ಬೆಂಗಳೂರು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ರೋಚಕ ಪಂದ್ಯದಲ್ಲಿ 2 ರನ್ ಗಳಿಂದ ಆರ್ ಸಿ ಬಿ ಜಯಗಳಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ 5 ವಿಕೆಟ್‌ಗೆ 214 ರನ್ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 5 ವಿಕೆಟ್‌ಗೆ 211 ರನ್ ಗಳಿಸಿತು. ಕೊನೆಯ ಬಾಲ್‌ವರೆಗೂ ಪಂದ್ಯ ರೋಚಕತೆಯಿಂದ ಕೂಡಿತ್ತು. 20ನೇ ಓವರ್‌ನಲ್ಲಿ ಬೌಲಿಂಗ್ ಮಾಡಿದ ಯಶ್ ದಯಾಳ್ 12 ರನ್ ಮಾತ್ರ ನೀಡುವ ಮೂಲಕ ಆರ್ ಸಿ ಬಿ 2 ರನ್ ಗಳ ಗೆಲುವಿಗೆ ಕಾರಣರಾದರು. ಈ ಪಂದ್ಯದಲ್ಲಿ ಆರ್‌ಸಿಬಿ ಜಯಗಳಿಸಿದರೆ ಪ್ಲೇಆಫ್ಗೆ ಅರ್ಹತೆ ಪಡೆಯುವತ್ತ ಹೆಜ್ಜೆ ಇಟ್ಟರೆ, ಇತ್ತ ಸಿಎಸ್ಕೆ ಲೀಗ್ ಹಂತದಲ್ಲೇ ಹೊರಬಿದ್ದಿದೆ.
ಆರ್‌ಸಿಬಿ ಪರ ಆರಂಭಿಕರಾಗಿ ಕಣ್ಣಕ್ಕಿಳಿದ ವಿರಾಟ್ ಕೊಹ್ಲಿ ಮತ್ತು ಜಾಕೋಬ್ ಬೆಥೆಲ್ ತಂಡಕ್ಕೆ ಸ್ಫೋಟಕ ಆರಂಭವನ್ನು ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 97 ರನ್‌ಗಳ ಅದ್ಭುತ ಜೊತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿತು. ಐಪಿಎಲ್ ಟೂರ್ನಿಯಲ್ಲಿ 55ನೇ ಅರ್ಧಶತಕ ಗಳಿಸಿದ ಕೊಹ್ಲಿ 33 ಎಸೆತಗಳಲ್ಲಿ 5 ಬೌಂಡರಿ ಮತ್ತು 5 ಸಿಕ್ಸರ್ ಇದ್ದ 62 ರನ್ ಗಳಿಸಿ ಔಟಾದರು. ನಂತರ ಬಂದ ದೇವದತ್ ಪಡಿಕ್ಕಲ್ (17) ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಾಯಕ ರಜತ್ ಪಾಟೀದಾರ್ (11) ಕೂಡ ಬಹುಬೇಗನೆ ವಿಕೆಟ್ ಒಪ್ಪಿಸಿದರು.
214 ರನ್‌ಗಳ ಗುರಿ ಬೆನ್ನಟ್ಟಿ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಆರಂಭ ಪಡೆದುಕೊಂಡಿತು. ಮೊದಲ ವಿಕೆಟ್‌ಗೆ 51 ರನ್‌ಗಳ ಜೊತೆಯಾಟ ನೀಡಿತು. ಆದರೆ ಕೃನಾಲ್ ಪಾಂಡ್ಯ ಮೊದಲ ಬ್ರೇಕ್ ಕೊಟ್ಟರು. 14 ರನ್ಗಳಿಸಿದ್ದ ಶೇಖ್ ರಶೀದ್ ವಿಕೆಟ್ ಪಡೆದರು. ನಂತರ 3ನೇ ವಿಕೆಟ್ ಜೊತೆಯಾಟದಲ್ಲಿ ಆಯುಷ್ ಮ್ಹಾತ್ರೆ ಹಾಗೂ ರವೀಂದ್ರ ಜಡೇಜಾ 64 ಎಸೆತಗಳಲ್ಲಿ 114 ರನ್‌ಗಳ ಜೊತೆಯಾಟ ನೀಡಿ ಅದ್ಭುತ ಕಮ್ಬ್ಯಾಕ್ ಮಾಡಿದರು. ಕೇವಲ 4ನೇ ಪಂದ್ಯವನ್ನಾಡಿದ ಆಯುಷ್ ಭುವನೇಶ್ವರ್ ಕುಮಾರ್ ಸೇರಿ ಆರ್‌ಸಿಬಿ ಬೌಲರ್ಗಳನ್ನ ಬೆಂಡೆತ್ತಿದ್ದರು. ಆಯುಷ್ 48 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್ಗಳ ಸಹಿತ 94 ರನ್ಗಳಿಸಿದರು.