• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, March 1, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಸಂಖ್ಯಾಶಾಸ್ತ್ರ ಪ್ರಕಾರ ಈ ಸಂಖ್ಯೆಯವರಿಗೆ ಶುಭಸುದ್ದಿ: ಜನ್ಮಸಂಖ್ಯೆ ಆಧಾರಿತ ದಿನಭವಿಷ್ಯ ಇಲ್ಲಿದೆ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 27, 2025 - 7:38 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Untitled design 2025 10 24T063901.590

ಸಂಖ್ಯಾಶಾಸ್ತ್ರದ ಪ್ರಕಾರ ಪ್ರತಿದಿನವೂ ನಮ್ಮ ಜನ್ಮಸಂಖ್ಯೆಯ ಮೇಲೆ ವಿಶೇಷ ಪ್ರಭಾವ ಬೀರುತ್ತದೆ. ನೀವು ಯಾವ ದಿನ ಜನಿಸಿದ್ದೀರೋ ಅದೇ ನಿಮ್ಮ ‘ಜನ್ಮಸಂಖ್ಯೆ’ ಎಂದು ಪರಿಗಣಿಸಲಾಗುತ್ತದೆ. ಅದರ ಆಧಾರದ ಮೇಲೆ ನವೆಂಬರ್ 27ರ ಗುರುವಾರದ ದಿನ ನೀವು ಎದುರಿಸಬಹುದಾದ ಶುಭ, ಅಶುಭ, ಅವಕಾಶಗಳು, ಸವಾಲುಗಳು ಇಲ್ಲಿವೆ.

ಜನ್ಮಸಂಖ್ಯೆ 1 (1, 10, 19, 28)

ಇತರರಿಗೆ ನೀವು ನೀಡಿದ ಸಮಯ, ಕಾಳಜಿ ಅವರಿಗೆ ಅಷ್ಟಾಗಿ ಮುಖ್ಯವೆನಿಸದಿರುವ ಭಾವನೆ ಕಾಡಬಹುದು. ಸಂಗಾತಿಯ ಆದಾಯದಲ್ಲಿ ಸ್ಥಿರತೆ ಇಲ್ಲದಿರುವ ಸೂಚನೆ ನಿಮಗೆ ಆತಂಕ ತರುವುದು. ನಿಮ್ಮ ಮಾತಿನ ಶೈಲಿಯ ಬದಲಾವಣೆ ಕೆಲವರಲ್ಲಿ ಅಸಮಾಧಾನ ತರಬಹುದು. ಅವರಿಗೆ ಸಮಜಾಯಿಷಿ ಕೊಡಬೇಕೆಂದು ಭಾವಿಸುವ ಅಗತ್ಯ ಇಲ್ಲ. ಆದರೆ ಹೃದಯಕ್ಕೆ ಹತ್ತಿರವಿರುವ ಸ್ನೇಹಿತರನ್ನು ಬೇಸರಗೊಳಿಸಬೇಡಿ. ಚಿತ್ರಕಲೆ ಅಥವಾ ಅಭಿನಯ ಸಂಬಂಧಿತ ತರಬೇತಿಗೆ ಸೇರ್ಪಡೆಯಾಗುವ ಅವಕಾಶ ಸಿಗಬಹುದು. ಕ್ಯಾಟರಿಂಗ್ ವೃತ್ತಿಯವರ ಆದಾಯ ಏರಿಕೆಯಾಗಲಿದೆ.

RelatedPosts

ಹೋಳಿ ಹಬ್ಬದಂದೇ ವರ್ಷದ ಮೊದಲ ಚಂದ್ರಗ್ರಹಣ, ಯಾವ ರಾಶಿಗಳಿಗೆ ಏನು ಫಲ?

ದಿನ ಭವಿಷ್ಯ: ದೊಡ್ಡ ಕನಸು ನನಸಾಗುವ ರಾಶಿಗಳು ಯಾವುವು?

ಮಾ.3ಕ್ಕೆ ಚಂದ್ರ ಗ್ರಹಣ: ಕರ್ನಾಟಕದಲ್ಲಿ 25 ನಿಮಿಷ ಕಾಲ ರಕ್ತಚಂದ್ರಗ್ರಹಣ ಗೋಚರ

ಸಂಖ್ಯಾಶಾಸ್ತ್ರ ಭವಿಷ್ಯ: ಇಂದು ಶನಿವಾರ ನಿಮ್ಮ ಜನ್ಮಸಂಖ್ಯೆಗನುಗುಣವಾಗಿ ಫಲ ಹೇಗಿದೆ ?

ADVERTISEMENT
ADVERTISEMENT
ಜನ್ಮಸಂಖ್ಯೆ 2 (2, 11, 20, 29)

ನೀವು ಆಸಕ್ತಿ ತೋರಿಸಿರುವ ಪ್ರಾಜೆಕ್ಟ್‌ನಿಂದ ದೂರ ಸರಿಯಬೇಕಾದ ಪರಿಸ್ಥಿತಿ ಬರಬಹುದು. ಅಥವಾ ಹೊಸ ಜವಾಬ್ದಾರಿ ಬಂದು ಈಗಿನ ಕೆಲಸಕ್ಕೆ ಸಮಯ ನೀಡಲು ಕಷ್ಟವಾಗಬಹುದು. ಧಾರವಾಹಿಗಳ ತಾಂತ್ರಿಕ ವಿಭಾಗದವರಿಗೆ ಹೊಸ ಅವಕಾಶ ದೊರಕಲಿದೆ. ಹಳೆಯ ಕೆಲಸಕ್ಕೆ ಬಾಕಿ ಇರುವ ಹಣವನ್ನು ಸ್ನೇಹಿತರ ನೆರವಿಂದ ವಸೂಲಿ ಮಾಡಬಹುದಾಗಿದೆ. ವ್ಯವಹಾರದ ಕಾರಣಕ್ಕಾಗಿ ಬ್ಯಾಂಕ್ ಅಥವಾ ಖಾಸಗಿ ಮೂಲದಿಂದ ಸಾಲ ಪಡೆಯುವ ಅಗತ್ಯ ಎದುರಾಗಬಹುದು.

ಜನ್ಮಸಂಖ್ಯೆ 3 (3, 12, 21, 30)

ಅಗತ್ಯವಿಲ್ಲದ ಊಹೆಗಳಿಂದ ಗಾಬರಿ ಬೇಡ, ವಾಸ್ತವ ಏನು ಎನ್ನುವುದರ ಮೇಲೆ ಗಮನಕೊಡಿ. ಮನೆಗೆ ಸಂಬಂಧಿಸಿದ ಡ್ರೈ ಕ್ಲೀನಿಂಗ್, ಬಟ್ಟೆಗಳ ಸ್ವಚ್ಛತೆಗೆ ಹೆಚ್ಚುವರಿ ವೆಚ್ಚ ಮಾಡುವ ಸಾಧ್ಯತೆ ಇದೆ. ಎರಡರ ಕೆಲಸ ಒಬ್ಬರೇ ಮುಗಿಸಬೇಕಾದ ಒತ್ತಡ ಬರಬಹುದು, ಇದರಿಂದ ಮೂಡುವ ಸಿಟ್ಟು ಅಥವಾ ಬೇಸರವನ್ನು ಕುಟುಂಬದವರ ಮೇಲೆ ತೋರಬೇಡಿ. ಹತ್ತಿ ಬೆಳೆಯುವ ಕೃಷಿಕರಿಗೆ ವಿಶೇಷ ಲಾಭದ ಅವಕಾಶ.

ಜನ್ಮಸಂಖ್ಯೆ 4 (4, 13, 22, 31)

ಇತರರನ್ನು ಮೆಚ್ಚಿಸಲು ಹೆಚ್ಚು ಸಮಯ, ಶ್ರಮ ಬೇಕಾಗಬಹುದು. ಧೂಮಪಾನಿಗಳಿಗೆ ಆರೋಗ್ಯ ಸಮಸ್ಯೆಗಳ ಸೂಚನೆ, ತಕ್ಷಣ ಚಿಕಿತ್ಸೆ ಪಡೆಯುವುದು ಉತ್ತಮ. ಸಂಬಂಧಿಗಳಿಗೆ ನೀಡಿರುವ ಸಾಲ ವಾಪಸ್ ಪಡೆಯಲು ಕಷ್ಟವಾಗಬಹುದು. ಸಂಬಂಧ ಹಾನಿಯಾಗದಂತೆ ಜಾಣ್ಮೆ ವಹಿಸಿ. ನಾಯಿಗಳ ಸಾಕಣೆ, ಮಾರಾಟ ವೃತ್ತಿಯವರನ್ನು ತಪ್ಪುಮಾಹಿತಿಯಿಂದ ಗೊಂದಲಕ್ಕೆ ಸಿಲುಕಿಸುವವರನ್ನು ಭೇಟಿಯಾಗುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 5 (5, 14, 23)

ನೀವೇ ಮಾಡಿದ ಪರಿಶ್ರಮದ ಫಲ ಬೇರೆಯವರಿಗೆ ದೊರಕುವ ಸಂದರ್ಭ. ಮುಖ್ಯ ಕೆಲಸಗಳಿಗಾಗಿ ನೀವು ಸಾಮಾನ್ಯವಾಗಿ ಹೋಗುವ ಸಮಯಕ್ಕಿಂತ ಮುಂಚಿತವಾಗಿ ಸ್ಥಳಕ್ಕೆ ತೆರಳುವುದು ಒಳಿತು. ಹಿಂದಿನ ಕೆಲವು ವಿಚಾರಗಳನ್ನು ಜೋಡಿಸಿ ಬಂಧುಗಳೊಂದಿಗೆ ಜಗಳಕ್ಕೆ ಮುಂದಾಗಬೇಡಿ. ವಾಸ್ತು ವೃತ್ತಿಯವರಿಗೆ ಲಾಭದ ಸೂಚನೆ. ಗ್ರಂಥರಚನೆ ಮಾಡಲು ಯೋಚಿಸುತ್ತಿದ್ದರೆ, ಇಂದು ಅದನ್ನು ಆರಂಭಿಸುವ ದಿನ.

ಜನ್ಮಸಂಖ್ಯೆ 6 (6, 15, 24)

ಸ್ಪರ್ಧೆಗಳಲ್ಲಿ ಭಾಗವಹಿಸುವವರಿಗಿದು ಜಯದ ದಿನ. ಕೆಲಸದ ಸ್ಥಳದಲ್ಲಿ ಬದಲಾವಣೆಗಳು ನಿಮಗೆ ಅನುಕೂಲಕರವಾಗಿ ಪರಿಣಮಿಸುತ್ತವೆ. ಕಠಿಣವೆನಿಸಿದ ಅವಕಾಶಗಳೂ ಶುಭವಾಗಿ ತಿರುಗಬಹುದು. ಫೆಲೋಶಿಪ್ ಅಥವಾ ಅಧ್ಯಯನ ಅನುದಾನ ದೊರೆಯುವ ಸಾಧ್ಯತೆ. ವಿವಾಹ ಯೋಚಿಸುತ್ತಿರುವವರಿಗೆ ರೆಫರೆನ್ಸ್ ಮೂಲಕ ಸೂಕ್ತ ಜೋಡಿ ಸಿಗಬಹುದು. ಕೋರ್ಟ್ ಪ್ರಕರಣಗಳು ಮಾತುಕತೆಯಿಂದ ಬಗೆಹರಿಯುವ ಸೂಚನೆ.

ಜನ್ಮಸಂಖ್ಯೆ 7 (7, 16, 25)

ಪಾರ್ಟ್ನರ್‌ಶಿಪ್ ವ್ಯವಹಾರಗಳಿಂದ ಉತ್ತಮ ಲಾಭ.. ಹಿಂದಿನ ಅನುಭವ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಬೇಡಿ. ಏಕೆಂದರೆ ಇಂದು ನಿಮಗೆ ‘ಮ್ಯಾಜಿಕ್’ ಎನ್ನುವಂತೆ ಕೆಲವು ಶುಭಘಟನೆಗಳು ನಡೆಯುತ್ತವೆ. ಪ್ರೇಮಿಗಳಿಗೆ ಅತ್ಯುತ್ತಮ ದಿನ. ಮನೆಯಲ್ಲಿ ಮದುವೆ ವಿಷಯವನ್ನು ಪ್ರಸ್ತಾಪಿಸುವ ಸಾಧ್ಯತೆ. ಧಾರ್ಮಿಕ ಸ್ಥಳಗಳಿಗೆ ಭೇಟಿ ಯೋಗ. ಪ್ರಭಾವಿ ಹುದ್ದೆಯವರು ಹಳೆಯವರಿಗೆ ಸಹಾಯ ಮಾಡುವಿರಿ.

ಜನ್ಮಸಂಖ್ಯೆ 8 (8, 17, 26)

ನಿಮ್ಮ ಬೇಡಿಕೆಗಳನ್ನು ತೆರೆದ ಮನಸ್ಸಿನಿಂದ ಹೇಳುವ ಸಾಧ್ಯತೆ. ಪ್ರಮುಖ ಕೆಲಸಕ್ಕಾಗಿ ದೂರದ ಊರು ಅಥವಾ ವಿದೇಶ ಪ್ರವಾಸ ಯೋಗ. IT ರಿಟರ್ನ್ ರೀಫಂಡ್ ಬಗ್ಗೆ ಮಾಹಿತಿ ಸಿಗಬಹುದು. ಸರ್ಕಾರಿ ಕೆಲಸಗಳು ಕೊನೆ ಹಂತದಲ್ಲಿ ಅಡಚಣೆಗೆ ಸಿಲುಕುವ ಸಾಧ್ಯತೆ – ಹೊಸ ನಿಯಮಗಳು ಅಥವಾ ದಾಖಲೆಗಳಲ್ಲಿ ದೋಷ ಕಾರಣವಾಗಬಹುದು. ಶಾಂತವಾಗಿ ಕಾರ್ಯ ಮುಗಿಸುವುದು ಒಳಿತು.

ಜನ್ಮಸಂಖ್ಯೆ 9 (9, 18, 27)

ಇತರರಿಗೆ ರಿಯಾಯಿತಿ ನೀಡಲು ನಿಮಗೆ ಆಸಕ್ತಿ ಇರುವುದಿಲ್ಲ. ಮೊದಲ ಬಾರಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿರುವವರಿಗೆ ಲಾಭದ ಸೂಚನೆ. ಲ್ಯಾಪ್‌ಟಾಪ್, ಸಾಫ್ಟ್‌ವೇರ್ ಅಥವಾ ಉಪಕರಣಗಳಲ್ಲಿ ಹೂಡಿಕೆ ಮಾಡಲಿದ್ದಾರೆ. ಸಂಗಾತಿಯ ಆರೋಗ್ಯ ಚಿಂತೆಗೆ ಕಾರಣ. ಭಾರವಾದ ವಸ್ತುಗಳನ್ನು ಎತ್ತುವಾಗ ಜಾಗ್ರತೆ ಅಗತ್ಯ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 03 01T221626.607

ಇರಾನ್‌ ಪ್ರತೀಕಾರ ದಾಳಿ: ಮೂವರು ಅಮೆರಿಕದ ಸೈನಿಕರು ಸಾ*ವು, ಐವರಿಗೆ ಗಂಭೀರ ಗಾಯ

by ಶಾಲಿನಿ ಕೆ. ಡಿ
March 1, 2026 - 10:23 pm
0

Untitled design 2026 03 01T212600.201

ಖಮೇನಿ ಹತ್ಯೆಗೆ ಪ್ರತೀಕಾರ: ಇರಾನ್ ಕ್ಷಿಪಣಿ ದಾಳಿ, ಇಸ್ರೇಲ್‌ನಲ್ಲಿ 10 ಮಂದಿ ಸಾ*ವು

by ಶಾಲಿನಿ ಕೆ. ಡಿ
March 1, 2026 - 9:29 pm
0

Untitled design 2026 03 01T211820.979

ಡಾಗ್ ಸತೀಶ್ ಹೊಸ ವಿವಾದ..ಸುದೀಪ್ ಫ್ಯಾನ್ಸ್ ಆಕ್ರೋಶ

by ಶಾಲಿನಿ ಕೆ. ಡಿ
March 1, 2026 - 9:18 pm
0

Untitled design 2026 03 01T204800.213

ಇಸ್ರೇಲ್-ಇರಾನ್ ವಾರ್‌: 15 ಭಾರತೀಯರಿದ್ದ ತೈಲ ಹಡಗಿನ ಮೇಲೆ ದಾಳಿ

by ಶಾಲಿನಿ ಕೆ. ಡಿ
March 1, 2026 - 8:58 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಹೋಳಿ ಹಬ್ಬದಂದೇ ವರ್ಷದ ಮೊದಲ ಚಂದ್ರಗ್ರಹಣ
    ಹೋಳಿ ಹಬ್ಬದಂದೇ ವರ್ಷದ ಮೊದಲ ಚಂದ್ರಗ್ರಹಣ, ಯಾವ ರಾಶಿಗಳಿಗೆ ಏನು ಫಲ?
    March 1, 2026 | 0
  • Rashi bavishya
    ದಿನ ಭವಿಷ್ಯ: ದೊಡ್ಡ ಕನಸು ನನಸಾಗುವ ರಾಶಿಗಳು ಯಾವುವು?
    March 1, 2026 | 0
  • Untitled design 2026 02 28T102309.004
    ಮಾ.3ಕ್ಕೆ ಚಂದ್ರ ಗ್ರಹಣ: ಕರ್ನಾಟಕದಲ್ಲಿ 25 ನಿಮಿಷ ಕಾಲ ರಕ್ತಚಂದ್ರಗ್ರಹಣ ಗೋಚರ
    February 28, 2026 | 0
  • Untitled design 2026 02 28T064655.190
    ಸಂಖ್ಯಾಶಾಸ್ತ್ರ ಭವಿಷ್ಯ: ಇಂದು ಶನಿವಾರ ನಿಮ್ಮ ಜನ್ಮಸಂಖ್ಯೆಗನುಗುಣವಾಗಿ ಫಲ ಹೇಗಿದೆ ?
    February 28, 2026 | 0
  • Untitled design 2026 02 28T063045.847
    ಇಂದಿನ ರಾಶಿ ಭವಿಷ್ಯ: ಯಾವ ರಾಶಿಗೆ ಯಾವ ಫಲ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
    February 28, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version