ಇಂದಿನ ದಿನ ಭವಿಷ್ಯ: ಯಾವ ರಾಶಿಯವರಿಗೆ ಶುಭ, ಯಾರಿಗೆ ಅಶುಭ..!

Untitled design (23)

ಮೇಷ ರಾಶಿ: ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯನ್ನು ಕಂಡು ಖುಷಿಯಾಗುವ ದಿನ. ಸ್ತ್ರೀಯರಿಂದ ಧನಸಹಾಯವಾಗಲಿದೆ. ದೇಹವು ನಿಮ್ಮ ನಿಯಂತ್ರಣದಲ್ಲಿ ಇರದು. ಆದರೆ ಸಮಯದ ಸದುಪಯೋಗ ಮಾಡಿಕೊಳ್ಳಬೇಕಿದೆ. ಸಂಗಾತಿಯ ನಡೆವಳಿಕೆಯನ್ನು ಪ್ರಶಂಸಿಸುವಿರಿ. ನಿಮ್ಮ ರಹಸ್ಯವು ಬೆಳಕಿಗೆ ಬರಬಹುದು ಎಂಬ ಭೀತಿ ಇದೆ.

ವೃಷಭ ರಾಶಿ: ಗುರಿ ಮುಟ್ಟಲು ಬಹಳ ಪ್ರಯತ್ನಿಸುವಿರಿ. ರಾಜಕೀಯ ಪ್ರಭಾವಿಗಳ ಸಂಪರ್ಕವಾಗಲಿದೆ. ವೈವಾಹಿಕ ಜೀವನದಲ್ಲಿ ಮನಸ್ತಾಪ ಇರಬಹುದು. ತಿಳಿವಳಿಕೆ ಕೊರತೆಯಿಂದ ವ್ಯವಹಾರದಲ್ಲಿ ನಷ್ಟವಾಗಬಹುದು. ಅಗತ್ಯ ವಸ್ತುಗಳು ಕಣ್ಮರೆಯಾಗಬಹುದು.

ಮಿಥುನ ರಾಶಿ: ಧಾರ್ಮಿಕ ಕಾರ್ಯಗಳು ಮತ್ತು ಮಕ್ಕಳು ಸಂತೋಷ ತರುವರು. ದೇಹ ಬಲಪಡಿಸಲು ಕಸರತ್ತು ಮಾಡುವಿರಿ. ಮಂಗಳ ಕಾರ್ಯ ಸರಿಯಾದ ಸಮಯಕ್ಕೆ ಆಗದು. ಕಾನೂನಾತ್ಮಕ ವಿಚಾರಗಳಿಗೆ ಮಾತ್ರ ಬೆಂಬಲ ನೀಡಿ. ಸಂಗಾತಿಯ ಜೊತೆ ಒಡನಾಟ ಹೆಚ್ಚಿರಲಿದೆ.

ಕರ್ಕಾಟಕ ರಾಶಿ: ದೂರ ಪ್ರಯಾಣದಲ್ಲಿ ಸ್ನೇಹಿತರ ಮನೆಯಲ್ಲಿ ವಾಸಿಸಬೇಕಾಗಬಹುದು. ಹಿರಿಯರ ಮಾತು ಸಂವೇದನಾ ಕೇಂದ್ರ ತೆರೆಯಬಹುದು. ಆಲಸ್ಯದಿಂದ ಬೈಗುಳ ಕೇಳಬೇಕಾಗುವುದು. ಮಕ್ಕಳ ಮೇಲಿನ ಮೋಹ ಕಡಿಮೆ ಮಾಡಿಕೊಳ್ಳಬೇಕು.

ಸಿಂಹ ರಾಶಿ: ಕಚೇರಿಯಲ್ಲಿ ಸೂಕ್ತ ವ್ಯಕ್ತಿ ಎಂದು ಆಯ್ಕೆಯಾದರೂ ಹಿಂಜರಿಕೆ ಉಂಟಾಗಲಿದೆ. ತಾಯಿ ಮಾನಸಿಕ ಬಲ ತುಂಬುವರು. ವ್ಯಾಪಾರದಲ್ಲಿ ಅನುಭವಿಗಳ ಸಲಹೆ ಪಡೆಯಿರಿ. ಸುಳ್ಳು ವ್ಯವಹಾರಗಳು ಹೆಚ್ಚು ಕಾಲ ನಡೆಯದು.

ಕನ್ಯಾ ರಾಶಿ: ಶಿಕ್ಷಣದಿಂದ ಪ್ರತಿಷ್ಠಿತ ಉದ್ಯೋಗ ಸಿಗುವುದು. ಹಾಸ್ಯ ಸ್ವಭಾವದಿಂದ ಮನೆಯಲ್ಲಿ ಸಂತೋಷ ವಾತಾವರಣ. ತಾಳ್ಮೆಯಿಂದ ಕೆಲಸ ಮಾಡಿ. ಸಕಾಲದಲ್ಲಿ ಭೋಜನ ಮಾಡಲು ಕಷ್ಟವಾಗಬಹುದು.

ತುಲಾ ರಾಶಿ: ಆಸಕ್ತಿ ಬದಲಾಯಿಸಿಕೊಳ್ಳಬೇಡಿ. ಸಂಗಾತಿಯಿಂದ ನಿರ್ಲಕ್ಷ್ಯಕ್ಕೆ ಒಳಗಾಗುವಿರಿ. ಕೆಲಸದ ಮೇಲೆ ಹೆಚ್ಚು ಗಮನವಿರಲಿ. ಮಕ್ಕಳಿಂದ ಹೆಮ್ಮೆಯ ಸಂಗತಿಗಳು ನಿರೀಕ್ಷಿತವಾಗಿ ಬರಲಿವೆ.

ವೃಶ್ಚಿಕ ರಾಶಿ: ಅತಿಯಾಗಿ ಭಾವನಾತ್ಮಕವಾಗಬೇಡಿ. ಅಸೂಯೆಯಿಂದ ಕೆಲಸ ಹಿಂದುಳಿಯುವುದು. ಅನಗತ್ಯ ಕೆಲಸಗಳಿಗೆ ಕೈಹಾಕಿ ಹಣ ಕಳೆದುಕೊಳ್ಳಬಹುದು. ಅತಿಯಾದ ನಂಬಿಕೆಯು ಮುಳುವಾಗಬಹುದು. ದಾಂಪತ್ಯದ ವಿವಾದ ಪೂರ್ಣಗೊಂಡು ಹೊಂದಿಕೊಳ್ಳುವಿರಿ.

ಧನು ರಾಶಿ: ಪ್ರತಿಭೆಗೆ ಪರೀಕ್ಷಾಕಾಲವಾಗಲಿದೆ. ಆತ್ಮಬಲ ಅಧಿಕವಾಗುವುದು. ಸಣ್ಣ ವಿಚಾರಗಳಿಗೆ ದ್ವೇಷ ಸಾಧಿಸಬೇಡಿ. ಮರೆತು ಮುನ್ನಡೆದರೆ ಮಾರ್ಗ ಸುಗಮ. ಕರ್ತವ್ಯ ನಿಯಮಬದ್ಧವಾಗಿದ್ದರೆ ಒಳಿತು.

ಮಕರ ರಾಶಿ: ಮಕ್ಕಳ ವಿಚಾರದಲ್ಲಿ ಅನುಕೂಲವಾಗಲಿದೆ. ಅಣ್ಣ-ತಮ್ಮಂದಿರಲ್ಲಿ ಕಲಹ ಸಾಧ್ಯತೆ. ಹಣ ಖರ್ಚಾಗಿ ಬೇಸರವಾಗಬಹುದು. ಉದ್ಯೋಗದಲ್ಲಿ ಸಣ್ಣ ಬದಲಾವಣೆ.

ಕುಂಭ ರಾಶಿ: ಮಕ್ಕಳಿಗೆ ಪ್ರಗತಿಯ ದಿನ. ಮನೆಯಲ್ಲಿ ಸಮಾಧಾನ ಕಡಿಮೆ. ದಾಂಪತ್ಯದ ವೈಮನಸ್ಯ ದೂರವಾಗಬಹುದು. ನಿಂದನೆಗೆ ಒಳಗಾಗುವ ಅವಕಾಶವಿದೆ. ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ.

ಮೀನ ರಾಶಿ: ಕೆಲಸದ ಒತ್ತಡ ಹೆಚ್ಚಾಗಿ ಕೋಪ ಬರಬಹುದು, ತಾಳ್ಮೆಯಿಂದಿರಿ. ವಿದೇಶದಿಂದ ಶುಭ ವಾರ್ತೆ ಕೇಳುವ ಯೋಗ. ಷೇರು ಮಾರುಕಟ್ಟೆಯಲ್ಲಿ ಲಾಭವಿರಲಿದೆ.

Exit mobile version