israel iran war ಎಫೆಕ್ಟ್‌: ಏಪ್ರಿಲ್ 1ರಿಂದ ವಿಮಾನ ಟಿಕೆಟ್ ದರ ಏರಿಕೆ ಭೀತಿ ? ಸಚಿವ ರಾಮ್ ಮೋಹನ್ ನಾಯ್ಡು ಹೇಳಿದ್ದೇನು ?

Untitled design 2026 03 22T095850.674

ನವದೆಹಲಿ: ಜಾಗತಿಕ ರಾಜಕೀಯ ವಿದ್ಯಮಾನಗಳು ಅದರಲ್ಲೂ ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ (West Asia) ನಡೆಯುತ್ತಿರುವ ಸಂಘರ್ಷದ ಬಿಸಿ ಈಗ ಭಾರತೀಯ ವಿಮಾನಯಾನ ಕ್ಷೇತ್ರಕ್ಕೂ ತಟ್ಟಿದೆ. ಏಪ್ರಿಲ್ 1ರಿಂದ ವಿಮಾನ ಇಂಧನ (ATF) ದರಗಳು ಗಗನಕ್ಕೇರುವ ಸಾಧ್ಯತೆಯಿದ್ದು, ಇದು ನೇರವಾಗಿ ವಿಮಾನ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುವ ಮುನ್ಸೂಚನೆ ನೀಡಿದೆ.

ಇಂಧನ ದರ ಏರಿಕೆ ಅನಿವಾರ್ಯವೇ ?

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮವಾಗಿ ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಗಲ್ಫ್ ರಾಷ್ಟ್ರಗಳ ವಾಯುಪ್ರದೇಶದಲ್ಲಿ ವಿಮಾನ ಸಂಚಾರ ಸ್ಥಗಿತಗೊಳ್ಳುತ್ತಿರುವುದು, ವಿಮಾ ವೆಚ್ಚಗಳ ಏರಿಕೆ ಮತ್ತು ಕಾರ್ಯಾಚರಣೆಯ ವೆಚ್ಚಗಳು ಹೆಚ್ಚಾಗುತ್ತಿರುವುದು ವಿಮಾನಯಾನ ಸಂಸ್ಥೆಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಪ್ರತಿ ತಿಂಗಳ ಮೊದಲ ದಿನದಂದು ಎಟಿಎಫ್ (Aviation Turbine Fuel) ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಹೀಗಾಗಿ ಏಪ್ರಿಲ್ 1ರಂದು ಇಂಧನ ದರದಲ್ಲಿ ಗಮನಾರ್ಹ ಏರಿಕೆಯನ್ನು ನಾವು ನಿರೀಕ್ಷಿಸಬಹುದು ಎಂದು ತಿಳಿಸಿದ್ದಾರೆ.

ಸಚಿವಾಲಯದ ಸ್ಪಷ್ಟನೆ 

ಇಂಧನ ದರ ಏರಿಕೆಯಾದ ತಕ್ಷಣವೇ ಅದರ ಸಂಪೂರ್ಣ ಹೊರೆಯನ್ನು ಪ್ರಯಾಣಿಕರ ಮೇಲೆ ವರ್ಗಾಯಿಸಬಾರದು ಎಂಬುದು ಸರ್ಕಾರದ ನಿಲುವು ಹೀಗಾಗಿ ವಿಮಾನಯಾನ ಸಂಸ್ಥೆಗಳು ಆರ್ಥಿಕ ಒತ್ತಡದಲ್ಲಿವೆ ಎಂಬುದು ನಿಜ. ಆದರೆ, ಟಿಕೆಟ್ ಬೆಲೆಗಳು ಸಾಮಾನ್ಯ ಜನರ ಕೈಗೆಟುಕದಂತೆ ಏರಿಕೆಯಾಗದಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆ. ಸುರಕ್ಷಿತ ಮತ್ತು ನಿಯಮಿತ ವಿಮಾನ ಕಾರ್ಯಾಚರಣೆಗಳ ಜೊತೆಗೆ ಪ್ರಯಾಣಿಕರ ಹಿತದೃಷ್ಟಿಯಿಂದ ಸರ್ಕಾರ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಸಚಿವ ನಾಯ್ಡು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸರ್ಕಾರವು ಅಧಿಕೃತವಾಗಿ ದರ ಏರಿಕೆ ಘೋಷಿಸುವ ಮುನ್ನವೇ ದೇಶೀಯ ವಿಮಾನಯಾನ ಸಂಸ್ಥೆಗಳು ಹೆಚ್ಚುವರಿ ವೆಚ್ಚವನ್ನು ಸರಿದೂಗಿಸಲು ‘ಇಂಧನ ಸರ್‌ಚಾರ್ಜ್’ (Fuel Surcharge) ವಿಧಿಸಲು ಆರಂಭಿಸಿವೆ. ಪ್ರಮುಖ ಸಂಸ್ಥೆಗಳು ವಿಧಿಸುತ್ತಿರುವ ಸರ್‌ಚಾರ್ಜ್ ವಿವರ ಹೀಗಿದೆ:

ಒಟ್ಟಾರೆಯಾಗಿ, ಮಧ್ಯಪ್ರಾಚ್ಯದ ಸಂಘರ್ಷವು ಸುದೀರ್ಘ ಕಾಲ ಮುಂದುವರಿದರೆ ಭಾರತದಲ್ಲಿ ವಿಮಾನಯಾನವು ಐಷಾರಾಮಿ ಎನಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

Exit mobile version