ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆ ನಮ್ಮ ವ್ಯಕ್ತಿತ್ವ, ಚಿಂತನೆ ಮತ್ತು ದಿನನಿತ್ಯದ ಫಲಿತಾಂಶಗಳ ಮೇಲೆ ಪ್ರಭಾವ ಬೀರುತ್ತದೆ. ಫೆಬ್ರವರಿ 2ರ ಸೋಮವಾರವು ಕೆಲವರಿಗೆ ಹೊಸ ಅವಕಾಶಗಳನ್ನು ನೀಡಿದರೆ, ಇನ್ನೂ ಕೆಲವರಿಗೆ ಎಚ್ಚರಿಕೆಯ ಸಂದೇಶವನ್ನು ಕೊಡುತ್ತಿದೆ. ಹಣಕಾಸು, ಉದ್ಯೋಗ, ಶಿಕ್ಷಣ, ಸಂಬಂಧಗಳು ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಯಾವ ಜನ್ಮಸಂಖ್ಯೆಗೆ ಹೇಗಿದೆ ದಿನಭವಿಷ್ಯ ಎಂಬುದನ್ನು ಇಲ್ಲಿ ವಿವರವಾಗಿ ತಿಳಿಸಲಾಗಿದೆ. ಜೊತೆಗೆ ದಿನವನ್ನು ಶುಭವಾಗಿಸಿಕೊಳ್ಳಲು ಕೆಲವು ಸರಳ ಪರಿಹಾರಗಳನ್ನೂ ಸೂಚಿಸಲಾಗಿದೆ.
ಜನ್ಮಸಂಖ್ಯೆ 1 (1, 10, 19, 28ರಂದು ಜನಿಸಿದವರು)
ಈ ದಿನ ಹೊಸದನ್ನು ಕಲಿಯುವ ಆಸಕ್ತಿ ಹೆಚ್ಚಾಗಲಿದೆ. ಕೆಲವರು ಹೊಸ ಭಾಷೆ ಅಥವಾ ಕೌಶಲ್ಯ ತರಬೇತಿಗೆ ಸೇರ್ಪಡೆಯಾಗುವ ನಿರ್ಧಾರ ಮಾಡಬಹುದು. ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಇಂಟರ್ನ್‌ಶಿಪ್ ಅವಕಾಶ ದೊರೆಯುವ ಸಾಧ್ಯತೆ ಇದೆ. ಹಣಕಾಸಿನ ವಿಷಯದಲ್ಲಿ ನೀವು ಮಾಡಿಕೊಂಡ ಯೋಜನೆ ಫಲ ನೀಡಲಿದೆ. ಸಣ್ಣ ಹೂಡಿಕೆಯಿಂದ ಆರಂಭಿಸಿದ ವ್ಯವಹಾರಗಳು ಲಾಭ ನೀಡಬಹುದು.
ಜನ್ಮಸಂಖ್ಯೆ 2 (2, 11, 20, 29ರಂದು ಜನಿಸಿದವರು)
ಕೋರ್ಟ್-ಕಚೇರಿಗಳಲ್ಲಿ ನಡೆಯುತ್ತಿರುವ ವ್ಯಾಜ್ಯಗಳು ಮಾನಸಿಕ ಒತ್ತಡ ಉಂಟುಮಾಡಬಹುದು. ಆಸ್ತಿ ಸಂಬಂಧಿತ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ಚಿನ್ನ ಅಥವಾ ಬೆಳ್ಳಿ ಅಡಮಾನವಿಟ್ಟು ಸಾಲ ಪಡೆದಿದ್ದರೆ, ನಿಗದಿತ ಸಮಯಕ್ಕೆ ಹಣ ಮರುಪಾವತಿ ಮಾಡುವುದು ಅತ್ಯಗತ್ಯ. ನಿರ್ಲಕ್ಷ್ಯ ಮಾಡಿದರೆ ಹರಾಜಿನ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ.
ಜನ್ಮಸಂಖ್ಯೆ 3 (3, 12, 21, 30ರಂದು ಜನಿಸಿದವರು)
ಒಂದು ರೀತಿಯ ಸಮಾಧಾನ ಮತ್ತು ಆತ್ಮಸಂತೃಪ್ತಿ ನಿಮ್ಮನ್ನು ಆವರಿಸಲಿದೆ. ಕೊಟ್ಟ ಮಾತನ್ನು ಉಳಿಸಿಕೊಂಡು ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತೀರಿ. ಹಣಕಾಸಿನ ಒತ್ತಡದಿಂದ ಹೊರಬರುವ ಮಾರ್ಗಗಳು ಗೋಚರಿಸಲಿದ್ದು, ನಿಮ್ಮ ಆತ್ಮವಿಶ್ವಾಸ ಹೆಚ್ಚಲಿದೆ.
ಜನ್ಮಸಂಖ್ಯೆ 4 (4, 13, 22, 31ರಂದು ಜನಿಸಿದವರು)
ಈ ದಿನ ಹಲವು ಶುಭ ಫಲಗಳನ್ನು ತಂದುಕೊಡಲಿದೆ. ದೈವಿಕ ಅನುಗ್ರಹ ನಿಮ್ಮ ಮೇಲೆ ಇದೆ ಎಂಬ ಭಾವನೆ ಗಟ್ಟಿಯಾಗುತ್ತದೆ. ಪ್ರೇಮಿಗಳು ಮತ್ತು ನವವಿವಾಹಿತರಿಗೆ ಸಂತೋಷದ ಕ್ಷಣಗಳು ಲಭ್ಯ. ಬಾಡಿಗೆ ಆದಾಯದ ಉದ್ದೇಶದಿಂದ ಆಸ್ತಿ ಹುಡುಕುತ್ತಿರುವವರಿಗೆ ಅನುಕೂಲಕರ ಅವಕಾಶ ಸಿಗಲಿದೆ.
ನ್ಮಸಂಖ್ಯೆ 5 (5, 14, 23ರಂದು ಜನಿಸಿದವರು)
ನಿಮ್ಮ ಖರ್ಚಿನ ಶೈಲಿಯಲ್ಲಿ ದೊಡ್ಡ ಬದಲಾವಣೆ ತರಲು ನಿರ್ಧರಿಸುತ್ತೀರಿ. ಮನೆ ಖರೀದಿ, ನಿರ್ಮಾಣ ಅಥವಾ ರೆನೊವೇಷನ್ ವಿಷಯದಲ್ಲಿ ತಂದೆಯೊಡನೆ ಅಥವಾ ಪಿತೃತೂಲ್ಯರೊಂದಿಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಆರ್ಥಿಕ ನಿರ್ಧಾರಗಳಲ್ಲಿ ತಾಳ್ಮೆ ಅಗತ್ಯ.
ಜನ್ಮಸಂಖ್ಯೆ 6 (6, 15, 24ರಂದು ಜನಿಸಿದವರು)
ಉದ್ಯೋಗ ಕ್ಷೇತ್ರದಲ್ಲಿ ಅನಿಶ್ಚಿತತೆ ಕುರಿತು ಕೇಳಿಬರುವ ಸುದ್ದಿಗಳು ಒತ್ತಡಕ್ಕೆ ಕಾರಣವಾಗಬಹುದು. ರಿಯಲ್ ಎಸ್ಟೇಟ್ ಅಥವಾ ಷೇರು ಮಾರುಕಟ್ಟೆ ಹೂಡಿಕೆಗಳ ಬಗ್ಗೆ ಆತಂಕ ಉಂಟಾಗಬಹುದು. ಆತುರದ ನಿರ್ಧಾರ ತೆಗೆದುಕೊಳ್ಳದೇ, ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸುವುದು ಒಳಿತು.
ಜನ್ಮಸಂಖ್ಯೆ 7 (7, 16, 25ರಂದು ಜನಿಸಿದವರು)
ನಿಮ್ಮ ಕೌಶಲ್ಯ ಮತ್ತು ಅನುಭವಕ್ಕೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಲಿದೆ. ಕೆಲವರಿಗೆ ಏಕಕಾಲದಲ್ಲಿ ಹಲವು ಉದ್ಯೋಗ ಆಫರ್‌ಗಳು ಬರಬಹುದು. ಸಂಬಳದ ಜೊತೆಗೆ ಲಾಭದಲ್ಲಿ ಶೇಕಡಾವಾರು ಪಾಲು ನೀಡುವ ಪ್ರಸ್ತಾವವೂ ದೊರೆಯುವ ಯೋಗ ಇದೆ.
ಜನ್ಮಸಂಖ್ಯೆ 8 (8, 17, 26ರಂದು ಜನಿಸಿದವರು)
ನೀವು ತಪ್ಪಿಸಲು ಯತ್ನಿಸುತ್ತಿದ್ದ ಸಂದರ್ಭಗಳಲ್ಲೇ ತೊಡಗಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು. ಹಣಕಾಸು ಹಾಗೂ ವ್ಯವಹಾರ ವಿಷಯಗಳಲ್ಲಿ ಸಂಪೂರ್ಣ ಮಾಹಿತಿ ಇರುವುದನ್ನೇ ಮಾತನಾಡಿ. ಅನಾವಶ್ಯಕ ವಾಗ್ವಾದದಿಂದ ದೂರವಿರುವುದು ಉತ್ತಮ.
ಜನ್ಮಸಂಖ್ಯೆ 9 (9, 18, 27ರಂದು ಜನಿಸಿದವರು)
ಸಂತಾನ ಪ್ರಾಪ್ತಿಗೆ ಪ್ರಯತ್ನಿಸುತ್ತಿರುವವರಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ವೈದ್ಯಕೀಯ ಚಿಕಿತ್ಸೆಯಲ್ಲಿ ಇದ್ದ ಅಡೆತಡೆಗಳು ನಿವಾರಣೆಯಾಗಬಹುದು. ಪರ್ಫ್ಯೂಮ್, ದುಬಾರಿ ಬಟ್ಟೆ ಹಾಗೂ ಬ್ರ್ಯಾಂಡೆಡ್ ಶೂಗಳ ವ್ಯಾಪಾರಿಗಳಿಗೆ ಆದಾಯದಲ್ಲಿ ಗಮನಾರ್ಹ ಏರಿಕೆ ನಿರೀಕ್ಷಿಸಬಹುದು.
