ಜನ್ಮಸಂಖ್ಯೆ 1, 10, 19, 28
ನಿಮ್ಮ ಕುಟುಂಬದ ಸದಸ್ಯರು ಅಥವಾ ಸಹೋದ್ಯೋಗಿಗಳು ನಿಮ್ಮಿಂದ ಏನನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಂಡು ನಿರ್ಧಾರ ಕೈಗೊಳ್ಳಿ. ಶೈಕ್ಷಣಿಕ ಕ್ಷೇತ್ರದಲ್ಲಿರುವವರಿಗೆ ಇದು ಅತ್ಯಂತ ಶುಭ ಕಾಲ, ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ.
ಜನ್ಮಸಂಖ್ಯೆ 2, 11, 20, 29
ಆಸ್ತಿ ಅಥವಾ ಜಮೀನಿನ ದಾಖಲೆಗಳ ಕೆಲಸಗಳಲ್ಲಿ ತೊಡಗಿರುವವರಿಗೆ ಇಂದು ಮತ್ತೊಬ್ಬರ ಸಮಯೋಚಿತ ಸಹಾಯ ದೊರೆಯಲಿದೆ. ನೀವು ಹಿಂದೆ ಯಾರಿಗೋ ಮಾಡಿದ ಉಪಕಾರಕ್ಕೆ ಇಂದು ಪ್ರತಿಫಲ ಸಿಗುವ ಸಾಧ್ಯತೆ ಇದೆ; ಉಡುಗೊರೆ ಅಥವಾ ಧನಸಹಾಯದ ರೂಪದಲ್ಲಿ ಅದು ಬರಬಹುದು.
ಜನ್ಮಸಂಖ್ಯೆ 3, 12, 21, 30
ಇಂದು ನೀವು ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಸಕ್ರಿಯರಾಗಿರುತ್ತೀರಿ. ಸಂಬಂಧಿಕರ ಮನೆಯ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುವಿರಿ. ಮನೆಗೆ ಅಗತ್ಯವಿರುವ ಟೀವಿ ಅಥವಾ ಆಡಿಯೋ ಸಿಸ್ಟಮ್‌ಗಳಂತಹ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಗೆ ಮನಸ್ಸು ಮಾಡುವಿರಿ.
ಜನ್ಮಸಂಖ್ಯೆ 4, 13, 22, 31
ಆರ್ಥಿಕ ಶಿಸ್ತಿನ ಬಗ್ಗೆ ಇಂದು ಹೆಚ್ಚು ಯೋಚಿಸುವಿರಿ. ಚಿನ್ನದ ಬಾಂಡ್ ಅಥವಾ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಿದ್ದರೆ ಅದನ್ನು ಹಿಂಪಡೆಯುವ ಬಗ್ಗೆ ಆಲೋಚನೆ ಮೂಡಬಹುದು. ಮನೆಯ ಹಳೆಯ ಅಥವಾ ಬಳಕೆಯಾಗದ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಜಾಗ ಖಾಲಿ ಮಾಡುವಿರಿ.
ಜನ್ಮಸಂಖ್ಯೆ 5, 14, 23
ವಿದೇಶಿ ಪ್ರಯಾಣ ಅಥವಾ ವಿದೇಶದಲ್ಲಿ ವ್ಯಾಸಂಗ ಮಾಡಲು ಇಚ್ಛಿಸುವವರಿಗೆ ಇಂದು ಶುಭ ಸುದ್ದಿ ಕಾದಿದೆ. ಹೋಟೆಲ್ ಉದ್ಯಮಿಗಳಿಗೆ ವ್ಯಾಪಾರ ವಿಸ್ತರಣೆಯ ಕನಸು ನನಸಾಗುವ ಕಾಲ ಹತ್ತಿರದಲ್ಲಿದೆ. ಬ್ಯಾಂಕ್ ಸಾಲಕ್ಕಾಗಿ ಕಾಯುತ್ತಿದ್ದವರಿಗೆ ವಿಳಂಬವಾಗುತ್ತಿದ್ದ ಪ್ರಕ್ರಿಯೆಗಳು ಈಗ ವೇಗ ಪಡೆದುಕೊಳ್ಳಲಿವೆ.
ಜನ್ಮಸಂಖ್ಯೆ 6, 15, 24
ಹೊಸ ಕಾರು ಅಥವಾ ವಾಹನ ಖರೀದಿಯ ಕನಸು ಇಂದು ಮುಂದಿನ ಹಂತಕ್ಕೆ ತಲುಪಲಿದೆ. ಆದರೆ, ಆರ್ಥಿಕವಾಗಿ ಸ್ವಲ್ಪ ಎಚ್ಚರಿಕೆ ಅಗತ್ಯ. ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ಮಿತಿ ಇರಲಿ, ಅನಗತ್ಯ ವಸ್ತುಗಳ ವ್ಯಾಮೋಹಕ್ಕೆ ಬೀಳಬೇಡಿ. ಆಸ್ತಿ ಹಂಚಿಕೆಯಂತಹ ಹಳೆಯ ವ್ಯಾಜ್ಯಗಳು ಸಂಧಾನದ ಮೂಲಕ ಬಗೆಹರಿಯುವುದು ಇಂದು ಕಷ್ಟವೆನಿಸಬಹುದು. ತಾಳ್ಮೆಯಿಂದಿರಿ.
ಜನ್ಮಸಂಖ್ಯೆ 7, 16, 25
ಇಂದು ಸಮಯ ಪ್ರಜ್ಞೆ ಬಹಳ ಮುಖ್ಯ. ಕೈಗೆತ್ತಿಕೊಂಡ ಕೆಲಸಗಳನ್ನು ನಿಗದಿತ ಅವಧಿಯೊಳಗೆ ಮುಗಿಸಲು ಆದ್ಯತೆ ನೀಡಿ. ಹಣ್ಣು, ಹೂವು ಅಥವಾ ತರಕಾರಿ ವ್ಯಾಪಾರಸ್ಥರಿಗೆ ಹೊಸ ಹೂಡಿಕೆ ಮಾಡಲು ಇದು ಪ್ರಶಸ್ತ ಸಮಯ. ಇನ್ನು ಪ್ರೇಮಿಗಳಿಗೆ ತಮ್ಮ ವಿಷಯವನ್ನು ಮನೆಯಲ್ಲಿ ಹಂಚಿಕೊಳ್ಳಲು ಮತ್ತು ವಿವಾಹದ ಪ್ರಸ್ತಾವ ಮಾಡಲು ಇದು ಒಳ್ಳೆ ಸಮಯ
ಜನ್ಮಸಂಖ್ಯೆ 8, 17, 26
ಚಾಲಕ ವೃತ್ತಿಯಲ್ಲಿರುವವರಿಗೆ ಇಂದು ಕೆಲಸದ ಒತ್ತಡ ಹೆಚ್ಚಿರಲಿದೆ. ವಾಹನದ ಸುಸ್ಥಿತಿಯನ್ನು ಪರೀಕ್ಷಿಸಿಕೊಳ್ಳುವುದು ಸುರಕ್ಷತೆಯ ದೃಷ್ಟಿಯಿಂದ ಅನಿವಾರ್ಯ. ಬ್ಯಾಂಕ್ ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಹೊಸ ಗುರಿಗಳು (Targets) ಸಿಗಬಹುದು. ಮನಸ್ಸಿನ ಶಾಂತಿಗಾಗಿ ಹನುಮಂತನ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆಯುವುದು ಶ್ರೇಯಸ್ಕರ.
ಜನ್ಮಸಂಖ್ಯೆ 9, 18, 27
ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ನಿಮ್ಮ ವ್ಯಕ್ತಿತ್ವಕ್ಕೆ ಮೆರುಗು ನೀಡಲಿದೆ. ಕಟ್ಟಡ ನಿರ್ಮಾಣ ಮತ್ತು ನವೀಕರಣ (Renovation) ಮಾಡುವವರಿಗೆ ಏಕಕಾಲಕ್ಕೆ ಹಲವು ಹೊಸ ಅವಕಾಶಗಳು ಬರಲಿವೆ. ಉದ್ಯೋಗಸ್ಥರು ತಮ್ಮ ಜವಾಬ್ದಾರಿಯ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು, ಏಕೆಂದರೆ ಸಂಸ್ಥೆಯು ನಿಮ್ಮ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಿದೆ. ನಿಮ್ಮ ಆಪ್ತ ಸಹೋದ್ಯೋಗಿಯೊಬ್ಬರು ಕೆಲಸ ಬದಲಿಸುವ ಸಾಧ್ಯತೆ ಇದೆ.





