• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, July 10, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಸಾಲದ ಸುಳಿಗೆ ಸಿಕ್ಕಿ ತತ್ತರಿಸಿದ ಪಾಕ್: ಸಾರಾಯಿ ರಫ್ತಿಗೆ ಇಳಿದ ಪಾಕಿಸ್ತಾನ!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
May 5, 2026 - 10:35 pm
in Flash News, ವಿದೇಶ
0 0
0
Untitled design 2026 05 05T223312.116

ನವದೆಹಲಿ (ಮೇ.5): ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಪಾಕಿಸ್ತಾನವು ತನ್ನ ಸಾಲದ ಹೊರೆಯನ್ನು ನಿವಾರಿಸಿಕೊಳ್ಳಲು 50 ವರ್ಷಗಳ ನಂತರ ಮತ್ತೆ ವಿದೇಶಗಳಿಗೆ ಮದ್ಯ ರಫ್ತು ಮಾಡಲು ಆರಂಭಿಸಿದೆ. ದೇಶದ ಏಕೈಕ ಸ್ಥಳೀಯ ಮದ್ಯ ತಯಾರಿಕಾ ಸಂಸ್ಥೆ ‘ಮರ್ರಿ ಬ್ರೂವರಿ’ (Murree Brewery) ಏಪ್ರಿಲ್ 2026ರಲ್ಲಿ ಬ್ರಿಟನ್, ಜಪಾನ್, ಪೋರ್ಚುಗಲ್ ಮತ್ತು ಥೈಲ್ಯಾಂಡ್‌ಗಳಿಗೆ ಬಿಯರ್ ಸೇರಿದಂತೆ ಮದ್ಯದ ಉತ್ಪನ್ನಗಳನ್ನು ರಫ್ತು ಮಾಡಲು ಶುರು ಮಾಡಿದೆ. 

ಸುಮಾರು 138 ಬಿಲಿಯನ್ ಡಾಲರ್ ಸಾಲದ ಹೊರೆ

RelatedPosts

ಚೀನಾದ ಶೂ ಕಾರ್ಖಾನೆಯಲ್ಲಿ ಭೀಕರ ಬೆಂಕಿ ಅವಘಡ: 28 ಮಂದಿ ಸಾವು

ಸಂಘರ್ಷ ಪ್ರದೇಶಗಳಲ್ಲಿ ಲೈಂಗಿಕ ಹಿಂಸೆ ಅಮಾನವೀಯ ಕೃತ್ಯ: ಯುಎನ್ ವೇದಿಕೆಯಲ್ಲಿ ಭಾರತ ಖಂಡನೆ

ಧಾರವಾಡ ಕೃಷಿ ವಿವಿಯ ಸಂಶೋಧನೆಗೆ ಜಾಗತಿಕ ಮೆಚ್ಚುಗೆ: ವಿದೇಶಕ್ಕೆ ಗೋಧಿ ಬೀಜ ರವಾನೆ

ಪ್ರೇಯಸಿಗೆ ಚಾಕು ಇರಿದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ

ADVERTISEMENT
ADVERTISEMENT

ಪಾಕಿಸ್ತಾನದ ಪ್ರಸ್ತುತ ಆರ್ಥಿಕ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ದೇಶವು ಸುಮಾರು 138 ಬಿಲಿಯನ್ ಡಾಲರ್ (ಸರಿಸುಮಾರು 11.5 ಲಕ್ಷ ಕೋಟಿ ರೂ.) ವಿದೇಶಿ ಸಾಲವನ್ನು ಹೊಂದಿದೆ. ಸರ್ಕಾರದ ಆದಾಯ ಮತ್ತು ವೆಚ್ಚದ ನಡುವೆ ಭಾರಿ ಅಂತರವಿದೆ. 2026ರ ಹಣಕಾಸು ವರ್ಷದಲ್ಲಿ ಸರ್ಕಾರದ ಅಂದಾಜು ಆದಾಯ 11,072 ಬಿಲಿಯನ್ ಪಾಕ್ ರೂಪಾಯಿಗಳು (40 ಬಿಲಿಯನ್‌‌) ಇದ್ದರೆ, ವೆಚ್ಚವು 16,286 ಬಿಲಿಯನ್‌ ರೂಪಾಯಿಗಳಿಗೆ (58 ಬಿಲಿಯನ್‌‌) ತಲುಪಿದೆ. ಇದರಲ್ಲಿ ಸುಮಾರು 8,200 ಬಿಲಿಯನ್ ರೂಪಾಯಿಗಳು ($30 ಬಿಲಿಯನ್) ಕೇವಲ ಸಾಲದ ಬಡ್ಡಿ ಪಾವತಿಗೆ ವ್ಯಯವಾಗುತ್ತಿದೆ. ಹಣದ ಅಭಾವದಿಂದಾಗಿ ಈಗ ಮದ್ಯ ರಫ್ತಿನ ಮೂಲಕ ವಿದೇಶಿ ವಿನಿಮಯ ಗಳಿಸಲು ಸರ್ಕಾರ ಮುಂದಾಗಿದೆ.

50 ವರ್ಷಗಳ ನಿಷೇಧವೇಕೆ?

1977ರ ಏಪ್ರಿಲ್‌ನಲ್ಲಿ ಅಂದಿನ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ಅವರು ಇಸ್ಲಾಮಿಕ್ ನಿಯಮಗಳನ್ನು ಉಲ್ಲೇಖಿಸಿ ಪಾಕಿಸ್ತಾನದಲ್ಲಿ ಮದ್ಯ ಮಾರಾಟ ಮತ್ತು ರಫ್ತನ್ನು ಸಂಪೂರ್ಣವಾಗಿ ನಿಷೇಧಿಸಿದರು. ಆಗ ವಿರೋಧ ಪಕ್ಷದವರು ಭುಟ್ಟೋ ಅವರ ಮೇಲೆ ‘ಪಾಶ್ಚಿಮಾತ್ಯ ಜೀವನಶೈಲಿ’ ಅನುಸರಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದರು.  ಒತ್ತಡಕ್ಕೆ ಮಣಿದ ಅವರು ಬಾರ್‌ಗಳು ಮತ್ತು ಕ್ಯಾಸಿನೊಗಳನ್ನು ಮುಚ್ಚುವುದಾಗಿ ಘೋಷಿಸಿದರು. ನಂತರ 1977ರ ಜುಲೈನಲ್ಲಿ ಅಧಿಕಾರಕ್ಕೆ ಬಂದ ಜಿಯಾ-ಉಲ್-ಹಕ್, ಮದ್ಯ ನಿಷೇಧವನ್ನು ಇಸ್ಲಾಮಿಕ್ ಕಾನೂನಿನೊಂದಿಗೆ ಜೋಡಿಸಿ ಮುಸ್ಲಿಮರಿಗೆ ಮದ್ಯ ಸೇವಿಸಿದರೆ ಕಠಿಣ ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೊಳಿಸಿದರು. ಆದರೆ ಮುಸ್ಲಿಮೇತರರಿಗೆ ಪರವಾನಗಿ ಆಧಾರದಲ್ಲಿ ಮದ್ಯ ಖರೀದಿಗೆ ಅವಕಾಶವಿತ್ತು.

ಮುಷರಫ್‌ನಿಂದ ಸಡಿಲಿಕೆ, ಈಗ ಮತ್ತೆ ರಫ್ತು

ನಂತರ ಜನರಲ್ ಪರ್ವೇಜ್ ಮುಷರಫ್ ಅವರ ಕಾಲದಲ್ಲಿ ಮದ್ಯದ ಕಾನೂನು ಸ್ವಲ್ಪ ಸಡಿಲಗೊಂಡಿತು. ಅವರು ನಿಷೇಧವನ್ನು ಸಂಪೂರ್ಣವಾಗಿ ರದ್ದುಗೊಳಿಸಲು ಪ್ರಯತ್ನಿಸಿದರೂ ರಾಜಕೀಯ ಕಾರಣಗಳಿಂದ ಸಾಧ್ಯವಾಗಲಿಲ್ಲ. ಆದರೂ ಮುಸ್ಲಿಮರಿಗೆ ಮದ್ಯ ಲಭ್ಯವಾಗುವುದು ಸುಲಭವಾಯಿತು. 2025ರಲ್ಲಿ ಪಾಕ್ ಸರ್ಕಾರ ಆರ್ಥಿಕ ಕಾರಣಗಳಿಗಾಗಿ ಮತ್ತೆ ಮದ್ಯ ರಫ್ತಿಗೆ ಅನುಮತಿ ನೀಡಿತು. ಮರ್ರಿ ಬ್ರೂವರಿಯ ಸಿಇಒ ಇಸ್ಫನ್ಯಾರ್ ಭಂಡಾರಾ ಅವರು ಮದ್ಯ ರಫ್ತು ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದರು. ಸದ್ಯ ಇಸ್ಲಾಮಿಕ್ ಸಹಕಾರ ಸಂಘಟನೆಯ (OIC) ಭಾಗವಲ್ಲದ ದೇಶಗಳಿಗೆ ಮಾತ್ರ ರಫ್ತು ಮಾಡಲು ಅನುಮತಿ ನೀಡಲಾಗಿದೆ.

1979ರಲ್ಲಿ ಪಾಕಿಸ್ತಾನದಲ್ಲಿ ಕೇವಲ ಎರಡು ಹೆರಾಯಿನ್ ಪ್ರಕರಣಗಳು ವರದಿಯಾಗಿದ್ದವು. ಆದರೆ ಮದ್ಯ ನಿಷೇಧದಿಂದಾಗಿ ಜನರು ಹೆಚ್ಚು ಅಪಾಯಕಾರಿಯಾದ ಹೆರಾಯಿನ್ ವ್ಯಸನಕ್ಕೆ ತಿರುಗಿದರು ಎಂಬ ಆರೋಪವಿದೆ. 1985ರ ವೇಳೆಗೆ ಪಾಕಿಸ್ತಾನ ವಿಶ್ವದ ಅತಿದೊಡ್ಡ ಹೆರಾಯಿನ್ ಗ್ರಾಹಕ ದೇಶಗಳಲ್ಲಿ ಒಂದಾಯಿತು.

ಅಲ್ಲದೆ, ಅಕ್ರಮ ಮದ್ಯ ಮಾಫಿಯಾದಿಂದ ವಿಷಪೂರಿತ ಮದ್ಯ ಸೇವಿಸಿ ನೂರಾರು ಜನರು ಸಾವನ್ನಪ್ಪುತ್ತಿದ್ದಾರೆ. ಧಾರ್ಮಿಕ ಸಂಘಟನೆಗಳು ಮದ್ಯಪಾನವನ್ನು ‘ಬ್ರಿಟಿಷರ ಕಾಲದ ಅಭ್ಯಾಸ’ ಎಂದು ಟೀಕಿಸಿದರೂ, ಸಿಂಧೂ ನಾಗರಿಕತೆಯ ಕಾಲದಲ್ಲೂ ವೈನ್ ತಯಾರಿಸಲಾಗುತ್ತಿತ್ತು ಎಂಬ ಕುರುಹುಗಳು ಮೊಹೆಂಜೊದಾರೋದಲ್ಲಿ ದೊರಕಿವೆ. ಮೊಘಲರ ಕಾಲದಲ್ಲೂ ಮದ್ಯ, ಗಾಂಜಾ ಬಳಕೆ ಸಾಮಾನ್ಯವಾಗಿತ್ತು.

ಮರ್ರಿ ಬ್ರೂವರಿಯ ರಫ್ತು ವ್ಯವಸ್ಥಾಪಕ ರಮೀಜ್ ಶಾ ಅವರು, ಸದ್ಯಕ್ಕೆ ವಿದೇಶಗಳಲ್ಲಿ ಮಾರುಕಟ್ಟೆ ಜಾಲವನ್ನು ಸೃಷ್ಟಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಉತ್ಪಾದನೆ ಹೆಚ್ಚಿಸುವ ಯೋಜನೆಯಿದೆ ಎಂದು ತಿಳಿಸಿದ್ದಾರೆ. 70ರ ದಶಕದ ನಿಷೇಧಕ್ಕೂ ಮೊದಲು ಮರ್ರಿ ಬ್ರೂವರಿ ಭಾರತ, ಅಫ್ಘಾನಿಸ್ತಾನ ಮತ್ತು ಅಮೆರಿಕಕ್ಕೂ ಮದ್ಯ ರಫ್ತು ಮಾಡುತ್ತಿತ್ತು. ಆರ್ಥಿಕ ದುಸ್ಥಿತಿಯು ಪಾಕಿಸ್ತಾನದ 50 ವರ್ಷಗಳ ಹಳೆಯ ನೀತಿಯನ್ನು ಬದಲಿಸುವಂತೆ ಮಾಡಿದೆ. ಆದರೆ ಇದು ದೇಶದ ಆರ್ಥಿಕ ಸಮಸ್ಯೆಗಳಿಗೆ ಪರಿಹಾರವಾಗಬಲ್ಲುದೇ ಎಂಬುದು ಕಾದು ನೋಡಬೇಕಾಗಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Web Photo Editor 2026 07 10T100722.080

ಚೀನಾದ ಶೂ ಕಾರ್ಖಾನೆಯಲ್ಲಿ ಭೀಕರ ಬೆಂಕಿ ಅವಘಡ: 28 ಮಂದಿ ಸಾವು

by ದಿಶಾ ಕೆ. ಎಸ್.
July 10, 2026 - 11:06 am
0

Untitled design 2026 07 10T105920.210

ಸಂಘರ್ಷ ಪ್ರದೇಶಗಳಲ್ಲಿ ಲೈಂಗಿಕ ಹಿಂಸೆ ಅಮಾನವೀಯ ಕೃತ್ಯ: ಯುಎನ್ ವೇದಿಕೆಯಲ್ಲಿ ಭಾರತ ಖಂಡನೆ

by ಶಾಲಿನಿ ಕೆ. ಡಿ
July 10, 2026 - 11:01 am
0

Web Photo Editor 2026 07 10T100722.080

ಪುಟ್ ಪಾತ್ ಒತ್ತುವರಿ ತೆರವು ಹಿನ್ನಲೆ ಇಂದು ಸಿಎಂ ಡಿಕೆ ಶಿವಕುಮಾರ್ ಸಿಟಿ ರೌಂಡ್ಸ್

by ದಿಶಾ ಕೆ. ಎಸ್.
July 10, 2026 - 10:11 am
0

Web Photo Editor 2026 07 10T081117.153

ಧಾರವಾಡ ಕೃಷಿ ವಿವಿಯ ಸಂಶೋಧನೆಗೆ ಜಾಗತಿಕ ಮೆಚ್ಚುಗೆ: ವಿದೇಶಕ್ಕೆ ಗೋಧಿ ಬೀಜ ರವಾನೆ

by ದಿಶಾ ಕೆ. ಎಸ್.
July 10, 2026 - 9:44 am
0

ಸಂಬಂಧಿಸಿದ ಪೋಸ್ಟ್‌ಗಳು

  • ಆಸ್ಟ್ರೇಲಿಯಾದಲ್ಲಿ (10)
    ಪ್ರೇಯಸಿಗೆ ಚಾಕು ಇರಿದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ
    July 9, 2026 | 0
  • ಆಸ್ಟ್ರೇಲಿಯಾದಲ್ಲಿ (9)
    ಕಾಡುಗೋಡಿ ಬಾಲಕಿ ವೆನ್ನೆಲಾ ಕೊಲೆ ಪ್ರಕರಣ: ಆರೋಪಿ ಪ್ರಿಯಾಂಕಾಗೆ ಜಾಮೀನು ಮಂಜೂರು
    July 9, 2026 | 0
  • ಆಸ್ಟ್ರೇಲಿಯಾದಲ್ಲಿ (7)
    ಧರ್ಮ, ಸಂಸ್ಕೃತಿ ಬಗ್ಗೆ ಡಿಕೆಶಿಗೆ ಅರಿವಿದೆ: ಮಠದ ಅಭಿವೃದ್ಧಿಗೆ ಸಿಎಂ ಬಳಿ ಅನುದಾನ ಕೇಳಿದ ರಂಭಾಪುರಿ ಶ್ರೀ
    July 9, 2026 | 0
  • ಆಸ್ಟ್ರೇಲಿಯಾದಲ್ಲಿ (6)
    ಮಮತಾ ಬ್ಯಾನರ್ಜಿಗೆ ಮತ್ತೊಂದು ಶಾಕ್: ಟಿಎಂಸಿಯ ಮೂವರು ಮಾಜಿ ಸಂಸದರು ಬಿಜೆಪಿ ಸೇರ್ಪಡೆ
    July 9, 2026 | 0
  • ಆಸ್ಟ್ರೇಲಿಯಾದಲ್ಲಿ (5)
    ಮೊಮ್ಮಗನಿಗಾಗಿ ಪೂರಿ ಮಾಡಿದ ಸಿಎಂ ರೇವಂತ್ ರೆಡ್ಡಿ..ವಿಡಿಯೋ ವೈರಲ್
    July 9, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version