ಜುಲೈ 21, 2026, ಮಂಗಳವಾರ. ಇಂದು ಗ್ರಹ-ನಕ್ಷತ್ರಗಳ ವಿಶೇಷ ಸಂಯೋಗವೊಂದು ಸೃಷ್ಟಿಯಾಗಿದ್ದು, ಕೆಲವು ರಾಶಿಯವರಿಗೆ ಸುವರ್ಣಾವಕಾಶವನ್ನು ಒದಗಿಸಿದೆ . ಆಷಾಢ ಮಾಸದ ಶುಕ್ಲ ಪಕ್ಷದ ಅಷ್ಟಮಿ ತಿಥಿಯಿಂದ ಆರಂಭವಾಗುವ ಇಂದಿನ ದಿನವು ಸಿದ್ಧಿ ಯೋಗ, ಸಾಧ್ಯ ಯೋಗದಂತಹ ಶುಭ ಯೋಗಗಳ ಪ್ರಭಾವದಿಂದ ಕೂಡಿದೆ . ಇಂದು ಚಂದ್ರನು ತುಲಾ ರಾಶಿಯಲ್ಲಿ ಸಂಚರಿಸುತ್ತಿದ್ದು, ಇದು ಹಲವಾರು ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರಲಿದೆ
ವೃಷಭ ರಾಶಿ: ಇಂದು ನಿಮ್ಮ ಜೀವನದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ಆಗಮಿಸಲಿದೆ. ಹೊಸ ವ್ಯಾಪಾರ ಅವಕಾಶಗಳು ದೊರೆಯಲಿದ್ದು, ಸಂಗಾತಿಯೊಂದಿಗಿನ ಸಂಬಂಧದಲ್ಲಿ ಪ್ರೀತಿ ಮತ್ತು ಹೊಂದಾಣಿಕೆ ವೃದ್ಧಿಯಾಗಲಿದೆ. ಹೂಡಿಕೆಗೆ ಇದು ಉತ್ತಮ ಸಮಯ.
ಸಿಂಹ ರಾಶಿ: ನಿಮ್ಮ ಆತ್ಮವಿಶ್ವಾಸವು ಇಂದು ಹೆಚ್ಚಾಗಲಿದೆ. ರಚನಾತ್ಮಕ ಕೆಲಸಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆಯಿದೆ. ಹಳೆಯ ಹೂಡಿಕೆಯಿಂದ ಧನ ಲಾಭವಾಗುವ ಯೋಗವಿದೆ. ಬಾಕಿ ಹಣ ವಾಪಸ್ ಬರುವ ಸಾಧ್ಯತೆಯೂ ಇದೆ.
ತುಲಾ ರಾಶಿ: ಇಂದು ನಿಮಗೆ ಅತ್ಯಂತ ಅದೃಷ್ಟಶಾಲಿ ದಿನ. ಸ್ನೇಹಿತರು ಮತ್ತು ಸಂಬಂಧಿಕರ ಸಂಪೂರ್ಣ ಬೆಂಬಲ ಲಭಿಸಲಿದೆ. ಹಣ, ಸಂಪತ್ತು ಮತ್ತು ವ್ಯಾಪಾರದಲ್ಲಿ ವೃದ್ಧಿಯಾಗುವ ಶುಭ ಯೋಗಗಳಿವೆ. ಸಾಮಾಜಿಕವಾಗಿ ಗೌರವ ಹೆಚ್ಚಾಗಲಿದೆ.
ವೃಶ್ಚಿಕ ರಾಶಿ: ವೃತ್ತಿ ಜೀವನದಲ್ಲಿ ಪ್ರಗತಿಗೆ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ವ್ಯಾಪಾರದಲ್ಲಿ ಉತ್ತಮ ಧನಲಾಭದ ಯೋಗವಿದೆ. ಯಾವುದೇ ನಿರ್ಧಾರವನ್ನು ವಿವೇಚನೆಯಿಂದ ತೆಗೆದುಕೊಳ್ಳಲು ಸೂಚಿಸಲಾಗಿದೆ.
ಕರ್ಕಾಟಕ ರಾಶಿ: ದೂರ ಪ್ರಯಾಣದ ಸಾಧ್ಯತೆಯಿದ್ದು, ಮನೆಯಲ್ಲಿ ಆಹ್ಲಾದಕರ ವಾತಾವರಣವಿರಲಿದೆ. ಉದ್ಯೋಗದಲ್ಲಿ ಬಡ್ತಿ ಅಥವಾ ಉತ್ತಮ ಅವಕಾಶವು ದೊರೆಯಬಹುದು.
ಧನುಸ್ಸು ರಾಶಿ: ಇಂದು ನಿಮಗೆ ಅತ್ಯಂತ ಶುಭಕರ ದಿನವಾಗಲಿದೆ. ಉತ್ತಮ ಸುದ್ದಿಗಳು ಕೇಳಿಬರಲಿದ್ದು, ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭವನ್ನು ಪಡೆಯಲಿದ್ದೀರಿ.
ಮೇಷ ರಾಶಿ: ಆರ್ಥಿಕವಾಗಿ ಸಬಲವಾದ ದಿನ. ಹೊಸ ಹೂಡಿಕೆಗೆ ಉತ್ತಮ ಸಮಯ.
ಮಿಥುನ ರಾಶಿ: ಕೆಲಸದಲ್ಲಿ ಹೊಸ ಬದಲಾವಣೆಗಳು. ನಿಮ್ಮ ಬುದ್ಧಿವಂತಿಕೆಯಿಂದ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಕನ್ಯಾ ರಾಶಿ: ಆಧ್ಯಾತ್ಮಿಕ ಚಿಂತನೆ ಮತ್ತು ಶಿಕ್ಷಣಕ್ಕೆ ಉತ್ತಮ ದಿನ. ಪ್ರತಿಷ್ಠಿತ ಕೆಲಸಾವಕಾಶಗಳು ಸಿಗುವ ಸಾಧ್ಯತೆಯಿದೆ.
ಮಕರ ರಾಶಿ: ವ್ಯಾಪಾರದಲ್ಲಿ ನಿರೀಕ್ಷಿತ ಲಾಭ. ಮಕ್ಕಳಿಂದ ಸಂತಸದ ಸುದ್ದಿ ಕೇಳಲಿದ್ದೀರಿ.
ಕುಂಭ ರಾಶಿ: ಕುಟುಂಬದಲ್ಲಿ ಚಿಕ್ಕ ಸಮಸ್ಯೆಗಳು. ಹಳೆಯ ಸ್ನೇಹಿತರ ಭೇಟಿಯಿಂದ ಸಂತೋಷ.
ಮೀನ ರಾಶಿ: ಆತ್ಮವಿಶ್ವಾಸದಿಂದ ಮುನ್ನಡೆದರೆ ಸಮಸ್ಯೆಗಳು ದೂರವಾಗಲಿವೆ. ಹೂಡಿಕೆಯಲ್ಲಿ ಎಚ್ಚರಿಕೆ ವಹಿಸಿ.
