ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ, ಗುರುವಾರದ ದಿನದ ರಾಶಿಫಲ ಇಲ್ಲಿದೆ. ಇಂದು ಕೆಲವರಿಗೆ ನಿರ್ಮಾಣ ಕಾರ್ಯಗಳಲ್ಲಿ ಅಡೆತಡೆ, ಕಾನೂನಾತ್ಮಕ ವಿಚಾರಗಳಲ್ಲಿ ಹೋರಾಟ, ದಾಂಪತ್ಯದಲ್ಲಿ ಮನಸ್ತಾಪ, ಸಮಯದ ಕೊರತೆ, ಮನೋನಿಗ್ರಹದ ಅಗತ್ಯ ಹಾಗೂ ಹೊಸ ಕೆಲಸದ ಸಾಧಕ-ಬಾಧಕಗಳ ಚರ್ಚೆ ಎದುರಾಗಬಹುದು. ಪ್ರತಿಯೊಂದು ರಾಶಿಗೂ ದಿನದ ಫಲಿತಾಂಶ ವಿಭಿನ್ನವಾಗಿದ್ದು, ಎಚ್ಚರಿಕೆ ಮತ್ತು ತಾಳ್ಮೆಯಿಂದ ಮುನ್ನಡೆಯುವುದು ಒಳಿತು..
ಮೇಷ ರಾಶಿ
ಆಸ್ತಿ ಹಂಚಿಕೆ ವಿಚಾರದಲ್ಲಿ ಕುಟುಂಬದವರೊಂದಿಗೆ ಚರ್ಚೆ ನಡೆಯಬಹುದು. ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಘ್ನಗಳು ಎದುರಾಗುವ ಸಾಧ್ಯತೆ ಇದೆ. ಸ್ವ ಉದ್ಯೋಗಿಗಳಿಗೆ ಓಡಾಟ ಹೆಚ್ಚಾದರೂ ವ್ಯಾಪಾರದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಾಣಬಹುದು. ಕುಟುಂಬ ಜೀವನದಲ್ಲಿ ನೆಮ್ಮದಿ ಇರಲಿದೆ. ಆದರೆ ನಿಮ್ಮ ಬಗ್ಗೆ ಇತರರು ಆಡಿಕೊಳ್ಳುವ ಮಾತುಗಳು ಬೇಸರ ತರಬಹುದು. ನಿರೀಕ್ಷಿತ ಕಾರ್ಯ ಪೂರ್ಣಗೊಳ್ಳುವವರೆಗೂ ಮನಸ್ಸಿಗೆ ನೆಮ್ಮದಿ ಸಿಗದಿರಬಹುದು.
ವೃಷಭ ರಾಶಿ
ಬಂಧುಗಳ ಭೇಟಿಯಿಂದ ಉತ್ಸಾಹ ಹೆಚ್ಚಾಗಲಿದೆ. ಅಗತ್ಯ ಕೆಲಸಗಳನ್ನು ವೇಗವಾಗಿ ಹಾಗೂ ಎಚ್ಚರಿಕೆಯಿಂದ ಪೂರ್ಣಗೊಳಿಸಿ. ಸಹೋದರನಿಂದ ಅನಿರೀಕ್ಷಿತ ಸಹಾಯ ದೊರೆಯಬಹುದು. ಮಾಡಿದ ಉಪಕಾರಕ್ಕೆ ಪ್ರತ್ಯುಪಕಾರ ಮಾಡುವ ಮನೋಭಾವ ಇರಲಿ. ಬಂಧುಗಳ ನಕಾರಾತ್ಮಕ ಮಾತುಗಳು ಮನಸ್ಸಿಗೆ ನೋವುಂಟುಮಾಡಬಹುದು. ತಪ್ಪು ಸಹವಾಸದಿಂದ ನಿಮ್ಮ ಸ್ವಭಾವದಲ್ಲಿ ಬದಲಾವಣೆ ಉಂಟಾಗದಂತೆ ಎಚ್ಚರಿಕೆ ವಹಿಸಿ.
ಮಿಥುನ ರಾಶಿ
ಇಂದು ಯಾರ ಸಹಾಯವನ್ನೂ ಪಡೆಯಲು ಮನಸ್ಸಾಗದೆ ಸ್ವತಂತ್ರವಾಗಿ ಕೆಲಸ ಮಾಡಲು ಬಯಸುವಿರಿ. ಆಲಸ್ಯದಿಂದ ಕಚೇರಿ ಕೆಲಸದಲ್ಲಿ ಆಸಕ್ತಿ ಕಡಿಮೆಯಾಗಬಹುದು. ಉತ್ತಮ ಅಭ್ಯಾಸಗಳು ಆರೋಗ್ಯವನ್ನು ಕಾಪಾಡಲಿವೆ. ಹಿತಶತ್ರುಗಳನ್ನು ದೂರವಿಟ್ಟು ಕಾರ್ಯಸಾಧನೆ ಮಾಡಿಕೊಳ್ಳುವಿರಿ. ಜೀವನ ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಮಾತನಾಡುವಿರಿ. ಮೋಸದ ಕರೆ ಅಥವಾ ಸಂದೇಶಗಳಿಗೆ ಸಿಲುಕದಂತೆ ಎಚ್ಚರಿಕೆ ವಹಿಸಿ.
ಕರ್ಕಾಟಕ ರಾಶಿ
ಯಾರ ಮಾತನ್ನೂ ಸುಲಭವಾಗಿ ನಂಬದ ಮನಸ್ಥಿತಿ ಉಂಟಾಗಬಹುದು. ವೈಯಕ್ತಿಕ ಕಾರಣಗಳಿಂದ ಉದ್ಯೋಗ ಬದಲಾವಣೆಯ ಚಿಂತನೆ ಮೂಡಬಹುದು. ಪಡೆದ ಸಾಲವನ್ನು ತೀರಿಸುವ ಅವಕಾಶ ಸಿಗಲಿದೆ. ಪ್ರಯಾಣವನ್ನು ಆರೋಗ್ಯದ ಕಾರಣದಿಂದ ಕಡಿಮೆ ಮಾಡಿಕೊಳ್ಳುವಿರಿ. ಆರ್ಥಿಕ ಪರಿಸ್ಥಿತಿ ಸಂತಸ ನೀಡಿದರೂ ಮನಸ್ಸಿನಲ್ಲಿ ಪೂರ್ಣ ನೆಮ್ಮದಿ ಇರದಿರಬಹುದು.
ಸಿಂಹ ರಾಶಿ
ಅಪರಿಚಿತರು ನಿಮ್ಮ ಅನುಕೂಲವನ್ನು ಬಳಸಿಕೊಳ್ಳಲು ಪ್ರಯತ್ನಿಸಬಹುದು. ಸ್ನೇಹಿತರ ಸಲಹೆಗಳು ಉಪಯುಕ್ತವಾಗಲಿವೆ. ಉದ್ಯಮವನ್ನು ವಿಸ್ತರಿಸುವ ಯೋಚನೆ ಮೂಡಲಿದೆ. ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ಅಳುಕು ಕಾಡಬಹುದು. ಕೆಲಸದ ಒತ್ತಡ ಕಡಿಮೆ ಮಾಡಲು ಜವಾಬ್ದಾರಿಗಳನ್ನು ಹಂಚಿಕೊಳ್ಳುವಿರಿ. ಸಮಾಜಸೇವಕರ ಭೇಟಿಯಿಂದ ಸಮಸ್ಯೆಗೆ ಪರಿಹಾರ ದೊರೆಯಬಹುದು. ಧಾರ್ಮಿಕ ಕಾರ್ಯಗಳತ್ತ ಮನಸ್ಸು ಹರಿಯಲಿದೆ.
ಕನ್ಯಾ ರಾಶಿ
ಮನಸ್ಸಿನ ಉದ್ವಿಗ್ನತೆಯಿಂದ ಹೊರಬರಲು ಹೊಸ ಮಾರ್ಗ ಹುಡುಕುವಿರಿ. ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲಸವನ್ನು ಇಂದು ಮುಗಿಸಬೇಕೆಂಬ ದೃಢ ನಿರ್ಧಾರ ಕೈಗೊಳ್ಳಬಹುದು. ದೊಡ್ಡ ಮೊತ್ತದ ಖರೀದಿಗೂ ಮುನ್ನ ಅದರ ಅಗತ್ಯವನ್ನು ಪರಿಶೀಲಿಸಿ. ಉದ್ಯಮಿಗಳ ಭೇಟಿಯ ಸಾಧ್ಯತೆ ಇದೆ. ಹೊಸ ಸಂಬಂಧದ ಬಗ್ಗೆ ಆಸಕ್ತಿ ಮೂಡಬಹುದು. ವೃತ್ತಿಯಲ್ಲಿ ನಿಮ್ಮ ಬಗ್ಗೆ ಬಣ್ಣದ ಮಾತುಗಳು ಕೇಳಿಬರುವ ಸಾಧ್ಯತೆ ಇದೆ.
ತುಲಾ ರಾಶಿ
ಪುಣ್ಯಸ್ಥಳಕ್ಕೆ ಅನಿರೀಕ್ಷಿತ ಭೇಟಿ ನೀಡುವುದರಿಂದ ಮನಸ್ಸಿಗೆ ಸಮಾಧಾನ ದೊರೆಯಲಿದೆ. ಸಾಲ ಮರುಪಾವತಿ ಮಾಡಿ ನಿರಾಳರಾಗುವಿರಿ. ನಿಮ್ಮವರಿಗಾದ ಅಪಮಾನವನ್ನು ಸಹಿಸದೆ ಕೋಪಗೊಳ್ಳುವ ಸಾಧ್ಯತೆ ಇದೆ. ಮತ್ತೊಬ್ಬರ ಮೇಲಿನ ಸಿಟ್ಟನ್ನು ಆಪ್ತರ ಮೇಲೆ ತೋರಿಸದಿರಿ. ಬಂದ ಹಣವನ್ನು ಜೋಪಾನವಾಗಿ ಇಡುವ ವ್ಯವಸ್ಥೆ ಮಾಡಿಕೊಳ್ಳಿ. ಯಾವುದೇ ಸಂದರ್ಭದಲ್ಲೂ ನಿಮ್ಮವರನ್ನು ಕೈಬಿಡಲು ಮನಸ್ಸಾಗದು.
ವೃಶ್ಚಿಕ ರಾಶಿ
ವಸ್ತು ಕಳೆದುಕೊಂಡು ಚಿಂತೆಗೆ ಒಳಗಾಗುವ ಸಾಧ್ಯತೆ ಇದೆ. ಸ್ವಾವಲಂಬಿ ಜೀವನವನ್ನು ಇಷ್ಟಪಡುವ ನೀವು ವಹಿಸಿದ ಕೆಲಸವನ್ನು ನಿಷ್ಠೆಯಿಂದ ಪೂರ್ಣಗೊಳಿಸುವಿರಿ. ಆದಾಯ ಹೆಚ್ಚಿಸಿಕೊಳ್ಳಲು ಹಲವು ಮಾರ್ಗಗಳಲ್ಲಿ ಪ್ರಯತ್ನಿಸುವಿರಿ. ಅಶುಭ ಸುದ್ದಿ ಮನಸ್ಸನ್ನು ಕುಗ್ಗಿಸಬಹುದು. ಅಹಂಕಾರ ಪ್ರದರ್ಶಿಸದೆ ಅಗತ್ಯವಿದ್ದಷ್ಟು ಮಾತ್ರ ಮಾತನಾಡುವುದು ಒಳಿತು. ಸಂಗಾತಿಯಿಂದ ನಿಮ್ಮ ನಿಲುವಿಗೆ ಬೆಂಬಲ ಸಿಗಬಹುದು.
ಧನು ರಾಶಿ
ಅತಿಯಾದ ಒತ್ತಡದಿಂದ ಮಾಡುತ್ತಿರುವ ಕೆಲಸವನ್ನೇ ಮರೆತುಹೋಗುವ ಸಾಧ್ಯತೆ ಇದೆ. ತಲೆನೋವು ಕಾಡಬಹುದು. ಎಲ್ಲರೊಂದಿಗೆ ಬೆರೆಯುವ ಸ್ವಭಾವವೇ ಅಪವಾದಕ್ಕೆ ಕಾರಣವಾಗದಂತೆ ಎಚ್ಚರಿಕೆ ವಹಿಸಿ. ಸದಾ ಹೊಸತನ ಬಯಸುವ ನೀವು ಕೆಲವು ವಸ್ತುಗಳನ್ನು ಇತರರಿಗೆ ನೀಡಿ ಕಳೆದುಕೊಳ್ಳಬಹುದು. ಸಂಗಾತಿಯೊಂದಿಗೆ ಸಮಯ ಕಳೆಯುವ ಬಯಕೆ ಹೆಚ್ಚಲಿದೆ. ಭೂಮಿಗೆ ಸಂಬಂಧಿಸಿದ ವ್ಯವಹಾರದಲ್ಲಿ ಲಾಭದ ನಿರೀಕ್ಷೆ ಇದೆ.
ಮಕರ ರಾಶಿ
ಸಂಗಾತಿಗೆ ಹೊಸ ಸ್ಥಳಗಳನ್ನು ನೋಡಬೇಕೆಂಬ ಆಸೆ ಮೂಡಬಹುದು. ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಅನಿವಾರ್ಯತೆ ಎದುರಾಗಬಹುದು. ಯಾರು ತಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬ ಗೊಂದಲ ಕಾಡಬಹುದು. ಪ್ರೀತಿಯನ್ನು ವ್ಯಕ್ತಪಡಿಸುವ ಸಂದರ್ಭದಲ್ಲಿ ಮನಸ್ಸಿನಲ್ಲಿ ಗೊಂದಲ ಉಂಟಾಗಬಹುದು. ನಿದ್ರೆಯ ಕೊರತೆ ಕಾಡುವ ಸಾಧ್ಯತೆ ಇರುವುದರಿಂದ ವಿಶ್ರಾಂತಿಗೆ ಆದ್ಯತೆ ನೀಡಿ.
ಕುಂಭ ರಾಶಿ
ಕೆಲಸದಿಂದ ವಿರಾಮ ಪಡೆದು ಮನೆಯಲ್ಲೇ ಮಕ್ಕಳೊಂದಿಗೆ ಸಮಯ ಕಳೆಯುವಿರಿ. ಕಾರ್ಯಸಿದ್ಧಿಯಾಗುವವರೆಗೂ ಮೌನವಾಗಿರುವುದು ಉತ್ತಮ ಎಂಬ ಹಿರಿಯರ ಸಲಹೆ ದೊರೆಯಬಹುದು. ಅಸಾಧ್ಯವೆನಿಸಿದ ಕಾರ್ಯವನ್ನು ಸಾಧ್ಯವಾಗಿಸಿಕೊಳ್ಳುವ ಹಂಬಲ ಇರಲಿದೆ. ಹಳೆಯ ಕಡತಗಳನ್ನು ಪರಿಶೀಲಿಸುವಾಗ ಅಮೂಲ್ಯ ದಾಖಲೆ ದೊರೆಯಬಹುದು. ಪರಿಸ್ಥಿತಿಗೆ ಅನುಗುಣವಾಗಿ ಇತರರ ಇಚ್ಛೆಯಂತೆ ನಡೆಯಬೇಕಾಗಬಹುದು.
ಮೀನ ರಾಶಿ
ವೃತ್ತಿಜೀವನಕ್ಕೆ ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಳ್ಳುವಿರಿ. ಮಹಿಳೆಯರಿಂದ ಆರ್ಥಿಕ ಸಹಾಯ ದೊರೆಯುವ ಸಾಧ್ಯತೆ ಇದೆ. ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡುವಿರಿ. ಅತಿಯಾದ ಪ್ರಶಂಸೆಯಿಂದ ದಾರಿ ತಪ್ಪುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ಹೆಸರು ಗಳಿಸಲು ಹಲವು ಅವಕಾಶಗಳು ಸಿಗಬಹುದು. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಾಣುವ ಸಾಧ್ಯತೆ ಇದೆ.





