ಇಂದು ಮಾರ್ಚ್ 8 ರಂದು.. ಅಂತಾರಾಷ್ಟ್ರೀಯ ಮಹಿಳಾ ದಿನ.. ಈ ದಿನದ ಅಂಗವಾಗಿ ಭಾರತದ ನಂಬರ್ ಒನ್ ಫೇಸ್ ವಾಶ್ ಬ್ರಾಂಡ್ ಆದ ಹಿಮಾಲಯ ವೆಲ್ನೆಸ್ ಸಂಸ್ಥೆ, ಹಿಮಾಲಯ ವಂಡರ್ ವುಮನ್ ಎಂಬ ವಿನೂತನ ಯೋಜನೆ ಆರಂಭಿಸಿದೆ. ವಿಶೇಷವಾಗಿ ಬಾಲಕಿಯರು ಹಾಗೂ ಯುವತಿಯರು ತಮಗೆ ಎದುರಾಗುವ ಅಡೆತಡೆಗಳನ್ನು ದಾಟಿ ತಮ್ಮ ಅಚ್ಚುಮೆಚ್ಚಿನ ರಂಗದಲ್ಲಿ ಸರ್ವ ಶ್ರೇಷ್ಟ ನಂಬರ್ ಒನ್ ಸಾಧಕರಾಗುವ ನಿಟ್ಟಿನಲ್ಲಿ ಅವರಿಗೆ ಸ್ಪೂರ್ತಿ ತುಂಬುವ ಮಹತ್ವಾಕಾಂಕ್ಷಿ ಯೋಜನೆ ಇದೆ.
ಹಿಮಾಲಯ ವಂಡರ್ ವುಮನ್ ಯೋಜನೆಯ ಅಂಗವಾಗಿ ಹಿಮಾಲಯ ವೆಲ್ನೆಸ್ ಸಂಸ್ಥೆಯು 2024ರ ಡಬ್ಲ್ಯೂಪಿಎಲ್ ಚಾಂಪಿಯನ್ ಶಿಪ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಜೊತೆ ಸಹಭಾಗಿತ್ವ ಹೊಂದಿತ್ತು. ಯುವ ಹಾಗೂ ಉದಯೋನ್ಮುಖ ಕ್ರಿಕೆಟಿಗರಿಗೆ ತರಬೇತಿ ಹಾಗೂ ಮಾರ್ಗದರ್ಶನ ನೀಡುವ ಶಿಬಿರವನ್ನು ಆಯೋಜನೆ ಮಾಡಿತ್ತು. ಮಹಿಳಾ ಕ್ರಿಕೆಟ್ ರಂಗದ ಜನಪ್ರಿಯ ತಾರೆಗಳೇ ಖುದ್ದಾಗಿ ಮಾರ್ಗದರ್ಶನ ನೀಡಿದ್ದರು.
ಬಾಲಕಿಯರು ಹಾಗೂ ಯುವತಿಯರ ಆಸೆ, ಆಕಾಂಕ್ಷೆ ಮತ್ತು ಮಹತ್ವಾಕಾಂಕ್ಷೆಗೆ ಪೂರಕವಾಗಿ ಅವರಿಗೆ ಅವಕಾಶಗಳನ್ನು ಒದಗಿಸಲು ಹಿಮಾಲಯ ಸಂಸ್ಥೆ ತನ್ನ ಹಿಮಾಲಯ ವಂಡರ್ ವುಮನ್ ಯೋಜನೆ ರೂಪಿಸಿದೆ. ಬಾಲಕಿಯರಿಗೆ ನೈಜ ಮಹಿಳಾ ಸಾಧಕರ ಮಾರ್ಗದರ್ಶನ, ಸಲಹೆ ಹಾಗೂ ಸಹಕಾರ ಸಿಗುವಂತೆ ಮಾಡುತ್ತಿದೆ. ಕ್ರೀಡೆ ಮಾತ್ರವಲ್ಲ, ಹತ್ತು ಹಲವು ರಂಗಗಳ ಮಹಿಳಾ ಸಾಧಕಿಯರ ಮೂಲಕ ಬಾಲಕಿಯರು ಹಾಗೂ ಯುವತಿಯರಿಗೆ ಮಾರ್ಗದರ್ಶನವನ್ನೂ ನೀಡಲಾಗುತ್ತಿದೆ. ಈ ಮೂಲಕ ಮುಂದಿನ ತಲೆಮಾರಿನ ಮಹಿಳಾ ಸಾಧಕರನ್ನು ಗುರ್ತಿಸುವ ಹಾಗೂ ನಿರ್ಮಿಸುವ ಮಹತ್ತರ ಗುರಿಯನ್ನು ಹಿಮಾಲಯ ವೆಲ್ನೆಸ್ ಸಂಸ್ಥೆ ಹೊಂದಿದೆ.
ಹಿಮಾಲಯ ವಂಡರ್ ವುಮನ್ ಯೋಜನೆಯ ಅಂಗವಾಗಿ ಬೆಂಗಳೂರು ಮೂಲದ ಕ್ರಿಕೆಟ್ ಅಕಾಡೆಮಿಯ 15 ಯುವ ಉದಯೋನ್ಮುಕ ಕ್ರಿಕೆಟಿಗರಿಗೆ ಆರ್‌ಸಿಬಿ ತಂಡದ ಅತ್ಯುನ್ನತ ಆಟಗಾರರ ಮೂಲಕ ವಿಶೇಷ ತರಬೇತಿ ಕೊಡಿಸಲಾಯ್ತು. ತರಬೇತಿ ನೀಡಿದ ಕ್ರಿಕೆಟಿಗರ ಪೈಕಿ ಸ್ಮೃತಿ ಮಂದಾನಾ, ಎಲ್ಲಿಸ್ ಪೆರ್ರಿ, ಶ್ರೇಯಾಂಕಾ ಪಾಟೀಲ್ ಸೇರಿದಂತೆ ಹಲವು ಮಹಿಳಾ ಕ್ರಿಕೆಟಿಗರು ಇದ್ದರು.
ಈ ಯೋಜನೆ ಕುರಿತು ಮಾತನಾಡಿದ ಹಿಮಾಲಯ ವೆಲ್ನೆಸ್‌ನ ಬ್ಯುಸಿನೆಸ್ ನಿರ್ದೇಶಕ ರಾಜೇಶ್ ಕೃಷ್ಣಮೂರ್ತಿ, ಪ್ರತಿಯೊಬ್ಬ ಬಾಲಕಿಗೂ ತನ್ನದೇ ಆದ ಶಕ್ತಿ, ಸಾಮರ್ಥ್ಯ ಹಾಗೂ ನಾಯಕತ್ವ ಗುಣ ಇರುತ್ತದೆ. ಅದನ್ನು ಗುರ್ತಿಸಿ ಅವರಿಗೆ ಪ್ರೋತ್ಸಾಹ ನೀಡುವ ಯೋಜನೆ ಇದಾಗಿದೆ ಎಂದು ವಿವರಿಸಿದರು.
ಭಾರತ ದೇಶಾದ್ಯಂತ ಇರುವ ಶಾಲೆಗಳಲ್ಲಿ ಸುಮಾರು 5 ಲಕ್ಷ ಬಾಲಕಿಯರಿಗೆ ಹಿಮಾಲಯ ವಂಡರ್ ವುಮನ್ ಯೋಜನೆ ಅಡಿ ತರಬೇತಿ ನೀಡುವ ಉದ್ದೇಶ ಇದ್ದು, ಇಡೀ ವರ್ಷ ಈ ಯೋಜನೆ ಜಾರಿಯಲ್ಲಿ ಇರಲಿದೆ. ಅಂತಾರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಹಿಮಾಲಯ ವೆಲ್ನೆಸ್ ಸಂಸ್ಥೆಯ ಈ ಹಿಮಾಲಯ ವಂಡರ್ ವುಮನ್ ಯೋಜನೆ ನಿಜಕ್ಕೂ ಶ್ಲಾಘನೀಯ..