ಇಂದು ಗುರುವಾರವಾಗಿದ್ದು, ಗುರು ಗ್ರಹದ ಪ್ರಭಾವ ಎಲ್ಲ ರಾಶಿಗಳ ಮೇಲೂ ವಿಭಿನ್ನವಾಗಿ ಬೀರುತ್ತಿದೆ. ಕೆಲವರಿಗೆ ವೃತ್ತಿ ಮತ್ತು ಹಣಕಾಸಿನಲ್ಲಿ ಅದೃಷ್ಟ ಕೈಹಿಡಿಯಲಿದ್ದರೆ, ಇನ್ನೂ ಕೆಲವರಿಗೆ ಆರೋಗ್ಯ, ಸಂಬಂಧ ಮತ್ತು ಪ್ರಯಾಣದ ವಿಚಾರದಲ್ಲಿ ಎಚ್ಚರಿಕೆ ಅಗತ್ಯವಿದೆ. ಪ್ರತಿಯೊಂದು ರಾಶಿಗೂ ಅನುಸರಿಸಬೇಕಾದ ಪ್ರಾರ್ಥನೆ ಮತ್ತು ಪರಿಹಾರಗಳೂ ಇವೆ. ಇಂದಿನ ದಿನದ ಸಂಪೂರ್ಣ ರಾಶಿಫಲವನ್ನು ತಿಳಿದುಕೊಳ್ಳಿ.
ಮೇಷ
ಇಂದು ಮೇಷ ರಾಶಿಯವರಿಗೆ ವೃತ್ತಿಯಲ್ಲಿ ಅಧಿಕಾರ ಬಲ ದೊರೆಯಲಿದೆ. ಹಿರಿಯರಿಂದ ಗೌರವ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಸ್ತ್ರೀಯರಿಗೆ ಮನಸ್ಸಿನಲ್ಲಿ ಅಸಮಾಧಾನ ಕಾಡಬಹುದು. ತಂದೆ ಮತ್ತು ಮಕ್ಕಳ ನಡುವೆ ಸಣ್ಣ ಮಟ್ಟದ ಮನಸ್ತಾಪ ಉಂಟಾಗುವ ಸಾಧ್ಯತೆ ಇರುವುದರಿಂದ ಮಾತಿನಲ್ಲಿ ಎಚ್ಚರಿಕೆ ಅಗತ್ಯ.
ವೃಷಭ
ವೃಷಭ ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲಕರ ದಿನ. ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ವಿಶೇಷವಾಗಿ ಯಂತ್ರೋದ್ಯಮ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮ ಅವಕಾಶಗಳು ಸಿಗಲಿವೆ. ಆದರೆ ವಸ್ತುಹಾನಿ ಸಂಭವಿಸಬಹುದಾದ್ದರಿಂದ ಜಾಗ್ರತೆ ಅಗತ್ಯ.
ಮಿಥುನ
ಮಿಥುನ ರಾಶಿಯವರಿಗೆ ಕಾರ್ಯಗಳಲ್ಲಿ ಅನುಕೂಲ ಸಿಗಲಿದೆ. ಆದರೆ ಸ್ತ್ರೀಯರಿಗೆ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗಬಹುದು. ಶಾಂತಿಯುತ ಸಂಭಾಷಣೆ ಮುಖ್ಯ.
ಕರ್ಕಾಟಕ
ಇಂದು ಕರ್ಕಾಟಕ ರಾಶಿಯವರಿಗೆ ಕಾರ್ಯಾನುಕೂಲದ ದಿನ. ಹೊಸ ಅವಕಾಶಗಳು ತಾನಾಗಿಯೇ ಬರಲಿವೆ. ಪೆಟ್ರೋಲಿಯಂ ಮತ್ತು ಐಟಿಐ ಕ್ಷೇತ್ರಗಳಲ್ಲಿ ಲಾಭದ ಸೂಚನೆ ಇದೆ. ಮಕ್ಕಳಿಂದ ಸಂತೋಷಕರ ಸುದ್ದಿ ದೊರೆಯಲಿದೆ. ಆದರೆ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.
ಸಿಂಹ
ಸಿಂಹ ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲಕರ ಫಲಿತಾಂಶಗಳು ದೊರೆಯಲಿವೆ. ಬುದ್ಧಿಬಲ ಹೆಚ್ಚಾಗಿ ನಿರ್ಧಾರಗಳಲ್ಲಿ ಸ್ಪಷ್ಟತೆ ಸಿಗಲಿದೆ. ಆದರೆ ಸಾಲ ಮತ್ತು ಶತ್ರುಗಳಿಂದ ಸ್ವಲ್ಪ ಬಾಧೆ ಇರಬಹುದು. ಇದು ಶೌರ್ಯ ಮತ್ತು ಸಾಹಸದ ದಿನ.
ಕನ್ಯಾ
ಕನ್ಯಾ ರಾಶಿಯವರಿಗೆ ಕಾರ್ಯಗಳಲ್ಲಿ ಅನುಕೂಲ. ಸಹೋದರರ ಸಹಕಾರದಿಂದ ಕೆಲಸಗಳು ಸುಗಮವಾಗಲಿವೆ. ಯಂತ್ರೋದ್ಯಮ ಕ್ಷೇತ್ರದಲ್ಲಿ ಯಶಸ್ಸು ಕಂಡುಬರುವುದು. ಆದರೆ ಪ್ರಯಾಣದ ವೇಳೆ ತೊಂದರೆ ಎದುರಾಗಬಹುದು. ಗಣಪತಿ ಪ್ರಾರ್ಥನೆ ಮಾಡುವುದು ಶುಭಕರ.
ತುಲಾ
ತುಲಾ ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲ ದೊರೆಯಲಿದೆ. ಸಹೋದರರಿಂದ ಬೆಂಬಲ ಸಿಗುತ್ತದೆ. ಶೌರ್ಯ ಮತ್ತು ಸಾಹಸ ಪ್ರದರ್ಶನಕ್ಕೆ ಅವಕಾಶ ಸಿಗಲಿದೆ. ಆದರೆ ಸಂಗಾತಿಯಿಂದ ಹಣಕಾಸಿನ ನಷ್ಟ ಸಂಭವಿಸಬಹುದು. ಗಂಟಲ ಸಂಬಂಧಿ ಸಮಸ್ಯೆ ಕಾಡಬಹುದು.
ವೃಶ್ಚಿಕ
ವೃಶ್ಚಿಕ ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲಕರ ದಿನ. ಸಹೋದರರ ಸಹಕಾರ ದೊರೆಯಲಿದೆ. ಸಾಹಸ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆದರೆ ಆಹಾರ ವ್ಯತ್ಯಾಸದಿಂದ ಆರೋಗ್ಯ ಸಮಸ್ಯೆ ಬರಬಹುದು. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ.
ಧನು
ಧನು ರಾಶಿಯವರಿಗೆ ಕಾರ್ಯಾನುಕೂಲ ದೊರೆಯಲಿದೆ. ಸಂಗಾತಿಯೊಂದಿಗೆ ಉತ್ತಮ ಸಾಮರಸ್ಯ ಕಾಣಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ಸಿಗುತ್ತದೆ. ಹಣಕಾಸಿನ ಲಾಭ ಇದ್ದರೂ ಚರ್ಮ ಸಂಬಂಧಿ ತೊಂದರೆ ಕಾಡಬಹುದು.
ಮಕರ
ಮಕರ ರಾಶಿಯವರಿಗೆ ಕಾರ್ಯಗಳಲ್ಲಿ ಬಲ ದೊರೆಯಲಿದೆ. ಸಂಗಾತಿಯಿಂದ ಲಾಭ ಮತ್ತು ಬೆಂಬಲ ಸಿಗಲಿದೆ. ರಾಜಕೀಯ ಅಥವಾ ಸರ್ಕಾರಿ ವಲಯದಿಂದ ಮಾನ್ಯತೆ ದೊರೆಯುವ ಸಾಧ್ಯತೆ ಇದೆ. ಕಾಲಿಗೆ ಪೆಟ್ಟು ಬೀಳುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ.
ಕುಂಭ
ಕುಂಭ ರಾಶಿಯವರಿಗೆ ಕೆಲಸದಲ್ಲಿ ಒತ್ತಡ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಸ್ವಲ್ಪ ತೊಂದರೆ ಎದುರಾಗಬಹುದು. ಬುದ್ಧಿಬಲ ಇದ್ದರೂ ವೃತ್ತಿಯಲ್ಲಿ ತೊಡಕುಗಳು ಕಾಣಿಸಿಕೊಳ್ಳಬಹುದು.
ಮೀನು
ಮೀನು ರಾಶಿಯವರಿಗೆ ವೃತ್ತಿಯಲ್ಲಿ ತೊಂದರೆಗಳಿದ್ದರೂ ಸ್ನೇಹಿತರು ಮತ್ತು ಬಂಧುಗಳ ಸಹಕಾರ ದೊರೆಯಲಿದೆ. ತಂದೆ ಮತ್ತು ಮಕ್ಕಳ ನಡುವೆ ಸಾಮರಸ್ಯ ಹೆಚ್ಚಾಗುತ್ತದೆ.





