್ ಡಿಟೈಲ್ಡ್ ಸ್ಟೋರಿ ಇಲ್ಲಿದೆ..
- ಚರಣ್ ಪವರ್.. ಶಿವಣ್ಣ ಉಸ್ತಾದ್ ಗೌರ್ ನಾಯ್ಡು ಖದರ್
- ಅಂದು ತಲೈವಾ ಜೊತೆ ಜೈಲರ್.. ಇಂದು ಚಿರು ತನಯ ಪೆದ್ದಿ
- ಇಂಡಿಯಾದಲ್ಲೇ 4000+ ಶೋ.. 400Cr ಪ್ರೀ-ಬ್ಯುಸಿನೆಸ್
- ಪ್ರೀಮಿಯರ್ನಿಂದಲೇ 39 ಕೋಟಿ ಲೂಟಿ.. 100Cr ಕ್ಲಬ್..!
ದಿ ವೆಯ್ಟ್ ಈಸ್ ಓವರ್.. ಪೆದ್ದಿ ಸಿನಿಮಾ ಇಂದು ವರ್ಲ್ಡ್ವೈಡ್ ಗ್ರ್ಯಾಂಡ್ ಆಗಿ ರಿಲೀಸ್ ಆಗಿದ್ದು, ನಿನ್ನೆಯೇ ಪೇಯ್ಡ್ ಪ್ರೀಮಿಯರ್ ಶೋಗಳ ಮೂಲಕ ಬಿಗ್ ಓಪನಿಂಗ್ ಪಡೆದಿದೆ. ಯೆಸ್.. ಬರೋಬ್ಬರಿ 39 ಕೋಟಿ ರೂಪಾಯಿಗಳನ್ನ ಜಸ್ಟ್ ಪ್ರೀಮಿಯರ್ನಿಂದಲೇ ಗಳಿಸಿರೋದು ವಿಶೇಷ. ಇಂದು ಮೊದಲ ದಿನ ಇಂಡಿಯಾ ಒಂದರಲ್ಲೇ ಬರೋಬ್ಬರಿ 4248 ಶೋಗಳು ನಡೆದಿದ್ದು, ತೆಲುಗು ಒಂದರಲ್ಲೇ 2809 ಶೋಗಳು ಕಮೆನ್ಸ್ ಆಗಿವೆ. ಈ ಮೂಲಕ ಮೊದಲ ದಿನ ಸುಮಾರು 1 ಮಿಲಿಯನ್ ಟಿಕೆಟ್ಸ್ ಸೋಲ್ಡ್ ಔಟ್ ಆಗಿ, ನೂತನ ದಾಖಲೆ ಬರೆದಿದೆ.
ಸುಕುಮಾರ್ ರೈಟಿಂಗ್ಸ್ನ ಈ ಸಿನಿಮಾಗೆ ಬುಚ್ಚಿಬಾಬು ಆ್ಯಕ್ಷನ್ ಕಟ್ ಹೇಳಿದ್ದು, ಎ ಆರ್ ರೆಹಮಾನ್ ಸಂಗೀತವಿದೆ. ರಾಮ್ ಚರಣ್ ಜೊತೆ ನಮ್ಮ ದೊಡ್ಮನೆ ದೊರೆ ಶಿವರಾಜ್ಕುಮಾರ್ ನಟಿಸಿರೋ ಈ ಸಿನಿಮಾ, ಪ್ರೀ ರಿಲೀಸ್ ಬ್ಯುಸಿನೆಸ್ನಿಂದ 400 ಕೋಟಿ ಕ್ಲಬ್ ಸೇರಿದೆ. ಹೌದು.. 218.5 ಕೋಟಿ ಡಿಸ್ಟ್ರಿಬ್ಯೂಷನ್ನಿಂದ ಗಳಿಸಿದ್ರೆ, ಸ್ಯಾಟಲೈಟ್ ಹಾಗೂ ಡಿಜಿಟಲ್ ರೈಟ್ಸ್ ಸೇರಿ ನಾನೂರು ಕೋಟಿ ರೂಪಾಯಿ ಗಡಿ ಮುಟ್ಟಿದೆ.
ಟಿಪಿಕಲ್ ಸ್ಪೋರ್ಟ್ಸ್ ಡ್ರಾಮಾ ಇದಾಗಿದ್ದು, ಒಲಿಂಪಿಕ್ಸ್ನಲ್ಲಿ ಎರಡೇ ಎರಡು ಮೆಡಲ್ಸ್ ಪಡೆದ ಇಂಡಿಯಾನ ಕಂಡು ಸ್ಪೋರ್ಟ್ಸ್ ಕೋಟಾ ತೆಗೆಯಲಾಗುತ್ತೆ. ಕ್ಲಬ್ಗಳನ್ನ ಮುಚ್ಚಲಾಗುತ್ತೆ ಎಂದಾಗ ತೆರೆದುಕೊಳ್ಳುವ ಕಥೆ ಇದಾಗಿದೆ. ಆಂಧ್ರ ಪ್ರದೇಶದ ವಿಜಯ ನಗರಂ ಪ್ರಾಂತ್ಯದ ಬೆಟ್ಟದ ಅಡಿಯಿರೋ ಒಂದು ಊರು. ಅದಕ್ಕೆ ಹೆಸರಿಲ್ಲ. ಅಲ್ಲಿನ ಜನಕ್ಕೆ ಐಡೆಂಟಿಟಿ ಇಲ್ಲ. ಸ್ಪೋರ್ಟ್ಸ್ ಮೂಲಕವೇ ಆ ಎಲ್ಲವನ್ನ ಗಳಿಸಿಕೊಳ್ಳುವ ಆ ಊರು ಹಾಗೂ ಆ ಊರಿನ ಪೆದ್ದಿ, ಅಪ್ಪಲ ಸೂರಿ ಕುರಿತ ರೋಚಕತೆ ಇದಾಗಿದೆ.
ಲೋಕಲ್ ಸ್ಪೋರ್ಟ್ಸ್ ಟು ಪ್ಯಾರಾ ಒಲಿಂಪಿಕ್ಸ್ ತನಕ ನೋಡುಗರನ್ನ ಕರೆದೊಯ್ಯುವ ಈ ಸಿನಿಮಾದಲ್ಲಿ ಕ್ರಿಕೆಟ್, ಕುಸ್ತಿ ಹಾಗೂ ರನ್ನಿಂಗ್ ರೇಸ್ ಮೂರರ ಮಹತ್ವ ಹಾಗೂ ಪೆದ್ದಿಯ ಹಾರ್ಡ್ ವರ್ಕ್, ಡೆಡಿಕೇಷನ್ನ ಬಿತ್ತರಿಸಲಾಗಿದೆ. ಅದ್ರಲ್ಲೂ ಪೆದ್ದಿಯನ್ನ ಅದ್ಭುತ ಕುಸ್ತಿಪಟು ಆಗಿಸೋ ಉಸ್ತಾದ್ ಗೌರ್ ನಾಯ್ಡು ಪಾತ್ರದಲ್ಲಿ ನಮ್ಮ ಶಿವರಾಜ್ಕುಮಾರ್ ಬಹಳ ಗತ್ತಿನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚರಣ್ ಪವರ್ಗೆ ನಮ್ಮ ಶಿವಣ್ಣನ ಖದರ್ ಸೇರಿ ಸಿನಿಮಾ ಮತ್ತಷ್ಟು ಪಕ್ವವಾಗಿದೆ.
ತಲೈವಾ ರಜನಿಕಾಂತ್ ಜೊತೆ ಜೈಲರ್ ಸಿನಿಮಾ ಮಾಡಿದ್ದ ಶಿವಣ್ಣ, ತಮಿಳು ಚಿತ್ರಪ್ರೇಮಿಗಳ ದಿಲ್ ದೋಚಿದ್ರು. ಇದೀಗ ಪೆದ್ದಿ ಚಿತ್ರದ ಉಸ್ತಾದ್ ರೋಲ್ನಿಂದ ಟಾಲಿವುಡ್ ಅಂಗಳದಲ್ಲಿ ಧೂಳೆಬ್ಬಿಸಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿ 5 ಭಾಚೆಗಳಲ್ಲಿ ರಿಲೀಸ್ ಆಗಿದ್ದು, ಎಲ್ಲೆಡೆ ಶಿವಣ್ಣನ ನಟನೆ, ಖದರ್ಗೆ ಪ್ರೇಕ್ಷಕ ಪ್ರಭುಗಳು ಥಂಡಾ ಹೊಡೆದಿದ್ದಾರೆ. ಆಂಧ್ರ, ತೆಲಂಗಾಣದ ಥಿಯೇಟರ್ಗಳ ಮುಂದೆ ನಮ್ಮ ಶಿವಣ್ಣನ ಫ್ಲೆಕ್ಸ್, ಬ್ಯಾನರ್ಗಳು ರಾರಾಜಿಸ್ತಿರೋದನ್ನ ನೋಡೋಕೆ ಖುಷಿ ಆಗುತ್ತೆ.
130ಕ್ಕೂ ಅಧಿಕ ಚಿತ್ರಗಳನ್ನ ಮಾಡಿರೋ ಶಿವಣ್ಣನ ಸ್ಟ್ರೆಂಥ್ ನಮ್ಮ ಕನ್ನಡದ ಟೆಕ್ನಿಷಿಯನ್ಸ್ ಇನ್ನೂ ಸರಿಯಾಗಿ ಅರಿತುಕೊಂಡಂತಿಲ್ಲ. ಹಾಗಾಗಿಯೇ ಇತ್ತೀಚೆಗೆ ಪರಭಾಷಿಗರು ನಮ್ಮ ಶಿವಣ್ಣನಿಗೆ ರೆಡ್ ಕಾರ್ಪೆಟ್ ಹಾಸಿ, ವೆಲ್ಕಮ್ ಹೇಳ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಶಿವಣ್ಣನೊಟ್ಟಿಗೇ ಮಾಡ್ತಿದ್ದಾರೆ. ಇದು ದೊಡ್ಮನೆ ದೊರೆಯ ಗತ್ತು, ಗಮ್ಮತ್ತು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





