ಭಾರತದ ಅತ್ಯುನ್ನತ ನಾಗರಿಕ ಗೌರವಗಳಾದ ಪದ್ಮ ಪ್ರಶಸ್ತಿಗಳ 2026ರ ಪಟ್ಟಿ ಜನವರಿ 25, 2026ರಂದು ಗಣರಾಜ್ಯೋತ್ಸವದ ಪೂರ್ವಸಂಜೆ ಅಧಿಕೃತವಾಗಿ ಪ್ರಕಟವಾಗಿದೆ. ಈ ವರ್ಷ ಒಟ್ಟು 131 ಸಾಧಕರನ್ನು ಗೌರವಿಸಲಾಗಿದ್ದು, ಅದರಲ್ಲಿ ಪದ್ಮ ವಿಭೂಷಣಗೆ 5 ಮಂದಿ, ಪದ್ಮ ಭೂಷಣಗೆ 13 ಮಂದಿ ಮತ್ತು ಪದ್ಮ ಶ್ರೀಗೆ 113 ಮಂದಿ ಆಯ್ಕೆಯಾಗಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ವಿಶೇಷವಾಗಿ ಭಾರತೀಯ ಕ್ರಿಕೆಟ್ ನಾಯಕರು ಮತ್ತು ಇತರ ಆಟಗಾರರು ಗಮನ ಸೆಳೆದಿದ್ದಾರೆ.
ಕ್ರೀಡಾ ವಿಭಾಗದ ಪದ್ಮ ಪ್ರಶಸ್ತಿ ವಿಜೇತರು (2026):
ಪದ್ಮ ಪ್ರಶಸ್ತಿಗೆ ಭಾಜನರಾದವರ ಪಟ್ಟಿ:
-
- ವಿಜಯ್ ಅಮೃತರಾಜ್ (ಟೆನಿಸ್) – ಪದ್ಮಭೂಷಣ
- ರೋಹಿತ್ ಶರ್ಮಾ (ಕ್ರಿಕೆಟ್) – ಪದ್ಮಶ್ರೀ
- ಹರ್ಮನ್ಪ್ರೀತ್ ಕೌರ್ (ಕ್ರಿಕೆಟ್) – ಪದ್ಮಶ್ರೀ
- ಪ್ರವೀಣ್ ಕುಮಾರ್ (ಪ್ಯಾರಾ-ಅಥ್ಲೆಟಿಕ್ಸ್) – ಪದ್ಮಶ್ರೀ
- ಬಲದೇವ್ ಸಿಂಗ್ (ಹಾಕಿ) – ಪದ್ಮಶ್ರೀ
- ಭಗವಾನ್‌ದಾಸ್ ರಾಯ್ಕ್ವಾರ್ (ಸಾಂಪ್ರದಾಯಿಕ ಸಮರ ಕಲೆಗಳು) – ಪದ್ಮಶ್ರೀ
- ಕೆ.ಪಜನಿವೇಲ್ (ಸಿಲಂಬಂ)- ಪದ್ಮಶ್ರೀ
- ಸವಿತಾ ಪುನಿಯಾ (ಹಾಕಿ)- ಪದ್ಮಶ್ರೀ
- ವ್ಲಾಡಿಮಿರ್ ಮೆಸ್ಟ್ವಿರಿಶ್ವಿಲಿ (ನಿಧನ) – ಪದ್ಮಶ್ರೀ (ಕುಸ್ತಿ ತರಬೇತುದಾರ)
ಈ ವರ್ಷದ ಪದ್ಮ ಪ್ರಶಸ್ತಿಗಳು ಕ್ರೀಡಾ ಕ್ಷೇತ್ರದಲ್ಲಿ ಭಾರತದ ಇತ್ತೀಚಿನ ಸಾಧನೆಗಳನ್ನು, ವಿಶೇಷವಾಗಿ ಕ್ರಿಕೆಟ್‌ನಲ್ಲಿ ರೋಹಿತ್ ಮತ್ತು ಹರ್ಮನ್‌ಪ್ರೀತ್ ಅವರ ನಾಯಕತ್ವದಲ್ಲಿ ಗೆದ್ದ ಐಸಿಸಿ ಟ್ರೋಫಿಗಳನ್ನು ಗೌರವಿಸಿವೆ. ರೋಹಿತ್ ಶರ್ಮಾ ಎರಡು ವರ್ಷಗಳಲ್ಲಿ ಎರಡು ಐಸಿಸಿ ಟ್ರೋಫಿಗಳನ್ನು ಗೆದ್ದ ನಾಯಕ ಆಗಿ ಇತಿಹಾಸ ಸೃಷ್ಟಿಸಿದ್ದಾರೆ. ಹರ್ಮನ್‌ಪ್ರೀತ್ ಕೌರ್ ಮಹಿಳಾ ಕ್ರಿಕೆಟ್‌ನಲ್ಲಿ ಭಾರತಕ್ಕೆ ಮೊದಲ ಐಸಿಸಿ ಟ್ರೋಫಿ ತಂದುಕೊಟ್ಟರು.





