ICC T20 ವಿಶ್ವಕಪ್ 2026ರ ಭರಾಟೆಯ ನಡುವೆಯೂ ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ವೈಯಕ್ತಿಕ ಜೀವನದ ಸಿಹಿ ಕ್ಷಣವನ್ನು ಹಂಚಿಕೊಂಡಿದ್ದಾರೆ. ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯ ಮುಗಿದ ಬಳಿಕ, ಹಾರ್ದಿಕ್ ತಮ್ಮ ಗೆಳತಿ ಮಹಿಕಾ ಶರ್ಮಾ ಅವರ ಹುಟ್ಟುಹಬ್ಬಕ್ಕೆ ರೊಮ್ಯಾಂಟಿಕ್ ವಿಶ್ ಕೋರಿದ್ದು, ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಹಾರ್ದಿಕ್ ಮತ್ತು ಮಹಿಕಾ ಜೊತೆಯ ರೊಮ್ಯಾಂಟಿಕ್ ಫೋಟೋವನ್ನು ಶೇರ್ ಮಾಡಿ, “ಹುಟ್ಟು ಹಬ್ಬದ ಶುಭಾಶಗಳು ರಾಜಕುಮಾರಿ” ಎಂದು ಬರೆದುಕೊಂಡಿದ್ದಾರೆ. ಸಮುದ್ರದಲ್ಲಿ ಸ್ನಾನ ಮಾಡುತ್ತಿರುವ ಜೊತೆಯ ಚಿತ್ರದಲ್ಲಿ ಹಾರ್ದಿಕ್ ಮಹಿಕಾ ಅವರನ್ನು ಆಲಿಂಗನ ಮಾಡಿರುವುದು ಕಾಣಿಸುತ್ತಿದ್ದು, ಫ್ಯಾನ್‌ಗಳು “ಕೂಲ್ & ರೊಮ್ಯಾಂಟಿಕ್” ಜೋಡಿಗೆ ಫಿದಾ ಆಗಿದ್ದಾರೆ.
ಹಾರ್ದಿಕ್-ಮಹಿಕಾ ಸಂಬಂಧದ ಹೊಸ ಅಧ್ಯಾಯ
ನಟಿ ನತಾಶಾ ಸ್ಟಾಂಕೋವಿಕ್ ಅವರೊಂದಿಗಿನ ವಿಚ್ಛೇದನದ ನಂತರ, 2025ರ ಅಕ್ಟೋಬರ್‌ನಲ್ಲಿ ಹಾರ್ದಿಕ್ ಮತ್ತು ಮಹಿಕಾ ಶರ್ಮಾ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದರು. ಅಂದಿನಿಂದ ಮಹಿಕಾ ಹಾರ್ದಿಕ್ ಮತ್ತು ಅವರ ಮಗ ಅಗಸ್ತ್ಯ ಜೊತೆಗೆ ಆಗಾಗ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ಸಂದರ್ಶನಗಳಲ್ಲಿ ಹಾರ್ದಿಕ್ “ಮಹಿಕಾ ನನ್ನ ಜೀವನದಲ್ಲಿ ಬಂದ ನಂತರ ನನ್ನ ಆಟದಲ್ಲಿ ಹೊಸ ಉತ್ಸಾಹ ಮೂಡಿದೆ. ಅವಳು ನನ್ನನ್ನು ಬೆಂಬಲಿಸಿ, ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಳ್ಳಲು ಸಹಾಯ ಮಾಡಿದ್ದಾರೆ” ಎಂದು ಹೇಳಿದ್ದರು. ವಿಶ್ವಕಪ್‌ನ ಒತ್ತಡದ ನಡುವೆಯೂ ದಿನಕ್ಕೆ 6-7 ಗಂಟೆ ಬ್ಯಾಟಿಂಗ್ ಅಭ್ಯಾಸ ಮಾಡುವ ಜೋಶ್ ಮರಳಿ ಬಂದಿದೆ ಎಂದು ಅವರು ಕ್ರೆಡಿಟ್ ಕೊಟ್ಟಿದ್ದಾರೆ.
Casnova
Hardik Pandya ki pta nhi kitni hi Princess ghum rhi hai#HardikPandya pic.twitter.com/Yf4zM6ifda— Akhlesh Gurjar (@Akhleshhgurjar) February 19, 2026
ವ್ಯಾಲೆಂಟೈನ್ಸ್ ಡೇ ಟ್ಯಾಟೂ ಗಿಫ್ಟ್
ಮಹಿಕಾ ಅವರ ಹುಟ್ಟುಹಬ್ಬಕ್ಕೂ ಕೆಲವೇ ದಿನಗಳ ಮೊದಲು ವ್ಯಾಲೆಂಟೈನ್ಸ್ ಡೇಯಂದು ಹಾರ್ದಿಕ್ ಕತ್ತಿನ ಹಿಂಭಾಗದಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದರು. ಇದರಲ್ಲಿ ಮಹಿಕಾ ಹೆಸರಿನ ಮೊದಲ ಅಕ್ಷರ ‘M’ ಮತ್ತು ಎರಡು ಚಿರತೆಗಳ ಚಿತ್ರವಿದ್ದು, ಶಕ್ತಿ, ಪರಸ್ಪರ ಬೆಂಬಲ ಮತ್ತು ದೊಡ್ಡ ಬೆಕ್ಕುಗಳ ಮೇಲಿನ ಪ್ರೀತಿಯ ಸಂಕೇತವಾಗಿದೆ ಎಂದು ಟ್ಯಾಟೂ ಕಲಾವಿದರು ತಿಳಿಸಿದ್ದಾರೆ. ಈ ಟ್ಯಾಟೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.
ಹಾರ್ದಿಕ್ ಅವರ ಈ ರೊಮ್ಯಾಂಟಿಕ್ ಅವತಾರಕ್ಕೆ ಫ್ಯಾನ್‌ಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, “ಮೈದಾನದಲ್ಲಿ ಶೂರ, ಹೊರಗೆ ರೊಮ್ಯಾಂಟಿಕ್” ಎಂದು ಕಾಮೆಂಟ್ ಮಾಡುತ್ತಿದ್ದಾರೆ. ವಿಶ್ವಕಪ್‌ನಲ್ಲಿ ಭಾರತದ ಪ್ರದರ್ಶನದ ಜೊತೆಗೆ ಹಾರ್ದಿಕ್-ಮಹಿಕಾ ಜೋಡಿಯ ಸಿಹಿ ಕ್ಷಣಗಳು ಫ್ಯಾನ್‌ಗಳಿಗೆ ಡಬಲ್ ಖುಷಿ ನೀಡುತ್ತಿವೆ.





