ನಾಗುರ: ಸಾಮಾನ್ಯವಾಗಿ ಮನೆಯ ಬೀಗ ಒಡೆಯುವ ಅಥವಾ ಗೋಡೆ ಹತ್ತಿ ಕಳ್ಳತನ ಮಾಡುವ ಘಟನೆಗಳನ್ನು ಕೇಳಿದ್ದೇವೆ. ಆದರೆ, ನಾಗುರದಲ್ಲಿ ಸಣ್ಣ ಕಿಟಕಿಯ ಮೂಲಕ ಮದ್ಯದ ಅಂಗಡಿಯೊಳಗೆ ಸರಾಗವಾಗಿ ಸೇರಿ ₹25,000 ಕದ್ದ ಕಳ್ಳನ ಕೈಚಳಕತೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಈ ಘಟನೆಯನ್ನು ಕಂಡ ನೆಟ್ಟಿಗರು ಆರೋಪಿಯನ್ನು ‘ಮನುಷ್ಯನೋ ಅಥವಾ ಆಕ್ಟೋಪಸ್ಸೋ’ ಎಂದು ಪ್ರಶ್ನಿಸಿದ್ದಾರೆ.
ಜೂನ್ 6ರ ಬೆಳಗಿನ 1:28ಕ್ಕೆ ನಾಗುರದ ಜೀ ಅಂಗಡಿಯ ಸಣ್ಣ ಕಿಟಕಿಯ ಮೂಲಕ ಆರೋಪಿ ಒಳನುಗ್ಗಿ ₹25,000 ಕದ್ದಿದ್ದಾನೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಕಳ್ಳನ ಚಾಕಚಕ್ಯತೆಗೆ ಎಲ್ಲರೂ ದಿಗ್ಭ್ರಮೆಗೊಂಡಿದ್ದಾರೆ.
आदमी है या ऑक्टोपस ?
नागपुर का ये Video हैरान कर देने वाला है। एक चोर काउंटर की ग्रिल से बीयर शॉप में घुसा और 25 हजार रुपए चुराकर ले गया !! pic.twitter.com/usdqeCrS2N— Sachin Gupta (@SachinGuptaUP) June 17, 2025
ಆರೋಪಿಯ ಬಂಧನ
ನಾಗುರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು 20 ವರ್ಷದ ಶೇಖ್ ರಾಜಾ ಶೇಖ್ ಬಾಬಾ (ಅಲಿಯಾಸ್ ರಾಜಾ) ಎಂದು ಗುರುತಿಸಲಾಗಿದೆ. ಈತನಿಗೆ ಈಗಾಗಲೇ ಕಳ್ಳತನದ ಇತಿಹಾಸವಿದ್ದು, ಅಮರಾವತಿ ಜಿಲ್ಲೆಯಲ್ಲಿ ವಾಹನ ಕಳ್ಳತನ ಸೇರಿದಂತೆ ಹಲವು ಅಪರಾಧಗಳನ್ನು ಒಪ್ಪಿಕೊಂಡಿದ್ದಾನೆ.
ಪೊಲೀಸರು ಆರೋಪಿಯಿಂದ ₹3,800 ನಗದು, ಕದ್ದ ಹಣದಿಂದ ಖರೀದಿಸಿದ ₹8,800 ಮೌಲ್ಯದ ವಸ್ತುಗಳು ಮತ್ತು ಒಂದು ಮೊಬೈಲ್ ಫೋನ್‌ನ್ನು ವಶಕ್ಕೆ ಪಡೆದಿದ್ದಾರೆ. ತನಿಖೆಯು ಇನ್ನೂ ಮುಂದುವರಿದಿದ್ದು, ಆರೋಪಿಯ ಇತರ ಸಂಬಂಧಿತ ಅಪರಾಧಗಳ ಬಗ್ಗೆ ತನಿಖೆ ನಡೆಯುತ್ತಿದೆ.