• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, March 12, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ರಾಶಿ ಭವಿಷ್ಯ: ಈ 5 ರಾಶಿಗಳಿಗೆ ಯಶಸ್ಸಿನ ಶುಭ ಸಮಯ!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
July 3, 2025 - 6:49 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Rashi bavishya

ಮೇಷದಿಂದ ಮೀನವರೆಗೆ ಎಲ್ಲಾ 12 ರಾಶಿಗಳ ಇಂದಿನ ಭವಿಷ್ಯ, ಆರೋಗ್ಯ, ಹಣಕಾಸು, ಪ್ರೇಮ ಸಂಬಂಧ, ಉದ್ಯೋಗದ ಬಗ್ಗೆ ಇಂದಿನ ಭವಿಷ್ಯ ತಿಳಿಯೋಣ. ಯಾವ ರಾಶಿಗೆ ಶುಭ? ಯಾವ ರಾಶಿಗೆ ಅಶುಭ? ಎಂದು ತಿಳಿಯಿರಿ.

 ಮೇಷ ರಾಶಿ

RelatedPosts

ಸಂಖ್ಯಾಶಾಸ್ತ್ರ ಭವಿಷ್ಯ: ಎಲೆಕ್ಟ್ರಿಕ್ ವಸ್ತುಗಳ ಖರೀದಿ, ವ್ಯಾಪಾರಸ್ಥರಿಗೆ ಆದಾಯ ಹೆಚ್ಚಳ.!

ದಿನ ಭವಿಷ್ಯ: ಈ ರಾಶಿಯವರಿಗೆ ಅನಿರೀಕ್ಷಿತ ಸಹಾಯ, ಕೆಲವರಿಗೆ ಎಚ್ಚರಿಕೆ ಅಗತ್ಯ.!

ಸಂಖ್ಯಾಶಾಸ್ತ್ರ ಭವಿಷ್ಯ: ಈ ಜನ್ಮಸಂಖ್ಯೆಯವರು ಹಣ ಖರ್ಚು ಮಾಡುವ ಸಾಧ್ಯತೆ, ಸಿನಿಮಾ ಕ್ಷೇತ್ರದವರಿಗೆ ಪ್ರಶಸ್ತಿ ಯೋಗ.!

ಇಂದಿನ ದಿನಭವಿಷ್ಯ: ಪ್ರೇಮ, ಹಣ, ಉದ್ಯೋಗದಲ್ಲಿ ಯಾವ ರಾಶಿಗೆ ಏನು ಫಲ?

ADVERTISEMENT
ADVERTISEMENT

ಯಾರದೋ ಪ್ರಭಾವದಿಂದ ನಿಮ್ಮ ಕೆಲಸ ಆಗುವುದು. ಇಂದು ನೀವು ಮಾಡಿದ ಉಪಕಾರವು ನಿಮಗೆ ಮರಳಿಬರಬಹುದು. ದೀರ್ಘಕಾಲದಿಂದ ಮಾಡುತ್ತಿದ್ದ ಕೆಲಸಗಳು ಮುಕ್ತಾಯವಾಗುವುವು. ವೈದ್ಯಕೀಯ ಕ್ಷೇತ್ರದ ವಿದ್ಯಾರ್ಥಿಗಳಿಗೆ ಹೆಚ್ಚು ತೊಂದರೆಯಾದೀತು‌. ಕಾರ್ಯಕ್ರಮಗಳನ್ನು ನಿರ್ವಹಣೆ ಮಾಡುವವರಿಗೆ ಬರಬೇಕಾದ ಹಣ ಬಾರದೇ ಕಷ್ಟವಾಗುವುದು. ಭೂಮಿಗೆ ಸಂಬಂಧಿಸಿದ ವಿಚಾರವು‌ ನ್ಯಾಯಾಲಯದ ಮೆಟ್ಟಿಲೇರಿ ಬಗೆಹರಿಯದು. ನಿಮ್ಮ ಅತಿಯಾದ ಕಲ್ಪನೆ ಭಗ್ನವಾದೀತು. ಇದರಿಂದ ದುಃಖಿಸುವಿರಿ. ಸುಪ್ತವಾದ ಪ್ರತಿಭೆಯು ಅನಾವರಣಕ್ಕೆ ಸ್ಥಳ ಹುಡುಕುವುದು. ಇಂದು ನಿಮ್ಮ ಮಾತಿನ ಆರಂಭವೇ ನೀವು ಎಂತಹವರು ಎನ್ನುವುದನ್ನು ತಿಳಿಸುತ್ತದೆ. ಬಾಡಿಗೆ ಮನೆಯವರ ಜೊತೆ ಸಣ್ಣ ವಿಚಾರಕ್ಕೆ ಕಲಹವಾಗಲಿದೆ. ಚಿಂತಿಸದೇ ಅನ್ಯ ಮಾರ್ಗವನ್ನು ಹಿಡಿಯಿರಿ. ನಿಮ್ಮ ತೊಂದರೆಗಳು ಇನ್ನೊಬ್ಬರ ಮೇಲೆ ಪರಿಣಾಮ ಬೀರುವುದು. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂದಡಿ ಇಡುವಿರಿ. ಕಳೆದುಕೊಂಡ ವಸ್ತುವನ್ನು ಮರಳಿ ಪಡೆಯಬೇಕಾದ ಸ್ಥಿತಿ ಬರಬಹುದು.

ವೃಷಭ ರಾಶಿ

ಬಂಧುಗಳ ಆಗಮನವು ನಿಮಗೆ ಅನಿರೀಕ್ಷಿತವಾಗಲಿದೆ. ಸ್ವಯಂ‌ಕೃತ ಅಪರಾಧಕ್ಕೆ ಬೇರೆಯವರನ್ನು ಬೊಟ್ಟುಮಾಡಿ ತೋರಿಸುವುದು ಬೇಡ. ಹಣವನ್ನು ಉಳಿಸಿಕೊಳ್ಳಬೇಕು ಎಂದು ಪ್ರಯತ್ನಿಸಿದರೂ ನಿಮ್ಮ ಕೈ ಮೀರಿ ಹೋಗುವ ಸಂದರ್ಭವೇ ಇರುವುದು. ಪ್ರಯಾಣವನ್ನು ಅತಿಯಾಗಿ ಮಾಡಬೇಡಿ.‌ ಹಣದ ವಿಚಾರವಾಗಿ ಮನೆಯಲ್ಲಿ ಜಗಳವಾಹಬಹುದು. ನಿಮ್ಮ ವಾಹನಕ್ಕೆ ಅನ್ಯರಿಂದ ಅಪಾಯ. ಹಿರಿಯರ ಮಾತನನ್ನು ಅಹಂಕಾರದಿಂದ ಮುರಿಯಬೇಡಿ. ಬಿಸಿ ರಕ್ತವು ಆರಿದ ಮೇಲೆ ಪಶ್ಚಾತ್ತಾಪ ಪಡಬೇಕಾದೀತು. ಯಾರದೋ ವಸ್ತುಗಳನ್ನು ನಿಮ್ಮದಾಗಿಸಿಕೊಳ್ಳುವ ಪ್ರಯತ್ನ ಫಲಿಸದು. ಮಾನಸಿಕ‌ ಆಲಸ್ಯ ಇಂದು ಸರಿಯಾದ ಕೆಲಸ ಸಿಗಲಿದ್ದು, ಅದನ್ನು ಅನಿವಾರ್ಯವಾಗಿ ಮಾಡುವಿರಿ. ಸೋಲಿಸುವ ಮನೋಭಾವದಿಂದ ಆಟವಾಡುವುದು ಬೇಡ. ಸಂಗಾತಿಯನ್ನು ತಮಾಷೆ ಮಾಡಲು ಹೋಗಿ ವೈಮನಸ್ಸು ಉಂಟಾಗಬಹದು. ನಿದ್ರೆಯಲ್ಲಿ ಆಗಾಗ ಎಚ್ಚರಿಕೆ ಆಗಬಹುದು. ವಾತಶಮನಕ್ಕೆ ವೈದ್ಯರನ್ನು ಭೇಟಿಯಾಗಿ. ಮಕ್ಕಳಲ್ಲಿ ಸ್ಪರ್ಧಾಮನೋಭಾವವನ್ನು ಹೆಚ್ಚಿಸುವಿರಿ.

ಮಿಥುನ ರಾಶಿ

ಇನ್ನೊಬ್ಬರಿಗೆ ಮಾಡಿದ ಸಹಾಯದಿಂದ ನಿಮಗೆ ಶಾಂತಿ ಸಿಗಲಿದೆ. ನಿಮ್ಮ ಉದ್ಯೋಗದ ಚಿಂತೆಯಿಂದ ಯಾವ ಪ್ರಯೋಜನವೂ ಆಗದು. ಚಿಂತನೆಯಿಂದ ಮಾತ್ರ ಬಂದಿರುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಬಗೆ ಅರಿಯದಾದೀತು. ಸಂಪತ್ತಿನ ಜೊತೆಗೆ ಶತ್ರುಗಳೂ ಬರುವರು. ದಾನವಾಗಿ ಕೊಟ್ಟಿದ್ದನ್ನು ಮತ್ತೆ ಕೇಳಿ ಪಡೆಯುವಿರಿ. ನಿಮ್ಮವರ ಮೇಲೆ ಕಾಳಜಿ ಹೆಚ್ಚಿರುವುದು. ಅಧಿಕಾರದ ಪಡೆಯಲು ವಾಮಮಾರ್ಗವನ್ನು ಬಳಸಬಹುದು. ಬೇರೆಯವರ ಮೇಲೆ ಪ್ರಭಾವ ಬೀರುವ ಸಂದರ್ಭಬರಬಹುದು. ಹಣಕಾಸಿನ ಹೂಡಿಕೆಯು ಕಾನೂನುಬದ್ಧವಾಗಿರಲಿ. ಒಳ್ಳೆಯ ಕೆಲಸವನ್ನು ಸಿದ್ಧಿಸಿಕೊಳ್ಳಲು ಪ್ರಯತ್ನಿಸಿ. ರಾಜಕೀಯ ವ್ಯಕ್ತಿಗಳಾಗಿದ್ದರೆ ಒಂದು ಸಕಾರಾತ್ಮಕ ಸಂಚಲನವನ್ನು ತರುವಿರಿ. ಅಪರಿಚಿರ ಒಡನಾಟ ಕಡಿಮೆ ಮಾಡಿ. ಕುಟುಂಬವನ್ನು ನಡೆಸುವ ಜವಾಬ್ದಾರಿ ಸಿಗಬಹುದು. ಇಂದು ನೀವು ಅನವಶ್ಯಕ ವಸ್ತುಗಳನ್ನು ಇಷ್ಟಪಡುವಿರಿ. ಸದಾಕಾಲ ಸಂತೋಷದಿಂದ ಇರಲು ನೀವೇ ಏನಾದರೂ ಕ್ರಮವನ್ನು ಅನುಸರಿಸುವಿರಿ. ಸ್ವಯಂ ಕೃತ ಅಪರಾಧವೇ ನಿಮಗೆ ಮುಳುವಾಗಬಹುದು.

ಕರ್ಕಾಟಕ ರಾಶಿ

ವಾಹನದ ಮೋಹವು ನಿಮ್ಮನ್ನು ಕುರುಡುಮಾಡಬಹುದು. ನಿಮಗೆ ಇಂದು ಪ್ರಭಾವೀ ವ್ಯಕ್ತಿಗಳ ಸಹವಾಸದಿಂದ ಸ್ಥಾನವು ಪ್ರಾಪ್ತಿಯಾಗಲಿದೆ. ಪುಣ್ಯಸ್ಥಳದ ದರ್ಶ‌ನಕ್ಕೆಂದು ಪ್ರಯಾಣ ಮಾಡುವಿರಿ. ವಾಹನದಿಂದ‌ ಬಿದ್ದು ಪೆಟ್ಟು ಮಾಡಿಕೊಳ್ಳಬೇಡಿ. ನಿಮ್ಮ ನಡೆಯನ್ನು ತಿಳಿಯಲು ಜನರು ಕಷ್ಟಪಡುವರು. ನಿಮ್ಮ ಮಾತಿನಲ್ಲಿ ಸ್ಪಷ್ಟತೆ ಇರಲಿ. ಯೋಜನೆಗಳನ್ನು ಸರಿಯಾಗಿ ಬಿತ್ತರಿಸಿ. ಕೆಲಸವನ್ನು ಒಂಟಿಯಾಗಿ ಮಾಡಲು ಹಿಂಜರಿಯುವಿರಿ. ನಿಮಗೆ ಎಲ್ಲವೂ ಬಂಧನದಂತೆ ಅನ್ನಿಸುವುದು. ಎಲ್ಲರನ್ನೂ ಸುಮ್ಮನೇ ಅನುಮಾನದ ದೃಷ್ಟಿಯಿಂದ ನೋಡಬೇಡಿ. ಉದ್ಯೋಗದಲ್ಲಿ ಒಪ್ಪಂದವನ್ನು ಸರಿಯಾಗಿ ಮಾಡಿಕೊಳ್ಳಿ. ಇಷ್ಟಪಟ್ಟವರಿಗೆ ನೋವನ್ನು ಕೊಡುವಿರಿ. ಖರೀದಿಯಿಂದ ಮೋಸವಾಗುವ ಸಾಧ್ಯತೆ ಇದೆ. ಕಷ್ಟದಿಂದ ಸಂಪಾದಿಸಿದ್ದನ್ನು ಕಳೆದುಕೊಳ್ಳುವಿರಿ. ಪ್ರೀತಿಸುವ ವಸ್ತುವೊಂದು ಇಂದು ಹಾಳಾಗಿ ಹೋಗಲಿದೆ. ಕೈಗೆ ಸಿಗದ ಹಣ್ಣು ಹುಳಿ ಎನ್ನುವುದು ಸಹಜವೇ. ಮನಸ್ಸಿನ ದುಗುಡವನ್ನು ಶಾಂತಮಾಡಿಕೊಳ್ಳುವಿರಿ. ಕೋಪವನ್ನು ಬಲವಂತವಾಗಿ ತಡೆಯುವಿರಿ. ನಿಮ್ಮ ವಿಚಾರವನ್ನು ನೀವು ಗುಪ್ತವಾಗಿ ತಿಳಿದುಕೊಳ್ಳುವಿರಿ.

ಸಿಂಹ ರಾಶಿ

ನಿಮ್ಮ ವಿದ್ಯಾಭ್ಯಾಸದ ಆಸೆ ಪೂರ್ಣವಾಗಲಿದೆ. ಇಂದು ಅಸರಂಭಿಸಿದ ಕಾರ್ಯವನ್ನು ಮುಗಿಸುವ ಮನೋಭಾವದಲ್ಲಿ ಇರುವಿರಿ. ಆದರೆ ದೇಹದ ಆಲಸ್ಯ, ಮನಸ್ಸಿನಲ್ಲಿ ಇರುವ ಜಾಡ್ಯದಿಂದ ಯಾವ ಕಾರ್ಯಗಳೂ ಆಗದು. ಏಕಮುಖವಾದ ನಿರ್ಧಾರವನ್ನು ತೆಗದುಕೊಂಡು ನೀವು ಒಬ್ಬೊಟಿಯಾಗಬೇಕಾದೀತು. ನಿಮ್ಮ ಮಾತು ಪ್ರೇರಣೆಯಾಗಬಹುದು. ಎಲ್ಲರ ಜೊತೆ ಚರ್ಚಿಸಿ ಅವರನ್ನು ತೆಗೆದುಕೊಂಡು ಹೋಗಿ. ಸಿಟ್ಟಿನಿಂದ ಏನನ್ನೂ ಸಾಧಿಸಲಾಗದು ಎಂಬ ಸತ್ಯವು ತಿಳಿಯಬಹುದು. ಕೋಪದಲ್ಲಿ ಮೂಗು ಕತ್ತರಿಸಿದರೆ ಮರಳಿ ಬರುವುದೆ? ಗಣ್ಯರು ನಿಮ್ಮನ್ನು ಭೇಟಿಯಾದಾರು. ನೀವು ಉದ್ಯಮವನ್ನು ನಡೆಸುತ್ತಿದ್ದರೆ ನಿಮಗೆ ಅವರಿಂದ ಸಹಾವಾಗಬಹುದು. ಇಂದು ನೀವು ಗೌರವವನ್ನು ಕೇಳಿ ಪಡೆದುಕೊಳ್ಳಲಿದ್ದೀರಿ. ನಿಮ್ಮವರು ಇದನ್ನು ಅಪಹಾಸ್ಯ ಮಾಡುವರು. ಪ್ರಯಾಣದಿಂದ ಆಯಾಸವಾಗಲಿದೆ. ಮಕ್ಕಳಿಲ್ಲದೇ ಬೇಸರ ಕಾಡಬಹುದು. ಏಕಾಂಗಿಯಾಗಿ ಎದುರಿಸುವುದು ಕಷ್ಟವಾಗುವುದು.

ಕನ್ಯಾ ರಾಶಿ

ಹಿರಿಯರ ಮಾತಿನ ಮರ್ಮವನ್ನು ತಿಳಿಯಲಾಗದು. ಇಂದು ನಿಮ್ಮ ಕಾರ್ಯಕ್ಷೇತ್ರವನ್ನು ಉತ್ತಮ ಮಾಡಿಕೊಳ್ಳುವುದು ಹೊಣೆಗಾರಿಕೆ ಆಗುವುದು. ನಿಮ್ಮ ಯೋಗ್ಯತೆಗೆ ಉನ್ನತಸ್ಥಾನದ ಪ್ರಸ್ತಾಪವೂ ಆಗಬಹುದು. ನಿಮ್ಮ ಜೀವನದಲ್ಲಿ ಪ್ರಮುಖರು ಯಾರೆಂಬ ಸರಿಯಾದ ಚಿತ್ರಣವು ನಿಮಗೆ ಸಿಗಲಿದೆ. ಇಂದು ನಿಮ್ಮ ಲೆಕ್ಕಾಚಾರಗಳು ಬುಡಮೇಲಾದೀತು. ಪ್ರಯಾಣ ಮಾಡುವ ಸಂದರ್ಭ ಬರಬಹುದು. ದೂರದ ಯಾತ್ರೆಯು ಕಾರಣಾಂತರಗಳಿಂದ ಮುಂದೆಹೋಗುವುದು. ಜನ್ಮಾಂತರದ ಪುಣ್ಯವು ನಿಮ್ಮನ್ನು ಕಾಪಾಡಲಿದೆ. ಬಂಗಾರದ ಖರೀದಿಯನ್ನು ಮಾಡಲಿದ್ದೀರಿ. ದಾಂಪತ್ಯದಲ್ಲಿ ಮೌನವೇ ಹೆಚ್ಚಿರುವುದು. ಹಣ ಉಳಿತಾಯದ ಬಗ್ಗೆ ಸಂಗಾತಿಯು ಗಮನಸುವರು. ತಲೆನೋವು ಕಾಡೀತು ಇಂದು. ವಿದ್ಯಾರ್ಥಿಗಳು ಒಂದು ಹಂತದ ಓದನ್ನು ಮುಗಿಸಿ ಉದ್ಯೋಗಕ್ಕೆ ತೆರಳುವ ಆಲೋಚನೆ ಮಾಡುವರು. ಹಣಕಾಸಿನ ವಿಚಾರಕ್ಕೆ ಅಪವಾದ ಬರಬಹುದು. ನಿಮ್ಮನ್ನು ಪರೋಕ್ಷವಾಗಿ ಯಾರದರೂ ನಿಂದಿಸಬಹುದು. ಮನಸ್ಸಿನಲ್ಲಿ ಸಾವಧಾನತೆ ಇರದು.

ತುಲಾ ರಾಶಿ

ಸ್ಥಿರವಾಗಿ ನಿಮ್ಮ ಬಳಿ ಇರುವುದು ನಿಮಗೆ ಸುಖವನ್ನು ಕೊಡದು. ಇಂದು ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಅತಿಯಾದ ಭಯವು ಕಾಡಬಹುದು. ನಿಮ್ಮಿಂದ ನಿಮ್ಮ ತಂದೆ, ತಾಯಿಯರು ಬೇಸರಪಟ್ಟುಕೊಳ್ಳುವರು. ವಿವಾಹ ಯೋಗವನ್ನು ನಿರ್ಲಕ್ಷಿಸುವುದು ಬೇಡ. ಮಕ್ಕಳು ನಿಮಗೆ ಖುಷಿಯನ್ನು ತಂದುಕೊಟ್ಟಾರು. ಯಾವುದಾದರೊಂದು ಕೌಶಲದ ಕಡೆ ನಿಮ್ಮ ಗಮನ ಹೆಚ್ಚಾಗುವುದು. ಬಂಧುಗಳ ವಿಯೋಗದಿಂದ ಮನಸ್ಸಿಗೆ ಭಾರ. ಸಾಲದ ಚಿಂತೆಯೂ ಬಹಳ ಕಾಡಲಿದೆ. ವಿವಾಹಕ್ಕೆ ಸಂಬಂಧಿಸಿದಂತೆ ಗೊಂದಲಗಳಿವೆ. ಸ್ವಂತ ವಾಹನವನ್ನು ಚಲಾಯಿಸುವಾಗ ಅನ್ಯ ಯೋಚನೆಯಲ್ಲಿ ಮಗ್ನರಾಗಿ ಅಪಘಾತವಾಗಬಹುದು. ಶ್ರಮ ವಹಿಸಿ ಕೆಲಸ ಮಾಡುವವರಿಗೆ ಹೆಚ್ಚಿನ ಜವಾಬ್ದಾರಿಗಳು ಸಿಗಬಹುದು. ಹೆಚ್ಚಿನ ಹೂಡಿಕೆಯಲ್ಲಿ ನಿಮಗೆ ಮನಸ್ಸಾಗುವುದು. ವಿದ್ಯಾರ್ಥಿಗಳು ಬಹಳ ಸೋಮಸರಿಗಳಾಗುವರು. ಸಂಗಾತಿಯ ಜೊತೆ ನಿಮಗಾದ ಸುಖ ಹಾಗೂ ದುಃಖವನ್ನು ಹಂಚಿಕೊಳ್ಳುವಿರಿ. ಅಮೂಲ್ಯವಾದ ವಸ್ತುಗಳು ಪಡೆದುಕೊಳ್ಳುವಿರಿ.

ವೃಶ್ಚಿಕ ರಾಶಿ

ಹೆಚ್ಚುವರಿ ಕಾರ್ಯಗಳಿಂದ ಒತ್ತಡ ಬರಲಿದೆ. ನಿರ್ವಹಣೆ ಕಷ್ಟವಾಗುವುದು. ಇಂದು ನಿಮ್ಮ‌ ಮನಸ್ಸನ್ನು ಕಲಕಲೆಂದು ಕೆಲವರು ತಯಾರಿ ಮಾಡಬಹುದು. ನಿಮ್ಮ ಪ್ರಮಾಣಿಕ ಪ್ರಯತ್ನವನ್ನು ವಂಚನೆ ಇಲ್ಲದೇ ಮಾಡಿ. ಆರ್ಥಿಕವಾಗಿ ಇಂದು ಸಬಲರಾಗುವಿರಿ.‌ ಕೆಲಸದಲ್ಲಿ ವಿಘ್ನವು ಬರುವ ಸಾಧ್ಯತೆ ಇದೆ. ವಿದೇಶಕ್ಕೆ ಹೋಗುವ ನಿಮ್ಮ‌ಕನಸು ನನಸಾಗಬಹುದು. ವಿದ್ಯಾಭ್ಯಾಸದ ವಿಚಾರದಲ್ಲಿ ಮಕ್ಕಳ ಮಾತನ್ನೂ ಕೇಳಿ, ತೀರ್ಮಾನಕ್ಕೆ ಬನ್ನಿ. ಹಿತಶತ್ರುಗಳು ನಿಮಗೆ ಯಶಸ್ಸು ಬಾರದಂತೆ ನೋಡಿಕೊಳ್ಳುವರು. ಸತ್ಯವನ್ನು ಮುಚ್ಚಿಡುವ ಪ್ರಯತ್ನವು ನಿಮ್ಮಿಂದ ನಡೆಯಲಿದೆ. ಅದು ಕುಟುಂಬಕ್ಕೆ ಗೊತ್ತಾಗಲಿದೆ. ಸಲಹೆಯನ್ನು ಕೇಳಿದರಷ್ಟೇ ನೀಡುವುದು ಉತ್ತಮ. ನೇರ ಮಾತುಗಳಿಂದ ನಿಮ್ಮವರಿಗೆ ಬೇಸರವಾಗಬಹುದು. ಅತಿಯಾದ ಮಾತೂ ಕೇಳುಗರಿಗೆ ಕಿರಿಕಿರಿ ತರಿಸುವುದು. ಹೂಡಿಕೆಯ ವಿಚಾರದಲ್ಲಿ ನಿಮಗೆ ಸ್ಪಷ್ಟತೆ ಇಲ್ಲದೇ ಮಾಡಬೇಡಿ. ಮೋಸ ಹೋಗುವಿರಿ. ಸ್ವಲ್ಪ ವಿಳಂಬ ಮಾಡಿ. ನೀವು ಹೇಳಿದ ಕೆಲಸವೂ ವೇಗವಾಗಿ ಮುಗಿಯದು. ಸ್ನೇಹಿತರಿಗೆ ಬೇಸರವಾಗಬಾರದೆಂದು ಅವರ ಜೊತೆ ಸಮಸ್ಯೆ ಕಳೆಯುವಿರಿ.

ಧನು ರಾಶಿ

ನಿಮ್ಮ ಲಾಭಕ್ಕೆ ಶತ್ರುಗಳ ದೊಡ್ಡಕೊಡುಗೆ ಇರುವುದು. ಇಂದು ಯಾವ ಕಾರ್ಯವನ್ನು ಮಾಡುವಾಗಲೂ ಉದ್ವೇಗಪಡುವ ಅಗತ್ಯ ಇರದು. ಒಂದೊಮ್ಮೆ ಅಂತಹ ಸಂದರ್ಭವನ್ನು ನಿರ್ಲಕ್ಷಿಸುವುದು ಉತ್ತಮ. ಬೇಡದ್ದನ್ನು ನೀವು ನಿಮ್ಮ ಬಳಿ ಇಟ್ಟುಕೊಳ್ಳುವಿರಿ. ನಿಮ್ಮನ್ನು ಕಂಡು ಹೊಟ್ಟಕಿಚ್ಚು ಪಡುವ ಜನರಿರುತ್ತಾರೆ ನಿಮ್ಮ ಸುತ್ತ. ಅವರನ್ನು ನಗಣ್ಯ ಮಾಡಬೇಡಿ. ಅವರನ್ನೇ ದೂರವಿಡಿ ಅಥವಾ ಅವರಿಂದ ನೀವೇ ದೂರವಾಗಿ. ಚರಾಸ್ತಿಯ ವಿಚಾರವಾಗಿ ಮಾತುಗಳು ಮನೆಯಲ್ಲಿ ಬರಬಹುದು. ತಂದೆಯ ಮಾತಿಗೆ ಗೌರವವನ್ನು ಕೊಡದೇ ಅಹಂಕಾರ ತೋರಿಸಬೇಡಿ. ಮನೆಯ ಕಾರ್ಯದಲ್ಲಿ ಸಂತೋಷದಿಂದ ಪಾಲ್ಗೊಳ್ಳುವಿರಿ. ತುರ್ತು ಅವಶ್ಯಕತೆಗಳಿಗೆ ಹಣವನ್ನು ವ್ಯಯಮಾಡಿ. ರಮಣೀಯ ಸ್ಥಳಗಳಿಗೆ ಹೋಗಬೇಕೆನಿಸುವುದು. ಆಲಸ್ಯದಿಂದ ವಿಶ್ರಾಂತಿ ಪಡೆಯುವಿರಿ. ಸಂಗಾತಿಯ ಜೊತೆ ಮುನಿಸು ಕಡಿಮೆ ಮಾಡಿಕೊಳ್ಳಿ. ಪ್ರೇಮಕ್ಕಾಗಿ ಹೆಚ್ಚು ಖರ್ಚನ್ನು ಮಾಡಬೇಕಾದೀತು. ಹಿತಶತ್ರುಗಳ ಬಗ್ಗೆ ನಿಮ್ಮ ಊಹೆಯು ಸುಳ್ಳಾಗಬಹುದು.

ಮಕರ ರಾಶಿ

ಅಧ್ಯಾತ್ಮದಿಂದ ಮನಸ್ಸು ದಿವ್ಯತೆಯನ್ನು ಅನುಭವಿಸಬಹುದು. ಇಂದು ನಿಮ್ಮ ಸಂಗಾತಿಯು ನಿಮಗೆ ಪ್ರಿಯವಾದುದನ್ನೇ ಮಾಡುವರು. ಸರ್ಕಾರಿ ಕೆಲಸಗಳು ನಿಧಾನವಾಗಿ ಮುಂದುವರಿಯುವುದು. ಮಾತಿನಿಂದ ಮಾತ್ರ ಎಲ್ಲವೂ ಸರಿಯಾಗುವುದು ಎನ್ನುವ ಭ್ರಮೆಯಿಂದ ಹೊರಬನ್ನಿ. ಗೃಹನಿರ್ಮಾಣದ ಕಾರ್ಯವು ಹಣಕಾಸಿನ ಅಭಾವದಿಂದ ಸ್ಥಗಿತಗೊಳ್ಳಬಹುದು. ನಿಮ್ಮ ನಿರುದ್ಯೋಗವನ್ನು ಕಂಡು ಯಾರಾದರೂ ತಾತ್ಕಾಲಿಕ ಕೆಲಸವನ್ನು ಕೊಡುವರು. ಕಾನೂನಾತ್ಮಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಾಗದು. ಉನ್ನತಸ್ಥಾನಕ್ಕೆ ಹೋಗಬೇಕೆನ್ನುವ ಬಯಕೆ ಇರಲಿದೆ. ನಿಮಗೆ ಯೋಗ್ಯ ಮಾರ್ಗದರ್ಶನದ ಕೊರತೆ ಇದ್ದು ಇದರಿಂದ ಅವಕಾಶವನ್ನು ಕಳೆದುಕೊಳ್ಳುವಿರಿ. ನಿಮ್ಮ ಅನಂತರ ಕೆಲಸ ಮಾಡುವವರಿಂದ ನಿಮಗೆ ಕೆಲವು ಮಾತುಗಳು ಸಿಗಬಹುದು. ಮಾತಿನ ಮೇಲೆ ಹಿಡಿತವನ್ನು ಇಟ್ಟು, ಆಲೋಚಿಸಿ ಮಾತನಾಡಿ. ಯಾವುದೇ ನಿರ್ಧಾರಗಳನ್ನು ಆ ಕ್ಷಣದಲ್ಲಿಯೇ ತೆಗೆದುಕೊಂಡು ಆಮೇಲೆ ಚಿಂತೆಗೆ ಒಳಗಾಗುವಂತೆ ಮಾಡಿಕೊಳ್ಳಬೇಡಿ. ಜಾಣ್ಮೆಯನ್ನು ಪ್ರದರ್ಶಿಸಲು ಹೋಗಿ ಮುಗ್ಗರಿಸುವಿರಿ. ನಿಮ್ಮ ಗುಟ್ಟನ್ನು ಬಿಟ್ಟಕೊಡುವುದು ಬೇಡ.

ಕುಂಭ ರಾಶಿ

ಆರ್ಥಿಕ ಲಾಭಕ್ಕಾಗಿ ದೂರಪ್ರಯಾಣ ಮಾಡುವಿರಿ. ಇಂದಿನ ನಿಮ್ಮ ಹೂಡಿಕೆ ನಿಮಗೆ ಬಹು ಉಪಕಾರಿ. ಬೇರೆಯ ದಿನಕ್ಕೆ ಹೋಲಿಸಿದರೆ ಇಂದಿನ ಆರ್ಥಿಕ ಸುಧಾರಣೆಯು ತಕ್ಕಮಟ್ಟಿಗೆ ಇರಲಿದೆ. ಯಾರೊಂದಿಗೂ ಸಂಪೂರ್ಣ ನಿಜವನ್ನು ಹೇಳಿಬಿಡಬೇಡಿ. ಪ್ರಮುಖ ಕಾರ್ಯಗಳಿಗೆ ಮನೆಯವರ ಸಹಾಯ ಕೇಳುವಿರಿ. ನಿಮ್ಮ‌ ಶಿಸ್ತಿನ ಕೆಲಸದಿಂದ ಕೆಲವರಿಗೆ ಬೇಸರವಾಗಬಹುದು.‌ ದೂರ ಬಂಧುಗಳ ಪರಿಚಯವಾಗಲಿದೆ. ಒತ್ತಡಗಳಿದ್ದರೂ ನೀವು ನಿಮ್ಮ ಕೆಲಸ ಮಾಡಿ ಮುಗಿಸುವಿರಿ. ಪ್ರೀತಿಯ ಮಾತುಗಳಿಂದ ಆಗುವ ಕಾರ್ಯವನ್ನು ಬೈದು ಮಾಡಿಸಲಾಗದು. ವಾಹನ ಚಾಲನೆಯಲ್ಲಿ ತೊಂದರೆಯಾದೀತು. ಧಾರ್ಮಿಕ ಆಚರಣೆಯಲ್ಲಿ ಆಸಕ್ತಿ ಇದ್ದು ಯಥಾಶಕ್ತಿ ಸಂಪತ್ತನ್ನು ಕೊಡುವಿರಿ. ಸಹೋದರರಿಂದ ಸಂಪತ್ತು ಸಿಗಲಿದೆ. ದಾಂಪತ್ಯದಲ್ಲಿ ಕಲಹವಿದ್ದರೂ ನೆಮ್ಮದಿ ಇರಲಿದೆ. ಕಳೆದುಕೊಂಡ ವಸ್ತುವನ್ನು ಪಡೆಯಲಿದ್ದೀರಿ. ಆಪ್ತರೆಂದು ಮಾತಿನಲ್ಲಿ ಹಿಡಿತವಿಲ್ಲದೇ ಏನನ್ನಾದರೂ ಹೇಳುವಿರಿ. ಮಕ್ಕಳ ವಿದ್ಯಾಭ್ಯಾಸದ ಚಿಂತೆ ಇರಲಿದೆ.

ಮೀನ ರಾಶಿ

ವೃತ್ತಿಯ ಬದಲಾವಣೆಗಳನ್ನು ಸ್ವೀಕರಿಸುವಿರಿ. ಇಂದು ಬೆಲೆಯುಳ್ಳ ಯಾವುದಾದರೂ ವಸ್ತುವೊಂದು ಕಣ್ಮರೆಯಾದೀತು. ಆಲೋಚಿಸದೇ ಯಾವುದೇ ಸಾಹಸ ಕಾರ್ಯದ ಕಡೆ ಮುನ್ನುಗ್ಗಬೇಡಿ. ಯಾರನ್ನೂ ನಿರೀಕ್ಷಿಸುತ್ತ ನಿಮ್ಮನ್ನು ಖಾಲಿ ಬಿಡಲಾರಿರಿ. ಉದ್ಯೋಗದ ನಿಮಿತ್ತ ದೂರ ಪ್ರಯಾಣವು ಅನಿವಾರ್ಯವಾಗುವುದು. ಸಂತಾನದ ಶುಭ ವಾರ್ತೆಯಿಂದ ಇಂದು ಸಂತಸ. ಯೋಜಿತ ಕಾರ್ಯಗಳನ್ನು ಒಂದೊಂದಾಗಿಯೇ ಮಾಡಲು ತೊಡಗಬಹುದು. ವ್ಯವಹಾರದ ಒತ್ತಡದ ನಡುವೆಯೂ ಏಕಾಂತವನ್ನು ಬಯಸಿ ಒಬ್ಬರೇ ಎಲ್ಲಿಗಾದರೂ ಹೋಗುವಿರಿ. ನೂತನ ವಾಹನವನ್ನು ಖರೀದಿಸಲು ಚುರುಕಾಗುವಿರಿ. ಇಂದು ನಿಮ್ಮ ಕೆಲಸವು ನಿಮಗೆ ತೃಪ್ತಿ ಕೊಡುವುದು. ಗಳಿಸಿದ್ದನ್ನು ಕಳೆದುಕೊಳ್ಳುವಾಗ ಯೋಚಿಸಿ. ಅವಶ್ಯಕತೆ ಇದ್ದರೆ‌ ಮಾತ್ರ ಮುಂದುವರಿಯುವುದು ಉತ್ತಮ. ಭವಿಷ್ಯದ ನಾಳೆಯ ಕುರಿತು ಅತಿಯಾದ ಯೋಚನೆ ಬೇಕಾಗಿಲ್ಲ.‌ ಖುಷಿಯಿಂದ ಸ್ವೀಕರಿಸಿ ಎಲ್ಲವನ್ನೂ. ನಿಮ್ಮ ಇಂದಿನ ಶ್ರಮಕ್ಕೆ ತಕ್ಕ ಫಲವು ಪ್ರಾಪ್ತವಾಗಲಿದೆ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 03 12T201408.813

ತುಂಗಭದ್ರಾ ಅಣೆಕಟ್ಟು ಸುರಕ್ಷತೆಗೆ ಮೊದಲ ಆದ್ಯತೆ: ಮೇ ತಿಂಗಳೊಳಗೆ ಎಲ್ಲಾ 33 ಕ್ರಸ್ಟ್ ಗೇಟ್‌ಗಳ ಬದಲಾವಣೆ ಪೂರ್ಣ-ಡಿ.ಕೆ.ಶಿವಕುಮಾರ್

by ಯಶಸ್ವಿನಿ ಎಂ
March 12, 2026 - 8:15 pm
0

Untitled design 2026 03 12T193441.959

ಸಹನೆಗೂ ಮಿತಿಯಿದೆ ಎಂದ ರಶ್ಮಿಕಾ ಮಂದಣ್ಣ: ತಾಯಿಯ ಆಡಿಯೋ ತಿರುಚಿದವರಿಗೆ 24 ಗಂಟೆಗಳ ಡೆಡ್‌ಲೈನ್

by ಯಶಸ್ವಿನಿ ಎಂ
March 12, 2026 - 7:48 pm
0

Untitled design 2026 03 12T183135.938

ಚಾರ್‌ಧಾಮ್ ಯಾತ್ರೆ 2026: ಬದರಿನಾಥ, ಕೇದಾರನಾಥ ಸೇರಿ 47 ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶ ನಿಷೇಧ

by ಯಶಸ್ವಿನಿ ಎಂ
March 12, 2026 - 6:35 pm
0

Untitled design 2026 03 12T182136.169

ಗ್ಯಾಸ್ ಟ್ರಬಲ್‌ನಿಂದ ಮರಗಳಿಗೆ ಕೊಡಲಿ ಭೀತಿ-ಕಟ್ಟೆಚ್ಚರಕ್ಕೆ ಈಶ್ವರ ಖಂಡ್ರೆ ಸೂಚನೆ

by ಯಶಸ್ವಿನಿ ಎಂ
March 12, 2026 - 6:24 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 12 04T071408.916
    ಸಂಖ್ಯಾಶಾಸ್ತ್ರ ಭವಿಷ್ಯ: ಎಲೆಕ್ಟ್ರಿಕ್ ವಸ್ತುಗಳ ಖರೀದಿ, ವ್ಯಾಪಾರಸ್ಥರಿಗೆ ಆದಾಯ ಹೆಚ್ಚಳ.!
    March 12, 2026 | 0
  • Untitled design 2025 12 04T070243.618
    ದಿನ ಭವಿಷ್ಯ: ಈ ರಾಶಿಯವರಿಗೆ ಅನಿರೀಕ್ಷಿತ ಸಹಾಯ, ಕೆಲವರಿಗೆ ಎಚ್ಚರಿಕೆ ಅಗತ್ಯ.!
    March 12, 2026 | 0
  • Untitled design 2025 12 04T071408.916
    ಸಂಖ್ಯಾಶಾಸ್ತ್ರ ಭವಿಷ್ಯ: ಈ ಜನ್ಮಸಂಖ್ಯೆಯವರು ಹಣ ಖರ್ಚು ಮಾಡುವ ಸಾಧ್ಯತೆ, ಸಿನಿಮಾ ಕ್ಷೇತ್ರದವರಿಗೆ ಪ್ರಶಸ್ತಿ ಯೋಗ.!
    March 11, 2026 | 0
  • Untitled design 2025 12 04T070243.618
    ಇಂದಿನ ದಿನಭವಿಷ್ಯ: ಪ್ರೇಮ, ಹಣ, ಉದ್ಯೋಗದಲ್ಲಿ ಯಾವ ರಾಶಿಗೆ ಏನು ಫಲ?
    March 11, 2026 | 0
  • Untitled design 2026 03 10T064824.913
    ಸಂಖ್ಯಾಶಾಸ್ತ್ರ ಭವಿಷ್ಯ : ಈ ದಿನಾಂಕದಂದು ಹುಟ್ಟಿದವರು ಸಾಲ ಕೊಡುವ ಮುನ್ನ ಎಚ್ಚರ !
    March 10, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version