ಇಂದು ಗ್ರಹಗಳ ಸ್ಥಿತಿ ಮತ್ತು ನಕ್ಷತ್ರಗಳ ಸಂಯೋಗವು ಪ್ರತಿ ರಾಶಿಯವರ ಜೀವನದ ಮೇಲೆ ವಿಶಿಷ್ಟ ಪರಿಣಾಮ ಬೀರುತ್ತದೆ. ಈ ದಿನಾಂಕವು ಮೇಷ ಸಂಕ್ರಾಂತಿಯ ಹೊರತಾಗಿಯೂ, ಗ್ರಹಗಳ ಚಲನೆಗಳು ವಿಶೇಷವಾಗಿ ಸೂರ್ಯ, ಚಂದ್ರ ಮತ್ತು ಗುರು ಗ್ರಹಗಳ ಸ್ಥಾನಗಳು ಪ್ರಮುಖ ಘಟನೆಗಳನ್ನು ಸೂಚಿಸುತ್ತವೆ. ಇಲ್ಲಿ ನಿಮ್ಮ ರಾಶಿಗೆ ಅನುಗುಣವಾದ ಭವಿಷ್ಯವನ್ನು ತಿಳಿಯೋಣ.
ಮೇಷ (Aries)
ಈ ರಾಶಿಯವರಿಗೆ ವ್ಯಾಪಾರ ವ್ಯವಹಾರದಲ್ಲಿ ಹೊಸ ಅವಕಾಶಗಳು ಬರಲಿವೆ. ಹಣಕಾಸು ಸ್ಥಿರವಾಗಿದ್ದು, ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ.
ವೃಷಭ (Taurus)
ಈ ರಾಶಿಯವರಿಗೆ ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ.ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಯಶಸ್ಸಯ ಸಿಗಲಿದೆ. ಹೂಡಿಕೆಗಳಿಗೆ ಸೂಕ್ತ ಸಮಯ. ಆರೋಗ್ಯದಲ್ಲಿ ಸಣ್ಣ ತೊಂದರೆಗಳು ಉಂಟಾಗಬಹುದು.
ಮಿಥುನ (Gemini)
ಈ ರಾಶಿಯವರಿಗೆ ವ್ಯವಹಾರಗಳಲ್ಲಿ ನಿರಾಶೆ ಉಂಟಾಗುತ್ತದೆ. ಹಣಕಾಸಿನ ವ್ಯವಹಾರಗಳಿ ಮಂದಗತಿಯಲ್ಲಿ ಸಾಗಲಿದೆ. ದೂರ ಪ್ರಯಾಣದ ಅವಕಾಶಗಳು ಇರಲಿದೆ. ವ್ಯಾಪಾರ ಉದ್ಯೋಗಗಳು ಏರಿಳಿತಗಳಿರುತ್ತವೆ.
ಕರ್ಕಾಟಕ (Cancer)
ವೃತ್ತಿ ಮತ್ತು ಉದ್ಯೋಗಗಳಲ್ಲಿ ನಿರೀಕ್ಷಿತ ಪ್ರಗತಿ ಕಂಡುಬರುತ್ತದೆ. ಹಣಕಾಸು ಸ್ಥಿತಿಯಲ್ಲಿ ಉತ್ತಮ. ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಕೈಗೊಂಡ ಕಾರ್ಯಗಳು ನಿಧಾನವಾಗಿ ಪೂರ್ಣಗೊಳ್ಳುತ್ತವೆ. ದೀರ್ಘಕಾಲದ ವಿವಾದಗಳು ಬಗೆಹರಿಯುತ್ತವೆ.
ಸಿಂಹ (Leo)
ಈ ರಾಶಿಯವರಿಗೆ ಆದಾಯಕ್ಕಿಂತ ವಖರ್ಚು ಹೆಚ್ಚಾಗಲಿದೆ. ವೃತ್ತಿಪರ ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಹಣಕಾಸು ನಿರ್ವಹಣೆಗೆ ಗಮನ ವಹಿಸಿ. ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿ. ಕೈಗೊಂಡ ಕೆಲಸಗಳು ಸರಿಯಾಗಿ ಪೂರ್ಣಗೊಳ್ಳದೆ ಕಿರಿಕಿರಿ ಹೆಚ್ಚಾಗುತ್ತದೆ.
ಕನ್ಯಾ (Virgo)
ಈ ರಾಶಿಯವರಿಗೆ ಆರ್ಥಿಕ ಪರಿಸ್ಥಿತಿ ಲಾಭದಾಯಕವಾಗಿರಲಿದೆ. ವ್ಯವಹಾರಗಳಲ್ಲಿ ಪ್ರಮುಖ ನಿರ್ಧಾರಗಳನ್ನು ಕಾರ್ಯಗತಗೊಳಿಸುತ್ತೀರಿ. ವೃತ್ತಿಪರ ಉದ್ಯೋಗಗಳಲ್ಲಿ ನಿಮ್ಮ ಮೌಲ್ಯ ಹೆಚ್ಚಾಗುತ್ತದೆ.
ತುಲಾ (Libra)
ಈ ರಾಶಿಯವರಿಗೆ ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಆರೋಗ್ಯದಲ್ಲಿ ಏರುಪೇರಾಗಬಹುದು. ಹೊಸ ವ್ಯಾಪಾರ ಆರಂಭಿಸಲು ಇದ್ದ ಅಡೆಚಣೆಗಳು ನಿವಾರಣೆಯಾಗುತ್ತದೆ. ಕೈಗೆತ್ತಿಕೊಂಡ ಕೆಲಸಗಳಲ್ಲಿ ಬಪ್ರಗತಿ ಸಾಧಿಸುವಿರಿ.
ವೃಶ್ಚಿಕ (Scorpio)
ಈ ರಾಶಿಯವರಿಗೆ ಹೊಸ ಸಾಲದ ಪ್ರಯತ್ನಗಳು ನಿಧಾನವಾಗಿ ಸಾಗಲಿದೆ. ಹೂಡಿಕೆಗಳಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ. ದೂರ ಪ್ರಯಾಣದ ಸೂಚನೆಗಳಿವೆ. ವೃತ್ತಿಪರ ಉದ್ಯೋಗಗಳಲ್ಲಿ ಗೊಂದಲದ ಸನ್ನಿವೇಶಗಳಿರುತ್ತವೆ .
ಧನು (Sagittarius)
ಈ ರಾಶಿಯವರಿಗೆ ಹಣಕಾಸು ಸ್ಥಿತಿ ಉತ್ತಮವಾಗಿರಲಿದೆ. ದೂರದ ಪ್ರಯಾಣದ ಅವಕಾಶಗಳಿರುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ ಖರ್ಚು ವೆಚ್ಚಗಳು ಅಧಿಕವಾಗಿರುತ್ತದೆ. ಬಂಧು ಮಿತ್ರರೊಂದಿಗೆ ವಿನಾಕಾರಣ ವಿವಾದಗಳು ಉಂಟಾಗುತ್ತದೆ.
ಮಕರ (Capricorn)
ಈ ರಾಶಿಯವರಿಗೆ ವೃತ್ತಿಪರ ಉದ್ಯೋಗಗಲ್ಲಿ ಅಧಿಕಾರಿಗಳು ಸಹಾಯದಿಂದ ಸಹಕಾರ ಸಿಗಲಿದೆ. ದೀರ್ಘಕಾಲೀನ ಯೋಜನೆಗಳು ಫಲಿಸುತ್ತವೆ. ಹಣಕಾಸು ಪರಿಸ್ಥಿತಿ ಸುಧಾರಿಸಲಿದೆ. ಕೌಟುಂಬಿಕ ವ್ಯವಹಾರಗಳಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ.
ಕುಂಭ (Aquarius)
ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಹಣಕಾಸು ನಿರ್ವಹಣೆಗೆ ಗಮನ. ಆರೋಗ್ಯದಲ್ಲಿ ಸುಧಾರಣೆ ಆಗಲಿದೆ. ವೃತ್ತಿಪರ ಉದ್ಯೋಗಗಳಲ್ಲಿ ಕೆಲಸದ ಒತ್ತಡ ಹೆಚ್ಚಾಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಅತುರದ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ.
ಮೀನ (Pisces)
ಈ ರಾಶಿಯವರ ಹಣಕಾಸು ಸ್ಥಿತಿ ಸುಧಾರಿಸಲಿದೆ. ಕುಟುಂಬದ ಸದಸ್ಯರ ಮಾತುಗಳಯ ಸ್ವಲ್ಪ ನಿರಾಶೆ ಉಂಟಾಗುತ್ತದೆ. ವ್ಯಾಪಾರ ವ್ಯವಹಾರಗಳು ಅಲ್ಪ ಲಾಭ ದೊರೆಯುತ್ತದೆ. ಹೊಸ ಕಾರ್ಯ ಯೋಜನೆಗಳನ್ನು ರೂಪಿಸದಿರುವುದು ಉತ್ತಮ.