ಶಾಲಿವಾಹನ ಶಕವರ್ಷ 1948, ದಕ್ಷಿಣಾಯನ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷದ ತೃತೀಯಾ ತಿಥಿ, ಬುಧವಾರ. ಇಂದು ಒತ್ತಡ, ಪರಿಪಕ್ವತೆ, ಅಧಿಕಾರ ಚಲಾವಣೆ, ಅನ್ಯಾಯದ ಕಡೆಗೆ ಪ್ರೀತಿ ಹೆಚ್ಚಾಗುವ ವಿಶೇಷ ದಿನ. ನಿಮ್ಮ ರಾಶಿಯ ಭವಿಷ್ಯ ಇಲ್ಲಿದೆ. ಜಾಗರೂಕರಾಗಿ ಓದಿ ಮತ್ತು ದಿನವನ್ನು ಸದುಪಯೋಗಿಸಿ.
ಮೇಷ ರಾಶಿ :
ನಿಮ್ಮ ವ್ಯವಹಾರದ ಬಗ್ಗೆ ಸಲ್ಲದ ಮಾತುಗಳು ಕೇಳಬಹುದು, ಆದರೆ ಮನಸ್ಸಿಗೆ ಹಾಕಿಕೊಳ್ಳಬೇಡಿ. ಮಕ್ಕಳ ಜಗಳದಲ್ಲಿ ಮಧ್ಯಪ್ರವೇಶಿಸಿ ಸಮಾಧಾನ ಮಾಡಿ. ಆಪ್ತರಿಗೆ ಉಡುಗೊರೆ ನೀಡುವ ಸಂದರ್ಭ. ಆಮಿಷಕ್ಕೆ ಬಲಿಯಾಗಬಹುದು– ನಿಯಂತ್ರಣದಲ್ಲಿರಿ. ಸಂಗಾತಿಯನ್ನು ದೂರ ಕಳಿಸಿ ಸಂಕಟಪಡಬಹುದು. ಆದಾಯ ಹೆಚ್ಚಿಸುವ ಆಕಾಂಕ್ಷೆ ಇರಲಿದೆ. ಸಹೋದ್ಯೋಗಿಗಳ ಸಹಕಾರದಿಂದ ಒತ್ತಡ ಕಡಿಮೆ.
ವೃಷಭ ರಾಶಿ :
ಕಳೆದುಕೊಂಡಿದ್ದನ್ನು ಮರಳಿ ಪಡೆಯುವ ಪ್ರಯತ್ನ. ಲೆಕ್ಕಕ್ಕೆ ಸಿಗದ ಹಣ ಕಳೆದುಕೊಳ್ಳಬಹುದು. ಬಂಧುಗಳಿಂದ ಕೇಳಬಾರದ ವಿಚಾರಗಳು ತಿಳಿಯಬಹುದು. ಅತಿ ಸಂತೋಷದ ಕ್ಷಣಗಳು. ದೀರ್ಘಕಾಲದ ಸ್ನೇಹ ಮರಳಿ ಆರಂಭ. ಸೋಲನ್ನು ಒಪ್ಪದೇ ವಾದಿಸಬಹುದು. ಪರೀಕ್ಷೆಯ ದಿನ, ಫಲಿತಾಂಶ ನಿಮ್ಮ ವರ್ತನೆಯ ಮೇಲೆ.
ಮಿಥುನ ರಾಶಿ :
ವ್ಯಾಪಾರ ನಷ್ಟವನ್ನು ಬೇರೆ ಮಾರ್ಗದಿಂದ ತುಂಬಿಕೊಳ್ಳಿ. ಮನೆಯ ವಸ್ತುಗಳನ್ನು ಇನ್ನೊಬ್ಬರಿಗೆ ಕೊಡಲು ಇಷ್ಟವಿಲ್ಲ. ಹೂಡಿಕೆ ನಿಲ್ಲಿಸುವ ಮನಸ್ಸು. ಒಳಮನಸ್ಸು ದಾರಿ ತಪ್ಪಿಸದು. ತೀರ್ಥಕ್ಷೇತ್ರಗಳಿಗೆ ಹೋಗುವ ಆಸೆ. ನೀರಿನ ವಿಷಯದಲ್ಲಿ ಜಾಗರೂಕತೆ. ಅಲ್ಪ ಮೊತ್ತ ಸಾಮಾಜಿಕ ಕಾರ್ಯಕ್ಕೆ ಕೊಡುವಿರಿ.
ಕರ್ಕಾಟಕ ರಾಶಿ :
ಚಟುವಟಿಕೆಯಿದ್ದರೂ ಕೆಲಸ ಆಗದೇ ಇರಬಹುದು. ಪಾಲುದಾರಿಕೆಗೆ ಮೊದಲು ಸಾಧ್ಯಾಸಾಧ್ಯತೆ ಪರಿಶೀಲಿಸಿ. ಆಗದವರ ಬಗ್ಗೆ ತಾತ್ಸಾರ. ಉದ್ಯೋಗಕ್ಕೆ ಹೂಡಿಕೆ ಸಿಗಬಹುದು. ಪ್ರಭಾವೀ ವ್ಯಕ್ತಿಗಳಿಂದ ವಂಚನೆ ಭಾಸ. ನಿಯಮಿತ ಚೌಕಟ್ಟು ಬಿಟ್ಟು ಬರಲಾಗದು. ನಡತೆಯಿಂದ ಕುಲಕ್ಕೆ ಅವಮಾನ. ನಿದ್ರೆ ಹೆಚ್ಚು. ಜವಾಬ್ದಾರಿಯೊಂದಿಗೆ ಹಿತಶತ್ರುಗಳು ಹೆಚ್ಚು.
ಸಿಂಹ ರಾಶಿ :
ಮನೆಯಲ್ಲಿ ಹಬ್ಬದ ವಾತಾವರಣ, ದೀರ್ಘಕಾಲದ ನಂತರ ಸಂತೋಷ. ಸಾಲಕ್ಕಾಗಿ ದೂರವಾಣಿ ಪೀಡೆ. ವ್ಯಾಪಾರ ಮಾಡುವ ಮನಸ್ಸಿಲ್ಲದಿದ್ದರೂ ಬೇಸರ. ಬೇಕಾದ ವ್ಯವಸ್ಥೆ ಮಾಡಿಕೊಳ್ಳಿ. ಸ್ನೇಹಿತರ ತಮಾಷೆ ಇಷ್ಟವಾಗದು. ದ್ವಿಚಕ್ರ ವಾಹನದಲ್ಲಿ ಎಚ್ಚರ. ಸಂಗಾತಿಯ ಮನಃಸ್ಥಿತಿಗೆ ಪೂರಕ ಆಲೋಚನೆ , ಖುಷಿ.
ಕನ್ಯಾ ರಾಶಿ :
ನೀವು ಹೇಳಿದ ಸುಳ್ಳುಗಳೇ ಸತ್ಯವಾಗಬಹುದು. ನೆನಪಿನ ಶಕ್ತಿಗೆ ಪರಿಹಾರ ಮಾಡಿಕೊಳ್ಳಿ. ಶುಭ ಸೂಚನೆಗಳು ನಿರೀಕ್ಷೆ ಹೆಚ್ಚು. ಮಾತುಗಾರರು ವಾಚಾಳಿತನ ಕಡಿಮೆ. ಮನೆ ಕಾರ್ಯದಲ್ಲಿ ಸಮಯ ಕಳೆಯುವುದು. ಅಜ್ಞಾತ ಕೆಲಸ ಮಾಡಬೇಕಾಗಬಹುದು. ಹೂಡಿಕೆ ನಷ್ಟದಿಂದ ವಿಚಲಿತರಾಗಬೇಡಿ. ಪ್ರಯತ್ನ ಮುಂದುವರಿಸಿ.
ತುಲಾ ರಾಶಿ :
ಸ್ನೇಹಿತರ ಜೊತೆ ಮೋಜು, ದಿನ ಮುಗಿಯುವುದು. ಮಾರಾಟಕ್ಕೆ ವ್ಯವಸ್ಥೆ. ಜಾಹಿರಾತು ವಿಭಾಗದವರಿಗೆ ಅವಕಾಶ. ವಾಗ್ಮಿಗಳು ಸದುಪಯೋಗ. ಉಪಕಾರಕ್ಕೆ ಪ್ರತ್ಯುಪಕಾರ ಇಲ್ಲದಿರಬಹುದು. ತಪ್ಪಿಗೆ ನೀವೇ ಕಾರಣ. ಕರ್ತವ್ಯಕ್ಕೆ ಹಿಂದೇಟು. ಲೆಕ್ಕಪತ್ರದಲ್ಲಿ ನಿಷ್ಠುರ. ಮನಸ್ಸಿಗೆ ಹಿಡಿಯದವರಿಂದ ದೂರ.
ವೃಶ್ಚಿಕ ರಾಶಿ :
ಲಾಭಕ್ಕಾಗಿ ಹೊಸ ಯೋಜನೆಗಳು. ಔದಾಸೀನ್ಯದಿಂದ ನಷ್ಟ. ಪ್ರಯಾಣದಿಂದ ಹಿಂಸೆ. ಮಿತ್ರರ ಹಣಕ್ಕೆ ಕತ್ತರಿ. ನಿರೀಕ್ಷಿತ ಫಲ ಇಲ್ಲ. ಆಧ್ಯಾತ್ಮಿಕ ಪ್ರೀತಿ ಹೆಚ್ಚು, ಲೌಕಿಕ ಕಡಿಮೆ. ಸಹೋದ್ಯೋಗಿಗಳ ಮೇಲೆ ಅಸೂಯೆ. ಇಚ್ಛಾಶಕ್ತಿ ಸಹಕಾರಿ. ಯೋಜನೆ ಉತ್ತಮವಾದರೂ ಕಾರ್ಯರೂಪ ಕಷ್ಟ.
ಧನು ರಾಶಿ :
ಯಂತ್ರ ವ್ಯಾಪಾರದಿಂದ ಅಧಿಕ ಲಾಭ. ವಿದ್ಯಾರ್ಥಿಗಳು ಸಮಯ ವ್ಯರ್ಥ , ಬೇಸರ. ಉದ್ಯಮದ ಸ್ಥಳದಿಂದ ದೂರ. ಬೇಡದ ಕಾರ್ಯಕ್ಕೆ ಪ್ರಚೋದನೆ. ನಿಶ್ಚಿತ ವಿವಾಹ ತಪ್ಪಬಹುದು. ವಿಘ್ನಗಳು, ದೈವಜ್ಞರನ್ನು ಸಂಪರ್ಕಿಸಿ. ಗುಪ್ತ ಮಾಹಿತಿ ಪ್ರಕಟ. ಸ್ವಂತ ವಾಹನದಿಂದ ಭಯ.
ಮಕರ ರಾಶಿ :
ದಿನನಿತ್ಯ ವಸ್ತುಗಳ ವ್ಯಾಪಾರದ ಮಾರಾಟ ಹೆಚ್ಚು. ಎಲ್ಲಕ್ಕೂ ಸಂಶಯ ಗೊಂದಲ. ಸರ್ಕಾರಿ ಕೆಲಸ ಪೂರ್ಣವಾಗುವುದು. ಅನುಮಾನ ದುರಭ್ಯಾಸ ಬೆಳೆಯಬಹುದು. ವಾಹನಕ್ಕೆ ಖರ್ಚು. ಅವಕಾಶ ಪ್ರೀತಿಸಿ. ಪ್ರೀತಿಯಲ್ಲಿ ದುಃಖ. ಮನಸ್ತಾಪ ದ್ವೇಷವಾಗಿಸಬೇಡಿ.
ಕುಂಭ ರಾಶಿ :
ಸಾಮಾಜಿಕ ಕಾರ್ಯಗಳಿಗೆ ಪ್ರೇರಣೆ. ನ್ಯಾಯಾಲಯ ಓಡಾಟ ಹೆಚ್ಚು. ಉದ್ಯಮದ ಪ್ರಯಾಣ ಸಫಲವಾಗದೇ ಬೇಸರ. ದಿನದ ಕೆಲಸ ಹೆಚ್ಚು–ಇನ್ನೊಬ್ಬರ ಕೆಲಸಕ್ಕೆ ತಾಳ್ಮೆ ಇಲ್ಲ. ಹೂಡಿಕೆಗೆ ಪ್ರೇರಣೆ. ಉತ್ಸಾಹ ಅಡಗದು. ಆದಾಯದಲ್ಲಿ ಹಿನ್ನಡೆ ತಂತ್ರ ಫಲಿಸದು.
ಮೀನ ರಾಶಿ :
ಕಛೇರಿ ಕೆಲಸ ಸ್ವಂತ ಕೆಲಸಕ್ಕೆ ತೊಂದರೆ. ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಉತ್ತಮ. ವಿವಾಹ ಕಾರ್ಯಕ್ಕೆ ಓಡಾಟ. ಭೂವ್ಯವಹಾರ ಸರಿಯಾಗಿ ಹೆಜ್ಜೆ ಇಡಿ. ಸಂಗಾತಿಯೊಂದಿಗೆ ಭಿನ್ನಮತ. ಹಿರಿಯರ ಅನಾರೋಗ್ಯದಿಂದ ಸ್ವಂತ ಕೆಲಸ ತೊಂದರೆ. ಆಭರಣ ಖರೀದಿಗೆ ಉತ್ತಮ ದಿನ. ಉದ್ಯೋಗ ನಂಬಿದವರಿಗೆ ಬೇಸರ.





