27 ಮಾರ್ಚ್ 2025, ಗುರುವಾರದ ದಿನವು ಶಾಲಿವಾಹನ ಶಕೆ 1947ರ ಉತ್ತರಾಯಣ, ಶಿಶಿರ ಋತು ಮತ್ತು ಫಾಲ್ಗುಣ ಮಾಸದ ಕೃಷ್ಣ ಪಕ್ಷದ ತ್ರಯೋದಶೀ ತಿಥಿಯೊಂದಿಗೆ ಪ್ರಾರಂಭವಾಗಿದೆ. ಈ ದಿನದ ನಕ್ಷತ್ರ, ಯೋಗ, ಮತ್ತು ಕರಣಗಳು ಪ್ರತಿ ರಾಶಿಯವರ ಜೀವನದ ಮೇಲೆ ವಿಶಿಷ್ಟ ಪ್ರಭಾವ ಬೀರಲಿದೆ. ವೃತ್ತಿ, ಆರೋಗ್ಯ, ಪ್ರಣಯ, ಹಣಕಾಸು ಮತ್ತು ಕುಟುಂಬ ಸಂಬಂಧಗಳಿಗೆ ಸಂಬಂಧಿಸಿದ ಭವಿಷ್ಯವಾಣಿಗಳನ್ನು ಇಲ್ಲಿ ತಿಳಿಯೋಣ.
ಪ್ರತಿ ರಾಶಿಯವರಿಗೆ ದಿನದ ಫಲಿತಾಂಶ
ಮೇಷ ರಾಶಿ
ನೈತಿಕ ಹೊಣೆಗಾರಿಕೆಯನ್ನು ತಪ್ಪಿಸಲು ಪ್ರಯತ್ನಿಸಬೇಡಿ. ವಾಸ್ತವಿಕತೆಯೊಂದಿಗೆ ಆಲೋಚಿಸಿ.ಸಂಗಾತಿಯಿಂದ ಪ್ರಶಂಸೆ ಮತ್ತು ಸ್ನೇಹಿತರಿಂದ ಆರ್ಥಿಕ ಸಹಾಯದ ಸಾಧ್ಯತೆ.ನೀರಿನಿಂದ ದೂರವಿರಿ; ಮಾನಸಿಕ ಸಮತೋಲನ ಕಾಪಾಡಿಕೊಳ್ಳಿ.
ವೃಷಭ ರಾಶಿ
ಕುಟುಂಬದೊಂದಿಗೆ ಸಂತೋಷದ ದಿನ. ವ್ಯಾಪಾರದಲ್ಲಿ ಸಹಕಾರದ ನಿರೀಕ್ಷೆ.ಹಣ ಉಳಿಸುವ ಪ್ರಯತ್ನ ಯಶಸ್ವಿ; ಹೊಸ ವಸ್ತುಗಳ ಖರೀದಿ.
ಮಿಥುನ ರಾಶಿ
ಸಂಬಂಧಗಳಲ್ಲಿ ಸೂಕ್ಷ್ಮತೆ ಅಗತ್ಯ. ವಾಹನ ಸೌಕರ್ಯ ಮತ್ತು ಹೊಸ ಬಟ್ಟೆ ಖರೀದಿಯ ಸಾಧ್ಯತೆ.ಉದ್ಯಮಕ್ಕೆ ಪಾಲುದಾರರೊಂದಿಗೆ ಸೇರಿಕೊಳ್ಳುವುದು ಲಾಭದಾಯಕ.
ಕರ್ಕಾಟಕ ರಾಶಿ
ಹೊಸ ಕೆಲಸಗಳನ್ನು ತಡೆಹಿಡಿಯಿರಿ. ಆರೋಗ್ಯಕ್ಕೆ ಪ್ರಾಶಸ್ತ್ಯ ನೀಡಿ.ಸರ್ಕಾರಿ ಉದ್ಯೋಗಿಗಳಿಗೆ ಶುಭ ಸುದ್ದಿ.
ಸಿಂಹ ರಾಶಿ
ಮಾತನ್ನು ಮಿತವಾಗಿ ಆಡಿ. ಮೇಲಧಿಕಾರಿಗಳ ಟೀಕೆಗಳಿಂದ ನೋವು.ಕುಟುಂಬದೊಂದಿಗೆ ಸಮಯ ಕಳೆಯಲು ಅನುಕೂಲ.
ಕನ್ಯಾ ರಾಶಿ:
ನಿಮ್ಮ ಬಗ್ಗೆ ಪ್ರಚಾರದ ಗೀಳನ್ನು ಕಡಿಮೆ ಮಾಡಿಕೊಳ್ಳಿ. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ತಾಯಿಗೆ ನಿಮ್ಮಂದ ಯಾವುದಾದರೊಂದು ಲಾಭವಾಗಬಹುದು.
ತುಲಾ ರಾಶಿ:
ನಿಮ್ಮನ್ನು ನಿರ್ಲಕ್ಷಿಸುವ ಸಹೋದ್ಯೋಗಿಗಳ ಜೊತೆ ಬೆರೆಯಲು ಪ್ರಯತ್ನಿಸಿ. ವೃತ್ತಿಯಲ್ಲಿ ನಿಮಗೆ ಅನನುಕೂಲತೆಯು ಸೃಷ್ಟಿಯಾಗಬಹುದು.
ವೃಶ್ಚಿಕ ರಾಶಿ:
ನಿಮ್ಮ ನಡವಳಿಕೆಯು ವಿವೇಕಯುತವಾಗಿರಲಿ. ಬಂಧುಗಳ ಜೊತೆ ಪೂರ್ವಾಗ್ರಹ ಪೀಡಿತರಾಗಿ ಮಾತನಾಡುವುದು ಬೇಡ. ಆರೋಗ್ಯದ ಸುಧಾರಣೆಗೆ ಖರ್ಚಾಗುವುದು.
ಧನು ರಾಶಿ:
ಯಾರಾದರೂ ನಿಮ್ಮನ್ನು ಉದ್ವೇಗಗೊಳಿಸಬಹುದು. ಅದಕ್ಕೆ ಒಳಗಾಗುವುದು ಬೇಡ, ಉತ್ತಮ ಸಮಯದ ನಿರೀಕ್ಷೆಯಲ್ಲಿ ನೀವು ಇರುವಿರಿ. ದೂರದ ಬಂಧುಗಳ ಸಮಾಗಮವಾಗಬಹುದು.
ಮಕರ ರಾಶಿ:
ಒಂದೊಮ್ಮೆ ಮಾಡಲೇಬೇಕಿದ್ದರೆ ಸಾವಧಾನದಿಂದ ಚಿಂತಿಸಿ, ಸಲಹೆ ಪಡೆದುಕೊಳ್ಳುವುದು ಯೋಗ್ಯವಾಗಿದೆ. ಹಣಕಾಸಿನ ಯೋಜನೆಯಲ್ಲಿ ಆರಂಭದಲ್ಲಿ ಕೆಲವು ತೊಂದರೆಗಳಿದ್ದರೂ ಅನಂತರ ದಾರಿಯು ಸ್ಪಷ್ಟವಾಗುತ್ತದೆ.
ಕುಂಭ ರಾಶಿ:
ನಿಮ್ಮ ಮನಸ್ಸು ಸೂಕ್ಷ್ಮವಾದ ಸಂಗತಿಗಳನ್ನೂ ಇಂದು ಸ್ವೀಕರಿಸಬಹುದು. ನೀವು ಕಾಲ್ಪನಿಕ ಪ್ರಪಂಚದಿಂದ ವಾಸ್ತವಕ್ಕೆ ಬರಬೇಕಾಗುವುದು. ಕುಟುಂಬದ ವಿಷಯಗಳಲ್ಲಿ ಆಸಕ್ತಿ ವಹಿಸುತ್ತೀರಿ.
ಮೀನ ರಾಶಿ:
ವ್ಯಾವಹಾರಿಕ ಮಾತುಗಳನ್ನು ಬಿಟ್ಟು ಬೇರೆ ಮಾತನಾಡಲು ಸಂಯಮವಿಲ್ಲದೆ ಇರಬಹುದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆದಷ್ಟು ಸ್ಥಿರಾಸ್ತಿಯ ಬಗ್ಗೆ ಸಲ್ಲದ ಚರ್ಚೆ ಮಾಡುವುದನ್ನು ತಪ್ಪಿಸಿ.