ನಿಮ್ಮ ಜನ್ಮತಾರೀಖಿನಿಂದ ಲಭ್ಯವಾಗುವ ಜನ್ಮ ಸಂಖ್ಯೆಯು ನಿಮ್ಮ ಜೀವನದ ಮೇಲೆ ಗಮನಾರ್ಹ ಪ್ರಭಾವ ಬೀರುತ್ತದೆ ಎಂದು ಸಂಖ್ಯಾಶಾಸ್ತ್ರವು ನಂಬುತ್ತದೆ. ನಿಮ್ಮ ಜನ್ಮ ಸಂಖ್ಯೆಯನ್ನು ಕಂಡುಹಿಡಿಯಲು, ನಿಮ್ಮ ಜನ್ಮ ತಾರೀಖಿನ ಎಲ್ಲಾ ಅಂಕಿಗಳನ್ನು ಕೂಡಿಸಿ ಒಂದೇ ಅಂಕಿ ಬರುವವರೆಗೆ ಕೂಡಿಸಿ. ಉದಾಹರಣೆಗೆ, ಜನ್ಮ ತಾರೀಖು 15 ಆಗಿದ್ದರೆ, 1+5=6. ನಿಮ್ಮ ಜನ್ಮ ಸಂಖ್ಯೆ 6. ಅಕ್ಟೋಬರ್ 21ರ ಮಂಗಳವಾರದ ದಿನ ನಿಮ್ಮ ಜನ್ಮ ಸಂಖ್ಯೆಗೆ ಅನುಗುಣವಾಗಿ ಏನು ಘಟಿಸಬಹುದು ಎಂಬುದನ್ನು ಇಲ್ಲಿ ತಿಳಿಯೋಣ.
ಜನ್ಮ ಸಂಖ್ಯೆ 1 (ಜನ್ಮ: 1, 10, 19, 28):
ಸ್ನೇಹಿತರು ಅಥವಾ ಸಂಬಂಧಿಗಳ ಕೆಲಸಕ್ಕೆ ಸಹಾಯ ಮಾಡಲು ನೀವು ಹೊರಟಿರಬಹುದು. ಹಣದ ಉಳಿತಾಯ ಮತ್ತು ಹೂಡಿಕೆಗಳ ಬಗ್ಗೆ ಆಲೋಚಿಸುವ ದಿನ. ವಿವಾಹಿತರಲ್ಲಿ ಸಂಗಾತಿಯೊಂದಿಗೆ ಸಣ್ಣ ಅಭಿಪ್ರಾಯ ಭೇದಗಳು ತಲೆದೋರಬಹುದು, ಆದರೆ ದೊಡ್ಡ ವಿವಾದಕ್ಕೆ ಇಳಿಯಬೇಡಿ. ಆಹಾರ ಮತ್ತು ನೀರಿನ ಸ್ವಚ್ಛತೆಗೆ ಗಮನ ಕೊಡಿ, ಇಲ್ಲದಿದ್ದರೆ ಹೊಟ್ಟೆ ಸಮಸ್ಯೆ ಉಂಟಾಗಬಹುದು.
ಜನ್ಮ ಸಂಖ್ಯೆ 2 (ಜನ್ಮ: 2, 11, 20, 29):
ನಿಮ್ಮನ್ನು ಹೊಗಳುತ್ತಿದ್ದವರು ನಿಮ್ಮನ್ನು ನಿರಾಶರನ್ನಾಗಿ ಮಾಡಬಹುದು.. ವಾಹನ ಚಾಲನೆ ಮಾಡುವಾಗ ಅತ್ಯಂತ ಎಚ್ಚರಿಕೆ ವಹಿಸಿ, ಸಣ್ಣ ಅಪಘಾತದ ಅಪಾಯ ಇದೆ. ಇತರರ ಮೇಲೆ ಸಾಬೀತು ಮಾಡಲು ಹೊರಟು ನಿಮ್ಮ ಜವಾಬ್ದಾರಿಗಳನ್ನು ನಿರ್ಲಕ್ಷಿಸಬೇಡಿ. ವೇರಿಕೋಸ್ ವೇನ್ ಸಮಸ್ಯೆ ಉಲ್ಬಣಿಸಬಹುದು, ಅಗತ್ಯವಿದ್ದರೆ ವೈದ್ಯರನ್ನು ಸಂಪರ್ಕಿಸಿ.
ಜನ್ಮ ಸಂಖ್ಯೆ 3 (ಜನ್ಮ: 3, 12, 21, 30):
ನಿಮ್ಮ ಯೋಜನೆಗಳಿಗೆ ಸರಿಯಾದ ಪಾರ್ಟನರ್ ಸಿಗುವ ಶುಭ ದಿನ. ನಿರೀಕ್ಷೆ ಇರದೇ ಇದ್ದ ಒಂದು ಪ್ರಾಜೆಕ್ಟ್ ನಿಮ್ಮ ಮೇಲೆ ಬೀಳಬಹುದು. ಮನೆ ಅಥವಾ ಸ್ಥಳಾವಕಾಶದ ಹುಡುಕಾಟದಲ್ಲಿ ಅದೃಷ್ಟವಶಾತ್ ಉತ್ತಮ ಆಯ್ಕೆ ಸಿಗಬಹುದು. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ, ವಿಟಮಿನ್ ಡಿ ಕೊರತೆ ಇದ್ದರೆ ವೈದ್ಯರ ಸಲಹೆ ತೆಗೆದುಕೊಳ್ಳಿ.
ಜನ್ಮ ಸಂಖ್ಯೆ 4 (ಜನ್ಮ: 4, 13, 22, 31):
ಹಣದ ಹೊಸ ಮೂಲಗಳು ತೆರೆಯುವ ಅದೃಷ್ಟದ ದಿನ. ವಕೀಲರು, ಸಿಎಂಗಳಂತಹ ವೃತ್ತಿಪರರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ವೃತ್ತಿಜೀವನದಲ್ಲಿ ಏರಿಕೆಗೆ ಅವಕಾಶ ಒದಗಿರುವ ದಿನ. ಏಕಾಗ್ರತೆ ಮತ್ತು ಆತ್ಮವಿಶ್ವಾಸದಿಂದ ಮುನ್ನುಗ್ಗಿದರೆ ಯಶಸ್ಸು ಖಚಿತ. ಪ್ರಭಾವಿ ಜನರ ಸಂಪರ್ಕ ಸಿಗಬಹುದು.
ಜನ್ಮ ಸಂಖ್ಯೆ 5 (ಜನ್ಮ: 5, 14, 23):
ಆರಂಭಿಸಿದ ಕೆಲಸ ಅಥವಾ ಯೋಜನೆ ಅಡ್ಡಿಯಿಂದ ನಿಲ್ಲಿಸಬೇಕಾದ ಸ್ಥಿತಿ ಉಂಟಾಗಬಹುದು. ಹಣಕಾಸಿನ ವಚನಗಳನ್ನು ನೀಡಿದ್ದರೆ, ಅವುಗಳನ್ನು ಪಾಲಿಸಲು ಶ್ರಮಿಸಿ. ವಿದ್ಯಾರ್ಥಿಗಳಿಗೆ ಕ್ರೀಡೆ ಅಥವಾ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಲು ಉತ್ತಮ ಸಮಯ. ವ್ಯಾಪಾರದಲ್ಲಿ ಬದಲಾವಣೆಗಳನ್ನು ಮಾಡಬೇಕಾದ ಅವಸರ ಉಂಟಾಗಬಹುದು.
ಜನ್ಮ ಸಂಖ್ಯೆ 6 (ಜನ್ಮ: 6, 15, 24):
ಸೋದರ ಸಂಬಂಧಗಳಲ್ಲಿ ಅಸಮಾಧಾನ ಮೂಡಬಹುದು. ಖರೀದಿಸಿದ ಹೊಸ ಗ್ಯಾಜೆಟ್ ಕಾರ್ಯನಿರ್ವಹಿಸದೇ ನಿರಾಶೆ ಉಂಟುಮಾಡಬಹುದು. ವ್ಯಕ್ತಿಗತ ರಹಸ್ಯಗಳನ್ನು ನಂಬಿ ಹೇಳಿದವರು ಅದನ್ನು ಇತರರೊಂದಿಗೆ ಹಂಚಿಕೊಳ್ಳಬಹುದು. ಆದ್ದರಿಂದ ಜನರ ಮೇಲಿನ ನಂಬಿಕೆಯನ್ನು ಪುನರಾವಲೋಕನ ಮಾಡುವ ಅವಶ್ಯಕತೆ ಇದೆ.
ಜನ್ಮ ಸಂಖ್ಯೆ 7 (ಜನ್ಮ: 7, 16, 25):
ಷೇರು, ಮ್ಯೂಚುವಲ್ ಫಂಡ್ ಅಥವಾ ಚಿನ್ನದಲ್ಲಿ ಹೂಡಿಕೆ ಮಾಡಲು ಉತ್ತಮ ದಿನ. ವಿಲಾಸಿ ಕಾರು ಖರೀದಿಯ ನಿರ್ಧಾರ ಏಕಾಏಕಿ ಬಂದೇ ಬಿಡಬಹುದು. ಸಾಮಾಜಿಕ ಸ್ಥಾನಮಾನದಲ್ಲಿ ಏರಿಕೆ ಕಾಣಬಹುದು. ಸಂತಾನ ಪ್ರಾಪ್ತಿಗೆ ಶುಭ ಸುದ್ದಿ ದೊರಕಬಹುದು.
ಜನ್ಮ ಸಂಖ್ಯೆ 8 (ಜನ್ಮ: 8, 17, 26):
ಉದ್ಯೋಗದ ಅವಕಾಶಗಳು ನಿಮ್ಮೆಡೆಗೆ ಬರಲಿವೆ. ವಿದೇಶ ಪ್ರವಾಸ ಅಥವಾ ವ್ಯಾಸಂಗಕ್ಕೆ ಸಂಬಂಧಿಸಿದ ಅಡೆತಡೆಗಳು ನಿವಾರಣೆಯಾಗಲಿದೆ. ಸೋದರ ಸಂಬಂಧಿಗಳ ಸಹಾಯ ದೊರಕಬಹುದು. ಹೊಸ ವ್ಯವಹಾರ ಆರಂಭಿಸಲು ಹಣಕಾಸು ಸಹಾಯ ಲಭ್ಯವಾಗಬಹುದು.
ಜನ್ಮ ಸಂಖ್ಯೆ 9 (ಜನ್ಮ: 9, 18, 27):
ಪ್ರಾಪಂಚಿಕ ವಿಷಯಗಳಲ್ಲಿ ನಿರಾಸಕ್ತಿ ಉಂಟಾಗಬಹುದು. ಮನೆಗೆ ಸಂಬಂಧಿಸಿದ ಹೊಸ ಎಲೆಕ್ಟ್ರಾನಿಕ್ ಸಾಧನಗಳನ್ನು (ಡಿಶ್ ವಾಷರ್, ರೋಬೋಟಿಕ್ ಕ್ಲೀನರ್) ಖರೀದಿಸುವ ಆಲೋಚನೆ ಇದೆ. ಸ್ನೇಹಿತರು ತಂದ ಆಕರ್ಷಕ ಆಫರ್‌ಗಳಿಗೆ ಏಕಾಏಕಿ ಒಪ್ಪಿಕೊಳ್ಳಬೇಡಿ.