ಸಂಖ್ಯಾಶಾಸ್ತ್ರದಲ್ಲಿ ನಿಮ್ಮ ಜನ್ಮದಿನಾಂಕವನ್ನು ಏಕಾಂಕ ಸಂಖ್ಯೆಗೆ ಸರಳೀಕರಿಸಿ ಜನ್ಮಸಂಖ್ಯೆಯನ್ನು ಕಂಡುಹಿಡಿಯಲಾಗುತ್ತದೆ. ಉದಾಹರಣೆಗೆ, 15ನೇ ತಾರೀಖು ಹುಟ್ಟಿದರೆ 1+5=6 ಆಗುತ್ತದೆ. ಈ ಜನ್ಮಸಂಖ್ಯೆಯ ಆಧಾರದಲ್ಲಿ ದೈನಂದಿನ ಭವಿಷ್ಯವನ್ನು ತಿಳಿಸಲಾಗುತ್ತದೆ. ಆಗಸ್ಟ್ 24, 2025ರ ಭಾನುವಾರದಂದು ನಿಮ್ಮ ಜನ್ಮಸಂಖ್ಯೆಗೆ ತಗುಲುವ ಭವಿಷ್ಯ ಹೀಗಿದೆ. ಈ ದಿನದ ಭವಿಷ್ಯವನ್ನು ತಿಳಿಯಿರಿ.
ಜನ್ಮಸಂಖ್ಯೆ 1 (1, 10, 19, 28ನೇ ತಾರೀಕು ಹುಟ್ಟಿದವರು)
ನಿಮ್ಮ ವೈಯಕ್ತಿಕ ಮತ್ತು ಪ್ರೀತಿ-ಪ್ರೇಮದ ವಿಷಯಗಳಲ್ಲಿ ಮೂರನೇ ವ್ಯಕ್ತಿಗಳ ಪ್ರಭಾವ ಗಮನಕ್ಕೆ ಬರಲಿದೆ. ಆದಾಯವನ್ನು ಹೆಚ್ಚಿಸಲು ಯೋಜನೆಗಳು ಆರಂಭವಾಗಲಿವೆ. ಆಸ್ತಿ ಮಾರಾಟಕ್ಕೆ ಇಟ್ಟಿದ್ದರೆ, ಬೇಡಿಕೆ ಹೆಚ್ಚಾಗಬಹುದು. ಬಾಡಿಗೆ ಆದಾಯಕ್ಕಾಗಿ ಮನೆ ಅಥವಾ ಮಳಿಗೆ ನಿರ್ಮಾಣದ ಯೋಚನೆ ಇರಲಿದೆ. ದುರ್ಗಾದೇವಿ ಆರಾಧನೆ ಮತ್ತು ವಿಷ್ಣು ಸಹಸ್ರನಾಮ ಪಠಣದಿಂದ ಆಲೋಚನೆಯ ಸ್ಪಷ್ಟತೆ, ಆತ್ಮವಿಶ್ವಾಸ ಹೆಚ್ಚಾಗಲಿದೆ. ಫೋಟೋಗ್ರಫಿಯ ವೃತ್ತಿಯವರಿಗೆ ಹೊಸ ಅವಕಾಶಗಳು ದೊರೆಯಬಹುದು.
ಜನ್ಮಸಂಖ್ಯೆ 2 (2, 11, 20, 29ನೇ ತಾರೀಕು ಹುಟ್ಟಿದವರು)
ನಿಮ್ಮ ಮಾತಿಗೆ ಕುಟುಂಬದಲ್ಲಿ ಗೌರವ ದೊರೆಯಲಿದೆ. ಸೈಟ್ ಖರೀದಿ ಅಥವಾ ಮನೆ ಕಟ್ಟಲು ಸಾಲಕ್ಕೆ ಪ್ರಯತ್ನಿಸುವವರಿಗೆ ಒಳ್ಳೆಯ ಬೆಳವಣಿಗೆ ಇರಲಿದೆ. ಹಣಕಾಸಿನ ಆತಂಕ ದೂರವಾಗಲಿದೆ. ಸ್ವಂತ ವ್ಯಾಪಾರ ಆರಂಭಿಸಲು ಯೋಚಿಸುವವರಿಗೆ ಸ್ನೇಹಿತರು, ಸಂಬಂಧಿಗಳಿಂದ ನೆರವು ದೊರೆಯಲಿದೆ. ದಿಕ್ಕು ತಪ್ಪಿಸಲು ಯತ್ನಿಸುವವರು ಸ್ವತಃ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ನಿಮ್ಮ ಎಚ್ಚರಿಕೆಯ ಮಾತುಗಳು ಸ್ನೇಹಿತರಿಗೆ ಫಲ ನೀಡಿ, ಅವರು ಬೆರಗಾಗಿ ನಿಮ್ಮ ಕಡೆಗೆ ನೋಡಲಿದ್ದಾರೆ.
ಜನ್ಮಸಂಖ್ಯೆ 3 (3, 12, 21, 30ನೇ ತಾರೀಕು ಹುಟ್ಟಿದವರು)
ಸಂತೋಷ-ಸಮಾಧಾನದ ಜತೆಗೆ, ನಿರ್ಧಾರದ ಗೊಂದಲ ಈ ದಿನ ಎದುರಾಗಲಿದೆ. ದೊರೆಯುವ ಅವಕಾಶ ಅಥವಾ ಜವಾಬ್ದಾರಿಯ ಒಳಿತು-ಕೆಡುಕನ್ನು ನಿರ್ಧರಿಸಲು ಸಮಯ ಬೇಕಾಗಲಿದೆ. ಇತರರ ಮಾತಿನ ಮೇಲೆ ಗಂಭೀರ ನಿರ್ಧಾರ ತೆಗೆದುಕೊಳ್ಳಬೇಡಿ. ಕೆಲಸದ ಸ್ಥಳದಲ್ಲಿ ಶ್ರದ್ಧೆಯಿಂದ ಕಾರ್ಯ ನಿರ್ವಹಿಸಿದರೆ ಒಳ್ಳೆಯ ಫಲಿತಾಂಶ ಕಾಣಲಿದ್ದೀರಿ. ಹೂಡಿಕೆಗೆ ಸಂಬಂಧಿಸಿದ ನಿರ್ಧಾರಗಳನ್ನು ಮುಂದೂಡಿರಿ.
ಜನ್ಮಸಂಖ್ಯೆ 4 (4, 13, 22, 31ನೇ ತಾರೀಕು ಹುಟ್ಟಿದವರು)
ಸಂಗಾತಿಯ ಹಠಮಾರಿತನದಿಂದ ಸಾಮಾಜಿಕ ಅವಮಾನ ಎದುರಾಗಬಹುದು. ಮನೆ ನಿರ್ಮಾಣ ಅಥವಾ ಆರ್ಥಿಕ ಒತ್ತಡದಲ್ಲಿದ್ದರೆ, ಪರಿಹಾರದ ಮಾರ್ಗ ಕಾಣಲಿದೆ. ಸ್ವಂತ ವ್ಯಾಪಾರಿಗಳಿಗೆ ವಿಸ್ತರಣೆಯ ಅವಕಾಶ ದೊರೆಯಲಿದೆ. ಬ್ಯಾಂಕ್ ಸಾಲ ಅಥವಾ ಸಂಬಂಧಿಗಳ, ಸ್ನೇಹಿತರಿಂದ ಆರ್ಥಿಕ ನೆರವು ಲಭ್ಯವಾಗಲಿದೆ. ಮರೆತಿರುವ ಅವಕಾಶವೊಂದು ದೊರೆಯಬಹುದು. ಒಪ್ಪಿಕೊಳ್ಳುವ ಮುನ್ನ ಹಿರಿಯರ ಸಲಹೆ ಪಡೆಯಿರಿ.
ಜನ್ಮಸಂಖ್ಯೆ 5 (5, 14, 23ನೇ ತಾರೀಕು ಹುಟ್ಟಿದವರು)
ಅಡೆತಡೆಗಳಿಂದ ಚಿಂತೆ ಉಂಟಾಗಲಿದೆ. ಒಳಿತು-ಕೆಡುಕು ತಿಳಿಯದ ಗೊಂದಲದ ಸನ್ನಿವೇಶ ಎದುರಾಗಲಿದೆ. ಒತ್ತಡದಲ್ಲಿ ವಾದ-ವಿವಾದಕ್ಕೆ ಇಳಿಯಬೇಡಿ. ಮುಖ್ಯ ವಿಷಯಗಳನ್ನು ಲಿಖಿತವಾಗಿ ದಾಖಲಿಸಿ. ಮೇಲಧಿಕಾರಿಗಳ ಜೊತೆ ವ್ಯವಹರಿಸುವಾಗ ದಾಖಲೆಗಳನ್ನು ಇಟ್ಟುಕೊಳ್ಳಿ.
ಜನ್ಮಸಂಖ್ಯೆ 6 (6, 15, 24ನೇ ತಾರೀಕು ಹುಟ್ಟಿದವರು)
ಮಾತು ಮತ್ತು ಸಲುಗೆಯಲ್ಲಿ ಸ್ಪಷ್ಟತೆ ಮುಖ್ಯ. ವಿಪರೀತ ಸಲುಗೆಯಿಂದ ಭಾರೀ ಬೆಲೆ ತೆರಬೇಕಾಗಬಹುದು. ಇತರರ ತಪ್ಪಿಗೆ ನೀವು ಜವಾಬ್ದಾರಿಯಾಗಬೇಕಾಗಬಹುದು. ಯಾರ ಜೊತೆ ಗುರುತಿಸಿಕೊಳ್ಳುತ್ತೀರಿ ಎಂಬುದು ನಿಮ್ಮ ನೆಮ್ಮದಿಯನ್ನು ನಿರ್ಧರಿಸಲಿದೆ. ಮೇಲುನೋಟಕ್ಕೆ ನಂಬಿದರೆ ನಂತರ ಪರಿತಪಿಸಬೇಕಾಗುತ್ತದೆ. ರಕ್ತದೊತ್ತಡದ ಏರುಪೇರು, ಕಣ್ಣು ಕತ್ತಲೆ, ತಲೆಸುತ್ತುವಿಕೆ ಆಗಬಹುದು. ಎತ್ತರದ ಸ್ಥಳದ ಕೆಲಸದಲ್ಲಿ ಜಾಗ್ರತೆ ವಹಿಸಿ. ದಿಢೀರ್ ಪ್ರಯಾಣವನ್ನು ಒಪ್ಪಿಕೊಳ್ಳಬೇಡಿ.
ಜನ್ಮಸಂಖ್ಯೆ 7 (7, 16, 25ನೇ ತಾರೀಕು ಹುಟ್ಟಿದವರು)
ಕಡಿಮೆ ಮುಖ್ಯವೆಂದು ಭಾವಿಸಿದ ವಿಷಯದಲ್ಲಿ ಅನುಕೂಲಕರ ಬೆಳವಣಿಗೆ ಆಗಲಿದೆ. ಸಮಸ್ಯೆಯಾಗಬಹುದೆಂದುಕೊಂಡಿದ್ದ ವಿಷಯ ಸಾಧಕವಾಗಿ ಪರಿಣಮಿಸಲಿದೆ. ಸರಿಯೆಂದು ಖಾತ್ರಿಯಾದರೆ ಧೈರ್ಯವಾಗಿರಿ. ಆದರೆ ನಿಮ್ಮ ಯೋಜನೆಯನ್ನು ಸ್ಪಷ್ಟವಾಗಿ ವಿವರಿಸಿ. ಹಿರಿಯರಿಗೆ ಹೊಳೆಯದ ವಿಷಯಗಳು ನಿಮಗೆ ಗೋಚರವಾಗಲಿದೆ.
ಜನ್ಮಸಂಖ್ಯೆ 8 (8, 17, 26ನೇ ತಾರೀಕು ಹುಟ್ಟಿದವರು)
ಬದಲಾವಣೆಗಳನ್ನು ಸ್ವೀಕರಿಸಲು ಮಾನಸಿಕವಾಗಿ ಸಿದ್ಧರಾಗಿ. ವ್ಯವಹಾರಗಳು ಯೋಜನೆಯಂತೆ ಇತ್ಯರ್ಥವಾಗದಿರಬಹುದು, ಆದರೆ ಕುಗ್ಗಬೇಡಿ. ಹೊಸ ಪರಿಚಯಸ್ಥರ ಮೇಲೆ ಅತಿಯಾದ ಅವಲಂಬನೆ ಬೇಡ. ಹಿರಿಯರ ಸಲಹೆ ಪಡೆಯಿರಿ. ಕ್ರೀಡಾಪಟುಗಳಿಗೆ ಪ್ರಾಯೋಜಕತ್ವದ ಭರವಸೆ ಕೊನೆ ಕ್ಷಣದಲ್ಲಿ ಕೈಗೂಡಬಹುದು. ಭಾರವಾದ ವಸ್ತು ಎತ್ತುವಾಗ ಎಚ್ಚರಿಕೆಯಿಂದಿರಿ, ಇಲ್ಲವಾದರೆ ಕಾಲು, ಬೆನ್ನಿನ ಗಾಯ ಆಗಬಹುದು.
ಜನ್ಮಸಂಖ್ಯೆ 9 (9, 18, 27ನೇ ತಾರೀಕು ಹುಟ್ಟಿದವರು)
ಕ್ರೆಡಿಟ್ ಕಾರ್ಡ್ ಬಳಕೆಯ ಬಗ್ಗೆ ಎಚ್ಚರಿಕೆಯಿಂದಿರಿ. ಸ್ನೇಹಿತರು/ಸಂಬಂಧಿಕರು ಸಾಲಕ್ಕೆ ಕೇಳಬಹುದು. ಬೆಳ್ಳಿ ವಸ್ತು/ಒಡವೆ ಖರೀದಿಯ ಯೋಗವಿದೆ. ದಾನ-ಧರ್ಮ ಕಾರ್ಯಗಳಲ್ಲಿ ಭಾಗಿಯಾಗುವಿರಿ. ತೆರಿಗೆ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಸಂತಾನಾಪೇಕ್ಷಿತರಿಗೆ ಶುಭ ಸುದ್ದಿ ಕೇಳಲಿದೆ. ಹಿರಿಯರ ಆಶೀರ್ವಾದದಿಂದ ಸಂಘ-ಸಂಸ್ಥೆಯಲ್ಲಿ ಪ್ರಮುಖ ಹುದ್ದೆ ದೊರೆಯಬಹುದು.