ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಓಪನ್ ಮಾಡಿದ್ರೆ ಸಾಕು.. ರಾಶಿ ರಾಶಿ ಕಲರ್‌ಫುಲ್, ನಾಸ್ಟಾಲ್ಜಿಕ್ ಫೋಟೋಸ್ ಕಣ್ಣಿಗೆ ಹಬ್ಬ ನೀಡ್ತಿವೆ. ಆದ್ರೆ ಅವ್ಯಾವೂ ಕ್ಯಾಮೆರಾದಿಂದ ಕ್ಲಿಕ್ ಮಾಡಿದ ಫೋಟೋಸ್ ಅಲ್ವೇ ಅಲ್ಲ. ಬದಲಿಗೆ AI ಟೆಕ್ನಾಲಜಿಯಿಂದ ಕ್ರಿಯೇಟ್ ಮಾಡಿದ ಬ್ಯೂಟಿಫುಲ್ ವಿಂಟೇಜ್ ಫೋಟೋಸ್. ಈ ಟ್ರೆಂಡ್‌ಗೆ ಶ್ರೀಸಾಮಾನ್ಯರಷ್ಟೇ ಅಲ್ಲ.. ಸ್ಟಾರ್ಸ್ ಕೂಡ ಫಿದಾ ಆಗಿ, ತಮ್ಮ ಫೋಟೋಸ್ ಅಪ್ಲೋಡ್ ಮಾಡ್ತಿದ್ದಾರೆ.
- ಇನ್ಸ್‌ಟಾ, FBನಲ್ಲಿ ರಾಶಿ ರಾಶಿ ವಿಂಟೇಜ್ ಫೋಟೋಸ್..!
- ರೆಟ್ರೋಗೆ ಜಾರಿದ ಮೆಟ್ರೋ ಮಂದಿ.. AI ಟೆಕ್ನಾಲಜಿ ಟಚ್
- ಚಂದನವನ to ಟಾಲಿವುಡ್.. ಸ್ಟಾರ್‌ಗಳ ರೆಟ್ರೋ ಹಂಗಾಮ
- 100% ಕ್ಲಾಸಿಕ್ ಲುಕ್.. ನಾಸ್ಟಾಲ್ಜಿಕ್ ವೈಬ್.. 80’s ಮೂಡ್
ಯೆಸ್.. ಸದ್ಯ ಇಂಟರ್‌ನೆಟ್ ದುನಿಯಾದಲ್ಲಿ ಹೊಸ ಇತಿಹಾಸವೇ ಸೃಷ್ಟಿಯಾಗ್ತಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅನ್ನೋ ಮಾಯಾಲೋಕದ ಜಾದೂವಿನಿಂದ ಸೆಲೆಬ್ರಿಟಿಗಲೆಲ್ಲರೂ ಏಕಾಏಕಿ 80 ಮತ್ತು 90ರ ದಶಕದ ಫ್ಲ್ಯಾಶ್‌ಬ್ಯಾಕ್ ಗೆ ಜಾರಿದ್ದಾರೆ. ಆ ಕಾಲದ ವಿಶಿಷ್ಟ ಕೇಶವಿನ್ಯಾಸ, ದೊಡ್ಡ ಬೆಲ್-ಬಾಟಮ್ ಪ್ಯಾಂಟ್‌ಗಳು, ಬ್ರೈಟ್ ಕಲರ್ ಡ್ರೆಸ್‌ಗಳು ಮತ್ತು ಆ ಕ್ಲಾಸಿಕ್ ಫಿಲ್ಮ್ ಟೋನ್ ನೆನಪಿದ್ಯಾ..? ಈಗ ಪ್ರತಿಯೊಬ್ಬರೂ ತಮ್ಮ ಫೋಟೋಗಳನ್ನು ಅದೇ 90s ಪಕ್ಕಾ ರೆಟ್ರೋ ಲುಕ್‌ಗೆ ಬದಲಿ ಮಾಡಿಕೊಂಡು ಎಂಜಾಯ್ ಮಾಡ್ತಿದ್ದಾರೆ. ಈ ರೆಟ್ರೋ ಫೋಟೋ ಟ್ರೆಂಡ್ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ್ದು, ಪ್ರತಿಯೊಬ್ಬರೂ ತಮ್ಮ ಓಲ್ಡ್-ಸ್ಕೂಲ್ ಅವತಾರವನ್ನು ಕಣ್ಣುಂಬಿಕೊಳ್ಳಲು ಮುಗಿಬಿದ್ದಿದ್ದಾರೆ.
ಇನ್ನು ಈ ನಾಸ್ಟಾಲ್ಜಿಕ್ ಟ್ರೆಂಡ್‌ಗೆ ಬರಿ ಜನಸಾಮಾನ್ಯರಷ್ಟೇ ಅಲ್ಲ, ಸೆಲೆಬ್ರಿಟಿಗಳು ಕೂಡ ಪಕ್ಕಾ ಫಿದಾ ಆಗಿದ್ದಾರೆ. ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ನಿರೂಪಕಿ ಅನುಶ್ರೀ, ಗಾಳಿಪಟ ಮಾಂತ್ರಿಕ ಯೋಗರಾಜ್ ಭಟ್, ನಟಿ ಅಮೃತಾ ಅಯ್ಯಂಗಾರ್, ಮುದ್ದಾದ ಜೋಡಿ ಅನು ಪ್ರಭಾಕರ್-ರಘು ಮುಖರ್ಜಿ, ಮೇಘನಾ ರಾಜ್, ನಿಶಾ ರವಿಕೃಷ್ಣ ಮತ್ತು ಗ್ಲಾಮರಸ್ ದೀಪಿಕಾ ದಾಸ್, ಪವನ್ ಒಡೆಯರ್ ತಮ್ಮ ರೆಟ್ರೋ ಲುಕ್ ಶೇರ್ ಮಾಡಿ ಅಭಿಮಾನಿಗಳಿಗೆ ಆಶ್ಚರ್ಯಚಕಿತಗೊಳಿಸಿದ್ದಾರೆ. ಅಷ್ಟೇ ಯಾಕೆ, ಹಿನ್ನೆಲೆಯಲ್ಲಿ 90ರ ದಶಕದ ಸೂಪರ್ ಹಿಟ್ ಕನ್ನಡ ಹಾಡುಗಳನ್ನು ಹಾಕಿ, ರೀಲ್ಸ್‌ಗಳ ಮೂಲಕ ನೆಟ್ಟಿಗರನ್ನು ಹಳೆಯ ಕಾಲದ ಸ್ವರ್ಗಕ್ಕೆ ಕರೆದೊಯ್ಯುತ್ತಿದ್ದಾರೆ.
ಅರೆ, ಬರೀ ಇಷ್ಟೇ ಅಲ್ಲ..ಫ್ಯಾನ್ಸ್ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ನೆಚ್ಚಿನ ಸ್ಟಾರ್‌ಗಳಾದ ಸಮಂತಾ, ಮಹೇಶ್ ಬಾಬು ಮತ್ತು ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಫೋಟೋಗಳಿಗೂ AI ಟಚ್ ಕೊಟ್ಟು ರಂಗೇರಿಸಿದ್ದಾರೆ. ಕೇವಲ ಒಂದೇ ಒಂದು ಕ್ಲಿಕ್‌ನಲ್ಲಿ 30-40 ವರ್ಷಗಳ ಹಿಂದಿನ ಕಾಲಕ್ಕೆ ಕರೆದೊಯ್ಯುವ ಈ ತಂತ್ರಜ್ಞಾನ, ಕೇವಲ ಫೋಟೋ ಎಡಿಟಿಂಗ್ ಅಷ್ಟೇ ಅಲ್ಲದೆ, ಪ್ರತಿಯೊಬ್ಬರ ಬಾಲ್ಯದ ನೆನಪುಗಳನ್ನು, ಅಂದಿನ ಸಿಂಪ್ಲಿಸಿಟಿಯನ್ನು ಮರಳಿ ತಂದುಕೊಡುತ್ತಿದೆ. ಒಟ್ಟಿನಲ್ಲಿ, ಈ ರೆಟ್ರೋ ಜಾದೂ ಸದ್ಯಕ್ಕಂತೂ ಸೋಶಿಯಲ್ ಮೀಡಿಯಾದಿಂದ ಮಾಸುವಂತೆ ಕಾಣುತ್ತಿಲ್ಲ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





