ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 05, 2025 ರ ದಿನವು ಹೇಗಿರಲಿದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ. (ಯಾವುದೇ ತಿಂಗಳಿನ 1, 10, 19, 28 ರಂದು ಜನಿಸಿದವರ ಜನ್ಮಸಂಖ್ಯೆ 1)
ಜನ್ಮಸಂಖ್ಯೆ 1 (1, 10, 19, 28)
ಮನೆ ಕೆಲಸಗಳಿಗೆ ಹೆಚ್ಚು ಸಮಯ ಮೀಸಲಿಡಲಿದ್ದೀರಿ. ಮಕ್ಕಳ ಶಿಕ್ಷಣ ಪ್ರಗತಿಗಾಗಿ ಕೆಲವು ತ್ಯಾಗಗಳನ್ನು ಮಾಡಲು ಸಿದ್ಧರಾಗಲಿದ್ದೀರಿ. ಹೆಣ್ಣುಮಕ್ಕಳಿಗೆ ತವರು ಮನೆಯಿಂದ ಉಡುಗೊರೆ ದೊರೆಯುವ ಸಾಧ್ಯತೆ ಇದೆ. ಹೂವು ಮತ್ತು ಹಣ್ಣಿನ ವ್ಯಾಪಾರ ಮಾಡುವವರಿಗೆ ಆದಾಯದಲ್ಲಿ ಏರಿಕೆ ಕಂಡುಬರಲಿದೆ ಮತ್ತು ಹೊಸ ಗ್ರಾಹಕರು ದೊರೆಯುವ ಯೋಗವಿದೆ. ಆರೋಗ್ಯದ ವಿಚಾರದಲ್ಲಿ, ಆಸ್ತಮಾ ಅಥವಾ ಕಫದಂತಹ ಸಮಸ್ಯೆಗಳು ಉಲ್ಬಣಗೊಳ್ಳಬಹುದು. ವೈದ್ಯರನ್ನು ಬದಲಾಯಿಸುವ ಮೊದಲು ಆಲೋಚಿಸಿ. ವಿವಾಹ ವಯಸ್ಕರಿಗೆ ಮನಸ್ಸಿಗೆ ಒಪ್ಪುವ ವಧು/ವರ ಸಿಗಲಿದ್ದಾರೆ. ದೊಡ್ಡ ಭರವಸೆ ನೀಡುವ ಮುನ್ನ ಅದನ್ನು ಪೂರೈಸುವ ಸಾಮರ್ಥ್ಯವನ್ನು ಪರಿಶೀಲಿಸಿಕೊಳ್ಳಿ.
ಜನ್ಮಸಂಖ್ಯೆ 2 (2, 11, 20, 29)
ಇದು ಭಾವನಾತ್ಮಕವಾಗಿ ಕಠಿಣ ದಿನವಾಗಿದ್ದು, ಬಹಳ ವರ್ಷಗಳ ಬಾಂಧವ್ಯ ಇರುವ ವ್ಯಕ್ತಿ ಅಥವಾ ಸಂಸ್ಥೆಯಿಂದ ದೂರವಾಗಬೇಕಾದ ಪರಿಸ್ಥಿತಿ ಸೃಷ್ಟಿಯಾಗಬಹುದು. ಮುಂದೆ ಏನು ಮಾಡಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗಲಿದೆ. ಮುಖ್ಯ ಕೆಲಸಗಳನ್ನು ಗಡುವಿನೊಳಗೆ ಮುಗಿಸುವುದು ಅತಿ ಮುಖ್ಯ. ಮರೆವಿನಿಂದಾಗಿ ಸಣ್ಣ ಪ್ರಮಾಣದ ತೊಂದರೆ ಅನುಭವಿಸಬಹುದು. ಮಾಂಸಾಹಾರ ಸೇವನೆಯಿಂದ ದೂರವಿರುವುದು ಉತ್ತಮ. ಕಲಾವಿದರಿಗೆ ದೂರದ ಊರುಗಳಿಂದ ಕಾರ್ಯಕ್ರಮಗಳಿಗೆ ಆಹ್ವಾನ ದೊರೆಯಲಿದ್ದು, ಭಾಗವಹಿಸುವುದಾಗಿ ಮಾತು ನೀಡುವ ಮೊದಲು ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿಕೊಳ್ಳಿ.
ಜನ್ಮಸಂಖ್ಯೆ 3 (3, 12, 21, 30)
ದೇಹದಲ್ಲಿನ ಪ್ರಮುಖ ಅಂಶಗಳಾದ ವಿಟಮಿನ್, ಹಿಮೋಗ್ಲೋಬಿನ್ ಕೊರತೆ ತಿಳಿಯಲು ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಲಿದ್ದೀರಿ. ಬ್ಯಾಂಕ್ ಉದ್ಯೋಗಿಗಳು ಹಣಕಾಸು ವ್ಯವಹಾರಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಿ. ಕುಟುಂಬ ಸದಸ್ಯರ ಸಣ್ಣ ತಪ್ಪುಗಳನ್ನು ದೊಡ್ಡದು ಮಾಡಿ, ಕೂಗಾಟಕ್ಕೆ ಇಳಿಯಬೇಡಿ. ಸೆಕೆಂಡ್ ಹ್ಯಾಂಡ್ ಕಾರು ಅಥವಾ ಸ್ಕೂಟರ್ ಖರೀದಿಗೆ ಪ್ರಯತ್ನ ಮಾಡುತ್ತಿರುವವರಿಗೆ ಉತ್ತಮ ಕಂಡೀಷನ್ ಇರುವ ವಾಹನ ದೊರೆಯುವ ಯೋಗವಿದೆ. ನೀವು ನೀಡಿದ ಸಾಲವನ್ನು ವಸೂಲಿ ಮಾಡಲು ದೃಢವಾದ ಧ್ವನಿಯಲ್ಲಿ ಕೇಳಲಿದ್ದೀರಿ.
ಜನ್ಮಸಂಖ್ಯೆ 4 (4, 13, 22, 31)
ಹೊಸ ಬಟ್ಟೆ, ವಾಚ್, ಶೂಗಳಂತಹ ವಸ್ತುಗಳ ಖರೀದಿ ಮಾಡುವಿರಿ. ಪ್ರಯಾಣ ಅಥವಾ ಸಮಾರಂಭಗಳಿಗೆ ತಯಾರಿ ನಡೆಸಲಿದ್ದೀರಿ. ಇಷ್ಟಪಡುವ ವ್ಯಕ್ತಿಯ ಬಳಿ ಪ್ರೇಮ ನಿವೇದನೆ ಮಾಡುವ ಸಾಧ್ಯತೆ ಇದೆ. ಇತರರು ನಿಮ್ಮಲ್ಲಿ ಹೇಳಿದ ರಹಸ್ಯಗಳನ್ನು ಚರ್ಚೆ ಮಾಡಬೇಡಿ. ಸ್ನೇಹಿತರಿಗೆ ನಿಮ್ಮ ಸಹಾಯದ ಅಗತ್ಯ ಬರಲಿದೆ. ಹೊಸ ಉದ್ಯೋಗ ಜೀವನ ಆರಂಭಿಸಲು ಬಯಸುವವರಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಇಂಟರ್ ವ್ಯೂ ಬರುವ ಸಾಧ್ಯತೆ ಹೆಚ್ಚಿದೆ. ಸಿದ್ಧತೆಗೆ ಸಮಯದ ಕೊರತೆ ಇರಬಹುದು, ಆದರೆ ಆತ್ಮವಿಶ್ವಾಸದಿಂದ ಎದುರಿಸಿದರೆ ಉತ್ತಮ ಫಲಿತಾಂಶ ಸಿಗುವುದು ಖಚಿತ.
ಜನ್ಮಸಂಖ್ಯೆ 5 (5, 14, 23)
ಅತಿಯಾದ ಒತ್ತಡದಲ್ಲಿಯೂ ಅದ್ಭುತ ಫಲಿತಾಂಶಗಳನ್ನು ಪಡೆಯಲಿದ್ದೀರಿ. ವೃತ್ತಿ ಅಥವಾ ವ್ಯವಹಾರದಲ್ಲಿ ಜೊತೆಗಿರುವವರಿಗೆ ಅನುಕೂಲಗಳನ್ನು ಮಾಡಿಕೊಡಲಿದ್ದೀರಿ. ಬಹಳ ಸಮಯದಿಂದ ನಿರೀಕ್ಷಿಸುತ್ತಿದ್ದ ಅವಕಾಶ ನಿಮ್ಮತ್ತ ಬರುವ ಸುಳಿವು ದೊರೆಯಲಿದೆ. ಮಾನಸಿಕವಾಗಿ ಗಟ್ಟಿಯಾಗಿ ಇರಲಿದ್ದು, ಇತರರಿಗೆ ಕಷ್ಟ ಎನಿಸಿದ ವಿಷಯಗಳನ್ನು ಅರ್ಥ ಮಾಡಿಕೊಳ್ಳುವಿರಿ. ಫ್ಲ್ಯಾಟ್ ಅಥವಾ ಸೈಟ್ ಖರೀದಿಗಾಗಿ ಹುಡುಕಾಟ ನಡೆಸುವವರಿಗೆ ಮನಸ್ಸಿಗೆ ಒಪ್ಪುವ ಸ್ಥಳ ದೊರೆಯುವ ಯೋಗವಿದೆ. ಆಧ್ಯಾತ್ಮಿಕ ವ್ಯಕ್ತಿಯೊಡನೆ ಒಡನಾಟದಿಂದ ಮನಸ್ಸಿಗೆ ಸಮಾಧಾನ ದೊರೆಯಲಿದೆ.
ಜನ್ಮಸಂಖ್ಯೆ 6 (6, 15, 24)
ನಿಮಗೆ ಇಷ್ಟವಾದದ್ದನ್ನು ಖರೀದಿ ಮಾಡಬೇಕು ಎಂಬ ಚಡಪಡಿಕೆ ಇರಲಿದೆ. ಸ್ಥಿರವಾದ ಆದಾಯ ಗಳಿಸುವ ಪ್ರಯತ್ನಗಳು ಗುರಿಯತ್ತ ಸಾಗಲಿವೆ. ಶಿಕ್ಷಕರಿಗೆ ನಿಯೋಜನೆ ಮೇರೆಗೆ ದೊಡ್ಡ ಜವಾಬ್ದಾರಿ ನಿರ್ವಹಿಸಬೇಕಾಗಿ ಬರಬಹುದು, ಇದರಿಂದ ನಿಮಗೆ ಹೆಸರು ಬರುವ ಸಾಧ್ಯತೆ ಇದೆ. ಸಿನಿಮಾ ರಂಗದಲ್ಲಿ ಅವಕಾಶಕ್ಕಾಗಿ ಪ್ರಯತ್ನಿಸುತ್ತಿರುವವರ ಆತ್ಮವಿಶ್ವಾಸ ಹೆಚ್ಚಾಗಲಿದೆ. ಸ್ನೇಹಿತರು ನಿಮಗೆ ದೊಡ್ಡ ಸಹಾಯವನ್ನು ಮಾಡಲಿದ್ದಾರೆ. ಯಾವುದೇ ಕೆಲಸದಲ್ಲಿ ಮನಸಾರೆ ತೊಡಗಿಸಿಕೊಳ್ಳಿ, ಸ್ಪರ್ಧೆಯ ಬಗ್ಗೆ ಚಿಂತಿಸಬೇಡಿ. ಮೈಗ್ರೇನ್ ಸಮಸ್ಯೆ ಇರುವವರು ಔಷಧೋಪಚಾರದ ಕಡೆಗೆ ಗಮನ ನೀಡಿ.
ಜನ್ಮಸಂಖ್ಯೆ 7 (7, 16, 25)
ದಿನದ ಆರಂಭ ಅಷ್ಟೇನೂ ಚೆನ್ನಾಗಿರುವುದಿಲ್ಲ, ಹಾಗಾಗಿ ಎಂದಿನ ಉತ್ಸಾಹ ಇರುವುದಿಲ್ಲ. ಉದ್ಯೋಗ ಅಥವಾ ವೃತ್ತಿಗೆ ಸಂಬಂಧಿಸಿದಂತೆ ಅನಿರೀಕ್ಷಿತ ಫಲಿತಾಂಶಗಳು ಮನಸ್ಸಿಗೆ ವಿಚಲನ ಉಂಟು ಮಾಡಬಹುದು. ಸ್ವಲ್ಪ ದೂರದ ಸ್ಥಳಕ್ಕೆ ತೆರಳಿ ಏಕಾಂಗಿಯಾಗಿ ಸಮಯ ಕಳೆಯಲು ಮನಸ್ಸಾಗಲಿದೆ. ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕಾಗದಪತ್ರಗಳ ವ್ಯವಹಾರವು ನಿಮ್ಮ ಪ್ರಭಾವ-ಪ್ರಯತ್ನದಿಂದ ಸುಗಮವಾಗಿ ನಡೆಯಲಿದೆ. ಅಡುಗೆ ಕಾಂಟ್ರಾಕ್ಟ್ ಶುರು ಮಾಡಿದವರಿಗೆ ಹೆಚ್ಚಿನ ಹಣ ಹೂಡುವ ಅಗತ್ಯ ಕಂಡುಬರಲಿದೆ. ಕೌಟುಂಬಿಕ ವಿಚಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ಧೈರ್ಯದ ಕೊರತೆ ಇರಬಹುದು.
ಜನ್ಮಸಂಖ್ಯೆ 8 (8, 17, 26)
ಉತ್ತಮ ಪ್ಲಾನಿಂಗ್ ಮತ್ತು ಪರಿಶ್ರಮದ ಸಂಯೋಜನೆಯಿಂದ ಅತ್ಯುತ್ತಮ ಫಲಿತಾಂಶ ದೊರೆಯಲಿದೆ. ದಂಪತಿಗಳ ಮಧ್ಯೆ ಸಂತೋಷಕರ ಸಮಯ ಕಳೆಯುವ ಯೋಗವಿದೆ. ನಿಮ್ಮ ಬಳಿ ಇರುವ ಹಣಕ್ಕೆ ಮಾತ್ರ ಸೀಮಿತವಾಗಿರಿ, ಕಡಿಮೆ ಬಡ್ಡಿಯ ಆಕರ್ಷಣೆಯಿದ್ದರೂ ಸಾಲ ತೆಗೆದುಕೊಳ್ಳಬೇಡಿ. ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ತಮ್ಮ ಜವಾಬ್ದಾರಿಯನ್ನು ಬೇರೆಯವರಿಗೆ ವರ್ಗಾವಣೆ ಮಾಡದೆ, ಸಣ್ಣ ಕೆಲಸವನ್ನೂ ನೀವೇ ಪೂರ್ಣಗೊಳಿಸುವುದು ಉತ್ತಮ. ತಾಯಿ ಅಥವಾ ತಾಯಿ ಸಮಾನರ ಆರೋಗ್ಯ ಚಿಂತೆಗೆ ಕಾರಣವಾಗಬಹುದು, ಫಾಲೋಅಪ್ ಚೆಕಪ್‌ಗಳನ್ನು ತಪ್ಪಿಸಬೇಡಿ. ಹೆಚ್ಚಿನ ರಿಸ್ಕ್ ಇರುವ ಹೂಡಿಕೆಯಿಂದ ದೂರವಿರುವುದು ಒಳ್ಳೆಯದು.
ಜನ್ಮಸಂಖ್ಯೆ 9 (9, 18, 27)
ನಿಮ್ಮ ಕೆಲಸ-ಜವಾಬ್ದಾರಿಗೆ ಮಾತ್ರ ಸೀಮಿತವಾಗಿರಿ. ಭಾವನಾತ್ಮಕವಾಗಿ ಇತರರಿಗೆ ನೆರವು ನೀಡಲು ಮುಂದಾದರೆ ಆನಂತರ ಕಷ್ಟಪಡುವ ಸಾಧ್ಯತೆ ಇದೆ. ಉಳಿತಾಯಕ್ಕಾಗಿ ಖರೀದಿಸಿದ್ದ ಚಿನ್ನ ಅಥವಾ ಬೆಳ್ಳಿಯನ್ನು ಮಾರಿ ಸದ್ಯದ ಹಣಕಾಸಿನ ಅಗತ್ಯ ಪೂರೈಸಿಕೊಳ್ಳಲು ಆಲೋಚಿಸಲಿದ್ದೀರಿ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದವರಿಗೆ ಲಾಭ ಸಿಗಲಿದೆ, ಪ್ರಾಫಿಟ್ ಬುಕ್ಕಿಂಗ್ ನಿರ್ಧಾರ ಮಾಡುವಿರಿ. ತಾಯಿ ಜೊತೆಗಿನ ಮನಸ್ತಾಪ ನಿವಾರಣೆಯಾಗಲು ಅವಕಾಶ ದೊರೆಯಲಿದೆ. ನೀರಿನ ಮಾರಾಟ ವ್ಯವಹಾರದಲ್ಲಿ ತೊಡಗಿರುವವರು ವಿಸ್ತರಣೆಗೆ ಸಿದ್ಧರಾಗಲಿದ್ದಾರೆ. ಹಲ್ಲು ನೋವಿನ ಸಮಸ್ಯೆ ತೀವ್ರವಾಗಿದ್ದಲ್ಲಿ ಸೂಕ್ತ ವೈದ್ಯೋಪಚಾರ ಪಡೆದುಕೊಳ್ಳಿ.





