ಜನ್ಮಸಂಖ್ಯೆ ನಿಮ್ಮ ಜೀವನದ ಚಲನೆ, ಮನಸ್ಥಿತಿ, ನಿರ್ಧಾರಗಳು ಮತ್ತು ದೈನಂದಿನ ಘಟನೆಗಳ ಮೇಲೆ ಸೂಕ್ಷ್ಮವಾಗಿ ಪ್ರಭಾವ ಬೀರುತ್ತದೆ ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ. ನೀವು ಯಾವುದು ಜನ್ಮಸಂಖ್ಯೆ ಎಂಬುದು ತಿಳಿಯಲು ನಿಮ್ಮ ಜನ್ಮ ದಿನಾಂಕದ ಅಂಕೆಗಳನ್ನು ಸೇರಿಸಿ. ಉದಾಹರಣೆಗೆ, 10 = 1+0 = 1. ಇಲ್ಲಿ ಡಿಸೆಂಬರ್ 5ರ ನಿಮ್ಮ ಜನ್ಮಸಂಖ್ಯೆ ಆಧಾರಿತ ದಿನಭವಿಷ್ಯ ನೀಡಲಾಗಿದೆ.
ಜನ್ಮಸಂಖ್ಯೆ 1 (1, 10, 19, 28)
ಇಂದು ನಿಮ್ಮ ಜೀವನದಲ್ಲಿ ಹೊಸ ಶಕ್ತಿ ಹರಿದು ಬರುತ್ತದೆ. ಪ್ರವಾಸ ಯೋಗ ಕಂಡುಬರುತ್ತಿದ್ದು, ನೀವು ಬಹಳ ದಿನಗಳಿಂದ ಯೋಚಿಸುತ್ತಿದ್ದ ಪ್ರಯಾಣಕ್ಕೆ ಸಿದ್ಧತೆ ಆರಂಭವಾಗುವ ಸಾಧ್ಯತೆ ಇದೆ. ಮನೆ ಬಜೆಟ್ ಹಾಗೂ ಹಣಕಾಸಿನ ನಿರ್ಧಾರಗಳಲ್ಲಿ ಗೃಹಿಣಿಯರ ಸಲಹೆ ಕುಟುಂಬದ ಪ್ರಶಂಸೆಗೆ ಪಾತ್ರವಾಗಲಿದೆ. ಪ್ರೀತಿ–ಮದುವೆ ವಿಚಾರದಲ್ಲಿ ಗೊಂದಲಗಳು ನಿವಾರಣೆ ಕಾಣಿಸುತ್ತದೆ. ಬೇಳೆ–ಕಾಳುಗಳ ಹೋಲ್‌ಸೇಲ್ ವ್ಯಾಪಾರಿಗಳು ವಿಸ್ತರಣೆಯ ಯೋಜನೆ ರೂಪಿಸುವಿರಿ. ಬ್ಯಾಂಕ್ ಅಥವಾ NBFCಗಳಿಂದ ಹಣಕಾಸಿನ ಸಹಾಯ ದೊರಕುವ ಅವಕಾಶವಿದೆ.
ಜನ್ಮಸಂಖ್ಯೆ 2 (2, 11, 20, 29)
ನಿಮ್ಮ ಸಂವಹನ ವಲಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಇಂದು ಸೂಕ್ತ ದಿನ. ಪರಿಸ್ಥಿತಿ ನಿಮ್ಮ ವಿರುದ್ಧ ಇದ್ದರೂ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಯಾವುದೇ ಮಾಹಿತಿ ಅಥವಾ ನಿರ್ಧಾರವನ್ನು ನಾಲ್ಕು ಬಾರಿ ಪರಿಶೀಲಿಸಿ. ಬದಲಾಯಿಸಲು ಸಾಧ್ಯವಿಲ್ಲದ ಪರಿಸ್ಥಿತಿಗಳ ಮೇಲೆ ಶ್ರಮ ವ್ಯರ್ಥ ಮಾಡಬೇಡಿ. ಮನಸ್ಸಿಗೆ ಶಾಂತಿ ಸಿಗುವ ಸ್ಥಳಕ್ಕೆ ಭೇಟಿ ನೀಡಿ. ವಕೀಲರು ಹಾಗೂ ಕಾನೂನು ಕ್ಷೇತ್ರದಲ್ಲಿರುವವರಿಗೆ ಸಂಜೆ ನಂತರ ಶುಭ ಬೆಳವಣಿಗೆಗಳು ಎದುರಾಗುತ್ತವೆ.
ಜನ್ಮಸಂಖ್ಯೆ 3 (3, 12, 21, 30)
ಇಂದು ನಿಮ್ಮ ಅಂದಾಜುಗಳು ನಿಜವಾಗಲಾರಂಭಿಸುತ್ತವೆ. ಫೈನಾನ್ಸ್ ಕನ್ಸಲ್ಟೆಂಟ್‌ಗಳಿಗೆ ಅತ್ಯಂತ ಲಾಭದಾಯಕ ದಿನ.
ವ್ಯಾಪಾರಿಗಳಿಗೆ ಸಂಗಾತಿಗಳ ಬೆಂಬಲ ಸಿಗಲಿದೆ. ಸಂಬಂಧಗಳಲ್ಲಿ ಉಂಟಾಗಿದ್ದ ಮನಸ್ತಾಪಗಳು ಕಡಿದು ಹೋಗುತ್ತವೆ. ಪ್ರೀತಿಯಲ್ಲಿರುವವರು ಮದುವೆ ಪ್ರಸ್ತಾಪವನ್ನು ಮನೆಯಲ್ಲಿ ಒಪ್ಪಿಸಿಕೊಳ್ಳುವ ಯೋಗ. ವಿದೇಶ ಯೋಚನೆ ಹೊಂದಿರುವವರಿಗೆ ಹೊಸ ದಾರಿ ತೆರೆದುಕೊಳ್ಳಬಹುದು. ಬೆನ್ನುನೋವಿದ್ದಲ್ಲಿ ನಿರ್ಲಕ್ಷ್ಯ ಮಾಡದೇ ಚಿಕಿತ್ಸೆ ಪಡೆಯಿರಿ. ಹಿರಿಯರ ಸಲಹೆ ಅನುಸರಿಸಿದರೆ ಲಾಭ.
ಜನ್ಮಸಂಖ್ಯೆ 4 (4, 13, 22, 31)
ಭವಿಷ್ಯದ ಬಗ್ಗೆ ಅನಿಶ್ಚಿತತೆ ಕಾಡುವ ಸಾಧ್ಯತೆ ಇದೆ. ಖಾಸಗಿ ಉದ್ಯೋಗದಲ್ಲಿರುವವರಿಗೆ ಉತ್ತೇಜನ ಕೊರತೆಯಾಗಬಹುದು. ಕೆಲವರನ್ನು ಭೇಟಿ ಮಾಡುವುದಕ್ಕೂ ಹಿಂಜರಿಯುವಿರಿ. ನಿಮ್ಮ ಮನೋಬಲವನ್ನು ಉಳಿಸಿಕೊಂಡರೆ ದಿನ ಸುಗಮವಾಗುತ್ತದೆ. ಸೆಕೆಂಡ್ ಹ್ಯಾಂಡ್ ವಾಹನ ವ್ಯವಹಾರಿಗಳಿಗೆ ದಾಖಲೆ–ಪತ್ರಗಳಲ್ಲಿ ರಾಜಿ ಮಾಡಿಕೊಳ್ಳುವ ಅಪಾಯ ಬೇಡ. ಸ್ನೇಹಿತರ ಒತ್ತಾಯಕ್ಕೆ ಒಲಿದು ತಪ್ಪು ನಿರ್ಧಾರ ಮಾಡಿದರೆ ಪೊಲೀಸ್ ಸ್ಟೇಷನ್‌ಗೆ ಸುತ್ತು ಕೊಡುವ ಪರಿಸ್ಥಿತಿ ತಲೆದೋರುತ್ತದೆ.
ಜನ್ಮಸಂಖ್ಯೆ 5 (5, 14, 23)
ಇಂದು ನಿಮ್ಮ ಕಮ್ಯುನಿಕೇಶನ್ ಸೊಗಸಾಗಿ ಕೆಲಸ ಮಾಡಲಿದೆ. ಎಷ್ಟೇ ಕಷ್ಟಕರ ಕ್ಲೈಂಟ್ ಆಗಿದ್ದರೂ ನೀವು ಸುಲಭವಾಗಿ ನಿರ್ವಹಿಸುವಿರಿ. ಯುವತಿಯರಿಗೆ ಫ್ಯಾಷನ್ ಶಾಪಿಂಗ್ ಯೋಗ. ಗಾಸಿಪ್ ಬರಹಗಾರರಿಗೆ ದೊಡ್ಡ ಮಾಹಿತಿ ದೊರೆತು ಹೆಸರು–ಗೌರವ ಹೆಚ್ಚಾಗಬಹುದು. ಕಾರ್ಯವ್ಯವಹಾರಗಳ ಅಪಾಯಿಂಟ್‌ಮೆಂಟ್‌ಗಳನ್ನು ತಪ್ಪಿಸಿಕೊಳ್ಳಬೇಡಿ.
ನಿಮ್ಮ ಕಷ್ಟದ ಸಮಯದಲ್ಲಿ ಸಹಾಯ ಮಾಡಿದವರಿಗೂ ಇಂದು ನೆರವು ಮಾಡುವ ಅವಕಾಶ ಸಿಗುತ್ತದೆ. ಅದನ್ನು ತಪ್ಪಿಸಿಕೊಳ್ಳಬೇಡಿ.
ಜನ್ಮಸಂಖ್ಯೆ 6 (6, 15, 24)
ಯಾರಾದರೂ ಅತಿಯಾಗಿ ಹೊಗಳುತ್ತಿದ್ದರೆ ಎಚ್ಚರಿಕೆಯಿಂದ ಇರಬೇಕಾದ ದಿನ. ಉಚಿತವಾಗಿ ಕೆಲಸ ಮಾಡಲು ಹೋಗಬೇಡಿ. ಕುಟುಂಬ–ಸಂಬಂಧಿಗಳ ಸಮಾರಂಭಗಳಿಗೆ ಹೋಗುವವರು ಹಣಕಾಸಿನ ಚರ್ಚೆಯಿಂದ ದೂರವಿರಿ. ಬೇಡವಾದ ಅಭಿಪ್ರಾಯ ಹೇಳುವುದನ್ನು ತಪ್ಪಿಸಿ. ಹೊಸ ಮಂಚ, ಹಾಸಿಗೆ, ದಿಂಬು, ಹೊದಿಕೆ ಖರೀದಿಯ ಸಾಧ್ಯತೆ. ಸಣ್ಣ ಪ್ರವಾಸ ಯೋಜನೆ ರೂಪಿಸುವ ಸಾಧ್ಯತೆ ಇದೆ.
ಜನ್ಮಸಂಖ್ಯೆ 7 (7, 16, 25)
ಏಕಾಏಕಿ ಆಲೋಚನೆಗಳಲ್ಲಿ ದೊಡ್ಡ ಬದಲಾವಣೆ. ಆದಾಯ ಹೆಚ್ಚಿಸಬೇಕೆಂಬ ಬಲವಾದ ಚಿಂತನೆ. ಕಂಫರ್ಟ್ ಝೋನ್‌ನಿಂದ ಹೊರಬರುವುದು ಇಂದು ಸುಲಭವಾಗುತ್ತದೆ. ಶುಲ್ಕ ಕೇಳುವುದರಲ್ಲಿ ಇರುವ ಹಿಂಜರಿಕೆ ದೂರಾಗುತ್ತದೆ. ತೂಕ ಇಳಿಸಲು ಕಠಿಣ ನಿಯಮಗಳು ಆರಂಭವಾಗಬಹುದು. ದಿನಗೂಲಿ ನೌಕರರಿಗೆ ಸರ್ಕಾರಿ ಸೌಲಭ್ಯ ದೊರೆತೀತು. ಇದಕ್ಕಾಗಿ ಉನ್ನತ ಹುದ್ದೆಯ ವ್ಯಕ್ತಿಯಿಂದ ನೆರವು ದೊರೆಯಲಿದೆ. ಮಾತನಾಡುವಾಗ ಪದಗಳ ಆಯ್ಕೆ ಎಚ್ಚರ.
ಜನ್ಮಸಂಖ್ಯೆ 8 (8, 17, 26)
ಸಣ್ಣ ಪ್ರಾಜೆಕ್ಟ್‌ಗಳು ಬಂದರೂ ಅವನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸಿ. ಇದರಿಂದ ಭವಿಷ್ಯದಲ್ಲಿ ದೊಡ್ಡ ಅವಕಾಶಗಳು ತೆರೆದುಕೊಳ್ಳುತ್ತವೆ. ಉದ್ಯೋಗದಲ್ಲಿ ನಿಮಗೆ ಸಿಕ್ಕ ಸೌಲಭ್ಯವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಿ. ಇತರರಿಗೆ ನಿಮ್ಮ ನಿರ್ಧಾರ ಸ್ವಾರ್ಥವಾಗಿ ಕಾಣಬಹುದು. ಆದರೆ ಫಲಿತಾಂಶ ಎಲ್ಲರಿಗೂ ಒಳ್ಳೆಯದು ಎಂಬುದನ್ನು ತೋರಿಸಿರಿ.
ಆಸ್ತಿ ವ್ಯವಹಾರಕ್ಕೆ ಹೋಗುವವರು ಮನೆ ದೇವರ ಸ್ಮರಣೆ ಮಾಡಿ ಹೊರಡುವುದು ಒಳಿತು.
ಜನ್ಮಸಂಖ್ಯೆ 9 (9, 18, 27)
ಇಂದು ಸುಲಭ ಕೆಲಸಗಳನ್ನು ಮೊದಲಿಗೆ ಮುಗಿಸಿ, ನಂತರ ಮುಖ್ಯ ಕಾರ್ಯಗಳಿಗೆ ಮನಸ್ಸು ಒಗ್ಗೂಡಿಸಿ.
ಪ್ಲಾನಿಂಗ್‌ಗೆ ಹೆಚ್ಚು ಸಮಯ ಕೊಡಿ, ಇದು ಯಶಸ್ಸಿಗೆ ನೆರವಾಗುತ್ತದೆ. ಇತರರ ಪ್ರಶಂಸೆಯನ್ನು ತಲೆಗೆ ಏರಿಸಿಕೊಳ್ಳಬೇಡಿ. ಸವಾಲಿನ ಕೆಲಸಗಳನ್ನು ಕೈಗೆತ್ತಿಕೊಳ್ಳುವಾಗ ಸಂಪನ್ಮೂಲಗಳ ಲೆಕ್ಕಾಚಾರ ಸರಿ ಮಾಡಿಕೊಳ್ಳಿ. ಆರೋಗ್ಯದಲ್ಲಿ ಅಪರೂಪದ ಉತ್ತಮ ಬೆಳವಣಿಗೆಗಳ ಯೋಗ. ನಿಮ್ಮ ಕೈ ಸೇರದ ಹಣಕ್ಕೆ ಮುಂಚಿತವಾಗಿ ಯಾವುದೇ ಕಮಿಟ್‌ಮೆಂಟ್ ಮಾಡಬೇಡಿ.





