ಶನಿವಾರ ದಿನವು ಶನಿ ದೇವರ ಆರಾಧನೆಗೆ ಅತ್ಯಂತ ಮಹತ್ವದ್ದಾಗಿದೆ. ಈ ದಿನ ಶನಿ ದೇವರ ಕೃಪೆಯಿಂದ ಹಲವರ ಜೀವನದಲ್ಲಿ ಸುಖ-ಶಾಂತಿ, ಲಾಭ ಮತ್ತು ಪ್ರಗತಿ ಕಂಡುಬರುತ್ತದೆ. ಇನ್ನು ಕೆಲವರಿಗೆ ಜಾಗ್ರತೆ ಅಗತ್ಯವಾಗುತ್ತದೆ. ಇಂದು ನಿಮ್ಮ ರಾಶಿಗೆ ಹೇಗಿದೆ ಭಾಗ್ಯ? ನಿಮ್ಮ ದಿನ ಹೇಗೆ ಸಾಗಲಿದೆ? ವೃತ್ತಿ, ವ್ಯಾಪಾರ, ಆರೋಗ್ಯ, ಕುಟುಂಬ ಜೀವನ ಹಾಗೂ ಧಾರ್ಮಿಕ ಪರಿಹಾರಗಳೊಂದಿಗೆ ಇಲ್ಲಿದೆ ಇಂದಿನ ಸಂಪೂರ್ಣ ರಾಶಿ ಭವಿಷ್ಯ.
ಮೇಷ
ಇಂದು ಹಿರಿಯರಿಂದ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ದೊರೆಯಲಿದೆ. ಪರಿಶ್ರಮಕ್ಕೆ ತಕ್ಕ ಫಲ ಸಿಗುವ ಸಾಧ್ಯತೆ ಇದೆ. ಸ್ತ್ರೀಯರಿಗೆ ಕೆಲಸದ ಒತ್ತಡ ಹೆಚ್ಚಾಗಬಹುದು. ವೃತ್ತಿಯಲ್ಲಿ ಅನುಕೂಲಕರ ಬೆಳವಣಿಗೆ ಕಂಡುಬರುತ್ತದೆ.. ವ್ಯಾಪಾರದಲ್ಲಿ ಸಣ್ಣ ಮಟ್ಟದ ಧನಲಾಭ ಸಂಭವಿಸಬಹುದು. ಮಾನಸಿಕ ಶಾಂತಿಗಾಗಿ ಮಹಾಲಕ್ಷ್ಮೀ ದೇವಿಗೆ ಪ್ರಾರ್ಥನೆ ಮಾಡುವುದು ಉತ್ತಮ.
ವೃಷಭ
ಈ ರಾಶಿಯವರಿಗೆ ಲಾಭದಾಯಕ ದಿನ. ಹಿರಿಯರಿಂದ ಸೂಕ್ತ ಸಲಹೆ ಹಾಗೂ ಬೆಂಬಲ ಸಿಗಲಿದೆ. ಸ್ತ್ರೀಯರಿಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರುವ ಸಾಧ್ಯತೆ. ವೃತ್ತಿಯಲ್ಲಿ ಅನುಕೂಲಕರ ಫಲಿತಾಂಶ. ಮನಸ್ಸಿಗೆ ಶಾಂತಿ ದೊರಕಿಸಲು ದುರ್ಗಾ ಕವಚ ಪಠಣೆ ಶ್ರೇಷ್ಠ.
ಮಿಥುನ
ಈ ರಾಶಿಯವರಿಗೆ ಧನಲಾಭದ ಯೋಗವಿದೆ. ಆದರೆ ಬುದ್ಧಿಶಕ್ತಿ ಸ್ವಲ್ಪ ಮಂದವಾಗಬಹುದು. ಮಕ್ಕಳಿಂದ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಯಾವುದೇ ನಿರ್ಧಾರದಲ್ಲಿ ಎಚ್ಚರ ಅಗತ್ಯ. ಆತ್ಮಸ್ಥೈರ್ಯಕ್ಕಾಗಿ ಸುಬ್ರಹ್ಮಣ್ಯ ಸ್ವಾಮಿಗೆ ಪ್ರಾರ್ಥನೆ ಮಾಡಿ.
ಕರ್ಕಾಟಕ
ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ವ್ಯಾಪಾರದಲ್ಲಿ ಉತ್ತಮ ಲಾಭದ ಸೂಚನೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ದೊರೆಯಲಿದೆ. ಆದರೆ ಹಣಕಾಸು ವಿಚಾರದಲ್ಲಿ ಎಚ್ಚರವಿರಲಿ. ಮನೋಶಾಂತಿಗಾಗಿ ಮಹಾಲಕ್ಷ್ಮೀ ಆರಾಧನೆ ಸೂಕ್ತ.
ಸಿಂಹ
ಕೆಲಸಗಳಲ್ಲಿ ಅನುಕೂಲಕರ ಬೆಳವಣಿಗೆ. ಆದರೆ ಸ್ತ್ರೀಯರಿಗೆ ನಷ್ಟ ಸಂಭವಿಸುವ ಸಾಧ್ಯತೆ. ಅಪಮಾನ ಅಥವಾ ಭಯದ ವಾತಾವರಣ ಎದುರಾಗಬಹುದು. ಕಿವಿ ಹಾಗೂ ಗಂಟಲ ಸಮಸ್ಯೆ ಕಾಣಿಸಬಹುದು. ಆರೋಗ್ಯ ರಕ್ಷಣೆಗೆ ಅನ್ನಪೂರ್ಣೇಶ್ವರಿ ದೇವಿಗೆ ಪ್ರಾರ್ಥನೆ ಮಾಡಿರಿ.
ಕನ್ಯಾ
ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ಆಹಾರ ಕ್ರಮದ ವ್ಯತ್ಯಾಸದಿಂದ ಆರೋಗ್ಯ ಸಮಸ್ಯೆ ಕಾಣಿಸಬಹುದು. ಹಣಕಾಸಿನ ತೊಂದರೆ ಉಂಟಾಗಬಹುದು. ವ್ಯಾಪಾರದಲ್ಲಿ ಲಾಭ ಸಾಧ್ಯತೆ. ಅನ್ನಪೂರ್ಣೇಶ್ವರಿ ದೇವಿಯ ಆರಾಧನೆ ಒಳಿತು.
ತುಲಾ
ಶತ್ರುಬಾಧೆ ಎದುರಾಗಬಹುದು. ತಲೆನೋವು ಕಾಡಬಹುದು. ಸಹೋದರರಿಂದ ಸಹಕಾರ ಸಿಗಲಿದೆ. ಗುರುಗಳ ಮಾರ್ಗದರ್ಶನದಿಂದ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ದುರ್ಗಾ ಕವಚ ಪಠಣೆ ಮಾಡಿ.
ವೃಶ್ಚಿಕ
ಕಾರ್ಯಗಳಲ್ಲಿ ಅನುಕೂಲ ದಿನ. ದಾಂಪತ್ಯ ಜೀವನದಲ್ಲಿ ಸಾಮರಸ್ಯ. ಮಕ್ಕಳಿಂದ ಸಹಾಯ ದೊರೆಯುತ್ತದೆ. ಕಾಲಿಗೆ ಸಣ್ಣ ಗಾಯ ಸಂಭವಿಸಬಹುದು. ಸುಬ್ರಹ್ಮಣ್ಯ ಸ್ವಾಮಿಗೆ ಅಭಿಷೇಕ ಮಾಡಿಸುವುದು ಉತ್ತಮ.
ಧನು
ಇಂದು ಈ ರಾಶಿಯವರಿಗೆ ಲಾಭದಾಯಕ ದಿನ. ಕೆಲಸದಲ್ಲಿ ಯಶಸ್ಸು. ಪ್ರಯಾಣ ಸುಖಕರ. ಸಂಗಾತಿಯೊಂದಿಗೆ ಉತ್ತಮ ಸಂಬಂಧ. ಇಷ್ಟದೇವತಾ ಆರಾಧನೆ ಶ್ರೇಯಸ್ಕರ.
ಮಕರ
ಇಂದು ಈ ರಾಶಿಯವರಿಗೆ ಪ್ರಯಾಣದಲ್ಲಿ ಸುಖ. ಬಂಧು-ಮಿತ್ರರಿಂದ ಬೆಂಬಲ. ಕಾರ್ಯಗಳಲ್ಲಿ ಸ್ವಲ್ಪ ತೊಡಕು. ಗಣಪತಿಗೆ ಬೆಲ್ಲ ಸಮರ್ಪಣೆ ಮಾಡಿ.
ಕುಂಭ
ಕುಟುಂಬ ಸೌಖ್ಯ. ಹಿರಿಯರಿಂದ ಸಹಕಾರ. ವಿದ್ಯಾರ್ಥಿಗಳಿಗೆ ಉತ್ತಮ ದಿನ. ಆಲಸ್ಯ ಹೆಚ್ಚಾಗಬಹುದು. ಆಂಜನೇಯ ದೇವರಿಗೆ ಪ್ರಾರ್ಥನೆ ಮಾಡಿ.
ಮೀನು
ಕಾರ್ಯಗಳಲ್ಲಿ ಯಶಸ್ಸು. ಸ್ನೇಹಿತರು ಹಾಗೂ ಬಂಧುಗಳಿಂದ ಸಹಕಾರ. ಮಕ್ಕಳಿಂದ ತೊಂದರೆ ಸಾಧ್ಯತೆ. ಅಪಮಾನ ಎದುರಾಗಬಹುದು. ಲಲಿತಾ ಸಹಸ್ರನಾಮ ಪಠಣೆ ಶಾಂತಿ ನೀಡುತ್ತದೆ.





