ಇಂದು ಗುರುವಾರ. ಗುರುಗ್ರಹದ ಪ್ರಭಾವ ಹೆಚ್ಚು ಇರುವ ದಿನವೆಂದು ಜ್ಯೋತಿಷ್ಯದಲ್ಲಿ ಪರಿಗಣಿಸಲಾಗುತ್ತದೆ. ಈ ದಿನ ಆಧ್ಯಾತ್ಮಿಕ ಚಟುವಟಿಕೆಗಳು, ಹಣಕಾಸು ನಿರ್ಧಾರಗಳು, ದೈವಸ್ಮರಣೆ ಮತ್ತು ಕುಟುಂಬ ಸಂಬಂಧಗಳ ಸುಧಾರಣೆಗೆ ಉತ್ತಮವೆಂದೂ ಹೇಳಲಾಗುತ್ತದೆ. ಆದರೆ ರಾಶಿಚಕ್ರದ ಪ್ರಕಾರ ಕೆಲವು ರಾಶಿಗಳಿಗೆ ವಿಶೇಷ ಅನುಕೂಲ, ಕೆಲವು ರಾಶಿಗಳಿಗೆ ಎಚ್ಚರಿಕೆ ಅಗತ್ಯ. ಪ್ರತಿರಾಶಿಗೆ ಇಂದು ಯಾವ ಫಲಗಳು ದೊರೆಯಬಹುದು ಎಂಬುದನ್ನು ವಿವರಿಸಲಾಗಿದೆ.
ಮೇಷ
ಇಂದು ವೃತ್ತಿಜೀವನದಲ್ಲಿ ಕೆಲವು ಅಡಚಣೆಗಳು ಕಂಡುಬರಬಹುದು. ನೀವು ಹೂಡಿರುವ ಶ್ರಮಕ್ಕೆ ತಕ್ಷಣ ಫಲ ಸಿಗದ ಕಾರಣ ಅಸಮಾಧಾನ ಉಂಟಾಗಬಹುದು. ಆದರೆ ಕುಟುಂಬ ಮತ್ತು ಸ್ನೇಹಿತರ ಬೆಂಬಲ ನಿಮ್ಮ ಧೈರ್ಯವನ್ನು ಹೆಚ್ಚಿಸುತ್ತದೆ. ಸಂಗಾತಿಯೊಂದಿಗೆ ಸಾಮರಸ್ಯ ಹೆಚ್ಚಾಗುತ್ತದೆ. ಜಲ ಸಂಬಂಧಿತ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಲಾಭ ಸೂಚನೆ.
ವೃಷಭ
ಸ್ನೇಹಿತರು ಮತ್ತು ಬಂಧುಗಳಿಂದ ಉತ್ತಮ ಸಹಕಾರ ಸಿಗುತ್ತದೆ. ವೃತ್ತಿಯಲ್ಲಿ ಅನುಕೂಲಕರ ಸಂದರ್ಭಗಳು ಎದುರಾಗುತ್ತವೆ. ವ್ಯಾಪಾರಿಗಳಿಗೆ ಹೊಸ ಅವಕಾಶಗಳು ದೊರೆಯುವ ಸೂಚನೆ. ಹಿರಿಯರ ಸಲಹೆ ಇಂದು ನಿಮಗೆ ಬಹಳ ಉಪಯುಕ್ತ. ಆದರೆ ತಾಯಿ ಹಾಗೂ ಮಕ್ಕಳ ನಡುವೆ ಸ್ವಲ್ಪ ಅಸಮಾಧಾನ ಉಂಟಾಗಬಹುದು.
ಮಿಥುನ
ಬಂಧು-ಸ್ನೇಹಿತರ ಸಹಕಾರ ಉತ್ತಮ. ಬುದ್ಧಿಬಲ ಹೆಚ್ಚುತ್ತದೆ, ಹೊಸ ಕಲ್ಪನೆಗಳು ಮೂಡುತ್ತವೆ. ಆದರೆ ಸ್ತ್ರೀಯರಿಗೆ ಸ್ವಲ್ಪ ದುಃಖದ ವಾತಾವರಣ ಮತ್ತು ಒತ್ತಡದ ದಿನವಾಗಬಹುದೆಂಬ ಸೂಚನೆ. ಕೆಲಸದ ಸ್ಥಳದಲ್ಲಿ ಅನುಕೂಲಗಳು ಎದುರಾಗುತ್ತವೆ.
ಕರ್ಕ
ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳ ಸಂಪೂರ್ಣ ಬೆಂಬಲ ದೊರೆಯುತ್ತದೆ. ಸ್ನೇಹಿತರೊಂದಿಗೆ ಉತ್ತಮ ಒಡನಾಟ. ಆದರೆ ದಾಂಪತ್ಯ ಜೀವನದಲ್ಲಿ ಸ್ವಲ್ಪ ಅಸಮಾಧಾನ, ಅನಗತ್ಯ ಭಾವನಾತ್ಮಕ ತೊಂದರೆಗಳು ಎದುರಾಗಬಹುದು. ಮನಸ್ಸಿನಲ್ಲಿ ಶಾಂತಿ ಕಾಪಾಡಿ.
ಸಿಂಹ
ವೃತ್ತಿ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ. ವಸ್ತ್ರ, ಅಲಂಕಾರ, ಫ್ಯಾಷನ್ ಸಂಬಂಧಿತ ವ್ಯಾಪಾರಿಗಳಿಗೆ ವಿಶೇಷ ಲಾಭದ ದಿನ. ಆದರೆ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ.. ದಿನವನ್ನು ಧನಾತ್ಮಕಗೊಳಿಸಲು ಶಿವ ಕವಚ ಪಠಣೆ ಒಳಿತು.
ಕನ್ಯಾ
ವಿದ್ಯಾರ್ಥಿಗಳಿಗೆ ಇಂದು ವಿಶೇಷ ಅನುಕೂಲ. ವೃತ್ತಿಯಲ್ಲಿ ಸ್ಥಿರತೆ ಮತ್ತು ಉತ್ತಮ ಫಲ. ಆದರೆ ಸ್ತ್ರೀಯರಿಗೆ ಬುದ್ಧಿಮಂದತೆ, ಅಲಕ್ಷ್ಯ ಅಥವಾ ಒತ್ತಡದ ಸೂಚನೆ. ಮನಸ್ಸು ನೆಮ್ಮದಿಯಾಗಿಸಲು ಲಲಿತಾ ಸಹಸ್ರನಾಮ ಪಠಿಸುವುದು ಶುಭ.
ತುಲಾ
ಇಂದು ಕೆಲಸದಲ್ಲಿ ಉತ್ತಮ ಫಲ. ದಾಂಪತ್ಯದಲ್ಲಿ ಅನ್ಯೋನ್ಯತೆ ಹೆಚ್ಚಾಗುತ್ತದೆ. ಕುಟುಂಬಸೌಖ್ಯ ಹೆಚ್ಚುವುದು. ಆದರೆ ನೀರಿನ ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ..
ವೃಶ್ಚಿಕ
ವೃತ್ತಿಜೀವನದಲ್ಲಿ ದೊಡ್ಡ ಅನುಕೂಲ. ರಾಜಕಾರಣಿಗಳಿಗೆ ಮತ್ತು ಸರ್ಕಾರಿ ನೌಕರರಿಗೆ ವಿಶೇಷ ಲಾಭದ ಸೂಚನೆ. ಗಂಟಲು ಮತ್ತು ಕಿವಿ ಬಾಧೆ ಎದುರಾಗಬಹುದು. ಸ್ತ್ರೀಯರಿಗೆ ಸ್ವಲ್ಪ ಭೀತಿ ಅಥವಾ ಆತಂಕದ ದಿನ. ದಿನವನ್ನು ಶಾಂತಗೊಳಿಸಲು ಆಂಜನೇಯ ಪ್ರಾರ್ಥನೆ ಮಾಡಿ.
ಧನು
ವೃತ್ತಿಯಲ್ಲಿ ಸುಧಾರಣೆ. ಅಲಂಕಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಿಗೆ ಅಲೆದಾಟ ಹೆಚ್ಚಾದರೂ ಫಲ ಸಿಗುತ್ತದೆ. ಸ್ತ್ರೀಯರಿಗೆ ಖರ್ಚು ಹೆಚ್ಚಾಗುವ ದಿನ. ಕುಟುಂಬದಲ್ಲಿ ಅಸಮಾಧಾನ ಕಂಡುಬರಬಹುದು.
ಮಕರ
ಬ್ಯಾಂಕಿಂಗ್, ಫೈನಾನ್ಸ್, ಹೈನುಗಾರಿಕೆ ಕ್ಷೇತ್ರಗಳಿಗೆ ವಿಶೇಷ ಶುಭ. ದಾಂಪತ್ಯದಲ್ಲಿ ಒಡನಾಟ ಹೆಚ್ಚಾಗುತ್ತದೆ. ಆದರೆ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸದ ಸೂಚನೆ.
ಕುಂಭ
ವೃತ್ತಿಯಲ್ಲಿ ಅನುಕೂಲಕರ ಬೆಳವಣಿಗೆ. ತಂದೆ-ಮಕ್ಕಳ ನಡುವೆ ಸಾಮರಸ್ಯ ಹೆಚ್ಚಾಗುತ್ತದೆ. ಕ್ಷೇತ್ರ ದರ್ಶನ ಅಥವಾ ಯಾತ್ರೆಗೆ ಉತ್ತಮ ಸಮಯ. ಬುದ್ಧಿವಂತರ ಸನ್ನಿಧಿಯಲ್ಲಿ ಜ್ಞಾನ ಹೆಚ್ಚುತ್ತದೆ. ಸ್ತ್ರೀಯರಿಗೆ ಆರೋಗ್ಯ ವ್ಯತ್ಯಾಸ. ಅ
ಮೀನ
ಇಂದು ಅತ್ಯಂತ ಶುಭ ದಿನ. ಬುದ್ಧಿಯ ಚುರುಕು, ಕಾರ್ಯಕ್ಷಮತೆ, ಬಂಧು-ಮಿತ್ರರ ಸಹಕಾರ ಎಲ್ಲಾ ಲಭ್ಯ. ಹಾಲು-ಹೈನುಗಾರಿಕೆ ಅಥವಾ ಆಹಾರ ಕ್ಷೇತ್ರದವರಿಗೆ ಲಾಭ. ಇಷ್ಟದೇವತೆಯ ಆರಾಧನೆ ದಿನದ ಫಲಗಳನ್ನು ಮತ್ತಷ್ಟು ಉತ್ತಮಗೊಳಿಸುತ್ತದೆ.





