ಸಂಖ್ಯಾಶಾಸ್ತ್ರವು ವ್ಯಕ್ತಿಯ ಜನ್ಮದಿನಾಂಕದ ಆಧಾರ ಮೇಲೆ ಭವಿಷ್ಯವನ್ನು ತಿಳಿಸುವ ಪರಂಪರಾಗತ ವಿಜ್ಞಾನ. ನಿಮ್ಮ ಜನ್ಮ ತಾರೀಖಿನ ಅಂಕಿಗಳನ್ನು ಕೂಡಿಸಿ ಲಭ್ಯವಾಗುವ ಜನ್ಮಸಂಖ್ಯೆಯು, ನಿಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ. ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಅಕ್ಟೋಬರ್ 20ರ ಸೋಮವಾರದ ದಿನ ನಿಮಗೆ ಏನನ್ನು ತರಲಿದೆ ಎಂದು ತಿಳಿದುಕೊಳ್ಳೋಣ.
ಜನ್ಮಸಂಖ್ಯೆ 1 (1, 10, 19, 28ರಂದು ಜನಿಸಿದವರು) ಇಂಟೀರಿಯರ್ ಡಿಸೈನ್, ಆರ್ಟ್‌ವರ್ಕ್, ಹೋಮ್ ಥಿಯೇಟರ್ ವ್ಯವಹಾರಕ್ಕೆ ಧನಲಾಭದ ಯೋಗ, ದೀರ್ಘಕಾಲೀನ ಯೋಜನೆಗಳು ದೊರೆಯುತ್ತವೆ. ದೊಡ್ಡ ಹೆಸರುವಾಸಿಯರೊಂದಿಗೆ ಸಹಭಾಗಿತ್ವದ ಅವಕಾಶ. ಇಂದು ಸಹಕಾರದಿಂದ ಲಾಭ, ಆದರೆ ಜಾಗ್ರತೆಯಿಂದ ಮುಂದುವರಿಯಿರಿ.
ಜನ್ಮಸಂಖ್ಯೆ 2 (2, 11, 20, 29ರಂದು ಜನಿಸಿದವರು) ಪ್ರತೀಕಾರ ಮನೋಭಾವ, ಬಾಕಿಯಿದ್ದ ಕೆಲಸಗಳನ್ನು ಒಂದೊಂದಾಗಿ ಪೂರ್ಣಗೊಳಿಸಿ. ಇನ್ನೊಬ್ಬರ ನೆರವು ಕೇಳದೆ ಸ್ವಾವಲಂಬನೆಯ ದಿನ. ಸರ್ಕಾರಿ ಭೂಮಿ-ಮನೆ ದಾಖಲೆ ಕೆಲಸಗಳು ಸುಲಭ. ಯುವತಿಯರಿಗೆ ಕಿವಿಯೋಲೆ, ಫ್ಯಾಷನ್ ಖರೀದಿ ಯೋಗ. ಮೆಚ್ಚಿನವರೊಂದಿಗೆ ರೆಸ್ಟೋರೆಂಟ್‌ನಲ್ಲಿ ಊಟ, ಆನಂದದ ದಿನ, ಸ್ವತಂತ್ರತೆಯಿಂದ ಗೆಲುವು ಸಿಗುತ್ತದೆ.
ಜನ್ಮಸಂಖ್ಯೆ 3 (3, 12, 21, 30ರಂದು ಜನಿಸಿದವರು) ದೂರ ಸಾಗಿದ ಕೆಲಸಕ್ಕೆ ಹಿಂದಿನಿಂದಲೇ ವಾಪಸ್, ಸಂವಹನ ಗ್ಯಾಪ್‌ನಿಂದ ಆತ್ಮವಿಶ್ವಾಸ ಕುಗ್ಗುತ್ತದೆ. ರಾಜಕಾರಣಿಗಳಿಗೆ ಅವಮಾನ-ಆಕ್ಷೇಪಗಳು ಎದುರಾಗಲಿದೆ. ಇಂದು ಧೈರ್ಯದಿಂದ ಮುನ್ನಡೆಯಿರಿ. ಕಷ್ಟದ ನಂತರ ಬರುತ್ತದೆ ಉತ್ತೇಜನೆ.
ಜನ್ಮಸಂಖ್ಯೆ 4 (4, 13, 22, 31ರಂದು ಜನಿಸಿದವರು) ಇಷ್ಟದವರೊಂದಿಗೆ ಸಮಯ ಕಳೆಯುವಿರಿ. ಪೊಲೀಸ್-ಸೇನಾ ಸೇವಕರಿಗೆ ಬಡ್ತಿ ಸುಳಿವು. ಸಹಾಯ ಮಾಡಿದವರಿಗೆ ನೆರವು ನೀಡಿ. ಬ್ಯೂಟಿ ಪಾರ್ಲರ್‌ಗೆ ಹೋಗುವವರು ಚರ್ಮ ಆರೈಕೆಗೆ ಗಮನ ನೀಡಿ, ಗುಣಮಟ್ಟದ ಕ್ರೀಮ್ ಬಳಸಿ. ಸಾಕುಪ್ರಾಣಿಗಳ ಖರೀದಿ, ಆರೈಕೆ ಖರ್ಚು ಹೆಚ್ಚು. ಇಂದು ಸುಖ-ಸಂತೋಷದ ದಿನ, ಆರೋಗ್ಯದಲ್ಲಿ ಜಾಗ್ರತೆಯಿಂದ ಇರಿ.
ಜನ್ಮಸಂಖ್ಯೆ 5 (5, 14, 23ರಂದು ಜನಿಸಿದವರು) ಕೂದಲು-ಚರ್ಮ ಸಮಸ್ಯೆ ಉಂಟಾಗಬಹುದು. ವೈದ್ಯ ತಪಾಸಣೆ ಮಾಡಿಸಿಕೊಳ್ಳಿ. ಬ್ರ್ಯಾಂಡೆಡ್ ಬಟ್ಟೆ-ವಾಚ್-ಶೂ ಖರೀದಿಗೆ ಕ್ರೆಡಿಟ್ ಕಾರ್ಡ್ ಬಳಸಿ. ರೆಸಾರ್ಟ್-ಹೋಮ್ ಸ್ಟೇ ಉದ್ಯಮಕ್ಕೆ ಆದಾಯ ಇಳಿಕೆ. ಬ್ಯಾಂಕ್ ಸಾಲಕ್ಕೆ ಓಡಾಟ. ಸೋದರರಿಗೆ ನೆರವು, ಸರ್ಕಾರಿ ಅಧಿಕಾರಿಗಳಿಗೆ ಹೆಚ್ಚು ಜವಾಬ್ದಾರಿ. ಮಾನಸಿಕ ಒತ್ತಡ ನಿಯಂತ್ರಿಸಿ..
ಜನ್ಮಸಂಖ್ಯೆ 6 (6, 15, 24ರಂದು ಜನಿಸಿದವರು) ವೃತ್ತಿಪರರಿಗೆ ಸನ್ಮಾನ ದೊರಕಲಿದೆ. ಶಾಲೆ-ಕಾಲೇಜು ಆಡಳಿತಕ್ಕೆ ಪದೋನ್ನತಿ ಸುಳಿವು. ಬ್ಯಾಂಕ್ ಸಾಲ ಮಂಜೂರು. ಪುಸ್ತಕ ಪ್ರಕಾಶನ-ಮುದ್ರಣ-ಡಿಜಿಟಲ್ ಮಾರ್ಕೆಟಿಂಗ್‌ಗೆ ಲಾಭ ಹೆಚ್ಚು. ಪಶುಸಾಕಣೆ ವಿಸ್ತರಣೆ. ಇಂದು ಉನ್ನತಿ-ಧನ ಲಾಭದ ದಿನ, ಆರೋಗ್ಯಕ್ಕೆ ಒತ್ತು ನೀಡಿ.
ಜನ್ಮಸಂಖ್ಯೆ 7 (7, 16, 25ರಂದು ಜನಿಸಿದವರು) ಮನೆಯ ಕಿರಿಯರ ಮಾತುಗಳಿಂದ ಆತಂಕ-ಕೋಪ ಬರಲಿದೆ. ಬಜೆಟ್ ಮೀರಿದ ವೆಚ್ಚ ಆಗಲಿದೆ. ದಬ್ಬಾಳಿಕೆಯಿಂದ ಮನಸ್ಸಿಗೆ ನೋವು. ಕಷ್ಟಕಾಲದ ಉಳಿತಾಯ ಹಣವನ್ನು ಇನ್ನೊಬ್ಬರಿಗೆ ಕೊಡಬೇಕು. ಇಂದು ಜಾಗ್ರತೆಯಿಂದ ಇರಿ.
ಜನ್ಮಸಂಖ್ಯೆ 8 (8, 17, 26ರಂದು ಜನಿಸಿದವರು) ಹೊಸ ವ್ಯಾಪಾರಕ್ಕೆ ಹೂಡಿಕೆಯಿಂದ ಲಾಭ. ಹೆಚ್ಚು ಆದಾಯಕ್ಕೆ ಇನ್ನೊಂದು ಬಿಜನೆಸ್ ಚರ್ಚೆ. ಸೈಟ್-ಮನೆ ಸಾಲ ಮುಂದುವರಿಯಿರಿ. ಹಳೇ ವಾಹನ ವಿನಿಮಯಕ್ಕೆ ಅಡ್ವಾನ್ಸ್! ಚೀಟಿ ಹಣ ಹಿಂದಕ್ಕೆ. ಬೆನ್ನು ನೋವಿಗೆ ಎಚ್ಚರಿಕೆ. ಇಂದು ವ್ಯಾಪಾರ-ಖರೀದಿಯ ದೊಡ್ಡ ದಿನ.
ಜನ್ಮಸಂಖ್ಯೆ 9 (9, 18, 27ರಂದು ಜನಿಸಿದವರು) ಮನಸಾರ ಕೆಲಸಕ್ಕೆ ಕಷ್ಟ! ಪ್ರೇಮಿಗಳಿಗೆ ಬೇಸರ. ಹಳೇ ಬಿಜನೆಸ್ ಸಮಸ್ಯೆ, ಜಿಎಸ್‌ಟಿ-ಸರ್ಕಾರಿ ವಿಷಯಗಳಲ್ಲಿ ತೊಂದರೆ. ಕಾಂಡಿಮೆಂಟ್-ಜ್ಯೂಸ್ ಅಂಗಡಿಗೆ ರಸ್ತೆ ಕೆಲಸದಿಂದ ಆದಾಯ ಇಳಿಕೆ. ಸಾಲಕ್ಕೆ ಸಣ್ಣ ಅಡ್ಡಿಗಳು. ಮುಂಜಾಗ್ರತೆಯಿಂದ ಇರಿ.