ಸಂಖ್ಯಾಶಾಸ್ತ್ರವು ವ್ಯಕ್ತಿತ್ವದ ಒಳಗಿನ ಗುಣಗಳನ್ನು ಕಂಡುಹಿಡಿಯುವ ಹಳೆಯ ವಿಜ್ಞಾನವಾಗಿದೆ. ನಿಮ್ಮ ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 15, 2025ರ ಮಂಗಳವಾರದ ದಿನಭವಿಷ್ಯವನ್ನು ಇಲ್ಲಿ ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿಯಲು, ನಿಮ್ಮ ಜನ್ಮದಿನಾಂಕದ ಅಂಕಿಗಳನ್ನು ಒಟ್ಟುಗೂಡಿಸಿ ಒಂದಂಕಿಯ ಸಂಖ್ಯೆಗೆ ತಂದರೆ ಸಾಕು (ಉದಾಹರಣೆಗೆ: 19 = 1+9 = 10 = 1+0 = 1).
ಜನ್ಮಸಂಖ್ಯೆ 1 (1, 10, 19, 28ನೇ ತಾರೀಕು ಹುಟ್ಟಿದವರು)
ಹಣಕಾಸಿನ ವಿಷಯಗಳಿಗೆ ಒತ್ತು ನೀಡಲಿದ್ದೀರಿ. ಭವಿಷ್ಯದ ಯೋಜನೆಗಳನ್ನು ರೂಪಿಸುವಿರಿ. ಸ್ನೇಹಿತರು ಅಥವಾ ಸಂಬಂಧಿಕರಿಂದ ನಿರುತ್ಸಾಹದ ಮಾತುಗಳು ಬಂದರೂ, ಕೆಲಸಗಳನ್ನು ಛಲದಿಂದ ಮುಗಿಸಲು ನಿರ್ಧರಿಸುವಿರಿ. ವಿದೇಶದಲ್ಲಿ ವ್ಯಾಪಾರ ನಡೆಸುವವರಿಗೆ ಆದಾಯದಲ್ಲಿ ಏರಿಕೆಯ ಸಾಧ್ಯತೆ ಕಾಣುತ್ತದೆ. ಕಾಲುನೋವಿನ ಸಮಸ್ಯೆಗೆ ಸೂಕ್ತ ಚಿಕಿತ್ಸೆ ದೊರೆಯಬಹುದು. ಬ್ರ್ಯಾಂಡೆಡ್ ಉತ್ಪನ್ನಗಳಾದ ಬಟ್ಟೆ, ಗ್ಯಾಜೆಟ್‌ಗಳು, ಶೂ, ವಾಚ್ ಖರೀದಿಗೆ ಒಲವು ತೋರಲಿದ್ದೀರಿ. ಸಾಧ್ಯವಾದರೆ ವಿಷ್ಣು ಸಹಸ್ರನಾಮ ಪಠಣ ಅಥವಾ ಶ್ರವಣ ಮಾಡುವುದು ಶುಭವಾಗಲಿದೆ.
ಜನ್ಮಸಂಖ್ಯೆ 2 (2, 11, 20, 29ನೇ ತಾರೀಕು ಹುಟ್ಟಿದವರು)
ನಿಮ್ಮ ಸಾಮರ್ಥ್ಯದಲ್ಲಿ ವಿಶ್ವಾಸವಿರಲಿ, ಆದರೆ ಅತಿಯಾದ ಆತ್ಮವಿಶ್ವಾಸದಿಂದ ದೂರವಿರಿ. ಪ್ರಮುಖ ಪ್ರಯಾಣ ಇದ್ದರೆ, ಸಮಯಕ್ಕಿಂತ ಮುಂಚಿತವಾಗಿ ತಲುಪಲು ಯತ್ನಿಸಿ, ಇಲ್ಲವಾದರೆ ಒತ್ತಡ ಉಂಟಾಗಬಹುದು. ಸ್ವಂತಕ್ಕೆ ತೆಗೆದುಕೊಂಡ ವಾಹನವನ್ನು ಇತರರಿಗೆ ತಾತ್ಕಾಲಿಕವಾಗಿ ನೀಡುವಂತಹ ಸಂದರ್ಭ ಬರಬಹುದು. ಆತುರದಲ್ಲಿ ಮಾಡಿದ ಕೆಲಸಗಳಲ್ಲಿ ತಪ್ಪುಗಳಾಗಿ, ಮತ್ತೆ ಸರಿಪಡಿಸಬೇಕಾಗಬಹುದು. ಒಲ್ಲದ ಮನಸ್ಸಿನಿಂದ ಮಾಡಿದ ಕೆಲಸಗಳೂ ತೊಂದರೆಗೆ ಕಾರಣವಾಗಬಹುದು.
ಜನ್ಮಸಂಖ್ಯೆ 3 (3, 12, 21, 30ನೇ ತಾರೀಕು ಹುಟ್ಟಿದವರು)
ನಿಮ್ಮ ಸ್ವಂತ ಜಗತ್ತಿನಲ್ಲಿ ಶಾಂತಿಯಿಂದ ಇರಲು ಬಯಸುವಿರಿ. ಬಹುಕಾಲದಿಂದ ಯೋಚಿಸಿದ್ದ ಸ್ಥಳಕ್ಕೆ ಭೇಟಿ ನೀಡಬಹುದು ಅಥವಾ ಮುಖ್ಯ ವ್ಯಕ್ತಿಯೊಬ್ಬರನ್ನು ಭೇಟಿಯಾಗಬಹುದು. ಪುಸ್ತಕ ಓದುವುದು, ಸಂಗೀತ ಕೇಳುವುದು, ಧ್ಯಾನ ಮಾಡುವುದರಿಂದ ಹೊಸ ಕೆಲಸಗಳಿಗೆ ಉತ್ಸಾಹ ದೊರೆಯಲಿದೆ. ಕಳೆದುಹೋಗಿದ್ದ ದಾಖಲೆಗಳು ಒಡನೆಯೇ ಸಿಗಬಹುದು.