ಮೇಷ ರಾಶಿ
ಇಂದು ನೀವು ಮಂಗಲಕರವಾದ ಕಾರ್ಯಗಳಲ್ಲಿ ತೊಡಗುವಿರಿ. ಆದರೆ, ಮನೆಯಲ್ಲಿಯೇ ಇರುವುದರಿಂದ ಮನೆಯವರ ಮಾತುಗಳು ಕಿರಿಕಿರಿ ಎನಿಸಬಹುದು. ನಿಮ್ಮ ಮಾತುಗಳು ಜೊತೆಗಾರರಿಗೆ ಮನ ನೋವುಂಟುಮಾಡುವಂತಿರಬಹುದು. ನಡೆದಾಡಲು ಇಷ್ಟವಿಲ್ಲದಿದ್ದರೂ, ಕಂಕಣಬಲಕ್ಕಾಗಿ ಯಾತ್ರೆ ಕೈಗೊಳ್ಳುವಿರಿ. ಯಾರೋ ನಿಮ್ಮನ್ನು ದಿಕ್ಕು ತಪ್ಪಿಸಿ ವೇಗವನ್ನು ಕಡಿಮೆ ಮಾಡಿಸಬಹುದು. ಕಾರಣಾಂತರಗಳಿಂದ ಕಾರ್ಯದ ಮೇಲಿನ ಗಮನ ಕಡಿಮೆಯಾಗಬಹುದು. ಆದರೆ, ಅಂತಃಕರಣದ ಒಪ್ಪಿಗೆಯೊಂದಿಗೆ ಕಾರ್ಯಗಳನ್ನು ಮಾಡುವಿರಿ.
ವೃಷಭ ರಾಶಿ
ನೀವು ಹಿಂದೆ ಕೊಟ್ಟಿರುವ ಸಂಪತ್ತು ತಾನಾಗಿಯೇ ಮರಳಿ ಬರಲಿದೆ. ದಾಂಪತ್ಯ ಸುಖವಾಗಿರಲು ಇಬ್ಬರೂ ಸಮಾನವಾಗಿ ಪ್ರಯತ್ನಿಸಬೇಕು. ನಿಮ್ಮನ್ನು ಅರ್ಥಮಾಡಿಕೊಳ್ಳಲು ಜನರು ಪ್ರಯತ್ನಿಸುವರಾದರೂ, ನಿಮ್ಮ ನಡೆಯು ಸುಲಭಕ್ಕೆ ತಿಳಿಯದು. ಇಂದು ನೀವು ಐಷಾರಾಮಿಯಾಗಿ ಸಮಯ ಕಳೆಯಲು ಇಷ್ಟಪಡುವಿರಿ. ಸಂಗಾತಿಯು ಕೆಲವು ವಿಷಯಗಳಿಗೆ ವಾದ ಮಾಡಬಾರದೆಂದು ಬಯಸಿದರೂ, ನೀವು ಹಳೆಯ ವಿಚಾರಗಳನ್ನು ಮತ್ತೆ ಕೆದಕಬಹುದು. ಅಮೂಲ್ಯ ವಸ್ತುವನ್ನು ಖರೀದಿಸುವುದಕ್ಕಿಂತ ಅದನ್ನು ಕಾಪಾಡಿಕೊಳ್ಳುವುದೇ ಹೆಚ್ಚು ಮುಖ್ಯ ಎನ್ನುವುದನ್ನು ಮರೆಯಬೇಡಿ.
ಮಿಥುನ ರಾಶಿ
ಬಂಧುಗಳ ಮಾತುಗಳು ಕಹಿಯಾಗಿ ಕಂಡು ಮನಸ್ಸು ಕುಗ್ಗಬಹುದು. ಸಂಗಾತಿಯ ಅಸಂಬದ್ಧ ಮಾತುಗಳಿಂದ ಬೇಸರ ಉಂಟಾಗಬಹುದು. ಆದರೂ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಿಯಿಂದ ಭಾಗವಹಿಸುವಿರಿ. ದುಷ್ಟಶಕ್ತಿಯ ತೊಂದರೆಯ ಅನುಮಾನ ಕಾಡಬಹುದು. ತಿದ್ದಿಕೊಳ್ಳಬೇಕಾದ ಅಂಶಗಳನ್ನು ಗಮನಿಸುವುದು ಮುಖ್ಯ. ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರವಿರುವುದು ಕಷ್ಟವಾಗಬಹುದು. ಆಲಸ್ಯದಿಂದ ಅನಿವಾರ್ಯ ಕಾರ್ಯಗಳನ್ನೂ ಮಾಡಲು ಮನಸ್ಸಾಗದು.
ಕರ್ಕಾಟಕ ರಾಶಿ
ಹಳೆಯ ಸಿಟ್ಟನ್ನು ನೆನಪಿಸಿಕೊಂಡು ದ್ವೇಷವನ್ನು ಸಾಧಿಸುವ ಕೆಲಸ ಮಾಡಬೇಡಿ. ಹಳೆಯ ವಾಹನವನ್ನು ಮಾರಾಟ ಮಾಡುವ ಆಲೋಚನೆ ಬರಬಹುದು. “ಎಲ್ಲವೂ ಗೊತ್ತಿದೆ” ಎಂಬ ಅಹಂಕಾರ ತೋರಿಸಬೇಡಿ. ಉದ್ಯೋಗದ ನಿಮಿತ್ತ ವಿದೇಶ ಪ್ರಯಾಣ ಸಂಭವಿಸಬಹುದು. ನಿಮ್ಮ ಪರೀಕ್ಷೆಯನ್ನು ನೀವೇ ಮಾಡಿಕೊಳ್ಳುವುದು ಉತ್ತಮ. ಸಹೋದ್ಯೋಗಿಗಳು ಉನ್ನತ ಅಧಿಕಾರದ ಆಸೆಯನ್ನು ಹುಟ್ಟುಹಾಕಬಹುದು. ಆದರೆ, ಕಾನೂನಾತ್ಮಕ ವಿಚಾರಗಳು ಅರ್ಥವಾಗದಿರಬಹುದು.
ಸಿಂಹ ರಾಶಿ
ಶತ್ರುಗಳು ನಿಮ್ಮ ಏಳ್ಗೆಯನ್ನು ಸಹಿಸದೆ ತೊಂದರೆ ಕೊಡಬಹುದು. ಮನೆಯ ಹಿರಿಯರ ಸೇವೆಯನ್ನು ಮಾಡುವಿರಿ. ಸರ್ಕಾರಿ ಉದ್ಯೋಗಿಗಳಿಗೆ ಕಛೇರಿಯಲ್ಲಿ ಕಿರಿಕಿರಿ ಉಂಟಾಗಬಹುದು. ಕಂಟಕವನ್ನು ಲಘುವಾಗಿ ಕಾಣಬೇಡಿ. ಬಂಧುಗಳ ಮಾತಿನಿಂದ ಬೇಸರವಾದರೂ ಅದನ್ನು ಮುಖಕ್ಕೆ ತೋರಿಸಿಕೊಳ್ಳುವುದಿಲ್ಲ. ಇಂದು ಸ್ಥೈರ್ಯ ಕಳೆದುಕೊಳ್ಳುವ ಸಾಧ್ಯತೆಯಿದೆ. ಆದರೆ, ನಿಮ್ಮಲ್ಲಿರುವ ವಿದ್ಯೆಯೇ ನಿಮ್ಮನ್ನು ಯಾವ ಸಂದರ್ಭಕ್ಕೂ ಹೆದರಿಸದು.
ಕನ್ಯಾ ರಾಶಿ
ಹೊಸ ಕೆಲಸಗಳನ್ನು ಹುಡುಕಲು ಪ್ರಯತ್ನಿಸಿ. ಸಂಗಾತಿಯಿಂದ ಅಪಮಾನವಾಗಬಹುದು. ಆಸ್ತಿಯನ್ನು ಕಳೆದುಕೊಳ್ಳುವ ಸ್ಥಿತಿ ಬರಬಹುದು. ಆಗದ ಕೆಲಸಕ್ಕೆ ಕೈಹಾಕಬೇಡಿ. ಅಧಿಕಾರಿಗಳಿಂದ ತೊಂದರೆಯಾಗುವ ಸಾಧ್ಯತೆಯಿದೆ. ಇಂದು ಲೆಕ್ಕಪತ್ರವನ್ನು ಪರಿಶೀಲನೆಗೆ ಸಲ್ಲಿಸಬೇಕಾಗಬಹುದು. ನೇರ ಮಾತುಗಳು ನಿಮಗೆ ಒಪ್ಪಿಗೆಯಾಗದಿರಬಹುದು. ಅಧಿಕ ಲಾಭಕ್ಕಾಗಿ ಯೋಜನೆ ರೂಪಿಸುವುದು ಒಳ್ಳೆಯದು.
ತುಲಾ ರಾಶಿ
ಎಲ್ಲರೊಂದಿಗೆ ಸಲುಗೆಯಿಂದಿರುವ ನಿಮ್ಮ ಬಗ್ಗೆ ಕೆಲವು ಅಪವಾದದ ಮಾತುಗಳು ಕೇಳಿಬರಬಹುದು. ಹೊಸ ಉದ್ಯೋಗ ಹುಡುಕುತ್ತಿದ್ದರೆ, ಅದು ಸಿಗುವ ಸಾಧ್ಯತೆಯಿದೆ. ಸಿಟ್ಟೇ ನಿಮ್ಮ ಶತ್ರುವಾಗಿ ಸಕಲ ಕಾರ್ಯಗಳಿಗೂ ವಿಘ್ನ ತರಬಹುದು. ಮಾಡುವ ಕೆಲಸದಲ್ಲಿ ನಿಧಾನವಾಗಿ ಜಯ ಸಿಗಲಿದೆ. ಮಿತ್ರರಿಂದ ಧನದ ವಿಚಾರದಲ್ಲಿ ಮೋಸವಾಗಬಹುದು. ಇಂದು ಏಕಾಂಗಿಯಾಗಿ ಸುತ್ತಲು ಇಷ್ಟವಾಗುವುದು. ನಂಬಿಕೆಯನ್ನು ಉಳಿಸಿಕೊಳ್ಳುವುದು ಕಷ್ಟವಾಗಬಹುದು.
ವೃಶ್ಚಿಕ ರಾಶಿ
ಜೀವನದಲ್ಲಿ ಉತ್ತಮ ಗುರಿಯಿಡಲು ಯಾರಾದರೂ ಸಹಾಯ ಮಾಡುವರು. ದೀರ್ಘಾವಧಿಯ ಶಿಕ್ಷೆಯಿಂದ ಮುಕ್ತರಾಗಿ ಸ್ವಾತಂತ್ರ್ಯ ಪಡೆಯುವಿರಿ. ಇಂದು ನಿಮ್ಮೊಳಗೆ ವಿಚಿತ್ರ ಆಲೋಚನೆಗಳು ಹುಟ್ಟಿ ನಿಮಗೇ ಆಶ್ಚರ್ಯವಾಗಬಹುದು. ಬಂಧುಗಳ ಮನೆಗೆ ಭೇಟಿ ನೀಡಲಿದ್ದೀರಿ. ಕೆಲವು ವಿಷಯಗಳನ್ನು ಬಿಡಲು ಸಾಧ್ಯವಾಗದು. ದಿನದ ಹೆಚ್ಚಿನ ಸಮಯವನ್ನು ಏಕಾಂತದಲ್ಲಿ ಕಳೆಯಲು ಬಯಸಬಹುದು.
ಧನು ರಾಶಿ
ನಿಮ್ಮ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವವರಿದ್ದಾರೆ. ಮಕ್ಕಳಿಂದ ಧನಸಹಾಯ ಪಡೆಯುವಿರಿ. ದೇವರಲ್ಲಿ ದೃಢ ಭಕ್ತಿಯಿಡುವುದು ಒಳ್ಳೆಯದು. ನಿಮ್ಮ ಆಲೋಚನೆಗಳು ಕಾರ್ಯರೂಪಕ್ಕೆ ಬರಬಹುದು. ವಾಹನ ಖರೀದಿಸಲೇಬೇಕೆಂಬ ಗಟ್ಟಿ ನಿರ್ಧಾರ ಮಾಡಿಕೊಳ್ಳುವಿರಿ. ಒತ್ತಡಕ್ಕೆ ಮಣಿದು ಇಷ್ಟವಿಲ್ಲದ ಕೆಲಸ ಮಾಡಬೇಕಾಗಬಹುದು. ಬಂಧುಗಳಿಂದಾದ ಮನಸ್ತಾಪವನ್ನು ಮರೆಯಲಾರಿರಿ.
ಮಕರ ರಾಶಿ
ಉಪಕಾರ ಮಾಡುವುದು ನಿಮಗೆ ಖುಷಿ ನೀಡುತ್ತದೆ. ಮಕ್ಕಳಿಂದ ಸಂತೋಷ ಸಿಗಲಿದೆ. ನಿಮ್ಮ ಮಾತಿಗೆ ವಿರೋಧ ಉಂಟಾಗಬಹುದು. ಹೇಳಬೇಕಾದುದನ್ನು ಸ್ಪಷ್ಟವಾಗಿ ಹೇಳಿ. ನೆರೆಹೊರೆಯವರ ಭೂಮಿ ವಿಚಾರದಲ್ಲಿ ಮನಸ್ತಾಪವಾಗಬಹುದು. ಕೆಲಸದ ಒತ್ತಡ ಅತಿಯಾಗಬಹುದು; ಸಮಾಧಾನ ಚಿತ್ತದಿಂದ ಸ್ವೀಕರಿಸಿ. ತಪ್ಪುಗಳಿಂದ ಪಶ್ಚಾತ್ತಾಪವಾಗಬಹುದು. ಕೃಷಿ ವ್ಯವಹಾರದಲ್ಲಿ ಲಾಭ ತರುವಂತೆ ಯೋಚನೆ ಮಾಡುವಿರಿ.
ಕುಂಭ ರಾಶಿ
ಸಂಪಾದನೆಗೆ ನೂರು ದಾರಿಗಳಿದ್ದರೂ, ನಿಮ್ಮ ಆಯ್ಕೆ ಸ್ಪಷ್ಟವೂ ಯೋಗ್ಯವೂ ಆಗಿರಬೇಕು. ಆಲಸ್ಯವು ಒಮ್ಮೆ ನಿಮ್ಮನ್ನು ರಕ್ಷಿಸಬಹುದು. ಸಾಮರ್ಥ್ಯದ ಬಗ್ಗೆ ಅಪನಂಬಿಕೆ ಇರುತ್ತದೆ. ನಿಮ್ಮ ಬಗ್ಗೆ ಋಣಾತ್ಮಕ ಮಾತುಗಳು ಕೇಳಿಬರಬಹುದು. ಅದನ್ನು ಧನಾತ್ಮಕವಾಗಿ ಬದಲಾಯಿಸುವ ಛಲವಿರಲಿ. ಪರಿಸ್ಥಿತಿಗಳು ನಿಮ್ಮ ಅನುಕೂಲಕ್ಕೆ ತಕ್ಕಂತೆ ಇರದು. ಭವಿಷ್ಯದ ಯೋಜನೆಗೆ ಇನ್ನಷ್ಟು ಸ್ಪಷ್ಟತೆ ಬೇಕಿದೆ. ಮನೆಯವರೊಂದಿಗೆ ಸಂತೋಷದಿಂದ ಸಮಯ ಕಳೆಯುವಿರಿ.
ಮೀನ ರಾಶಿ
ಇರುವುದರಲ್ಲೇ ಖುಷಿಪಡುವುದು ಉತ್ತಮ. ಸಂಗಾತಿಯನ್ನು ಮುಚ್ಚಿಡಲು ಹೋಗಿ ಸೋಲುವಿರಿ. ಆರೋಗ್ಯ ಕಾಪಾಡಿಕೊಳ್ಳಲು ದಿನವನ್ನು ಸಮಯೋಚಿತವಾಗಿ ರೂಪಿಸಿಕೊಳ್ಳಿ. ದುಸ್ಸಾಹಸ ಒಳ್ಳೆಯದಲ್ಲ; ಅನಾಹುತದ ಭೀತಿ ಕಾಡಬಹುದು. ವಿದ್ಯಾರ್ಥಿಗಳು ಓದಿನ ಕಡೆ ಗಮನ ಕೊಟ್ಟರೂ, ಅದು ತಲೆಗೆ ಹೋಗದು. ಅತಿಯಾದ ನಂಬಿಕೆಯು ಹುಸಿಯಾದ ಕಾರಣ ಪಶ್ಚಾತ್ತಾಪ ಪಡುವಿರಿ. ನಿಮ್ಮೊಳಗೆ ಹೇಳಿಕೊಳ್ಳಲಾಗದ ಭಯವು ಕಾಡಬಹುದು.





