ಶಾಲಿವಾಹನ ಶಕೆ ೧೯೪೭, ವಿಶ್ವಾವಸು ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಕೃಷ್ಣ ತ್ರಯೋದಶಿ
ಇಂದಿನ ಪಂಚಾಂಗ
- ತಿಥಿ: ಕೃಷ್ಣ ತ್ರಯೋದಶಿ (ಸಂಜೆ ೪:೫೮ರವರೆಗೆ)
- ನಕ್ಷತ್ರ: ಸ್ವಾತಿ (ರಾತ್ರಿ ೧೧:೪೭ರವರೆಗೆ)
- ಯೋಗ: ಪ್ರೀತಿ
- ಕರಣ: ಗರ, ವಾಣಿಜ
- ವಾರ: ಮಂಗಳವಾರ
- ರಾಹುಕಾಲ: ಬೆಳಗ್ಗೆ ೭:೪೬ – ೯:೧೨
- ಯಮಗಂಡ: ಬೆಳಗ್ಗೆ ೯:೧೩ – ೧೦:೩೯
- ಗುಳಿಕಕಾಲ: ಮಧ್ಯಾಹ್ನ ೧೨:೦೫ – ೧:೩೧
ಗೌರವಕ್ಕೆ ದಕ್ಕೆ ಮಾಡುವವರ ಮೇಲೆ ಕೆಲವು ರಾಶಿಯವರು ತೀವ್ರ ವಾಕ್ಪ್ರಹಾರ ಮಾಡುವ ಸಾಧ್ಯತೆ ತುಂಬಾ ಹೆಚ್ಚು. ಅದರಲ್ಲೂ ಸಿಂಹ ಮತ್ತು ವೃಶ್ಚಿಕ ರಾಶಿಯವರು ಇಂದು ಫೈರ್ ಮೋಡ್‌ನಲ್ಲೇ ಇರ್ತಾರೆ.
ಮೇಷ ರಾಶಿ :
ಭಾವನಾತ್ಮಕವಾಗಿ ಸಂವೇದನಾಶೀಲರಾಗುತ್ತೀರಿ. ಆದರೆ ಒಳಗಿನ ಜ್ಞಾನ ಹೆಚ್ಚಾಗುತ್ತದೆ. ಕಲಾತ್ಮಕ ಕೆಲಸಗಳಿಗೆ ಅತ್ಯುತ್ತಮ ದಿನ. ಸ್ಥಿರಾಸ್ತಿ ಖರೀದಿಯಲ್ಲಿ ಸ್ವಲ್ಪ ತೊಂದರೆ ಬರಬಹುದು. ಮಕ್ಕಳ ಆಗಮನದಿಂದ ಮನೆ ತುಂಬಾ ಸಂತೋಷ. ಹಣದ ಹರಿವು ಸುಧಾರಣೆಯಾಗಬಹುದು. ಮಿತ್ರರು & ಸಹೋದ್ಯೋಗಿಗಳಿಂದ ಭಾರೀ ಬೆಂಬಲ. ಹೊಸ ಯೋಜನೆ ಶುರು ಮಾಡಲು ಉತ್ತಮ ದಿನ.
ಮಿಥುನ ರಾಶಿ :
ನಿರ್ಧಾರಗಳು ನಿಮ್ಮದೇ, ಸ್ವತಂತ್ರರಾಗಿರುತ್ತೀರಿ. ಹಿತಶತ್ರುಗಳು ತೊಂದರೆ ಕೊಡ್ತಾರೆ, ಆದರೆ ಸಾಮಾಜಿಕ ಕಾರ್ಯದಲ್ಲಿ ಮೆಚ್ಚುಗೆ. ಅಧಿಕಾರಿಗಳ ವಿಶ್ವಾಸ ಗಳಿಸಿ ಹೆಚ್ಚಿನ ಸ್ಥಾನ. ಅನಿರೀಕ್ಷಿತ ರಾಜಕಾರಣಿಗಳ ಭೇಟಿ.
ಕರ್ಕಾಟಕ ರಾಶಿ:
ಸಾಹಸ ಮತ್ತು ಪ್ರಯಾಣಕ್ಕೆ ಉತ್ತಮ ದಿನ. ಪರಾಧೀನ ಸ್ಥಿತಿಯಿಂದ ಮಾನಸಿಕ ಒತ್ತಡ. ಸ್ತ್ರೀಯರಿಗೆ ಸ್ವಲ್ಪ ಅನಾರೋಗ್ಯ. ಪ್ರೀತಿಪಾತ್ರರಿಂದ ಉಡುಗೊರೆ ಬರುವ ಸಾಧ್ಯತೆ. ತಾಸ್ತಿ ವಿಚಾರದಲ್ಲಿ ಎಚ್ಚರ.
ಸಿಂಹ ರಾಶಿ:
ಅಧಿಕಾರಿಗಳು ಅಥವಾ ಯಾರಾದರೂ ಗೌರವಕ್ಕೆ ದಕ್ಕೆ ಮಾಡಿದರೆ ತೀವ್ರ ಪ್ರತಿಕ್ರಿಯೆ ನೀಡುತ್ತೀರಿ. ಕೋಪ ನಿಯಂತ್ರಿಸಿ. ವಾಹನ ಎಚ್ಚರಿಕೆ, ವಿದೇಶದಿಂದ ಆಹ್ವಾನ ಬರಬಹುದು. ಹಣದ ಹೂಡಿಕೆಗೆ ಲಾಭದ ಸೂಚನೆ.
ಕನ್ಯಾ ರಾಶಿ:
ತಾಳ್ಮೆ ಮತ್ತು ಸಮನ್ವಯದಿಂದ ದೊಡ್ಡ ಗೆಲುವು. ಹೊಸ ಪರಿಚಯಗಳಿಂದ ಲಾಭ. ಕಾನೂನು-ಆಡಳಿತ ಕ್ಷೇತ್ರದವರಿಗೆ ಸೂಪರ್ ಫಲಿತಾಂಶ. ಕಳೆದ ಪ್ರೇಮ ನೆನಪು. ಹಿರಿಯರ ಭಾವನೆ ಪೂರೈಸುತ್ತೀರಿ.
ತುಲಾ ರಾಶಿ:
ಹಣ ಖರ್ಚು ಎಚ್ಚರಿಕೆ. ಭೂಮಿ ಖರೀದಿಗೆ ಒಳ್ಳೆಯ ದಿನ. ಸಹೋದರನ ಮಾತಿನಿಂದ ಸಿಟ್ಟು. ಸಂಗಾತಿಯ ಜೊತೆ ಹಳೆಯ ವಿಚಾರ ಮರುಕಳಿಸಬಹುದು. ಸ್ತ್ರೀ ಸಂಬಂಧ ಆರೋಪದಿಂದ ಎಚ್ಚರ.
ವೃಶ್ಚಿಕ ರಾಶಿ:
ಆತ್ಮವಿಶ್ವಾಸ ತುಂಬಾ ಜೋರು. ನಾಯಕತ್ವ ಮೆರೆಯುತ್ತೀರಿ. ಅಧಿಕಾರಿಗಳು ಗೌರವಕ್ಕೆ ದಕ್ಕೆ ಮಾಡಿದರೆ ತೀವ್ರ ವಾಕ್ಪ್ರಹಾರ ಮಾಡುವ ಸಾಧ್ಯತೆ ತುಂಬಾ ಹೆಚ್ಚು. ಹಳೆಯ ಬಾಕಿ ಹಣ ಬರುತ್ತದೆ. ಸಾಮಾಜಿಕ ಪ್ರಶಂಸೆ.
ಧನು ರಾಶಿ:
ಮನೆಯಲ್ಲಿ ನೆಮ್ಮದಿ, ಮನಸ್ಸಿನಲ್ಲಿ ಶಾಂತಿ. ಸಾಲ ಕೊಡಲು ಫೋನ್ ಬರುತ್ತಲೇ ಇರುತ್ತದೆ. ತಂದೆಯ ಕೆಲಸಕ್ಕೆ ಸಹಕಾರ. ಮಾತು ಚೌಕಟ್ಟು ಮೀರಬಹುದು ಎಚ್ಚರ.
ಮಕರ ರಾಶಿ:
ಹಿರಿಯರಿಗೆ ಅಗೌರವದ ಮಾತು ಬಂದು ಬಿಡಬಹುದು ತಡೆಗಟ್ಟಿ. ಪ್ರಯಾಣ ಯೋಗ ಚೆನ್ನಾಗಿದೆ. ವಾತ ರೋಗದ ಎಚ್ಚರಿಕೆ. ಸಂಗಾತಿಯ ಮಾತಿನಿಂದ ಸಿಟ್ಟು. ಓದು ಸಂಶೋಧನೆಗೆ ಒಳ್ಳೆಯ ದಿನ.
ಕುಂಭ ರಾಶಿ:
ಹಳೆಯ ಬಾಕಿ, ಉಳಿಕೆ ವಿಚಾರದಲ್ಲಿ ಪರಿಹಾರ. ಆದರೆ ಯೋಜನೆಗಳು ತಲೆಕೆಳಗಾಗಬಹುದು. ಎಂದೋ ಕಳೆದುಕೊಂಡ ವಸ್ತು ಸಿಗುತ್ತದೆ. ಆಸ್ತಿ ವಿಚಾರದಲ್ಲಿ ವಾಗ್ವಾದ ಸಾಧ್ಯತೆ.
ಮೀನ ರಾಶಿ:
ಹೊಸ ಉತ್ಸಾಹ, ಹೊಸ ಯೋಜನೆಗಳು. ಜವಾಬ್ದಾರಿ ಹೆಚ್ಚಾಗಿದ್ದರೂ ಸುಲಭವಾಗಿ ನಿರ್ವಹಿಸುತ್ತೀರಿ. ತಾಯಿಗೆ ನಿಮ್ಮ ಮಾತಿನಿಂದ ನೋವಾಗಬಹುದು ಜಾಗ್ರತೆ. ವೃತ್ತಿಯಲ್ಲಿ ನಿಮ್ಮ ಸೇವೆ ಗಣನೀಯವಾಗುತ್ತದೆ.





