ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್‌ನ ಲಾರ್ಡ್ಸ್ ಟೆಸ್ಟ್‌ನಲ್ಲಿ ತಮ್ಮ ಮಾರಕ ಬೌಲಿಂಗ್‌ನಿಂದ ಇಂಗ್ಲೆಂಡ್ ಬ್ಯಾಟಿಂಗ್ ಲೈನ್‌ಅಪ್‌ಗೆ ಶಾಕ್ ನೀಡಿದ್ದಾರೆ. 5 ವಿಕೆಟ್ ಕಬಳಿಸಿದ ಬೂಮ್ರಾ, ಜೋ ರೂಟ್, ಬೆನ್ ಸ್ಟೋಕ್ಸ್ ಸೇರಿದಂತೆ ದಿಗ್ಗಜರನ್ನು ಔಟ್ ಮಾಡಿ, ಕಪಿಲ್ ದೇವ್ ಮತ್ತು ಅನಿಲ್ ಕುಂಬ್ಳೆರಂತಹ ಕ್ರಿಕೆಟ್ ದಿಗ್ಗಜರ ದಾಖಲೆಗಳನ್ನು ಮೀರಿಸಿದ್ದಾರೆ.
ಬೂಮ್ರಾ ಬಿರುಗಾಳಿ
ಜಸ್ಪ್ರೀತ್ ಬುಮ್ರಾನ ರಣಭೀಕರ ಯಾರ್ಕರ್‌ಗಳಿಗೆ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ತತ್ತರಿಸಿದರು.
ಲಾರ್ಡ್ಸ್‌ನಲ್ಲಿ ಬೂಮ್ರಾ ದರ್ಬಾರ್
ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ಬುಮ್ರಾ ತಮ್ಮ ಬೌಲಿಂಗ್‌ನಿಂದ ಬಿರುಗಾಳಿಯನ್ನೇ ಎಬ್ಬಿಸಿದರು. ಮೊದಲ ದಿನದಾಟದಲ್ಲಿ ಕೇವಲ ಒಂದು ವಿಕೆಟ್ ಪಡೆದಿದ್ದ ಬುಮ್ರಾ, ಎರಡನೇ ದಿನದ ಮೊದಲ ಸೆಷನ್‌ನಲ್ಲಿ ಬೆನ್ ಸ್ಟೋಕ್ಸ್ (110 ಎಸೆತಗಳಲ್ಲಿ) ಮತ್ತು ಜೋ ರೂಟ್ (199 ಎಸೆತಗಳ ಶತಕ)ರನ್ನು ಔಟ್ ಮಾಡಿ ಇಂಗ್ಲೆಂಡ್‌ಗೆ ಆಘಾತ ನೀಡಿದರು. 86ನೇ ಓವರ್‌ನ ರಣಭೀಕರ ಎಸೆತಕ್ಕೆ ಸ್ಟೋಕ್ಸ್ ಸ್ಟನ್ ಆದರೆ, ರೂಟ್‌ಗೆ ಮಾರಕ ಯಾರ್ಕರ್‌ನಿಂದ ಪೆವಿಲಿಯನ್ ದಾರಿ ತೋರಿಸಿದರು.
5 ವಿಕೆಟ್ ಸಾಧನೆ
ಕ್ರಿಸ್ ವೋಕ್ಸ್ ಕ್ಯಾಚ್ ನೀಡಿ ನಿರ್ಗಮಿಸಿದರೆ, ಜೋಫ್ರಾ ಆರ್ಚರ್ ಕ್ಲೀನ್ ಬೌಲ್ಡ್ ಆದರು. ಈ ಇನ್ನಿಂಗ್ಸ್‌ನಲ್ಲಿ ಬುಮ್ರಾ 5 ವಿಕೆಟ್ ಕಬಳಿಸಿ ತಮ್ಮ 47ನೇ ಟೆಸ್ಟ್‌ನಲ್ಲಿ 15ನೇ ಬಾರಿಗೆ ಈ ಸಾಧನೆಯನ್ನು ಮಾಡಿದರು. ಈ ಮೂಲಕ ಮಿಚೆಲ್ ಸ್ಟಾರ್ಕ್ (99 ಟೆಸ್ಟ್‌ಗಳಲ್ಲಿ 15 ಬಾರಿ)ರ ದಾಖಲೆಯನ್ನು ಕಡಿಮೆ ಪಂದ್ಯಗಳಲ್ಲಿ ಮೀರಿಸಿದರು.
ವಿದೇಶಿ ಪಿಚ್‌ಗಳಲ್ಲಿ ಬುಮ್ರಾ ಆರ್ಭಟ
ವಿದೇಶಿ ಪಿಚ್‌ಗಳಲ್ಲಿ ಭಾರತೀಯ ಬೌಲರ್‌ಗಳಿಗೆ ಯಶಸ್ಸು ಸಿಗುವುದು ಕಷ್ಟ. ಆದರೆ, ಬುಮ್ರಾ ಈ ಕೀರ್ತಿಯನ್ನು ಕಪಿಲ್ ದೇವ್ ಬಳಿಕ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. 35 ವಿದೇಶಿ ಟೆಸ್ಟ್‌ಗಳಲ್ಲಿ 13 ಬಾರಿ 5 ವಿಕೆಟ್ ಕಬಳಿಸಿದ ಬುಮ್ರಾ, ಕಪಿಲ್ ದೇವ್ (66 ಟೆಸ್ಟ್, 12 ಬಾರಿ), ಅನಿಲ್ ಕುಂಬ್ಳೆ (69 ಟೆಸ್ಟ್, 10 ಬಾರಿ), ಮತ್ತು ಇಶಾಂತ್ ಶರ್ಮಾ (63 ಟೆಸ್ಟ್, 9 ಬಾರಿ)ರ ದಾಖಲೆಗಳನ್ನು ಮೀರಿಸಿದ್ದಾರೆ.
ಬುಮ್ರಾ ದಿಗ್ಗಜರನ್ನು ದಾಟಿದ ಕ್ಷಣ
ಜಸ್ಪ್ರೀತ್ ಬುಮ್ರಾನ ಬೌಲಿಂಗ್ ತಾಕತ್ತು ಕ್ರಿಕೆಟ್ ಜಗತ್ತಿನಲ್ಲಿ ಈಗ ದಿಗ್ಗಜರನ್ನೇ ದಾಟಿದೆ. ಪಂದ್ಯದಿಂದ ಪಂದ್ಯಕ್ಕೆ ಬೊಂಬಾಟ್ ಸ್ಪೆಲ್‌ಗಳನ್ನು ಹಾಕುವ ಬುಮ್ರಾ, ವಿದೇಶಿ ಪಿಚ್‌ಗಳಲ್ಲಿ ಭಾರತದ ಬೌಲಿಂಗ್ ಶಕ್ತಿಯಾಗಿ ಮಿಂಚುತ್ತಿದ್ದಾರೆ. ಈ ಸಾಧನೆಯಿಂದ ಟೀಮ್ ಇಂಡಿಯಾಗೆ ಹೊಸ ಆಯಾಮವನ್ನು ನೀಡಿದ್ದಾರೆ.