ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶರದ್ ಋತುವಿನ ಕಾರ್ತಿಕ ಮಾಸ ಕೃಷ್ಣ ಪಕ್ಷದ ತೃತೀಯಾ ತಿಥಿ (ನವೆಂಬರ್ 8, 2025 – ಶನಿವಾರ) ದಿನದ ಜ್ಯೋತಿಷ್ಯ ವಿಶೇಷಗಳು ಇಲ್ಲಿವೆ. ಇಂದು ಸ್ವಾದಿಷ್ಟ ಭೋಜನ, ಅಪೂರ್ಣ ಕಾರ್ಯ, ಶತ್ರುಪೀಡೆ, ಆದಾಯದ ಲೆಕ್ಕಾಚಾರ, ಭೂಮಿಯ ವಶ, ವಿದೇಶ ಗಮನದ ಗೊಂದಲ, ಪ್ರತ್ಯಕ್ಷ ಸಾಕ್ಷಿ – ಇವೆಲ್ಲವೂ ದಿನದ ಮುಖ್ಯ ಘಟನೆಗಳಾಗಿ ಕಾಣಿಸಿಕೊಳ್ಳುತ್ತವೆ.
ಇಂದಿನ ಪಂಚಾಂಗ ವಿವರ
- ಸಂವತ್ಸರ: ವಿಶ್ವಾವಸು
- ಚಾಂದ್ರ ಮಾಸ: ಕಾರ್ತಿಕ | ಸೌರ ಮಾಸ: ತುಲಾ
- ನಕ್ಷತ್ರ: ವಿಶಾಖಾ (ಮಹಾನಕ್ಷತ್ರ), ಮೃಗಶಿರಾ (ನಿತ್ಯ)
- ಯೋಗ: ಪರಿಘ | ಕರಣ: ಕೌಲವ
- ಸೂರ್ಯೋದಯ: 06:16 AM | ಸೂರ್ಯಾಸ್ತ: 05:49 PM
- ಶುಭಾಶುಭ ಕಾಲ:
- ರಾಹುಕಾಲ: 09:10 – 10:37 AM
- ಗುಳಿಕಕಾಲ: 06:17 – 07:43 AM
- ಯಮಗಂಡ: 01:30 – 02:57 PM
12 ರಾಶಿಗಳ ಇಂದಿನ ಭವಿಷ್ಯ:
ಮೇಷ ರಾಶಿ:
ಸೀಮಿತ ಪರಿಧಿಯನ್ನು ಮೀರದೇ ಇರಿ. ದೇವರ ಕಾರ್ಯ ಅಪೂರ್ಣವಾಗಬಹುದು. ಸಮಾಜ ಬಾಹಿರ ಕೃತ್ಯಗಳಲ್ಲಿ ಸಿಲುಕುವ ಸಾಧ್ಯತೆ. ಸ್ತ್ರೀಯರಿಗೆ ಅನುಕೂಲ. ವಿವಾಹಯೋಗ್ಯರಿಗೆ ಅಕಸ್ಮಾತ್ ಭೇಟಿ. ಉದ್ಯೋಗದಲ್ಲಿ ಭಡ್ತಿ, ಸ್ವಾದಿಷ್ಟ ಭೋಜನ, ಮನಸ್ಸು ಪ್ರಶಾಂತ. ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯ ಶತ್ರುತ್ವವಾಗಬಹುದು.
ವೃಷಭ ರಾಶಿ:
ದೈಹಿಕ ಹಿಂಸೆ ಸಹಿಸಲಾರದು. ವೃತ್ತಿಯಲ್ಲಿ ಹೊಂದಾಣಿಕೆ. ಅನಿರೀಕ್ಷಿತ ಪ್ರಯಾಣ, ಅಧಿಕ ಖರ್ಚು, ವಾಸಸ್ಥಳ ಬದಲಾವಣೆ. ಸಂಬಂಧಿಕರ ಮಾತು ನೋವಾಗಬಹುದು. ಸರ್ಕಾರಿ ಕೆಲಸ ವಿಳಂಬ. ಯಂತ್ರದಿಂದ ತೊಂದರೆ. ಬಂಧುಗಳಿಂದ ಆರ್ಥಿಕ ಸಹಾಯ. ಸಂಗಾತಿಯ ಜೊತೆ ಸಮಯ ಕೇಳಯಬಹುದು.
ಮಿಥುನ ರಾಶಿ:
ಸಾಲದಿಂದ ಬಿಡುಗಡೆಗೆ ಆದಾಯ ಮೂಲ ಹುಡುಕಾಟ. ಸಂಪರ್ಕ ಸಾಧನ ಹಾಳು. ತಾಯಿ-ತಂದೆ ಸೇವೆ. ನಂಬಿಕೆ ಭಂಗ. ಸ್ನೇಹಿತರಿಗೆ ಸ್ಪಂದನೆ. ವಿದೇಶ ಪ್ರಯಾಣ ಅವಕಾಶ. ಪ್ರಯಾಣದಲ್ಲಿ ಅಪಾಯವಾಗಬಹುದು. ತಂದೆಗೆ ಎದುರಾಡಿದರೆ ಮಾನಸಿಕ ನೋವು.
ಕರ್ಕಾಟಕ ರಾಶಿ:
ಖರ್ಚು ಲೆಕ್ಕಾಚಾರ. ಖರೀದಿ ವ್ಯರ್ಥ. ಹಿತಶತ್ರುಗಳಿಂದ ವಂಚನೆ. ಭೂಲಾಭ, ಆಸ್ತಿ ಗಳಿಕೆ ಕಷ್ಟ. ಧಾರ್ಮಿಕ ಕಾರ್ಯಕ್ರಮ. ಸಣ್ಣ ವಿಚಾರಕ್ಕೆ ಕೋಪ. ದಿನಚರಿಯಲ್ಲಿ ಕಿರಿಕಿರಿ.
ಸಿಂಹ ರಾಶಿ:
ಸವಾಲು ಗೆಲ್ಲುವುದು ಕಷ್ಟ. ಹೊಸತನ ಸ್ವಾಗತ. ಆಸ್ತಿ ಮಾರಾಟದಲ್ಲಿ ಲಾಭ. ಭೂಸ್ವಾದೀನ. ಸಾರ್ವಜನಿಕ ಕ್ಷೇತ್ರದಲ್ಲಿ ಪ್ರಸಿದ್ಧಿ. ಸಹೋದರರೊಂದಿಗೆ ವಾಗ್ವಾದ.
ಕನ್ಯಾ ರಾಶಿ:
ಹಳೆ ಕಾರ್ಯ ನೆನಪು. ಮಾನಸಿಕ ಆಘಾತ. ವಿವಾಹ ವಿಳಂಬ. ತಂದೆ ಜೊತೆ ಭವಿಷ್ಯ ಚರ್ಚೆ. ಶುಭವಾರ್ತೆಯಿಂದ ಉತ್ಸಾಹ. ಪರಾವಲಂಬನೆ ಕಡಿಮೆ.
ತುಲಾ ರಾಶಿ:
ವಿವಾಹ ಪ್ರಸ್ತಾಪ. ಲಾಭ ಗೌಪ್ಯ. ವಾಹನ ಕಲಹ. ಕಛೇರಿ ಓಡಾಟ. ಶತ್ರುಗಳ ಮಾನಸಿಕ ಕಿರುಕುಳ. ಆಲಸ್ಯದಿಂದ ಕೆಲಸ ಅಪೂರ್ಣ. ಸಂಗಾತಿ ಮಾತು ಗಂಭೀರವಾಗಿ ತೆಗೆದುಕೊಳ್ಳಿ.
ವೃಶ್ಚಿಕ ರಾಶಿ:
ಸಾಮಾಜಿಕ ಕಾರ್ಯ ಹೆಚ್ಚು. ಧಾರ್ಮಿಕ ಸಂಭ್ರಮ. ಉದ್ಯಮ ಮಾರಾಟ ಆಲೋಚನೆ. ಕಾನೂನು ತೊಡಕು. ಕಣ್ಣು/ವಾಹನ ಎಚ್ಚರಿಕೆ. ಮೇಲಧಿಕಾರಿ ಅಸಮಾಧಾನ.
ಧನು ರಾಶಿ:
ಮಕ್ಕಳ ಪ್ರತಿಭೆಗೆ ಸಹಾಯ. ಸಂತಾನ ಯೋಗ. ಆಸ್ತಿ ಖರೀದಿಗೆ ಸಾಲ. ಭವಿಷ್ಯ ಚಿಂತೆ. ಮಹಿಳೆಯರ ಉದ್ಯಮದಲ್ಲಿ ಆತಂಕ. ಕ್ಷಣಿಕ ಸುಖಕ್ಕೆ ಸಂಪತ್ತು ವ್ಯಯ.
ಮಕರ ರಾಶಿ:
ವೈಯಕ್ತಿಕ ಕೆಲಸ ಅಪೂರ್ಣ. ಮನೆ ಖರೀದಿ ಆಲೋಚನೆ. ಕೃಷಿ ಆಸಕ್ತಿ. ಕುಟುಂಬ ಸಂತೋಷ. ಸಹಿಸಲಾಗದ ದೇಹಪೀಡೆ. ಅಲ್ಪ ಪ್ರಗತಿಯೂ ಸಂತೋಷ.
ಕುಂಭ ರಾಶಿ:
ಸಣ್ಣ ಖರೀದಿ. ವಿದೇಶ ಪ್ರಯಾಣ ತಯಾರಿ. ಕಿವಿ ನೋವು. ಧನಲಾಭ ಆದರೂ ಮನಸ್ಸಿನಲ್ಲಿ ಅಶಾಂತಿ. ಭೂಮಿ ವ್ಯವಹಾರದಲ್ಲಿ ಒತ್ತಡ.
ಮೀನ ರಾಶಿ:
ವಿಶ್ರಾಂತಿ ಬಯಕೆ. ಉದ್ಯೋಗ ಬದಲಾವಣೆ. ಸಾಲ ಕೊಡುವಾಗ ಎಚ್ಚರ. ಸಂಬಂಧಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿ. ವಿದ್ಯಾರ್ಥಿಗಳಿಗೆ ಯಶಸ್ಸು.





