KD.. KD.. KD.. ಸದ್ಯ ಎಲ್ಲೆಲ್ಲೂ ಸದ್ದು ಮಾಡ್ತಿರೋ ಸ್ಯಾಂಡಲ್‌ವುಡ್‌ನ ಏಕೈಕ ಸಿನಿಮಾ ಅಂದ್ರೆ ಅದು KD. ಇಷ್ಟು ದಿನ ತ್ಯಾಗರಾಜನಾಗಿದ್ದ ರಮೇಶ್ ಅರವಿಂದ್ ಮಾಸ್ ಫೇಸ್ ಹೇಗಿದೆ..? ದೊಡ್ಡ ವಿವಾದಕ್ಕೆ ಗುರಿಯಾಗಿದ್ದ ನೋರಾ ಫತೇಹಿ ಸಾಂಗ್ ದರ್ಶನ ಯಾವಾಗಿಂದ..? ಪುಟಿದೆದ್ದ ಕೆವಿಎನ್.. ಕನ್ನಡ ನಂತ್ರ ತೆಲುಗು, ಹಿಂದಿಯತ್ತ ಕೆಡಿ ಜೈತ್ರಯಾತ್ರೆ ಆರಂಭಿಸುತ್ತಿದ್ದು, ಕೆಡಿ ಸೀಕ್ವೆಲ್ ಕುರಿತ ಎಕ್ಸ್‌ಕ್ಲೂಸಿವ್ ಸ್ಟೋರಿ ಇಲ್ಲಿದೆ.
- KD ಸೀಕ್ವೆಲ್ ಕನ್ಫರ್ಮ್.. ಧ್ರುವ, ಕಿಚ್ಚ, ಸೇತುಪತಿ ಸಮಾಗಮ
- ಪಾರ್ಟ್-2 ಬಗ್ಗೆ ಪ್ರೇಮ್-ಆ್ಯಕ್ಷನ್ ಪ್ರಿನ್ಸ್ ಧ್ರುವ ಗುಡ್ ನ್ಯೂಸ್
ಇಷ್ಟು ದಿನ ಕೆಡಿ ರಿಲೀಸ್ ಆಗ್ತಿಲ್ಲ ಆಗ್ತಿಲ್ಲ ಎನ್ನಲಾಗ್ತಿತ್ತು. ಇದೀಗ ಬಿಡುಗಡೆ ಆಗಿ ಬೊಂಬಾಟ್ ರೆಸ್ಪಾನ್ಸ್ ಕೂಡ ಸಿಗ್ತಿದೆ. ಆದ್ರೀಗ ಕೆಡಿಯ ಸಾಕಷ್ಟು ಕಥೆಗಳು ಒಂದೊಂದಾಗೊ ಹೊರಬರ್ತಿವೆ. ಆ ಪೈಕಿ ಕೆಡಿ ಪಾರ್ಟ್-2 ಬರುತ್ತಾ ಇಲ್ವಾ ಅನ್ನೋ ಕೌತುಕತೆ ಹೆಚ್ಚಿದೆ. ಅದಕ್ಕೆ ಖುದ್ದು ಪ್ರೇಮ್ ಹಾಗೂ ಧ್ರುವ ಸರ್ಜಾ ಅವರೇ ಉತ್ತರ ಕೊಟ್ಟಿದ್ದಾರೆ. ಅವ್ರ ಬಾಯಿಂದ್ಲೇ ಒಮ್ಮೆ ಕೇಳಿಬಿಡಿ.
ಯೆಸ್.. ಕೆಡಿ ಸೀಕ್ವೆಲ್ ಬರೋದು ಹಂಡ್ರೆಡ್ ಪರ್ಸೆಂಟ್ ಪಕ್ಕಾ. ಯಾಕಂದ್ರೆ ಕೆಡಿ ಚಿತ್ರದ ಕ್ಲೈಮ್ಯಾಕ್ಸ್ ಅಂಥದ್ದೊಂದು ಲೀಡ್ ನೀಡಿದೆ. ಅಣ್ಣನೇ ಪ್ರಪಂಚ ಅಂದುಕೊಂಡಿದ್ದ ಕಾಳಿಗೆ ಅದೇ ಅಣ್ಣ ಶತ್ರುವಿನ ಜೊತೆ ಕೈ ಜೋಡಿಸ್ತಾರೆ. ಅಷ್ಟೇ ಯಾಕೆ ಕಾಲಭೈರವನಾಗಿ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್ ಪಾತ್ರದ ಹಿನ್ನೆಲೆ ಹಾಗೂ ಮುನ್ನೆಲೆ ತೋರಿಸೋದು ಬಾಕಿಯಿದೆ. ಆತ ಯಾಕೆ ಬರ್ತಾನೆ..? ಕಾಳಿಯನ್ನ ಕಾಪಾಡೋದೇಕೆ ಅನ್ನೋ ಕುತೂಹಲದ ಜೊತೆ ಡಾಕ್ ದೇವನ ತಲೆ ಕಡಿಯೋ ಕಾಳಿ ಮೇಲೆ ಸೇಡು ತೀರಿಸಿಕೊಳ್ಳೋಕೆ ಮತ್ತೊಬ್ಬ ಖಳನಾಯಕನ ಎಂಟ್ರಿ ಆಗುತ್ತೆ.
ಚಿತ್ರದಲ್ಲಿ ಕೇವಲ ಆತನ ಬೂಟ್ಸ್ ಮಾತ್ರ ತೋರಿಸಿರೋ ಪ್ರೇಮ್, ಅದು ವಿಜಯ್ ಸೇತುಪತಿ ಆಗಿರ್ತಾರಾ ಅನ್ನೋದ್ರ ಹಿಂಟ್ ಕೂಡ ನೀಡಿದ್ದಾರೆ. ಯಾಕಂದ್ರೆ ನಮ್ಮ ಗ್ಯಾರಂಟಿ ನ್ಯೂಸ್ ಸಂದರ್ಶನದಲ್ಲಿ ಸೇತುಪತಿ ಬಗ್ಗೆ ಪ್ರೇಮ್ ಮುಕ್ತವಾಗಿ ಮಾತನಾಡಿದ್ರು. ಅಲ್ಲಿಗೆ ಧ್ರುವ ಜೊತೆ ಕೆಡಿ-2ನಲ್ಲಿ ಬಾದ್‌ಷಾ ಸುದೀಪ್ ಹಾಗೂ ವಿಜಯ್ ಸೇತುಪತಿ ಇರೋದು ಬಹುತೇಕ ಖಚಿತ.
- ತ್ಯಾಗರಾಜನಿಗೆ ಬ್ರೇಕ್.. ರಮೇಶ್ ಮಾಸ್ ಇನ್ನಿಂಗ್ಸ್ ಶುರು..!
- ಅಂದು ಅಮೃತವರ್ಷಿಣಿ.. ಇಂದು ಕೆಡಿ.. ನೆಗೆಟೀವ್ ಶೇಡ್..!
ಸ್ಯಾಂಡಲ್‌ವುಡ್‌ನ ಮಿಸ್ಟರ್ ಪರ್ಫೆಕ್ಟ್ ರಮೇಶ್ ಅರವಿಂದ್‌ಗೆ ಕೆಡಿ ಒಂಥರಾ ಸೆಕೆಂಡ್ ಇನ್ನಿಂಗ್ಸ್. ಹೌದು.. ಇಲ್ಲಿಯ ತನಕ ರಮೇಶ್‌ರನ್ನ ತ್ಯಾಗರಾಜನನ್ನಾಗಿ ನೋಡಿದ್ದ ಚಿತ್ರಪ್ರೇಮಿಗಳಿಗೆ ಈ ಚಿತ್ರದಲ್ಲಿ ಅವ್ರ ನ್ಯೂ ವರ್ಷನ್ ತೋರಿಸಲಾಗಿದೆ. ಅದು ಕಂಪ್ಲೀಟ್ ಆಗಿ ಸರ್‌ಪ್ರೈಸಿಂಗ್ ಪ್ಯಾಕೇಜ್ ಆಗಿರಲಿದೆ. ಅದ್ರಲ್ಲೂ ಶಿಲ್ಪಾ ಶೆಟ್ಟಿಗೂ ರಮೇಶ್‌ಗೂ ಇರೋ ಲಿಂಕ್ ನೋಡಿದ್ರೆ ಅಕ್ಷರಶಃ ನೀವು ಶಾಕ್ ಆಗ್ತೀರಾ.
ಅಮೃತವರ್ಷಿಣಿ ಚಿತ್ರದಲ್ಲಿ ನೆಗೆಟಿವ್ ಶೇಡ್ ಮಾಡಿದ್ದ ರಮೇಶ್ ಅರವಿಂದ್, ಒನ್ಸ್ ಅಗೈನ್ ಅಂಥದ್ದೇ ಟ್ವಿಸ್ಟ್ ಕೊಡೋ ಧರ್ಮ ಪಾತ್ರಕ್ಕೆ ಇಲ್ಲಿ ಜೀವ ತುಂಬಿದ್ದಾರೆ. ಮಚ್ಚು, ರಕ್ತ, ಕ್ರೌರ್ಯದ ಮೂಲಕ ರಮೇಶ್ ಫ್ರೆಶ್ ಫೀಲ್ ಕೊಡ್ತಾರೆ.
- ನೋರಾ ಸಾಂಗ್ ನಾಪತ್ತೆ.. ಯಾವಾಗಿಂದ ಫತೇಹಿ ದರ್ಶನ..?
- ಪುಟಿದೆದ್ದ KVN.. ನೆಕ್ಸ್ಟ್ ವೀಕ್ ತೆಲುಗು, ಹಿಂದಿ ಬೆಲ್ಟ್‌ಗೆ KD
ಹೌದು.. ನಿನ್ನೆಯಷ್ಟೇ ಕನ್ನಡದಲ್ಲಿ ಎಲ್ಲೆಡೆ ತೆರೆ ಕಂಡಿದ್ದ ಕೆಡಿ ಸಿನಿಮಾ, ಮುಂದಿನ ವಾರದಿಂದಲೇ ತೆಲುಗು ಹಾಗೂ ಹಿಂದಿ ಅವತರಣಿಕೆಯಲ್ಲಿ ಬೆಳ್ಳಿತೆರೆ ಬೆಳಗಲಿದೆ. ಆಂಧ್ರದಲ್ಲಿ ಮೈತ್ರಿ ಮೂವಿ ಮೇಕರ್ಸ್ ಡಿಸ್ಟ್ರಿಬ್ಯೂಷನ್ ತೆಗೆದುಕೊಂಡಿದ್ದು, ಹಿಂದಿಯಲ್ಲಿ ಪ್ರತಿಷ್ಠಿತ ಸಂಸ್ಥೆಗಳೇ ರಿಲೀಸ್‌ಗೆ ಮುಗಿಬಿದ್ದಿವೆಯಂತೆ. ಅದ್ರಲ್ಲೂ ಸಂಜಯ್ ದತ್, ಶಿಲ್ಪಾ ಶೆಟ್ಟಿ ಪಾತ್ರಗಳಿರೋದು ಕೆಡಿಗೆ ಮುಂಬೈನಲ್ಲಿ ಡಿಮ್ಯಾಂಡ್ ಹೆಚ್ಚಲು ಕಾರಣವಾಗಿದೆ.
ಜನನಾಯಗನ್ ಹಾಗೂ ಟಾಕ್ಸಿಕ್ ಚಿತ್ರದಿಂದ ಕುಸಿದಿದ್ದ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ, ಕೆಡಿ ಚಿತ್ರದಿಂದ ಪುಟಿದೆದ್ದಿದೆ. ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲೇ ಕಮಾಲ್ ಮಾಡ್ತಿರೋ ಕೆಡಿ ಚಿತ್ರ, ಕೆವಿಎನ್‌ಗೆ ಪಾಸಿಟಿವ್ ಭರವಸೆ ಮೂಡಿಸಿದೆ.
ಇಂಟರೆಸ್ಟಿಂಗ್ ಅಂದ್ರೆ ಬಾಲಿವುಡ್ ಬಾಂಬ್ ಶೆಲ್ ನೋರಾ ಫತೇಹಿಯ ಕಲರ್‌ಫುಲ್ ಹಾಟ್ ಸಾಂಗ್ ಕೆಡಿ ಚಿತ್ರದಲ್ಲಿ ಇಲ್ಲವೇ ಇಲ್ಲ. ಅರೇ ಅಷ್ಟೆಲ್ಲಾ ವಿವಾದ ಆದಂತಹ ಸರ್ಸೆ ಸರ್ಸೆ ಸಾಂಗ್ ಇಲ್ವಾ ಅಂತ ಸಾಕಷ್ಟು ಮಂದಿ ಬೇಸರಗೊಂಡಿದ್ದಾರೆ. ಆದ್ರೆ ಆದಷ್ಟು ಬೇಗ ಆ ಹಾಡು ಕೆಡಿ ಚಿತ್ರ ಸೇರಿಕೊಳ್ಳಲಿದೆ ಅಂತಾರೆ ಪ್ರೇಮ್. ಈಗಾಗ್ಲೇ ಎರಡು ಸಾಲಿನ ಸಾಹಿತ್ಯ ಬದಲಿಸಿದ್ದ ಪ್ರೇಮ್‌ಗೆ ಅದ್ಯಾಕೋ ಸರಿ ಅನಿಸಿಲ್ಲ. ಹಾಗಾಗಿ ಹಾಡಿನ ಕಂಪ್ಲೀಟ್ ಸಾಹಿತ್ಯವನ್ನ ಬದಲಿಸಿ ಅದೇ ನೋರಾ ಡ್ಯಾನ್ಸ್ ವಿಡಿಯೋಗೆ ಸರಿಹೊಂದುವ ನ್ಯೂ ಸಾಂಗ್‌ನ ಸಿನಿಮಾಗೆ ಸೇರಿಸಲಾಗುತ್ತಂತೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





