ಜನ್ಮ ತಾರೀಕು ಆಧರಿಸಿ ನಿಮ್ಮ ಜನ್ಮಸಂಖ್ಯೆಯನ್ನು ಕಂಡುಹಿಡಿದು ದಿನದ ಭವಿಷ್ಯ ತಿಳಿಯಿರಿ. ಯಾವುದೇ ತಿಂಗಳಿನ ನಿರ್ದಿಷ್ಟ ತಾರೀಕುಗಳು ಒಂದೇ ಸಂಖ್ಯೆಗೆ ಸೇರಿವೆ. ಇಂದು ನಿಮ್ಮ ಜೀವನದಲ್ಲಿ ಏನೆಲ್ಲ ಬದಲಾವಣೆಗಳು ಬರಬಹುದು ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಸಲಾಗಿದೆ.
ಜನ್ಮಸಂಖ್ಯೆ 1(10,19,28) ಪ್ರಾಶಸ್ತ್ಯದ ಕೆಲಸಗಳು ಮೊದಲು ಬರಲಿ. ಆದರೆ ಸ್ನೇಹಿತರು ಅಥವಾ ಪರಿಚಯಸ್ಥರ ಸಹಾಯಕ್ಕೆ ಹೆಚ್ಚು ಸಮಯ ಕೊಡಬೇಕು. ಹಳೇ ವಾಹನ ಅಥವಾ ಸಲಕರಣೆ ಮಾರಾಟಕ್ಕಿಟ್ಟರೆ ಉತ್ತಮ ಬೆಲೆ ಸಿಗುವುದು. ದೂರದ ಊರುಗಳಿಂದ ಶುಭ ಸುದ್ದಿ ಬರುತ್ತದೆ. ಮದುವೆ ಪ್ರಯತ್ನದಲ್ಲಿರುವವರಿಗೆ ಸೂಕ್ತ ಸಂಬಂಧಗಳು ಸಿಗುವ ಯೋಗ. ನಿಧಾನಗತಿಯ ವ್ಯವಹಾರಗಳು ವೇಗ ಪಡೆಯುತ್ತವೆ. ಮುಖ್ಯ ಕಾಗದಪತ್ರಗಳ ಹುಡುಕಾಟದಲ್ಲಿ ಸಹಾಯಕ ವ್ಯಕ್ತಿ ಪರಿಚಯವಾಗುವುದು. ಮನೆ ದೇವರ ಆರಾಧನೆ ಅಥವಾ ಕಾರ್ಯಕ್ರಮಕ್ಕೆ ಬಂದವರಿಗೆ ಸಾಧ್ಯವಾದ ನೆರವು ನೀಡಿ. ಇದು ಒಳ್ಳೆಯ ಫಲ ನೀಡುವುದು.
ಜನ್ಮಸಂಖ್ಯೆ 2(11,20,29) ತಪ್ಪುಗಳಿದ್ದರೆ ಎಲ್ಲರ ಮಾತನ್ನೂ ಕೇಳಬೇಕಿಲ್ಲ. ಆದರೆ ಒತ್ತಡ ಹಾಕಿದರೆ ಸೂಕ್ತ ಉತ್ತರ ನೀಡಿ. ಕಣ್ಣೆದುರೇ ಹಣದ ಪೋಲು ತಡೆಯಲಾಗದು. ಮಕ್ಕಳ ವರ್ತನೆ, ಶಿಕ್ಷಣದಲ್ಲಿ ಹಿನ್ನಡೆ ಆತಂಕ ತರುವುದು. ಕುಟುಂಬ ಚರ್ಚೆಯಲ್ಲಿ ಮಾಹಿತಿ ಇಲ್ಲದ ವಿಷಯದಲ್ಲಿ ಅಧಿಕಾರಯುತ ಮಾತು ಬೇಡ. ಪ್ರಶಾಂತ ಸ್ಥಳಕ್ಕೆ ಹೋಗಿ ಸ್ವಲ್ಪ ಸಮಯ ಕಳೆಯಿರಿ. ಒತ್ತಡದಿಂದ ತಲೆನೋವು, ಕಣ್ಣುರಿ ಬಂದರೆ ವೈದ್ಯ ಸಂಪರ್ಕಿಸಿ.
ಜನ್ಮಸಂಖ್ಯೆ 3 (12,21,30) ಕಷ್ಟಕರ ವ್ಯಾಜ್ಯಗಳು ಸಮಾಧಾನದಿಂದ ಮುಗಿಯುವ ಸೂಚನೆ. ನಿಮ್ಮ ನಿರ್ಧಾರದಿಂದ ಯೋಜನೆಗಳು ಯಶಸ್ವಿಯಾಗುತ್ತವೆ. ರಾಜೀ-ಸಂಧಾನಕ್ಕೆ ಇತರರು ಸಹಾಯ ಮಾಡುವರು. ವಿದೇಶಿ ಶಿಕ್ಷಣ ಪ್ರವೇಶಕ್ಕೆ ಹಿಂದೆ ವಿಫಲರಾದರೆ ಇಂದು ಮಹತ್ವದ ಬೆಳವಣಿಗೆ. ಹಣಕಾಸು ಅಥವಾ ವೀಸಾ ಅಡೆತಡೆಗಳು ದೂರವಾಗುತ್ತವೆ. ಸಿನಿಮಾ ಕ್ಷೇತ್ರದವರಿಗೆ ಪ್ರಮುಖ ಆಫರ್ ಬರುವ ಯೋಗ.
ಜನ್ಮಸಂಖ್ಯೆ 4(13,22,31) ಮಕ್ಕಳಲ್ಲಿ ಹಠ, ರಂಪ ಗುಣ ಬದಲಾವಣೆ ಆತಂಕ ತರುವುದು. ಬಂಧುಗಳ ಸಾಲ ತಕ್ಷಣ ಹಿಂತಿರುಗಿಸಲು ಒತ್ತಡ. ತಂದೆ-ತಾಯಿಗೆ ತುರ್ತು ನೆರವು ಬೇಕಾಗಬಹುದು, ಸಂಪರ್ಕ ಮುಕ್ತವಾಗಿಡಿ. ಹೊಸದಾಗಿ ತಂದ ವಸ್ತುವಿನಲ್ಲಿ ದೋಷ ಕಂಡುಬರಬಹುದು.
ಜನ್ಮಸಂಖ್ಯೆ 5(14,23) ಹಿಂದಿನ ತಪ್ಪು ನಿರ್ಧಾರಗಳಿಗೆ ಪಶ್ಚಾತ್ತಾಪ. ತಂದೆಯ ಅನಾರೋಗ್ಯ ಚಿಂತೆ. ಮಕ್ಕಳ ಶಿಕ್ಷಣ/ಮದುವೆಗೆ ಉಳಿತಾಯ ಹಣ ಖರ್ಚು. ಸಾಲ ಮಾಡಿದವರು ಕೊನೆ ಕ್ಷಣದಲ್ಲಿ ನಿರಾಕರಿಸಬಹುದು. ಭರವಸೆಯಲ್ಲಿ ವ್ಯವಹಾರ ಬೇಡ. ಭಾರ ವಸ್ತು ಎತ್ತುವಾಗ ಜಾಗ್ರತೆ. ವಯೋವೃದ್ಧರಿಗೆ ಆಸ್ಪತ್ರೆ ಪ್ರವೇಶ ಅಗತ್ಯವಾಗಬಹುದು.
ಜನ್ಮಸಂಖ್ಯೆ 6 (15,24) ಎಲ್ಲ ಸರಾಗವಾಗುತ್ತದೆ ಎಂಬ ಲೆಕ್ಕ. ದಯಾ-ದಾಕ್ಷಿಣ್ಯ ಅಗತ್ಯ. ಖಡ್ಗ ಮಾತು ಸಾಧ್ಯವಿಲ್ಲ. ದೂರ ಪ್ರಯಾಣಕ್ಕೆ ತುರ್ತು, ಖರ್ಚು ಹೆಚ್ಚು. ಕ್ರೆಡಿಟ್ ಕಾರ್ಡ್, ಪಿನ್ ಜಾಗ್ರತೆ. ಸಾರ್ವಜನಿಕ ಸಾರಿಗೆಯಲ್ಲಿ ಬೆಲೆಬಾಳು ವಸ್ತುಗಳನ್ನು ಸುರಕ್ಷಿತವಾಗಿಡಿ.
ಜನ್ಮಸಂಖ್ಯೆ 7(16,25) ಹೃದಯದ ಬದಲು ಮೆದುಳಿನಿಂದ ಆಲೋಚಿಸಿ. ನೇರ ಮಾತು ಸಮಸ್ಯೆ ತರುವುದು. ಭಾವನಾತ್ಮಕ ವಿಷಯಗಳನ್ನು ಸರಿಯಾಗಿ ನಿರ್ವಹಿಸಿ. ವ್ಯವಹಾರದಲ್ಲಿ ಹೊಸ ಬಂಡವಾಳ ಅಗತ್ಯ. ಜವಾಬ್ದಾರಿಗಳಿಗೆ ಯೋಜನೆ ಮಾಡಿ. ಅತಿವಿಶ್ವಾಸದಿಂದ ಅವಮಾನ ಬರಬಹುದು. ಸೋದರರೊಡನೆ ಮನಸ್ತಾಪ ಸಾಧ್ಯ.
ಜನ್ಮಸಂಖ್ಯೆ 8(17,29) ವಿಶಾಲ ಆಲೋಚನೆ ಎಲ್ಲೆಡೆ ಸೂಕ್ತವಲ್ಲ. ನಿಮ್ಮ ವಿದ್ಯೆಗೆ ಬೇಡಿಕೆ ಹೆಚ್ಚು. ಹಿಂದಿನ ಬಾಕಿ ವಸೂಲಿಗೆ ಮಾರ್ಗ. ಸವಾಲು ಎದುರಿಸಿ ಯಶಸ್ಸು ಪಡೆಯಿರಿ. ಮನೆ/ಜಮೀನು ಮಾರಾಟಕ್ಕೆ ಉತ್ತಮ ಖರೀದಿದಾರ. ನಿದ್ರೆ ಸಮಸ್ಯೆಗೆ ಪರಿಹಾರ. ಹಿಂದೆ ಸಹಾಯ ಮಾಡಿದವರು ಈಗ ನೆರವಾಗುವರು.
ಜನ್ಮಸಂಖ್ಯೆ 9(18,27) ಒಡವೆ ಖರೀದಿ. ಮನೆ ದುರಸ್ತಿ, ಸ್ವಚ್ಛತೆ ಚರ್ಚೆ. ಆಸ್ತಿ ಮಾರಾಟ/ಖರೀದಿಗೆ ಅವಕಾಶ. ಹಣಕಾಸು ಕುಟುಂಬದಲ್ಲಿ ಆದ್ಯತೆ. ಬಾಡಿಗೆ ಮನೆ ಬದಲಾವಣೆಗೆ ತೀರ್ಮಾನ. ಮೂಗುತೂರಿಸುವವರನ್ನು ದೂರವಿಡಿ.
 
			
 
					




 
                             
                             
                             
                             
                            