ಆರ್​ಸಿಬಿ & ಪಂಜಾಬ್‌ ಮಧ್ಯೆ ಹೈವೋಲ್ಟೇಜ್‌ ಮ್ಯಾಚ್‌..!

ಮದಗಜಗಳ ಕಾಳಗಕ್ಕೆ ಸಜ್ಜಾದ ಚಂಡಿಗಢದ ರಣಕಣ..!

Untitled design (63)

ನಾಳೆ ಆರ್‌ಸಿಬಿ ಹಾಗೂ ಪಂಜಾಬ್‌ ಕಿಂಗ್ಸ್‌ ನಡುವೆ ಹೈವೋಲ್ಟೇಜ್ ಮ್ಯಾಚ್ ನಡೆಯಲಿದೆ. ಚಂಡಿಗಢದಲ್ಲಿ ಮದಗಜಗಳ ಕಾಳಗ ನೋಡಲು ಕ್ರಿಕೆಟ್‌ ಫ್ಯಾನ್ಸ್‌ ಕಾತುರದಿಂದ ಕಾಯ್ತಾ ಇದ್ದಾರೆ. ಲಕ್ನೋ ವಿರುದ್ಧ ಗೆದ್ದ ಹುಮ್ಮಸ್ಸಿನಲ್ಲಿರೋ RCB ತಂಡ ಪಂಜಾಬ್‌ ಜೊತೆ ಹೇಗೆ ಸೆಣೆಸಾಡಲಿದೆ ಎಂಬ ಕೌತುಕ ಹೆಚ್ಚಾಗ್ತಿದೆ. ಅತ್ತ ಭರ್ಜರಿ ಫಾರ್ಮ್‌ನಲ್ಲಿರೋ ಪಂಜಾಬ್‌ ಟೀಂ ಕೂಡ ಗೆಲ್ಲುವ ತವಕದಲ್ಲಿದೆ.ಹಾಗಾದ್ರೆ ಚಂಡಿಗಢದ ರಣಕಣದಲ್ಲಿ ಗೆಲ್ಲೋ ಕುದುರೆ ಯಾರು.?

ನಾಳೆ ಐಪಿಎಲ್​ನ ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು, ಮೊದಲ ಎರಡು ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವೆ ಸೆಣಸಾಟ ನಡೆಯಲಿದೆ. ಎರಡೂ ತಂಡಗಳು ಈವರೆಗೆ ಕಪ್‌ ಗೆದ್ದಿಲ್ಲ ಎಂಬುದು ವಿಶೇಷ. ಇಲ್ಲಿ ಗೆದ್ದವರು ಡೈರೆಕ್ಟ್‌ ಫೈನಲ್ ಪ್ರವೇಶ ಮಾಡಲಿದ್ದಾರೆ. ಸೋತವರಿಗೂ ಇನ್ನೊಂದು ಅವಕಾಶ ಸಿಗಲಿದೆ. ಇಂದಿನ ಪಂದ್ಯಕ್ಕೆ ಮಳೆಯ ಆತಂಕ ಕೂಡಾ ಇದೆ.

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಕೊನೆಯ ಲೀಗ್ ಪಂದ್ಯದಿಂದ ಪ್ಲೇ ಆಫ್​ ಪಂದ್ಯಗಳು ನಿರ್ಧಾವಾಗಿವೆ. ಆರ್​ಸಿಬಿ ಹಾಗೂ ಎಲ್​ಎಸ್​ಜಿ ನಡುವಿನ ಕೊನೆ ಪಂದ್ಯದ ಫಲಿತಾಂಶ ಬಂದ ಬಳಿಕ ಗುಜರಾತ್​ ಟೈಟನ್ಸ್​, ಪಂಜಾಬ್ ಕಿಂಗ್ಸ್​ ಹಾಗೂ ಮುಂಬೈ ಇಂಡಿಯನ್ಸ್​ ತಂಡಗಳ ಮುಂದಿನ ಪಂದ್ಯದ ಬಗ್ಗೆ ಮಾಹಿತಿ ಹೊರ ಬಿದ್ದಿದೆ. ಲಕ್ನೋ ವಿರುದ್ಧ ಜಯಭೇರಿ ಬಾರಿಸಿರುವ ಆರ್​ಸಿಬಿ ಇವತ್ತು ಪಂಜಾಬ್​ ಕಿಂಗ್ಸ್​ ವಿರುದ್ಧ ಹೋರಾಡಲಿದೆ.

ಲಕ್ನೋ ತಂಡದ ವಿರುದ್ಧ ಆರ್​ಸಿಬಿ 228 ರನ್​ಗಳನ್ನು ಚೇಸ್ ಮಾಡಿ ಗೆಲ್ಲುವ ಮೂಲಕ 19 ಪಾಯಿಂಟ್​ಗಳಿಂದ ಟೇಬಲ್​ನಲ್ಲಿ 2ನೇ ಸ್ಥಾನ ಪಡೆದಿದೆ. ಮುಂಬೈ ಇಂಡಿಯನ್ಸ್​ ಅಥವಾ ಗುಜರಾತ್​ ವಿರುದ್ಧ ಕ್ವಾಲಿಫೈಯರ್​- 2 ಪಂದ್ಯ ಇರಲಿದ್ದು, ಜೂನ್​ 01 ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಫೈನಲ್​ ಮ್ಯಾಚ್​ ಕೂಡ ಇದೇ ಸ್ಟೇಡಿಯಂನಲ್ಲಿ ನಡೆಯುತ್ತದೆ.

ಈ ಬಾರಿ PBKS ಮತ್ತು RCB ತಂಡಗಳಿಗೆ ಟ್ರೋಫಿ ಗೆಲ್ಲುವ ಅವಕಾಶ ಹೆಚ್ಚಿದೆ. ಎರಡೂ ತಂಡಗಳು ಉತ್ತಮ ಪ್ರದರ್ಶನ ನೀಡುತ್ತಿವೆ. ಮಳೆ ಬರದಿದ್ದರೆ ಪಂದ್ಯವು ರೋಚಕವಾಗಿರಲಿದೆ. ಒಂದು ವೇಳೆ ಮಳೆ ಬಂದರೆ PBKS ತಂಡವು ರನ್ ರೇಟ್ ಆಧಾರದ ಮೇಲೆ ನೇರವಾಗಿ ಫೈನಲ್ ತಲುಪಲಿದೆ.

Exit mobile version