ಅಸ್ಸಾಂನ ಸಾಮಾಜಿಕ ಮಾಧ್ಯಮ ಪ್ರಭಾವಿ ಅರ್ಚಿತಾ ಫುಕನ್, ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ‘ಬೇಬಿಡಾಲ್ ಆರ್ಚಿ’ ಎಂದು ಖ್ಯಾತರಾಗಿದ್ದಾರೆ. ಒಂದೇ ಒಂದು ಫೋಟೋದಿಂದ ರಾತ್ರೋರಾತ್ರಿ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ ಈಕೆ, ಈಗ ಹಾಲಿವುಡ್‌ನಿಂದಲೂ ಆಫರ್‌ಗಳನ್ನು ಪಡೆದಿದ್ದಾರೆ ಎಂಬ ಸುದ್ದಿಯೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ.
ಅರ್ಚಿತಾ ಫುಕನ್‌ರ ಇನ್‌ಸ್ಟಾಗ್ರಾಮ್‌ನಲ್ಲಿ 8 ಲಕ್ಷಕ್ಕೂ ಅಧಿಕ ಫಾಲೋವರ್‌ಗಳಿರುವ ಈಕೆ, ತಮ್ಮ ಧೈರ್ಯಕರ ಫ್ಯಾಷನ್ ಶೈಲಿಯಿಂದ ಈಗಾಗಲೇ ಗಮನ ಸೆಳೆದಿದ್ದರು. ಆದರೆ, ಈಗ ವೈರಲ್ ಆಗಿರುವುದು ಅಮೆರಿಕದ ವಯಸ್ಕ ಚಿತ್ರೋದ್ಯಮದ ತಾರೆ ಕೆಂಡ್ರಾ ಲಸ್ಟ್ ಜೊತೆಗಿನ ಒಂದು ಫೋಟೋ. ಮಿಚಿಗನ್‌ನಲ್ಲಿ ತೆಗೆದ ಈ ಫೋಟೋ, ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕೆಲವರು ಈ ಫೋಟೋವನ್ನು ಎಐ-ಜನರೇಟೆಡ್ ಎಂದು ಶಂಕಿಸಿದ್ದರೆ, ಇನ್ನು ಕೆಲವರು ಅರ್ಚಿತಾ ವಯಸ್ಕ ಚಿತ್ರೋದ್ಯಮಕ್ಕೆ ಸೇರಿದ್ದಾರೆ ಎಂದು ಊಹಿಸಿದ್ದಾರೆ. ಈ ಫೋಟೋದ ಬಗ್ಗೆ ಅರ್ಚಿತಾ, “ಕೆಂಡ್ರಾ ಲಸ್ಟ್‌ರ ಆತ್ಮವಿಶ್ವಾಸ, ವೃತ್ತಿಪರತೆ ಮತ್ತು ಯಶಸ್ಸಿನಿಂದ ಪ್ರೇರಿತಳಾದೆ” ಎಂದು ಬರೆದಿದ್ದಾರೆ, ಆದರೆ ಯಾವುದೇ ಸ್ಪಷ್ಟೀಕರಣ ನೀಡಿಲ್ಲ.
‘ಡೇಮ್ ಅನ್ ಗರ್’ ರೀಲ್‌ನಿಂದ ಖ್ಯಾತಿ:
ಅರ್ಚಿತಾ ಫುಕನ್‌ರ ಖ್ಯಾತಿಗೆ ದೊಡ್ಡ ತಿರುವು ನೀಡಿದ್ದು, ಕೇಟ್ ಲಿನ್‌ರ ‘ಡೇಮ್ ಅನ್ ಗರ್’ ಹಾಡಿನ ಇನ್‌ಸ್ಟಾಗ್ರಾಮ್ ರೀಲ್. ಈ ರೀಲ್‌ನಲ್ಲಿ ಆಕೆ ಕ್ಯಾಶುಯಲ್ ಲುಕ್‌ನಿಂದ ಆಕರ್ಷಕ ಸೀರೆ ಧರಿಸಿ ಟ್ರಾನ್ಸ್‌ಫರ್ಮೇಷನ್‌ಗೆ ಒಳಗಾಗುವುದು ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿತು. ಈ ರೀಲ್ ಜನರಿಗೆ ಸ್ಫೂರ್ತಿಯಾಗಿದ್ದು, ‘ಅರ್ಚಿತಾ ಫುಕನ್ ವೈರಲ್ ವಿಡಿಯೋ’ ಎಂಬ ಪದಗುಚ್ಛ ಗೂಗಲ್‌ನಲ್ಲಿ ಟ್ರೆಂಡ್ ಆಗಿತ್ತು.
ಅರ್ಚಿತಾ ಫುಕನ್‌ರ ಜೀವನ ಕೇವಲ ಗ್ಲಾಮರ್‌ನಿಂದ ಕೂಡಿಲ್ಲ. 2023ರಲ್ಲಿ ಆಕೆ ತಮ್ಮ ದುರಂತದ ಕಥೆಯನ್ನು ಹಂಚಿಕೊಂಡಿದ್ದರು. “ಭಾರತದ ವೇಶ್ಯಾವಾಟಿಕೆಯ ಕತ್ತಲ ಜಗತ್ತಿನಲ್ಲಿ ಆರು ವರ್ಷಗಳ ಕಾಲ ಸಿಲುಕಿದ್ದೆ. ನನ್ನ ಸ್ವಾತಂತ್ರ್ಯಕ್ಕಾಗಿ 25 ಲಕ್ಷ ರೂಪಾಯಿಗಳನ್ನು ತೆರವಿಗೆ ತೆರಬೇಕಾಯಿತು. ಆದರೆ, ಆ ಕಷ್ಟದಿಂದ ಹೊರಬಂದು ಇಂದು ಬದುಕಿನ ಗೆಲುವನ್ನು ಸಾಧಿಸಿದ್ದೇನೆ” ಎಂದು ಆಕೆ ಬರೆದಿದ್ದರು.
ವಯಸ್ಕ ಚಿತ್ರೋದ್ಯಮಕ್ಕೆ ಸೇರಿರುವ ಊಹಾಪೋಹಗಳ ಬಗ್ಗೆ ಅರ್ಚಿತಾ ನೇರವಾಗಿ ಉತ್ತರಿಸಿಲ್ಲ. ಬದಲಿಗೆ, “ಕೆಲವು ಮಾರ್ಗಗಳು ಖಾಸಗಿಯಾಗಿರುತ್ತವೆ, ಕೆಲವು ನಡೆಗಳು ಕಾರ್ಯತಂತ್ರದ್ದಾಗಿರುತ್ತವೆ. ಮೌನವೇ ಶಕ್ತಿಯಾಗಿರುತ್ತದೆ” ಎಂಬ ನಿಗೂಢ ಸಂದೇಶವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸಂದೇಶವು ಆಕೆಯ ಬಗ್ಗೆ ಇನ್ನಷ್ಟು ಕುತೂಹಲವನ್ನು ಹುಟ್ಟಿಸಿದೆ.