ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 40 ವರ್ಷದ ನೌಕರ ಶಂಕರ್ ಅವರು, ಬೆನ್ನು ನೋವು ಎಂದು ಸಿಕ್ ಲೀವ್ ಕೇಳಿ ಬಾಸ್‌ಗೆ ಮೆಸೇಜ್ ಮಾಡಿದ ಕೇವಲ 10 ನಿಮಿಷಗಳಲ್ಲಿ ಹಾರ್ಟ್ ಅಟ್ಯಾಕ್‌ನಿಂದ ಸಾವನ್ನಪ್ಪಿದ್ದಾರೆ. ಈ ಘಟನೆಯ ಬಗ್ಗೆ ಸ್ವತಃ ಬಾಸ್ ಕೆ. ವಿ. ಅಯ್ಯರ್ ಅವರು ಎಕ್ಸ್ (ಟ್ವಿಟರ್)ನಲ್ಲಿ ಹಂಚಿಕೊಂಡ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬೆಳಿಗ್ಗೆ 8:37ರಂದು ಶಂಕರ್ ಅವರು ಬಾಸ್ ಕೆ. ವಿ. ಅಯ್ಯರ್ ಅವರಿಗೆ ಬೆನ್ನು ನೋವು ಎಂದು ಸಿಕ್ ಲೀವ್ ಕೇಳಿ ಮೆಸೇಜ್ ಮಾಡಿದ್ದರು. ಅಯ್ಯರ್ ಅವರು ತಕ್ಷಣ ವಿಶ್ರಾಂತಿ ತೆಗೊಳ್ಳಿ ಎಂದು ರಜೆಯನ್ನು ಅನುಮೋದಿಸಿದ್ದರು. ಆದರೆ, ಬೆಳಿಗ್ಗೆ 11 ಗಂಟೆಗೆ ಶಂಕರ್ ಅವರ ಸಾವಿನ ಸುದ್ದಿ ಬಾಸ್ ಅವರಿಗೆ ಬಂದಿತು. ಈ ಸುದ್ದಿಗೆ ಶಾಕ್ ಆದ ಅಯ್ಯರ್ ಅವರು ಸಹೋದ್ಯೋಗಿಯೊಬ್ಬರನ್ನು ಸಂಪರ್ಕಿಸಿ ಖಚಿತಪಡಿಸಿಕೊಂಡು ಶಂಕರ್ ಅವರ ಮನೆಗೆ ಧಾವಂತವಾದರು.
ಬಾಸ್ ಕೆ. ವಿ. ಅಯ್ಯರ್‌ರ ಎಕ್ಸ್ ಪೋಸ್ಟ್
ಕೆ. ವಿ. ಅಯ್ಯರ್ ಅವರು ಎಕ್ಸ್ ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಹೀಗಿದ್ದಾರೆ: “ಶಂಕರ್ ಕಳೆದ ಆರು ವರ್ಷಗಳಿಂದ ನನ್ನೊಂದಿಗೆ ಕೆಲಸ ಮಾಡುತ್ತಿದ್ದ. ಅವರು ತುಂಬಾ ಆರೋಗ್ಯವಂತರಾಗಿದ್ದರು. ಫಿಟ್‌ನೆಸ್‌ಗೆ ಮಾದರಿಯಾಗಿ ಇತರರಿಗೂ ತೋರಿಸುತ್ತಿದ್ದೆ. ಆದರೆ, ಇಂದು ಬೆಳಿಗ್ಗೆ 8:37ಕ್ಕೆ ಸಿಕ್ ಲೀವ್ ಕೇಳಿ ಮೆಸೇಜ್ ಮಾಡಿದ 10 ನಿಮಿಷಗಳಲ್ಲಿ, ಅಂದರೆ 8:47ಕ್ಕೆ ಸಾವನ್ನಪ್ಪಿದ್ದಾರೆ. ಜೀವನ ಎಷ್ಟು ಅನಿಶ್ಚಿತ ಎಲ್ಲರೂ ಕರುಣೆ ಮತ್ತು ತಾಳ್ಮೆಯಿಂದ ಇರಿ.”
DEVASTATING INCIDENT WHICH HAPPENED TODAY MORNING :-
One of my colleague, Shankar texted me today morning at 8.37 am with a message
“Sir, due to heavy backpain I am unable to come today. So please grant me leave.” Such type of leave requests, being usual, I replied “Ok take…— KV Iyyer – BHARAT 🇮🇳🇮🇱 (@BanCheneProduct) September 13, 2025
ಶಂಕರ್ ಅವರಿಗೆ ಹೆಂಡತಿ ಮತ್ತು ಮಕ್ಕಳಿದ್ದರು. ಅವರಿಗೆ ಸಿಗರೇಟ್ ಸೇವನೆ ಅಥವಾ ಮದ್ಯಪಾನ ಇತ್ಯಾದಿ ಕೆಟ್ಟ ಅಭ್ಯಾಸಗಳು ಇರಲಿಲ್ಲ. ಆರೋಗ್ಯವಂತರಾಗಿದ್ದ ಶಂಕರ್ ಅವರ ಸಾವು ಕುಟುಂಬಸ್ಥರಿಗೆ ದೊಡ್ಡ ಶಾಕ್ ಆಗಿದೆ. ಬಾಸ್ ಅಯ್ಯರ್ ಅವರು ಶಂಕರ್ ಅವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಈ ಘಟನೆಯು ಜೀವನದ ಅನಿಶ್ಚಿತತೆಯನ್ನು ಎತ್ತಿ ತೋರಿಸುತ್ತದೆ. ಆರೋಗ್ಯವಂತರಾಗಿದ್ದವರೂ ಹಠಾತ್ ಸಾವನ್ನಪ್ಪಬಹುದು ಎಂಬುದನ್ನು ನೆನಪಿಸುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ಪೋಸ್ಟ್, ಅನೇಕರಿಗೆ ಆತ್ಮಚಿಂತನೆಗೆ ಕಾರಣವಾಗಿದೆ. ಎಲ್ಲರೂ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಮತ್ತು ಸಹೋದ್ಯೋಗಿಗಳೊಂದಿಗೆ ಕರುಣೆಯಿಂದ ವರ್ತಿಸುವಂತೆ ಈ ಘಟನೆ ಸಂದೇಶ ನೀಡುತ್ತದೆ.