ಬೆಂಗಳೂರು: ಇದೇ ಭಾನುವಾರ ತಡರಾತ್ರಿ ನಡೆದ 2026ರ ಫುಟ್‌ಬಾಲ್ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಅಭಿಮಾನಿಗಳ ಜೋಶ್ ಮುಗಿಲುಮುಟ್ಟಿತ್ತು. ಟಿವಿ ಪರದೆಗೆ ಕಣ್ಣು ಹಚ್ಚಿ ಕುಳಿತಿದ್ದ ಫ್ಯಾನ್ಸ್, ಮ್ಯಾಚ್ ಎಂಜಾಯ್ ಮಾಡುವುದರ ಜೊತೆಗೆ ಭರ್ಜರಿಯಾಗಿ ತಿಂದೂ ತೇಗಿದ್ದಾರೆ! ಪಂದ್ಯದ ವೇಳೆ ಭಾರತದ ಪ್ರಮುಖ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ ‘ಇನ್‌ಸ್ಟಾಮಾರ್ಟ್’ನಲ್ಲಿ ಮಧ್ಯರಾತ್ರಿಯ ಆರ್ಡರ್‌ಗಳು ದಾಖಲೆ ಮಟ್ಟದಲ್ಲಿ ಏರಿಕೆಯಾಗಿದ್ದೇ ಇದಕ್ಕೆ ಸಾಕ್ಷಿ.
ಸಾಮಾನ್ಯ ಭಾನುವಾರಗಳಿಗೆ ಹೋಲಿಸಿದರೆ, ವಿಶ್ವಕಪ್ ಫೈನಲ್ ರಾತ್ರಿ ಸ್ನ್ಯಾಕ್ಸ್ ಮತ್ತು ಪಾನೀಯಗಳ ಆರ್ಡರ್ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿತ್ತು. ಜನರು ಆ ಕ್ಷಣಕ್ಕೆ ಬೇಕಾದ ಆರ್ಡರ್ ಮಾಡುವ ಬದಲು, ಇಡೀ 90 ನಿಮಿಷಗಳ ಪಂದ್ಯವನ್ನು ಎಂಜಾಯ್ ಮಾಡಲು ಬೇಕಾದಷ್ಟು ಸ್ನ್ಯಾಕ್ಸ್‌ಗಳನ್ನು ಮೊದಲೇ ಸಂಗ್ರಹಿಸಿಕೊಂಡಿದ್ದರು ಎಂಬುದು ಇನ್‌ಸ್ಟಾಮಾರ್ಟ್ ಬಿಡುಗಡೆ ಮಾಡಿರುವ ಡೇಟಾದಿಂದ ತಿಳಿದುಬಂದಿದೆ.
ಟಿಯರ್ – 2 ಸಿಟಿಗಳಲ್ಲೂ ಫುಟ್‌ಬಾಲ್ ಜ್ವರ
ಫುಟ್‌ಬಾಲ್ ಅಂದ್ರೆ ಕೇವಲ ದೊಡ್ಡ ದೊಡ್ಡ ಮೆಟ್ರೋ ಸಿಟಿಗಳಿಗೆ ಮಾತ್ರ ಸೀಮಿತ ಎನ್ನುವ ಕಾಲವೊಂದಿತ್ತು. ಆದರೆ, ಇನ್‌ಸ್ಟಾಮಾರ್ಟ್ ವರದಿ ಪ್ರಕಾರ ಈ ಬಾರಿ ಹೊಸೂರು, ತಿರುನೆಲ್ವೇಲಿ, ಜೋಧಪುರ, ಸೋನಿಪತ್, ಕೋಳಿಕ್ಕೋಡ್ ಮತ್ತು ಲೊನಾವಾಲಾದಂತಹ ಸಣ್ಣ ನಗರಗಳಲ್ಲೂ ಮಧ್ಯರಾತ್ರಿ ಆರ್ಡರ್‌ಗಳು ಭಾರಿ ಏರಿಕೆ ಕಂಡಿವೆ. ಅಚ್ಚರಿಯೆಂದರೆ, ದೇಶದಲ್ಲೇ ಅತಿ ಹೆಚ್ಚು ಆರ್ಡರ್ ದಾಖಲಾದ ನಗರಗಳಲ್ಲಿ ಹೊಸೂರು (ಶೇ. 41.9 ಏರಿಕೆ) ಮೊದಲ ಸ್ಥಾನದಲ್ಲಿದೆ!
ಇನ್ನು ಸಿಲಿಕಾನ್ ಸಿಟಿ ‘ಬೆಂಗಳೂರಿನಲ್ಲಿ ಅತಿ ಹೆಚ್ಚಿನ ಬೆಲೆಯ ಆರ್ಡರ್‌ಗಳು ಬಂದಿದ್ದು, ಸ್ನೇಹಿತರೆಲ್ಲಾ ಗುಂಪಾಗಿ ಪಂದ್ಯವನ್ನು ವೀಕ್ಷಿಸಿದ್ದಾರೆ ಎಂಬುದನ್ನು ಇದು ಸಾಬೀತುಪಡಿಸಿದೆ.
ಮ್ಯಾಚ್ ನೋಡುತ್ತಾ ಏನೇನ್ ತಿಂದ್ರು ಭಾರತೀಯರು?
ಪಂದ್ಯದ ಒಂದೇ ಒಂದು ನಿಮಿಷವನ್ನೂ ಮಿಸ್ ಮಾಡಿಕೊಳ್ಳಬಾರದು ಎಂದು ನಿರ್ಧರಿಸಿದ್ದ ಬಹುಪಾಲು ಫ್ಯಾನ್ಸ್, ತ್ವರಿತವಾಗಿ ತಯಾರಾಗುವ ‘ಇನ್‌ಸ್ಟಂಟ್ ನೂಡಲ್ಸ್’ ಅನ್ನು ಅತಿ ಹೆಚ್ಚು ಆರ್ಡರ್ ಮಾಡಿದ್ದಾರೆ. ಇನ್ನು ಚಿಪ್ಸ್, ಖಾರ, ಪಾಪ್‌ಕಾರ್ನ್, ಕೇಕ್ ಮತ್ತು ಕ್ರೀಮ್ ಬಿಸ್ಕತ್ತುಗಳು ಎಂದಿನಂತೆ ಭಾರತೀಯರ ನೆಚ್ಚಿನ ಸ್ನ್ಯಾಕ್ಸ್ ಆಗಿ ಅತಿ ಹೆಚ್ಚು ಮಾರಾಟವಾಗಿವೆ.
ಐಸ್ಡ್ ಟೀ & ಕೊಂಬುಚಾ ಟ್ರೆಂಡ್
ಪಾನೀಯಗಳ ವಿಚಾರಕ್ಕೆ ಬಂದರೆ ಭಾರತೀಯರ ಅಭಿರುಚಿ ಕೊಂಚ ಬದಲಾಗಿದೆ. ತಡರಾತ್ರಿಯ ಪಂದ್ಯವಾದ್ದರಿಂದ ಕೋಲಾದಂತಹ ಸಾಂಪ್ರದಾಯಿಕ ಪಾನೀಯಗಳ ಜೊತೆಗೆ, ಆರೋಗ್ಯಕರ ಹಾಗೂ ಲೈಟ್ ಆಗಿರುವ ‘ಐಸ್ಡ್ ಟೀ’ ಮತ್ತು ‘ಕೊಂಬುಚಾ’ ಪಾನೀಯಗಳ ಬೇಡಿಕೆ ಶೇ. 147 ರಷ್ಟು ಏರಿಕೆ ಕಂಡಿತ್ತು.
ಮಧ್ಯರಾತ್ರಿ 1 ಗಂಟೆ ಬಳಿಕ ಶುರುವಾಯ್ತು ಹಸಿವು!
ಪಂದ್ಯ ಆರಂಭವಾಗುತ್ತಿದ್ದಂತೆ ಆರ್ಡರ್ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಾ ಹೋಯಿತು. ವಿಶೇಷವಾಗಿ ಪಂದ್ಯದ ದ್ವಿತೀಯಾರ್ಧ, ಅಂದರೆ ಮಧ್ಯರಾತ್ರಿ 1:30 ರಿಂದ 2:15 ರ ಸಮಯದಲ್ಲಿ ಜನರಿಗೆ ಅತಿ ಹೆಚ್ಚು ಹಸಿವಾಗಿ, ಇನ್‌ಸ್ಟಾಮಾರ್ಟ್‌ನಲ್ಲಿ ಆರ್ಡರ್‌ಗಳ ಮಹಾಪೂರವೇ ಹರಿದುಬಂತು ಎಂದು ವರದಿ ತಿಳಿಸಿದೆ.
ಒಟ್ಟಿನಲ್ಲಿ, ಫುಟ್‌ಬಾಲ್ ವಿಶ್ವಕಪ್ ಫೈನಲ್ ಕೇವಲ ಮೈದಾನದಲ್ಲಷ್ಟೇ ಅಲ್ಲ, ಭಾರತೀಯರ ಮನೆ ಮನೆಗಳಲ್ಲೂ ಸ್ನ್ಯಾಕ್ಸ್ ಪಾರ್ಟಿಯ ಮೂಲಕ ಭರ್ಜರಿಯಾಗಿಯೇ ಆಚರಿಸಲ್ಪಟ್ಟಿದೆ!





